ಉದ್ಯಮಿ, ಟ್ಯಾಟೂ ಕಲಾವಿದೆ ನೀತು ವನಜಾಕ್ಷಿ ಬಿಗ್‌ಬಾಸ್‌ನಿಂದ ಪ್ರಸಿದ್ಧಿ ಪಡೆದರು. ಗದಗದಲ್ಲಿ ಜನಿಸಿದ ಮಂಜುನಾಥ್, ನಂತರ ನೀತು ಆಗಿ ಬದಲಾದರು. ತಮಿಳು ಚಿತ್ರದಲ್ಲಿ ನಟಿಸುತ್ತಿದ್ದು, ಕನ್ನಡದಲ್ಲೂ ಅವಕಾಶಗಳು ಬರುತ್ತಿವೆ. ಪಾತ್ರಕ್ಕೆ ತೂಕವಿದ್ದರೆ ಯಾವುದೇ ಪಾತ್ರಕ್ಕೂ ಸಿದ್ಧ ಎಂದಿದ್ದಾರೆ. ಪ್ರೀತಿ, ಮದುವೆ ಬಗ್ಗೆ ಸದ್ಯಕ್ಕೆ ಆಸಕ್ತಿ ಇಲ್ಲ, ತಮ್ಮನ್ನು ತಾವು ಪ್ರೀತಿಸುವುದಾಗಿ ಹೇಳಿದ್ದಾರೆ. ಕೆಡುಕು ಬಯಸದ ನೀತು ಕರ್ಮ ಮತ್ತು ಧ್ಯಾನದಲ್ಲಿ ನಂಬಿಕೆ ಇಟ್ಟಿದ್ದಾರೆ.

ಉದ್ಯಮಿ ಹಾಗೂ ಟ್ಯಾಟೂ ಆರ್ಟಿಸ್ಟ್ ಆಗಿರೋ ನೀತು ವನಜಾಕ್ಷಿ ಎಂದರೆ ಎರಡು ವರ್ಷಗಳ ಹಿಂದೆ ಬಹುಶಃ ಹೆಚ್ಚಿವನರಿಗೆ ಯಾರೆಂದು ತಿಳಿದಿರಲಿಲ್ಲ. ಆದರೆ ಬಿಗ್​ಬಾಸ್​ 10ನೇ ಸೀಸನ್​ನಲ್ಲಿ ಇವರು ಸಕತ್​ ಫೇಮಸ್​ ಆದವರು. 7ನೇ ವಾರ ನೀತು ವನಜಾಕ್ಷಿ ಅವರು ಎಲಿಮಿನೇಟ್ ಆದರು. ಮಂಗಳಮುಖಿಯಾಗಿದ್ದ ನೀತು ಅವರ ಜೀವನ ಚರಿತ್ರೆ, ಇವರು ಜೀವನದಲ್ಲಿ ಅನುಭವಿಸಿರುವ ನೋವು, ಅವಮಾನ ಅಷ್ಟಿಷ್ಟಲ್ಲ. ಆದರೆ ಎಲ್ಲವನ್ನೂ ಹಿಮ್ಮೆಟ್ಟಿ, ಎಲ್ಲವೂ ಇದ್ದು ಕೊರಗುವವರಿಗೆ ಜೀವನಾನುಭವವನ್ನು ತೋರಿಸಿಕೊಟ್ಟವರು ನೀತು. ಗದಗದವರಾದ ನೀತು ಹುಟ್ಟಿದ್ದು ಮಂಜುನಾಥನಾಗಿ. ಏಳನೇ ತರಗತಿವರೆಗೆ ನಾರ್ಮಲ್ ಆಗಿದ್ದ ಮಂಜುನಾಥ್ ದೇಹದಲ್ಲಿ ಬದಲಾವಣೆಗಳಾಗತೊಡಗಿದಾಗ ಹೇಳಿಕೊಳ್ಳಲಾಗದ ಸಂಕಟ. ಹೆಣ್ಣಿಗೆ ಆಗುವ ಸಹಜ ಕಾಮನೆಗಳು ಮನದಲ್ಲಿ ಪುಟಿದೇಳತೊಡಗಿದಾಗ ಯಾರ ಬಳಿ ಹೇಳಿಕೊಳ್ಳುವುದು? ಬಾಲಕನೊಬ್ಬನಿಗೆ ಬಾಲಕಿಯಂತೆ ಆಸೆಯಾಗತೊಡಗಿದಾಗ ಹೇಳಿಕೊಳ್ಳುವುದು ಅಷ್ಟು ಸಹಜವೆ? ಇಂಥ ಮಂಜುನಾಥ್​ ಅವರು ನೀತು ವನಜಾಕ್ಷಿಯಾಗಿ ಈಗ ಎಲ್ಲರಿಗೂ ಮಾದರಿಯಾಗಿದ್ದಾರೆ. 

ಇದೀಗ ನೀತು ವನಜಾಕ್ಷಿ ಅವರಿಗೆ ಸಿನಿಮಾಗಳಿಂದಲೂ ಆಫರ್​ ಬರುತ್ತಿವೆ. ಈ ಕುರಿತು ತಮ್ಮ ಮನದ ಮಾತನ್ನು ಶೇರ್​ ಮಾಡಿಕೊಂಡಿದ್ದಾರೆ ಇವರು. ಕನ್ನಡ ಸುದ್ದಿ ಸಮಾಚಾರ ಯೂಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು, ತಮ್ಮ ಜೀವನದ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ಅವರಿಗೆ ಕೇಳಿದ ಪ್ರಶ್ನೆಗಳಿಗೆ ಇದಾಗಲೇ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದೇನೆ. ಕನ್ನಡದಲ್ಲಿಯೂ ಆಫರ್​ಗಳು ಬರುತ್ತಿವೆ. ಮುಂದೆ ಏನಾಗುತ್ತದೆಯೋ ನೋಡೋಣ ಎಂದಿದ್ದಾರೆ. ಯಾವ ರೀತಿಯ ರೋಲ್​ ಇಷ್ಟಪಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ನೀತು ಅವರು, ಡಿಸ್ನಿ ಹಾಟ್​ ಸ್ಟಾರ್​ನಲ್ಲಿ ವಿಲನ್ ಆಗಿದ್ದೇನೆ. ನನಗೆ ಇಂಥದ್ದೇ ಪಾತ್ರ ಎಂತೇನೂ ಇಲ್ಲ. ಪಾತ್ರಕ್ಕೆ ವೇಟೇಜ್​ ಇದ್ದರೆ ಎಂಥ ಪಾತ್ರಕ್ಕಾದರೂ ಸೈ ನಾನು. ಭಿಕ್ಷುಕಿಯಾಗಿಯಾಗಲೂ ರೆಡಿ, ಶ್ರೀಮಂತೆಯಾಗಲೂ ರೆಡಿ, ಬೋಲ್ಡ್ ಕ್ಯಾರೆಕ್ಟರ್​ಗೂ ರೆಡಿ ಎಂದಿದ್ದಾರೆ. 

ಬಿಗ್​ಬಾಸ್​ ನೀತು ಲವ್​ ಮಾಡ್ತಿದ್ದಾರಾ? ಮದ್ವೆಯಾಗೋ ಯೋಚ್ನೆ ಇದ್ಯಾ? ನಟಿಯ ಮನದಾಳದ ಮಾತು ಇಲ್ಲಿದೆ...

ಈ ಹಿಂದೆ ಸಂದರ್ಶನವೊಂದರಲ್ಲಿ ಇವರು, ತಮಗೆ ತಮ್ಮ ಲವ್​, ಮದುವೆಯ ಲೈಫ್​ ಬಗ್ಗೆ ಮಾತನಾಡಿದ್ದರು. 'ಚಿಕ್ಕ ವಯಸ್ಸಿನಲ್ಲಿ ಹೆಣ್ಣುಮಕ್ಕಳಿಗೆ ಸಹಜವಾಗಿ ಹುಡುಗರನ್ನು ಕಂಡಾಗ ಅಟ್ರಾಕ್ಷನ್​ ಆಗುವಂತೆ ನನಗೂ ಆಗುತ್ತಿತ್ತು. ಆದರೆ ಅದನ್ನು ಹೊರಗೆ ಹೇಳಿಕೊಳ್ಳುವಂತಿರಲಿಲ್ಲವಲ್ಲ. ಅದಕ್ಕೇ ಸುಮ್ಮನಾಗಿಬಿಡುತ್ತಿದ್ದೆ. ಕೆಲವರ ಮೇಲೆ ಆಸೆಯಾದರೂ ಪ್ರಪೋಸ್​ ಮಾಡಲು ಭಯವಾಗುತ್ತಿತ್ತು. ಆದರೆ ಈಗ ನಾನು ಲಿಂಗ ಬದಲಿಸಿಕೊಂಡು ಬ್ಯೂಟಿಫುಲ್​ ಆದ ಮೇಲೆ, ಜೊತೆಗೆ ಇಷ್ಟು ಫೇಮಸ್​ ಆದ ಮೇಲೆ ತುಂಬಾ ಮಂದಿ ಪ್ರಪೋಸ್ ಮಾಡುತ್ತಾರೆ, ಮದುವೆಯಾಗುತ್ತೇನೆ ಎನ್ನುತ್ತಾರೆ, ನಿಮ್ಮನ್ನು ಪ್ರೀತಿಸುತ್ತೇನೆ ಅಂತಾರೆ. ಸದ್ಯ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ' ಎಂದಿದ್ದರು. 

'ನನ್ನ ವ್ಯಕ್ತಿ ಹೀಗೆಯೇ ಇರಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೇನೆ. ಆತ ಯಾವುದನ್ನೂ ಜಡ್ಜ್​ ಮಾಡಬಾರದು. ವ್ಯಕ್ತಿ ಇಷ್ಟಪಟ್ಟು ನಮ್ಮ ಜೊತೆ ಇರ್ತೇವೆ ಎಂದಾಗ ಮಾತ್ರ ಅದು ಒಳ್ಳೆಯ ರಿಲೇಷನ್​ಷಿಪ್​ ಆಗಿರುತ್ತವೆ. ನಮ್ಮ ಜೀವನವೂ ಹ್ಯಾಪ್ಪಿ ಆಗಿರುತ್ತದೆ' ಎಂದಿರುವ ನೀತು, ಸದ್ಯದ ಮಟ್ಟಿಗೆ ಆ ಯೋಚನೆ ನನ್ನ ತಲೆಯಲ್ಲಿ ಬಂದಿಲ್ಲ ಎಂದಿದ್ದರು. ಸದ್ಯದ ಮಟ್ಟಿಗೆ ಹೇಳುವುದಾದರೆ ನನ್ನನ್ನು ನಾನು ತುಂಬಾ ಲವ್​ ಮಾಡುತ್ತಿದ್ದೇನೆ ಅಷ್ಟೇ. ಸ್ವಾಮಿ ವಿವೇಕಾನಂದ ಅವರು ಹೇಳಿದಂತೆ ಮೊದಲು ನಾವು ನಮ್ಮ ದೇಹವನ್ನು ಪ್ರೀತಿಸಬೇಕು ಅನ್ನೋದೇ ನನ್ನ ಮಾತು ಕೂಡ. ನನ್ನ ದೇಹವನ್ನು ನಾನು ಪ್ರೀತಿಸುತ್ತೇನೆ' ಎಂದಿದ್ದರು. ಇದೇ ವೇಳೆ ತಮ್ಮ ಖ್ಯಾತಿ ನೋಡಿ ಯಾರಾದರೂ ಹತ್ತಿರ ಬರುವ ಯೋಚನೆ ಮಾಡಿದರೆ ಅಂಥವರನ್ನು ಸುಲಭವಾಗಿ ಗುರುತಿಸುವ ಶಕ್ತಿ ದೇವರು ಕೊಟ್ಟಿದ್ದಾನೆ. ನಾನು ಯಾರಿಗೂ ಇದುವರೆಗೆ ಕೆಡುಕು ಬಯಸಿಲ್ಲ ಎಂದಿರುವ ನೀತು ಅವರು, ಕರ್ಮ, ಧ್ಯಾನದ ಬಗ್ಗೆ ತುಂಬಾ ನಂಬಿಕೆ ಇಟ್ಟುಕೊಂಡಿರುವುದಾಗಿ ಹೇಳಿದ್ದರು. 

ಬಿಗ್​ಬಾಸ್​ ನಮ್ರತಾ ಜೊತೆ ವಿನ್ನರ್​ ಕಾರ್ತಿಕ್ ರೊಮ್ಯಾನ್ಸ್​​: ಸ್ನೇಹಿತ್​ ಎಲ್ಲಿದ್ಯಪ್ಪಾ ಅಂತಿದ್ದಾರೆ ಫ್ಯಾನ್ಸ್​!

YouTube video player