ಬಿಗ್ ಬಾಸ್ ಬಾರ್ಬಿ ಡಾಲ್ ನಿವೇದಿತಾ ಗೌಡ ಗಗನ ಸಖಿಯಾಗಿ ಹೊಸ ವೃತ್ತಿ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಚಾರವನ್ನು ಅಭಿಮಾನಿಗಳೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಹಂಚಿಕೊಂಡಿದ್ದಾರೆ. 

ಬಿಗ್ ಬಾಸ್ ಸೀಸನ್‌-5ರ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದು, ಜನಪ್ರಿಯರಾದ ಸಿಂಡ್ರೆಲಾ ನಿವೇದಿತಾ ಗೌಡ ಹೊಸ ವೃತ್ತಿ ಆರಂಭಿಸುತ್ತಿದ್ದಾರೆ. ಮತ್ತೊಂದೆಡೆ ದಾಂಪತ್ಯ ಜೀವನಕ್ಕೂ ಸಜ್ಜಾಗುತ್ತಿದ್ದಾರೆ. 

Rapper ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಡೇಟ್‌ ಫಿಕ್ಸ್!

BCA ಪದವಿ ಪಡೆದ ನಂತರ ಕೆಲ ದಿನಗಳ ಕಾಲ 'ಕಾಮಿಡಿ ಕಂಪನಿ' ರಿಯಾಲಿಟಿ ಶೋನಲ್ಲಿ ಜಡ್ಜ್‌ ಆಗಿ ಕಾಣಿಸಿಕೊಂಡ ನಿವೇದಿತಾ, ಬಳಿಕ ಗಗನ ಸಖಿಯಾಗಲು ತರಬೇತಿ ಪಡೆಯುತ್ತಿದ್ದರು. ಈಗ ಬೆಂಗಳೂರು ಏರ್‌ಪೋರ್ಟ್‌ನ ಪ್ರತಿಷ್ಠಿತ ಕಂಪನಿಯಲ್ಲಿ ಅಪರೇಷನ್‌ ಅಸಿಸ್ಟೆಂಟ್‌ ಅಗಿ ವೃತ್ತಿ ಆರಂಭಿಸಿದ್ದಾರೆ. ಏರ್ಪೋರ್ಟ್‌ನಲ್ಲಿ ಕೆಲಸ ಮಾಡಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ನಿವೇದಿತಾ ಇನ್‌ಸ್ಟಾಗ್ರಾಂನಲ್ಲಿ ಬಹಿರಂಗ ಪಡಿಸಿದ್ದಾರೆ. 

View post on Instagram

ಇನ್ನು ಬಿಗ್ ಬಾಸ್‌ ಸೀಸನ್-5ರ ವಿನರ್ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಫ್ರೆಬವರಿ 25-26ರಂದು ಗುರು-ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಜನವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ