Asianet Suvarna News Asianet Suvarna News

ಬಿಗ್ ಬಾಸ್‌ಗೆ ಹೋದ್ರೆ ಜೋಡಿಯಾಗಿ ಬರ್ತಾರೆ, ಆದ್ರೆ ಇವ್ರು...: ನಂದು-ಜಶ್ವಂತ್‌ ಬ್ರೇಕಪ್‌ಗೆ ನೆಟ್ಟಿಗರ ಕಾಮೆಂಟ್

ಬಿಗ್ ಬಾಸ್ ಒಟಿಟಿ ಕನ್ನಡ ಶೋ ಮೂಲಕ ಖ್ಯಾತಿಗಳಿಸಿದ್ದ ನಂದಿನಿ ಮತ್ತು ಜಶ್ವಂತ್ ಜೋಡಿ ಅಧಿಕೃತವಾಗಿ ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 

Bigg Boss Ott Fame Nandini and Jaswanth announced their break up officially sgk
Author
First Published Jan 13, 2023, 4:54 PM IST

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್‌ 1 ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಬಿಗ್ ಬಾಸ್ ಒಟಿಟಿಯಲ್ಲಿ ಗೆದ್ದು ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಮತ್ತು ಸಾನ್ಯಾ ಐಯ್ಯರ್ ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿಕೊಟ್ಟಿದ್ದರು. ಮೊದಲ ಒಟಿಟಿ ಕನ್ನಡ ಬಿಗ್ ಬಾಸ್‌ನಲ್ಲಿ ಜಶ್ವಂತ್ ಮತ್ತು ನಂದಿನಿ ಜೋಡಿಯಾಗಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಈ ಜೋಡಿಯ ಮೇಲೆ ಕುತೂಹಲ ಹೆಚ್ಚಾಗಿತ್ತು. ಇವರು ಹಿಂದಿಯಲ್ಲಿ ರೋಡೀಸ್ ಶೋ ಗೆದ್ದಿದ್ದರು. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಇವರು ಕುತೂಹಲ ಹೆಚ್ಚಿಸಿದ್ದರು. ಆದರೆ ಇಬ್ಬರೂ ಕಡಿಮೆ ವೋಟ್‌ನಿಂದ ಹೊರ ಬಂದರು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಇಬ್ಬರ ನಡುವೆ ಮುನಿಸು, ಕಿತ್ತಾಟ ಪ್ರಾರಂಭವಾಗಿತ್ತು. ಇಬ್ಬರೂ ಬಿಗ್ ಮನೆಯಿಂದ ಹೊರ ಬರುವ ಮೊದಲೇ ದೂರ ದೂರ ಆಗ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿತ್ತು. ಇತ್ತೀಚಿಗೆ ಇಬ್ಬರ ಬ್ರೇಕಪ್ ಸುದ್ದಿ ವೈರಲ್ ಆಗಿತ್ತು. 

ಇದೀಗ ನಂದಿನಿ ಅಧಿಕೃತವಾಗಿ ಬ್ರೇಕಪ್ ಸುದ್ದಿ ಬಹಿರಂಗ ಪಡಿಸಿದ್ದಾಪೆ. ಜಶ್ವಂತ್ ಮತ್ತು ತಾನು ಜೊತೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ನಂದಿನಿ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. 'ನಾನು ಮತ್ತು ಜಶ್ವಂತ್ ಒಟ್ಟಿಗೆ ಇದ್ದೆವು. ಇಬ್ಬರೂ ಒಟ್ಟಿಗೆ ಹಿಸ್ಟರಿ ಸೃಷ್ಟಿಸಿದೆವು. ಇಬ್ಬರೂ ಸಂತೋಷದ ಕ್ಷಣ ಕಳೆದೆವು. ರಿಲೇಷನ್ ಶಿಪ್‌ನಲ್ಲಿ ಇರಲು ನನಗೆ ಇಷ್ಟವಿರಲಿಲ್ಲ. ಆದರೆ ಟೈಂ ತಗೊಂಡು ಬಳಿಕ ಒಪ್ಪಿಕೊಂಡೆ. ಈಗ ಬಿಟ್ಟಿಕೊಡಲು ಇಷ್ಟವಿರಲಿಲ್ಲ. ಆದರೂ ಬಿಟ್ಟು ಕೊಟ್ಟೆ' ಎಂದು ಹೇಳಿದ್ದಾರೆ. 

'ಆರಂಭದಲ್ಲಿ ನಾನು ಅವನ ಖುಷಿಯಾಗಿದ್ದೆ. ಆದರೆ ಅದು ತುಂಬಾ ಕಡಿಮೆ ಆವಧಿಗೆ ಮಾತ್ರ ಆಗಿತ್ತು. ಅವನ ಆ ಖುಷಿ ಹೋದ ಬಳಿಕ ಸಮಯ ಕೇಳಿದ. ನಾನು ಬಿಟ್ಟುಕೊಟ್ಟೆ. ತುಂಬಾ ಕಷ್ಟವಾಗಿತ್ತು ಆದರೆ ಇದೇ ಸತ್ಯ ಎಂದು ಹೇಳಿದ್ದಾರೆ. ಅವನ ಖುಷಿ ಕೂಡ ತುಂಬಾ ಮುಖ್ಯ. ನಾನು ಯಾವಾಗಲೂ ಅವನ ಖುಷಿ ಆಗಲು ಸಾಧ್ಯವಿಲ್ಲ' ಎಂದು ನಂದಿನಿ ಬರೆದುಕೊಂಡಿದ್ದಾರೆ. ನನಗೆ ಈ ಬಗ್ಗೆ ಬೇಸರ ಇಲ್ಲ ಎಂದು ಹೇಳಿದ್ದಾರೆ. 

'ಆ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲಾ ಅಂತಾ ನಾನು ಬೇಸರ ಪಟ್ಟುಕೊಳ್ಳಲ್ಲ. ನನ್ನ ಜೀವನದಲ್ಲಿ ಈಗ ಏನೆಲ್ಲಾ ಇದೆ ಅದಕ್ಕೆ ನಾನು ಅಭಾರಿಯಾಗಿರುತ್ತೇನೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ನನ್ನಲ್ಲಿ ಬ್ಯೂಟಿಫುಲ್ ಹಾರ್ಟ್ ಮತ್ತು ನಗು ಇದೆ ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಬ್ರೇಕಪ್ ಬಗ್ಗೆ ಇದ್ದ ಅನುಮಾನಗಳಿಗೆ ಬ್ರೇಕ್ ಹಾಕಿದ್ದಾರೆ. 

ಇಬ್ಬರ ಬ್ರೇಕಪ್ ಸುದ್ದಿ ಬಹಿರಂಗ ವಾಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಹೋದವರು ಜೋಡಿಯಾಗಿ ಹೊರ ಬರುತ್ತಾರೆ. ಆದರೆ ಇವರು ಬೇರೆ ಬೇರೆ ಆಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ನಂದು ಪರ ಮಾತಮಾಡುತ್ತಿದ್ದಾರೆ.  

ಬ್ರೇಕಪ್ ಮಾಡ್ಕೊಂಡ್ರಾ ಬಿಗ್ ಬಾಸ್ ಲವ್ ಬರ್ಡ್ಸ್‌ ಜಶ್ವಂತ್ - ನಂದು?; ಕಾರಣವಾದ ಸಾನ್ಯಾ ವಿರುದ್ಧ ನೆಟ್ಟಿಗರು ಗರಂ

ಸಾನ್ಯಾ ಜೊತೆ ಕ್ಲೋಸ್ ಆಗಿದ್ದ ಜಶ್ವಂತ್

ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್, ಜಶ್ವಂತ್ ಮತ್ತು ನಂದಿನಿ ಒಂದು ಗ್ಯಾಂಗ್‌ನಲ್ಲಿದ್ದರು. ಜಶ್ವಂತ್ ಮತ್ತು ಸಾನ್ಯಾ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು. ಜನರಿಗೆ ಇದು ತಪ್ಪಾಗಿ ಕಾಣಿಸುತ್ತಿದೆ ಎಂದು ನಂದಿನಿ ಅನೇರ ಬಾರಿ ಹೇಳಿದ್ದರು ಜಶ್ವಂತ್ ಬದಲಾಗಿಲಿಲ್ಲ. ಅಲ್ಲಿಂದ ಇಬ್ಬರ ನಡುವೆ ವೈ ಮನಸ್ಸು ಮೂಡಿತ್ತು.  ಜಶ್ವಂತ್ ಎಲಿಮಿನೇಟ್ ಆದ ಮೇಲೆ ಸಾನ್ಯಾ ರೂಪೇಶ್‌ಗೆ ಕ್ಲೋಸ್ ಆದರು. ಇದೀಗ ನೆಟ್ಟಿಗರು ಸಾನ್ಯಾ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. 

ಏನೂ ಬದಲಾಗಿಲ್ಲ, ಜೀವದ ಗೆಳೆಯ ಸಿಕ್ಕಿದ್ದು ಖುಷಿಯಾಗಿದೆ; ಬಿಗ್ ಬಾಸ್ ಬಳಿಕ ಭೇಟಿಯಾದ ರಾಕೇಶ್-ಅಮೂಲ್ಯಾ ಗೌಡ

ನಂದು-ಜಶ್ವಂತ್ ಬಗ್ಗೆ 

ಹಿಂದಿ ಕಿರುತೆರೆ ಜನಪ್ರಿಯ ರಿಯಾಲಿಟಿ ಶೋ ರೋಡೀಸ್‌ನಲ್ಲಿ ಕರ್ನಾಟಕವನ್ನು ಜಶ್ವಂತ್  ಮತ್ತು ನಂದಿನಿ ಪ್ರತಿನಿಧಿಸಿದ್ದರು. ನಂದಿನಿ ವಿನ್ನರ್ ಟ್ರೋಫಿ ಎತ್ತಿ ಹಿಡಿದಿದ್ದರು. ಅಲ್ಲಿಂದ ಸ್ನೇಹಿತರಾಗಿ, ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಇವರಿಬ್ಬರನ್ನು ಒಬ್ಬ ಸ್ಪರ್ಧಿಯಾಗಿ ಪರಿಗಣಿಸಿ ಓಟಿಟಿ ಎಂಟ್ರಿ ನೀಡಲಾಗಿತ್ತು. ಕಡಿಮೆ ಅವಧಿಯಲ್ಲೇ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಬಿಗ್ ಮನೆಯಲ್ಲಿ ಸ್ವಲ್ಪ ಸಮಯ ಅಷ್ಟೆ ಇದ್ದರು. 

Follow Us:
Download App:
  • android
  • ios