ಲವ್ ಟೈಮ್‌ವೇಸ್ಟ್, ಫ್ರೆಂಡ್‌ಶಿಪ್ ಮುಖ್ಯ: ಪ್ರೀತಿ ಪಾಠ ಮಾಡಿದ ಸೋನು ಶ್ರೀನಿವಾಸ್ ಗೌಡ
ಮೊದಲ ಬಾರಿಗೆ ಪ್ರೀತಿ ಪಾಠ ಮಾಡಿದ ಸೋನು. ಟ್ರೋಲ್ ಆಗೋಕೆ ಕಾರಣನೇ ಬೇಡ ಎಂದ ನೆಟ್ಟಿಗರು...
ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸೋನು ಶ್ರೀನಿವಾಸ್ ಗೌಡ ವೂಟ್ ಬಿಗ್ ಬಾಸ್ ಕನ್ನಡ ಸೀಸನ್ 1ರ ಸ್ಪರ್ಧಿ. ಬಿಬಿ ಮನೆ ಪ್ರವೇಶಿಸಿದ ದಿನದಿಂದಲ್ಲೂ ಸೋನು ನಾನ್ ಸ್ಟಾಪ್ ಟ್ರೋಲ್ ಆಗುತ್ತಿದ್ದಾರೆ. ಟ್ರೋಲ್ ಕ್ವೀನ್ ಎಂದೇ ಹೆಸರು ಪಡೆದಿರುವ ಸೋನು ಜನರಿಗೆ ತಮ್ಮ ಮೇಲಿರುವ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವುದಕ್ಕೆ ಇಲ್ಲಿಗೆ ಬಂದಿರುವುದು ಹಾಗೆ ಹೀಗೆ ಎಂದೆಲ್ಲಾ ಹೇಳಿ ನಿರೀಕ್ಷೆ ಹೆಚ್ಚಿಗೆ ಮಾಡಿದ್ದಾರೆ. ಎರಡು ವಾರವೂ ಸೋನು ಎಲಿಮಿನೇಟ್ ಆಗಲು ನಾಮಿನೇಟ್ ಆಗಿದ್ದಾರೆ.
ಸದ್ಯಕ್ಕೆ ರೂಪೇಶ್ ಮತ್ತು ಸಾನ್ಯ ನಡುವೆ ಚುಕು ಚುಕು ನಡೆಯುತ್ತಿದೆ ಎಂದು ಇಡೀ ಮನೆ ಮಾತನಾಡಿಕೊಳ್ಳುತ್ತಿದೆ. ನಾವಿಬ್ಬರೂ ಸ್ನೇಹಿತರು ನಮ್ಮ ನಡುವೆ ಏನಿಲ್ಲ ಎಂದು ವಾದ ಮಾಡಿದ್ದರೂ ಯಾರೂ ಕೇಳುವುದಕ್ಕೆ ರೆಡಿಯಾಗಿಲ್ಲ. ಹೀಗಾಗಿ ರೂಪೇಶ್ ಎಲ್ಲಿ ಏನೇ ಮಾತನಾಡಿದ್ದರೂ ಜನರು ಪ್ರೀತಿ ಬಗ್ಗೆ ಪ್ರಶ್ನೆ ಮಾಡುವುದು ಕಾಮನ್ ಆಗಿದೆ. ಅಡುಗೆ ಮನೆಯಲ್ಲಿ ಸೋನು ಬ್ಯುಸಿಯಾಗಿರುವ ರಾಕೇಶ್ ಜೊತೆ ಪ್ರೀತಿ ಬಗ್ಗೆ ಹಂಚಿಕೊಂಡಿದ್ದಕ್ಕೆ ಸೋನು ಲವ್ ಟಿಪ್ಟ್ ಕೊಟ್ಟಿದ್ದಾರೆ.
'ಸೋನು ತುಂಬಾನೇ ಬದಲಾಗಿದ್ದಾಳೆ. ನಾನು ನಾಮಿನೇಟ್ ಯಾಕಾಗಿಲ್ಲ ಅಂದ್ರೆ ನಾನು ಜಗಳ ಮಾಡುತ್ತಿಲ್ಲ ಎನ್ನುತ್ತಿದ್ದಾಳೆ' ಎಂದು ನಟಿ ಚೈತ್ರಾ ಅಡುಗೆ ಮಾಡುವಾಗ ಮಾತನಾಡಿದ್ದಾರೆ.
ಸೋನು ಪಾಠ:
'ಏನ್ ಗೊತ್ತಾ ಲವ್ ಟೈಮ್‌ಪಾಸ್, ಪ್ರೆಂಡ್‌ಶಿಪ್ ಮುಖ್ಯ. ಪ್ರೀತಿಯಲ್ಲಿ ನಂಬಿಕೆ ತುಂಬಾನೇ ಮುಖ್ಯ ಅದನ್ನು ಉಳಿಸಿಕೊಳ್ಳಬೇಕು. ನಂಬಿಕೆ ಇದ್ರೆ ಲೈಫಲ್ಲಿ ಏನ್ ಬೇಕಿದ್ದರೂ ಸಾಧನೆ ಮಾಡಬಹುದು' ಎಂದು ರಾಕೇಶ್ ಮತ್ತು ಅಕ್ಷತಾಗೆ ಹೇಳುತ್ತಾರೆ.
'ಪ್ರೀತಿಯಲ್ಲಿ ನಾನು ಇದೆಲ್ಲಾ ನಂಬುವುದಿಲ್ಲ ನಾನು. ಏನೇ ರಿಲೇಷನ್‌ಶಿಪ್ ಇದ್ರೂ ಮೊದಲು ಮ್ಯುಚುಯರ್ ರೆಸ್ಪೆಕ್ಟ್ ಇರಬೇಕು. ಬಿಗ್ ಬಾಸ್ ಮನೆಯಲ್ಲಿ ಬಿಟ್ಟು ಕೊಡದೆ ಎಲ್ಲಾ ಇರುವಕ್ಕೆ ಆಗುತ್ತಾ? ಅದೆಲ್ಲಾ ವೀಕ್ನೆಸ್ ಆಗುತ್ತದೆ' ಎಂದು ರಾಕೇಶ್ ಹೇಳಿದ್ದಾರೆ.
Bigg Boss OTT; ಸೋನು ಗೌಡ ವರ್ತನೆಯಿಂದ ನೆತ್ತಿಗೇರಿದ ಸುದೀಪ್ ಕೋಪ, ಸರಿಯಾಗೇ ಕ್ಲಾಸ್ ತೆಗೆದುಕೊಂಡ ಕಿಚ್ಚ
ನನಗೆ ಮೂಡ್ ಬಂದಾಗ 3 ದಿನಕ್ಕೆ ಒಮ್ಮೆ ಮಾಡ್ತೀನಿ:
ಸುದೀಪ್ ಸ್ಪರ್ಧಿಗಳ ಜೊತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿದರು. ಈ ವೇಳೆ ಮನೆಯಲ್ಲಿ ತುಂಬಾ ಗಲೀಜು ಆಗಿ ಇರುವುದು ಯಾರು ಕೇಳಿದರು. ಇದಕ್ಕೆ ಅನೇಕ ಹೆಸರು ಹೊರಬಂತು. ಸ್ಫೂರ್ತಿ ಗೌಡ ಮತ್ತು ಸಾನ್ಯಾ ಇಬ್ಬರೂ ಬಟ್ಟೆಗಳನ್ನು ಇಟ್ಟುಕೊಳ್ಳುವ ವಿಚಾರದಲ್ಲಿ ಗಲೀಜಾಗಿ ಇರುತ್ತಾರೆ ಎಂದು ಅನೇಕರು ಆರೋಪ ಮಾಡಿದರು. ಇದೇ ವೇಳೆ ಸ್ನಾನದ ವಿಚಾರವೂ ಪ್ರಸ್ತಾಪ ಆಗಿದೆ. ಪ್ರತಿ ದಿನ ಸ್ನಾನ ಮಾಡದೆ ಇರುವ ಸ್ಪರ್ಧಿ ಯಾರು ಎನ್ನುವ ಪ್ರಶ್ನೆ ಎದುರಾಯಿತು. ಆಗ ಸಾನ್ಯಾ ಐಯ್ಯರ್, ಸೋನು ಗೌಡ ಹೆಸರು ಹೇಳಿದರು. ಸೋನು ಕೂಡ ಸಾನ್ಯಾ ಒಂದು ದಿನ ಸ್ನಾನ ಮಾಡಿರಲಿಲ್ಲ, ಪರ್ಫ್ಯೂಮ್ ಹಾಕಿಕೊಂಡು ಓಡಾಡಿದ್ರು ಎಂದರು. ಬಳಿಕ ಸೋನು ಗೌಡ ಇವತ್ತು ಸ್ನಾನ ಮಾಡದೆ ಹಾಗೆ ಬಂದು ಕುಳಿತಿದ್ದಾರೆ ಎಂದು ರಿವೀಲ್ ಮಾಡಿದರು. ಸನು ಕೂಡ ಹೌದು ಎಂದು ಒಪ್ಪಿಕೊಂಡರು.
Bigg boss OTT: ಎರಡ್ಮೂರು ಲವ್ವು, ಮದ್ವೆ, ಬ್ರೇಕಪ್ಪು, ಡಿವೋರ್ಸು, ಇದೊಂಥರ ಹುಚ್ಚರ ಸಂತೆ!
ಆಗ ಸುದೀಪ್ ಯಾವಾಗಲೂ ಹೀಗೆನಾ, ಮನೆಯಲ್ಲೂ ಹೀಗೆ ಮಾಡ್ತೀರಾ ಎಂದು ಕೇಳಿದರು. ಇದಕ್ಕೆ ಸೋನು ಮನೆಯಲ್ಲಿದ್ದಾಗ ಮೂಡ್ ಬಂದಾಗ 3 ದಿನಕ್ಕೆ ಒಮ್ಮೆ ಮಾಡ್ತೀನಿ ಎಂದು ಹೇಳಿದರು. ಸೋನು ಮಾತು ಕೇಳಿ ದಂಗಾದ ಸುದೀಪ್, ಮೂಡ್ ಬಂದಾಗ ಏನ್ ಮಾಡ್ತೀರಾ ಎಂದು ಕಾಲೆಳೆದರು. ಬಳಿಕ ಸ್ಪರ್ಧಿಗಳೆಲ್ಲಾ ಜೋರಾಗಿ ನಕ್ಕಿದರು. ಆಗ ಸೋನು ಗೌಡ ಸ್ನಾನ ಮಾಡುವ ಬಗ್ಗೆ ಹೇಳಿದ್ದು ಎಂದರು. ಏನು ಅಂತ ಸರಿಯಾಗಿ ಅರ್ಥವಾಗುವ ಹಾಗೆ ಹೇಳಬೇಕು, ಇಲ್ಲವಾದರೇ ವಿಷಯ ಎಲ್ಲಿಂದನೋ ಎಲ್ಲಿಗೋ ಹೋಗುತ್ತೆ ಎಂದು ಸುದೀಪ್ ಹೇಳಿದರು.