ಏನಿದು ಥು ಥು ಥು ಭಾಷೆ? ಅಸಹ್ಯ ಮಾತಾಡುವ ಸೋನು ಗೌಡಗೆ ಸುದೀಪ್ ಸಖತ್ ಕ್ಲಾಸ್
ನಾಲ್ಕನೇ ವಾರ ಕಳಪೆ ಪಟ್ಟ ಪಡೆದ ಸೋನು. ಕೆಟ್ಟ ಮಾತುಗಳನ್ನು ಬಳಸಿದಕ್ಕೆ ಕ್ಲಾಸ್ ತೆಗೆದುಕೊಂಡ ಚಕ್ರವರ್ತಿ....
ಬಿಗ್ ಬಾಸ್ ಕನ್ನಡ ಮೊದಲ ಸೀಸನ್ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಬಿಸ್ಟ್ ಪರ್ಫಾರ್ಮ್ ಆಗಿ ಜಯಶ್ರೀ ಗೋಲ್ಡ್ ಮೆಡಲ್ ಪಡೆದರೆ ಕಳಪೆ ಪಟ್ಟ ಪಡೆದು ಸೋನು ಗೌಡ ಜೈಲು ಸೇರಿಕೊಳ್ಳುತ್ತಾರೆ. ಮನೆ ಕೆಲಸ ಮಾಡುತ್ತಿಲ್ಲ ಸೋಂಬೇರಿ ಎಂಬ ಕಾರಣ ಕೊಟ್ಟು ಜೈಲು ಸೇರಿಸಿರುವುದು ತಪ್ಪು ಎಂದು ರಾತ್ರಿ ಎಲ್ಲಾ ಅಳುತ್ತಾ ಎಲ್ಲಾ ಸ್ಪರ್ಧಿಗಳನ್ನು ಕೆಟ್ಟ ಪದಗಳಿಂದ ಬೈದಿದ್ದಾರೆ. ಸೋನು ಮಾತನಾಡಿರುವ ರೀತಿ ತಪ್ಪು ಎಂದು ವಾರಕಥೆಯಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ.
'ಸುದೀಪ್ ಸರ್ ನನಗೆ ಅಡುಗೆ ಮೊದಲಿನಿಂದಲ್ಲೂ ಚೆನ್ನಾಗಿ ಬರುತ್ತೆ ಆದರೆ ಹೇಳಿದರೆ ಅವರು ಪದೇ ಪದೇ ಮಾಡು ಅಂತಾರೆ ಆಮೇಲೆ ಅಲ್ಲಿಗೆ ಸೀಮಿತ ಮಾಡುತ್ತಾರೆಂದು ಹೇಳಿರಲಿಲ್ಲ. ಮನೆಯಲ್ಲಿ ಅಮ್ಮ ಕೆಲಸ ಹೇಳಿದ್ದರೆ ನಾನು ಮಾಡುತ್ತಿರಲಿಲ್ಲ ಇಲ್ಲಿ ಮಾಡಿದರೆ ಹೇಗೆ ಅಂತ ಸುಮ್ಮನಾದೆ. ಅಡುಗೆ ಮನೆ ಒಪ್ಪಿಕೊಂಡವರಿಗೆ ಕಷ್ಟ ಆಗುತ್ತೆ ಬೇಗ ಸ್ನಾನ ಮಾಡೋಕೆ ಅಗೊಲ್ಲ ಎಲ್ಲರಿಗೂ ಊಟ ಬಡಿಸಿ ಆಮೇಲೆ ನಮ್ಮ ಕೆಲಸ ಮಾಡಬೇಕು. ಈ ಮನೆಯಲ್ಲಿ ನಾನು ಕೆಲಸ ಮಾಡೋಕೆ ಬಂದಿಲ್ಲ ಅಂತ ನಾಲ್ಕೈದು ಸಲ ಹೇಳಿರುವೆ' ಎಂದು ಸೋನು ಗೌಡ ಮಾತು ಶುರು ಮಾಡುತ್ತಾಳೆ.
'ಪಾಪ ಅಡುಗೆ ಮನೆ ಕೆಲಸ ಕಷ್ಟ ಆಗುತ್ತೆ ಅಂತ ಹೇಳ್ತೀರಾ ಆದರೆ ನೀವು ಈ ಕೆಲಸ ಮಾಡುವುದಕ್ಕೆ ಇಷ್ಟವಿಲ್ಲ. ಎಷ್ಟು ಸಲ ನಾವು ಕೆಲಸ ಮಾಡುವುದಕ್ಕೆ ಬಂದಿಲ್ಲ ಅಂತ ಹೇಳಿದ್ದೀರಾ ನೀವು ಈ ಮಾತಿನ ಅರ್ಥ ಏನು ಹೇಳಿ' ಎಂದು ಸುದೀಪ್ ಮರು ಪ್ರಶ್ನೆ ಮಾಡುತ್ತಾರೆ.
'ಈ ಮನೆಯಲ್ಲಿ ಕಸ ಗುಡಿಸಿದರೆ ಗುಡಿಸುತ್ತಲೇ ಇರಬೇಕು ಆ ಪೊರಕೆಯಿಂದಲ್ಲೂ ಕಸ ಅಗುತ್ತೆ. ಅಡುಗೆ ಮನೆ ಒಂದೇ ಅಲ್ಲ ಹೊರಗಡೆನೂ ನಾವು ಕೆಲಸ ಮಾಡಬೇಕು. ಕೆಲಸ ಮಾಡಿ ಮಾಡಿ ಕೈ ನೋವು ಬರುತ್ತೆ. ನಾವೇನು ಕೆಲಸ ಮಾಡುವುದಕ್ಕೆ ಬಂದಿಲ್ಲ ಅಂತ ಹೇಳುತ್ತಿದ್ದೆ ಆದರೆ ನಾನು ಎಲ್ಲಾ ಕೆಲಸ ಮಾಡುತ್ತಿದ್ದೆ. ನಾನು ಕೊಟ್ಟಿರುವ ಹೇಳಿಕೆಯಿಂದ ಕಳಪೆ ಪಟ್ಟ ಕೊಟ್ಟಿದ್ದಾರೆ' ಎಂದು ಸೋನು ಗೌಡ ಹೇಳುತ್ತಾಳೆ.
Bigg Boss Ott ನಾವೇನು ಕೆಲಸ ಮಾಡೋಕೆ ಬಂದಿದೀವಾ? ಕತ್ತು ಕತ್ತರಿಸಿ ಹಾಕ್ತೀನಿ: ಜೈಲು ಸೇರಿದ ಸೋನು ಟಾಂಗ್
'ಜೈಲು ಸೇರಿದಾಗಿನಿಂದಲ್ಲೂ ಸೋನು ಹೇಳುತ್ತಾರೆ ಬಿಗ್ ಬಾಸ್ ನನಗೆ ಈ ಕೆಲಸ ಹೇಳಿಲ್ಲ. ನನ್ನ ಪ್ರಶ್ನೆ ಏನೆಂದರೆ ಬಿಗ್ ಬಾಸ್ ಈ ಮನೆಯಲ್ಲಿ ಯಾರಿಗೆ ಏನು ಕೆಲಸ ಹೇಳಿದ್ದಾರೆ? ಆರ್ಯವರ್ಧನ್ ಅವರಿಗೆ ಹೋದಾಗಿನಿಂದ ಮೂರು ವಾರ ಅಡುಗೆ ಮಾಡಿ ಅಂತ ಹೇಳಿಲ್ಲ ಜಶ್ವಂತ್‌ಗೆ ಪಾತ್ರೆ ಮತ್ತು ಬಾತ್‌ರೂಮ್ ತೊಳೆಯಿರಿ ಅಂತ ಹೇಳಿಲ್ಲ. ಸುಮ್ಮನೆ ಕುಳಿತುಕೊಂಡು ನೀವು ಸ್ಟೇಟ್ಮೆಂಟ್ ಕೊಡ್ತೀರಾ ಅವೆಲ್ಲಾ ಹೇಗಿರುತ್ತೆ ಅಂದ್ರೆ ನಿಮಿಗೇನು ಹೇಳ್ಬಿಡುತ್ತೀರಾ, ನಿದ್ರೆ ಬಂದ್ರೆ ಹಾಡು ಹಾಕ್ಬಿಡುತ್ತೀರಾ ಆಮೇಲೆ ಮೈಕ್ ಹಾಕೊಂಡಿಲ್ಲ ಅಂದ್ರೆ ಮೈ ಹಾಕೊಳ್ಳಿ ಅಂತ ಹೇಳ್ತೀರಾ ನಿಮಗೇನು ಹೇಳ್ಬಿಡುತ್ತೀರಾ..ಇದೆಲ್ಲಾ ಬಿಡಿ ಬಿಗ್ ಬಾಸ್ ನಿಮಗೆ ರೆಡಿಯಾಗಿ ಅಂತಾನೂ ಹೇಳುವುದಿಲ್ಲ ಮೇಕಪ್ ಹಾಕಿ ಅಂತಾನೂ ಹೇಳುವುದಿಲ್ಲ. ಸಿಂಪಲ್ ಆಗಿ ಹೇಳಬೇಕು ಅಂದ್ರೆ ನೀವು ತುಂಬಾ dismissive...dismissive lines ಮಾಡ್ತೀರಾ ನೀವು ಅದರಲ್ಲೂ ಬಿಗ್ ಬಾಸ್‌ಗೆ ನಿಮಗೇನು ಹೇಳ್ಬಿಡುತ್ತೀರಾ? ...ತುಂಬಾ ಅರ್ಥ ಕೊಡುತ್ತೆ ಸೋನು ಅವರೇ. ತುಂಬಾ ಸೀಸನ್‌ಗಳಲ್ಲಿ ತುಂಬಾ ಜನ ಬಿಗ್ ಬಾಸ್ ಜೊತೆ ಮಾತನಾಡುತ್ತಾರೆ ಅವರಲ್ಲಿ ಒಂದು ಕ್ಯೂಟ್ನೆಸ್ ಇರುತ್ತೆ ನಿಮ್ಮ ರೀತಿ ಟಾಂಟ್ ಕೊಡುವುದಿಲ್ಲ. ಸೋನು ಅವರೇ ಬಿಗ್ ಬಾಸ್ ಇನ್ಮೇಲೆ ನಿಮಗೆ ಯಾವುದೇ ಆದೇಶ ಕೊಡುವುದಿಲ್ಲ ನೀವು ಯಾವ ಕೆಲಸ ಮಾಡುವ ಅಗತ್ಯವಿಲ್ಲ ಟಾಸ್ಕ್ ಮಾಡುವುದು ಬೇಡ..ಟಾಸ್ಕ್‌ಗಳಲ್ಲಿ ಯಾರೂ ನಿಮ್ಮನ್ನು ಹಾಕಿಕೊಳ್ಳುವುದಿಲ್ಲ ಕಳಪೆ ಕೊಡುವುದಕ್ಕೆ ನಾನೇ ಬಿಡುವುದಿಲ್ಲ ಬೆಸ್ಟ್ ಪರ್ಫಾರ್ಮ್ ಸಿಗೋದೇ ಇಲ್ಲ ಈ ಮನೆಯಲ್ಲಿ ಯಾವ ವಿಚಾರಕ್ಕೂ ನೀವು ಭಾಗಿಯಾಗುವುದಿಲ್ಲ. ಈ ರೀತಿ ಪರಿಸ್ಥಿತಿ ಬಂದಾಗ ಬಿಗ್ ಬಾಸ್ ಬಾಗಿಲು ತೆಗೆದು ಹೊರ ಕಳುಹಿಸಬಹುದು ಆದರೆ ನಾನು ನಿಮಗೆ 2 ವಾರ ರಜೆ ಕೊಡುವೆ. ಆ ಮನೆಯಲ್ಲಿ ಸುಂದರ ಸುಂದರವಾದ ವಸ್ತುಗಳು ಇದೆ ಅವುಗಳಲ್ಲಿ ನೀವು ಕೂಡ ಒಬ್ಬರಾಗಿರುತ್ತೀರಿ. ಯಾರಿಗೂ ನೋವಿಸಿ ಮಾತನಾಡಬೇಕು ಅನ್ನೋದು ನನ್ನ ಉದ್ದೇಶ ಅಲ್ಲ ಬೇರೆ ಅವರಿಗೆ ಒಂದು ನ್ಯಾಯ ಆಗಬೇಕು ಅಂದ್ರೆ ಈ ರೀತಿ ಮಾತನಾಡಬೇಕು' ಎಂದು ಸುದೀಪ್ ಸೋನು ಮೇಲೆ ಗರಂ ಆಗಿದ್ದಾರೆ.
Bigg Boss Ott ಜಾತ್ರೆಯಲ್ಲಿ ಸ್ಕೂಲಲ್ಲಿ ಕಳ್ಳತನ ಮಾಡುತ್ತಿದ್ದೆ: ಸೋನು ಗೌಡ- ಸೋಮಣ್ಣ ಸ್ಟೋರಿ ವೈರಲ್!
'ಅಡುಗೆ ಮನೆಯಲ್ಲಿದ್ದರೆ ನಾವು ಸದಾ ಕಾಣಿಸಿಕೊಳ್ಳಬಹುದು ಎಂದು ಎಲ್ಲಾ ಸ್ಪರ್ಧಿಗಳು ಯೋಚನೆ ಮಾಡುತ್ತಾರೆ. ನಾವು ಅಡುಗೆ ಮನೆಗೆ ಹೋಗಿ ಅಂತ ಹೇಳುವುದಿಲ್ಲ ಆದರೆ ನಿಮ್ಮ ಮಾತು ಸರಿ ಅಲ್ಲ ಎಲ್ಲಿ ನನ್ನ ಸೇರಿಸುತ್ತಾರೆ ಅನ್ನೋದು ಸರಿ ಅಲ್ಲ. ನಿಮ್ಮನ್ನು ತಿದ್ದಬೇಕು ಅಂತ ನಾನು ಹೇಳುವುತ್ತಿಲ್ಲ. ಹೊರಗಿನ ಜನರಿಗೆ ನೀವು ಹೇಗೆ ಕಾಣಿಸುತ್ತಿದ್ದೀರಿ ಅಂತ ನಾನು ಹೇಳುತ್ತಿರುವುದು. ನಿಮ್ಮ ಮಾತು ನಿಮಗೆ ಕ್ಯೂಟ್ ಅನಿಸಬಹುದು ಆದರೆ ತುಂಬಾ harsh ಅಗಿರುತ್ತದೆ. ನಿಮ್ಮ ಮಾತುಗಳನ್ನು ಕೇಳಿ ಜನರು ಖುಷಿ ಪಟ್ಟಿದ್ದಾರೆ ಆದರೆ ಈ ರೀತಿ ಏಕವನ ಮಾತನಾಡುವುದು ಸರಿ ಅಲ್ಲ. ಈ ಮನೆಯಲ್ಲಿ ಅನೇಕರು ಮಾತನಾಡುವ ಏಕವಚನ ಚಪ್ಪಲಿಯಲ್ಲಿ ಹೊಡೆದಂತೆ ಇರುತ್ತೆ. ಬಹುವಚನದಲ್ಲಿ ಮಾತನಾಡಬೇಕು ಅನ್ನೋದು ನನ್ನ ಉದ್ದೇಶ ಅಲ್ಲ ಏಕೆಂದರೆ ಫ್ರೆಂಡ್ಸ್ ಆದ್ಮೇಲೆ ಏಕವಚನದಲ್ಲಿ ಮಾತನಾಡೋದು ತಪ್ಪಲ್ಲ. ನಾನು ನೋಡಿರುವ ಇಷ್ಟು ಸೀಸನ್‌ನಲ್ಲಿ ಯಾರಿಗೂ ಯಾರ ಮೇಲೆ ಗೌರವ ಕಡಿಮೆ ಆಗಿಲ್ಲ ನಿಮ್ಮ ಏಕವಚನದಲ್ಲಿ ಗೌರವ ಕಾಣಿಸುವುದಿಲ್ಲ. ಸೋನು ಅವರು ನೀವು ಒಂದು ಅರ್ಥ ಮಾಡಿಕೊಳ್ಳಬೇಕು ತಪ್ಪು ಎಲ್ಲರೂ ಮಾಡ್ತಾರೆ ಆದರೆ ಅದನ್ನು ತಿದ್ದುವುದಕ್ಕೆ ರಾಕೇಶ್ ರೀತಿ ಸ್ನೇಹಿತರು ಸಿಗುವುದಿಲ್ಲ ಅವರು ತಮ್ಮ ಸ್ಟ್ಯಾಂಡ್ ತೆಗೆದುಕೊಂಡರೂ ನಿಮ್ಮನ್ನು ಕರೆಕ್ಟ್ ಮಾಡಲು ಮುಂದಾಗುತ್ತಾರೆ ಆದರೆ ನಿಮ್ಮ ಬಾಯಲ್ಲಿ ಅವರ ಬಗ್ಗೆ ಬರುವುದು ಥು ಎಷ್ಟು ಚೀಪ್ ಥು ಎಷ್ಟು ಫೇಕ್ ಥು ಥು...ಏನಿದು ಥು? ನೀವು ಇಷ್ಟು ಹೇಳಿದ ಮೇಲೂ ರಾಕೇಶ್ ಬಂದು ಸಾರಿ ಕೇಳುತ್ತಾರೆ. ಆಗ ನೀವು ಸುಮ್ಮನಾಗುವುದಿಲ್ಲ ಬದಲಿಗೆ ತಪ್ಪು ಅರ್ಥ ಆಯ್ತು ಅಲ್ವಾ ಬಿಡಿ ಅಂತೀರಾ. ಹೊರಗಡೆ ಜನರಿಗೆ ನೀವು ಮಾತನಾಡುವ ರೀತಿಯಲ್ಲಿ ಹೇಗೆ ಕಾಣಿಸುತ್ತಿದ್ದೀರಾ ಅಂತ ನಾನು ಪ್ರಸ್ತಾಪ ಮಾಡುತ್ತಿದ್ದೀನಿ' ಎಂದಿದ್ದಾರೆ ಸುದೀಪ್.