ಯೂಟ್ಯೂಬರ್​ ಅರ್ಮಾನ್​ ಮಲಿಕ್​ ಅವರ ಸೆಕ್ಸ್​ ವಿಡಿಯೋ ಎನ್ನಲಾದ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಪತ್ನಿ ಪಾಯಲ್​ ಮಲಿಕ್​ ನೆಟ್ಟಿಗರ ವಿರುದ್ಧ ಕೇಸ್​ ಹಾಕಲು ರೆಡಿಯಾಗಿದ್ದಾರೆ. ಅವರು ಹೇಳಿದ್ದೇನು? 

ಇಬ್ಬರೂ ಪತ್ನಿಯರನ್ನು ಒಟ್ಟಿಗೇ ಗರ್ಭಿಣಿ ಮಾಡುವ ಮೂಲಕವೂ ಫೇಮಸ್​ ಆದವರು ವಿವಾದಿತ ಯೂಟ್ಯೂಬರ್​ ಅರ್ಮಾನ್​ ಮಲಿಕ್​. ಪಾಯಲ್​ ಮಲಿಕ್​ ಮತ್ತು ಕೃತಿಕಾ ಮಲಿಕ್​ ಇವರ ಪತ್ನಿಯರು. ಖ್ಯಾತ ಗಾಯಕ ಅರ್ಮಾನ್​ ಮಲಿಕ್​ ಅವರ ಹೆಸರನ್ನೇ ಇಟ್ಟುಕೊಂಡು ಸಾಕಷ್ಟು ಹಲ್​ಚಲ್​ ಕೂಡ ಸೃಷ್ಟಿಸಿದ್ದಾರೆ ಈ ಅರ್ಮಾನ್​. ಇದೇ ಕಾರಣಕ್ಕೆ ಗಾಯಕ ಅರ್ಮಾನ್​ ಒಮ್ಮೆ ಸಕತ್​ ಗರಂ ಆಗಿ ಬಾಯಿಗೆ ಬಂದ ಹಾಗೆ ಬೈದದ್ದೂ ಉಂಟು. ಈ ಮೂವರು ಸೇರಿ ಕಾಂಟ್ರವರ್ಸಿ ಮಾಡುತ್ತಲೇ ಯೂಟ್ಯೂಬ್​ನಲ್ಲಿ ಮಿಲಿಯನ್​ಗಟ್ಟಲೆ ವ್ಯೂಸ್​ ಪಡೆಯುತ್ತಿದ್ದಾರೆ. ಇದೇ ಕಾರಣಕ್ಕೆ ಮೂವರೂ ಬಿಗ್​ಬಾಸ್​ ಓಟಿಟಿ-1ನಲ್ಲಿ ಸ್ಥಾನವನ್ನೂ ಪಡೆದುಕೊಂಡಿದ್ದಾರೆ. ಆದರೆ ಪಾಯಲ್​ ಇದಾಗಲೇ ಎಲಿಮಿನೇಟ್​ ಆಗಿ ಹೊರಕ್ಕೆ ಬಂದಿದ್ದು, ಕೃತಿಕಾ ಮತ್ತು ಅರ್ಮಾನ್​ ಬಿಗ್​ಬಾಸ್​​ ಮನೆಯಲ್ಲಿ ಇದ್ದಾರೆ. ಆದರೆ ಇತ್ತೀಚೆಗೆ ಇವರಿಬ್ಬರೂ ಬಿಗ್​ಬಾಸ್​ ಮನೆಯಲ್ಲಿ ಲೈಂಗಿಕ ಕ್ರಿಯೆಯೆಲ್ಲಿ ತೊಡಗಿದ್ದಾರೆ ಎನ್ನಲಾದ ವಿಡಿಯೋ ಒಂದು ವೈರಲ್​ ಆಗಿತ್ತು. ಅದೀಗ ಸೋಷಿಯಲ್​ ಮೀಡಿಯಾದಲ್ಲಿ ಬಹಳ ಸದ್ದು ಮಾಡುತ್ತಿದೆ. 

ಈ ವೈರಲ್​ ವಿಡಿಯೋದಲ್ಲಿ, ಬಿಗ್​ಬಾಸ್​ ಮನೆಯ ಲೈಟ್​ ಆಫ್​ ಆಗುತ್ತಿದ್ದಂತೆಯೇ ಮಂಚದ ಮೇಲೆ ಪತ್ನಿ ಜೊತೆ ಅರ್ಮಾನ್​ ರೊಮಾನ್ಸ್​ನಲ್ಲಿ ತೊಡಗಿದ್ದಾರೆ. ಇದು ಬಿಗ್​ಬಾಸ್​ನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಇದಾಗಲೇ ಬಿಗ್​ಬಾಸ್​ ವಿರುದ್ಧ ಅಶ್ಲೀಲತೆಯ ವಿರುದ್ಧ ಕೇಸೂ ದಾಖಲಾಗಿದ್ದು, ಇದು ಅಸಲಿ ವಿಡಿಯೋ ಅಲ್ಲ, ಎಡಿಟೆಡ್​ ವಿಡಿಯೋ ಎಂದು ಜೀ ಸಿನಿಮಾ ಸ್ಪಷ್ಟನೆ ಕೂಡ ಕೊಟ್ಟಿದೆ. ಆದರೆ, ಟಿಆರ್​ಪಿಗೋಸ್ಕರ ಬಿಗ್​ಬಾಸ್​ನಲ್ಲಿ ಇವೆಲ್ಲಾ ಮಾಮೂಲು, ಉದ್ದೇಶಪೂರ್ವಕವಾಗಿಯೇ ಇಂಥ ಕೃತ್ಯ ಮಾಡಿಸಿ, ಅದನ್ನು ವೈರಲ್​ ಮಾಡಲಾಗುತ್ತದೆ ಎನ್ನುವ ಗಂಭೀರ ಆರೋಪವೂ ಇದೆ. ಈ ವಿಡಿಯೋದಲ್ಲಿ ದಂಪತಿ ಬೆಡ್​ಷೀಟ್​ ಹೊದ್ದುಕೊಂಡು ರೊಮಾನ್ಸ್​ನಲ್ಲಿ ತೊಡಗಿರುವುದು ಅವರ ಚಟುವಟಿಕೆಯಲ್ಲಿಯೇ ತಿಳಿಯುತ್ತಿದೆ.

ಬಿಗ್​ಬಾಸ್​ ಮಂಚದ ಮೇಲೆ ಸ್ಪರ್ಧಿಗಳ ಖುಲ್ಲಂ ಖುಲ್ಲಾ ರೊಮಾನ್ಸ್​! ವೈರಲ್​ ಆಯ್ತು ವಿಡಿಯೋ...

ಇದೀಗ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದಿರುವ ಅರ್ಮಾನ್​ ಪತ್ನಿ ಪಾಯಲ್​ಗೆ ಜೀವ ಬೆದರಿಕೆ ಬರುತ್ತಿದೆಯಂತೆ. ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಪಾಯಲ್​ ಅವರಿಗೆ ಹಲವಾರು ರೀತಿಯ ಬೆದರಿಕೆ ಬರುತ್ತಿದೆಯಂತೆ. ಯಾಕೆ ಬೆದರಿಕೆ ಎಂದು ಪಾಯಲ್​ ಸ್ಪಷ್ಟಪಡಿಸದಿದ್ದರೂ, ಬೆದರಿಕೆ ಹಾಗೂ ಕೆಟ್ಟ ಕಮೆಂಟ್​ ಹಾಕುವವರ ಹೆಸರು ಲಿಸ್ಟ್​ ಮಾಡಿಯಾಗಿದ್ದು, ಅವರೆಲ್ಲರ ವಿರುದ್ಧ ಕೇಸು ದಾಖಲು ಮಾಡುತ್ತಿರುವುದಾಗಿ ವಿಡಿಯೋ ಮೂಲಕ ನೆಟ್ಟಿಗರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇದಾಗಲೇ ಬೆದರಿಕೆ ಮತ್ತು ಕೆಟ್ಟ ಕಮೆಂಟ್​ ಹಾಕುವವರ ಹೆಸರನ್ನು ತಯಾರಿಸಿದ್ದೇನೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತಿದ್ದೇನೆ. ಇದು ಮುಂದುವರೆದರೆ ಅವರ ಹೆಸರನ್ನೂ ಸೇರಿಸಿ, ಎಲ್ಲರ ವಿರುದ್ಧ ಕೇಸ್​ ಹಾಕುತ್ತೇನೆ ಎಂದು ಪಾಯಲ್​ ಹೇಳಿದ್ದಾರೆ. ಆದರೆ ಇದನ್ನು ಒಬ್ಬರೂ ಸೀರಿಯಲ್​ ಆಗಿ ತೆಗೆದುಕೊಳ್ಳದೇ ತಮಾಷೆಯ ಕಮೆಂಟ್​ ಹಾಕುತ್ತಿದ್ದಾರೆ. ಎರಡು ಮದುವೆಯಾದ ನಿನ್ನ ಗಂಡನ ವಿರುದ್ಧ ನಾವು ಕೇಸ್​ ಹಾಕ್ತೇವೆ ಎಂದೆಲ್ಲಾ ರಿಪ್ಲೈ ಮಾಡುತ್ತಿದ್ದಾರೆ! ಮಾನನಷ್ಟ ಮೊಕದ್ದಮೆ ಯಾರು ಹಾಕುವುದು ಗೊತ್ತಾ ಎಂದೂ ಕೆಲವರು ಕಾಲೆಳೆಯುತ್ತಿದ್ದಾರೆ. 

ಅಷ್ಟಕ್ಕೂ, ಬಿಗ್​ಬಾಸ್​ ಎಂದರೇನೇ ಅದೊಂದು ರೀತಿಯಲ್ಲಿ ವಿವಾದದ ತಾಣ ಎನ್ನುವ ಆರೋಪ ಬಹಳ ಹಿಂದಿನಿಂದಲೂ ಇದೆ. ಖುಲ್ಲಂಖುಲ್ಲಾ ಆಗಿ ರೊಮಾನ್ಸ್​ ಮಾಡುವುದು ಇಲ್ಲಿ ಮಾಮೂಲು. ಇಂಥ ದೃಶ್ಯಗಳನ್ನೂ ಷೋನಲ್ಲಿ ಧಾರಾಳವಾಗಿ ತೋರಿಸುವ ಮೂಲಕ ಟಿಆರ್​ಪಿ ಹೆಚ್ಚಿಸಿಕೊಳ್ಳಲಾಗುತ್ತದೆ. ಇದೇ ಕಾರಣಕ್ಕೆ ಇಲ್ಲಿ ಬರುವ ಬಹುತೇಕ ಸ್ಪರ್ಧಿಗಳು ಕಾಂಟ್ರವರ್ಸಿ ಮೂಲಕ ಕುಖ್ಯಾತಿ ಪಡೆದವರೇ ಆಗಿರುತ್ತಾರೆ ಎಂಬ ಗಂಭೀರ ಆರೋಪಗಳು ಬರುತ್ತಲೇ ಇವೆ. ಈ ಕಾಂಟ್ರವರ್ಸಿ ಮಾಡಿಕೊಂಡವರ ನಡುವೆ ಯಾವುದೇ ವಿವಾದಗಳಿಗೆ ಹೋಗದ ಒಂದಿಷ್ಟು ಮಂದಿ ಪ್ರಸಿದ್ಧರನ್ನು ಕರೆಯಲಾಗುತ್ತದೆ. ಇದು ನಾಮ್​ ಕೇ ವಾಸ್ತೆ ಮಾತ್ರ. ಅವರು ಬಂದ ಮೊದಲು ಮೂರ್ನಾಲ್ಕು ವಾರಗಳಲ್ಲಿಯೇ ಎಲಿಮಿನೇಟ್​ ಆಗಿ ಹೊರಹಾಕಲಾಗುತ್ತದೆ. ಕಾಂಟ್ರವರ್ಸಿ ಹೆಚ್ಚಿದ್ದಷ್ಟೂ ಟಿಆರ್​ಪಿ ರೇಟೂ ಜಾಸ್ತಿ ಬರುತ್ತದೆ... ಹೀಗೆ ಬಿಗ್​ಬಾಸ್​ ಕುರಿತು ಹಲವಾರು ಮಂದಿ ತಲೆಗೊಂದರಂತೆ ಮಾತನಾಡುವುದು ನಡೆದೇ ಇದೆ. ಅದಕ್ಕಾಗಿಯೇ ಫೈಟಿಂಗ್​, ಕಿಸ್ಸಿಂಗ್​, ರೊಮಾನ್ಸ್​ ಇಂಥ ಸನ್ನಿವೇಶಗಳು ಬಂದರೆ ಅದನ್ನು ಕಟ್​ ಮಾಡದೇ ವೀಕ್ಷಕರ ಮುಂದೆ ಇಡುವುದೇ ಸಾಕ್ಷಿ ಎನ್ನಲಾಗುತ್ತದೆ. ಅದಕ್ಕೆ ತಕ್ಕಂತೆ ವೀಕ್ಷಕರ ಮನಸ್ಥಿತಿಯೂ ಇರುವ ಕಾರಣ, ಎಲ್ಲಾ ಸೀರಿಯಲ್​, ರಿಯಾಲಿಟಿ ಷೋಗಳನ್ನು ಮೀರಿ ಬಿಗ್​ಬಾಸ್​ ಸದಾ ನಂಬರ್​ 1 ಸ್ಥಾನದಲ್ಲಿ ಇರುವುದು ಗುಟ್ಟಾಗಿ ಉಳಿದದ್ದೇನಲ್ಲ. 

ಇವತ್ತು ರಾತ್ರಿಯ ಮಜಾ... ಎನ್ನುತ್ತಲೇ ಸೋನಾಕ್ಷಿ ಸಿನ್ಹಾ ಕ್ಯಾಟ್​ ವಾಕ್​! ಸೈಜ್​ ತಲೆ ಕೆಡಿಸಿಕೊಂಡ ಫ್ಯಾನ್ಸ್​

View post on Instagram