ಟಿಂಗ್‌, ಟಿಂಗ್‌... ಪ್ರಯಾಣಿಕರೇ ಗಮನಿಸಿ... ರೈಲು ನಿಲ್ದಾಣದ ಹೆಣ್ಣಿನ ದನಿ ಹಿಂದಿರುವುದು ಯುವಕ, ಇವರ ಕಥೆಯೇ ರೋಚಕ!

ಟಿಂಗ್‌, ಟಿಂಗ್‌... ಪ್ರಯಾಣಿಕರೇ ಗಮನಿಸಿ ಎನ್ನುವ ರೈಲು ನಿಲ್ದಾಣದ ಹೆಣ್ಣಿನ ದನಿ ಹಿಂದಿರುವುದು ಈ ಯುವಕನ ದನಿ. ಇವರ ಕಥೆಯೇ ರೋಚಕ!
 

female voice announcement at Railways stations is not that of a woman  Meet 24 years Shravan Adode suc

ಟಿಂಗ್‌... ಟಿಂಗ್‌... ಪ್ರಯಾಣಿಕರೇ ಗಮನಿಸಿ... ನಿಮ್ಮ ಗಾಡಿ ಸಂಖ್ಯೆ.... ಇಷ್ಟು ಗಂಟೆಗೆ ಇಷ್ಟನೇ ಪ್ಲಾಟ್ ಫಾರ್ಮ್ ಅನ್ನು ಪ್ರವೇಶಿಸಲಿದೆ... ಎಂದು ರೈಲು ನಿಲ್ದಾಣಗಳಲ್ಲಿ ಪ್ರತಿ ನಿಮಿಷಕ್ಕೂ ದನಿಯನ್ನು ಕೇಳುತ್ತಲೇ ಇರುತ್ತೇವೆ ಅಲ್ಲವೆ? ಅಲ್ಲಿ ಹೆಣ್ಣಿನ ದನಿ ಕೇಳಿ ಆಹಾ, ಎಷ್ಟು ಸುಂದರವಾಗಿದೆ ಈ ದನಿ ಎಂದು ಎಂದುಕೊಳ್ಳುವುದೂ ಉಂಟು. ಅಷ್ಟೇ ಅಲ್ಲದೇ, ಹಿಂದಿ, ಇಂಗ್ಲಿಷ್‌ ಜೊತೆಗೆ ಆಯಾ ಪ್ರದೇಶಗಳ ಪ್ರಾದೇಶಿಕ ಭಾಷೆಯಲ್ಲಿಯೂ ಹೆಣ್ಣಿನ ದನಿಯನ್ನೂ ಅಲ್ಲಿ ಕೇಳಬಹುದಾಗಿದೆ. ಆದರೆ ಅಸಲಿಗೆ ಆ ಹೆಣ್ಣಿನ ದನಿ ಹಿಂದೆ ಇರುವುದು ಅವಳಲ್ಲ, ಅವನು ಎನ್ನುವುದು ಬಹುಶಃ ಯಾರಿಗೂ ತಿಳಿದಿರಲಿಕ್ಕಿಲ್ಲ. ಅಂದರೆ, ಈ ಹೆಣ್ಣಿನ ದನಿ ಗಂಡಿನದ್ದು! 

ಹೌದು. "ಯಾತ್ರಿಗನ್ ಕೃಪಯಾ ಧ್ಯಾನ್ ದೇ.." ಎಂದು ಹಿಂದಿಯಲ್ಲಿ, ಆಮೇಲೆ ಇಂಗ್ಲಿಷ್‌ನಲ್ಲಿ ಬಳಿಕ ಕನ್ನಡದಲ್ಲಿ (ಬೇರೆ ರಾಜ್ಯಗಳಲ್ಲಿ ಅಲ್ಲಿನ ಭಾಷೆಗಳಲ್ಲಿ) ಹೆಣ್ಣಿನ ಹಿತವಾದ ದನಿಯಲ್ಲಿ ಅನೌನ್ಸ್‌ ಮಾಡುವುದು ಶ್ರವಣ್‌ ಅಡೋಡ್‌ ಎನ್ನುವ 24 ವರ್ಷದ ಯುವಕ! ಭಾರತೀಯ ರೈಲ್ವೇಯಲ್ಲಿ ಖಾಸಗಿ ವಲಯದ ಉದ್ಯೋಗಿಯಾಗಿ ಕೆಲಸ ಮಾಡುವ ಶ್ರವಣ್ ಅಡೋಡ್ ಅವರು ಹೆಣ್ಣಿನ ದನಿಯಲ್ಲಿ ಘೋಷಣೆ ಮಾಡಿರುವ ರೆಕಾರ್ಡಿಂಗ್‌ ಇದಾಗಿದೆ. ಈ ಕುತೂಹಲದ ವಿಷಯ ಇದೀಗ ಬಯಲಾಗಿದೆ. 

ಚಿಪ್ಸ್‌ ಖರೀದಿಸ್ತಿದ್ದಾಕೆ ರೈಲು ಬಂತೆಂದು ಓಡಿದಳು! ಮುಂದಾದದ್ದು ದುರಂತ- ಶಾಕಿಂಗ್‌ ವಿಡಿಯೋ ವೈರಲ್‌

ಶ್ರವಣ್ ಅಡೋಡ್ ಕುರಿತು ಹೇಳುವುದಾದರೆ, ಇವರು, ಮಹಾರಾಷ್ಟ್ರದ ಪರ್ಲಿಯವರು.  ಭಾರತೀಯ ರೈಲ್ವೆಯಲ್ಲಿ ಖಾಸಗಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ.  ಒಂದು ದಿನ, ವಿದ್ಯುತ್ ನಿಲುಗಡೆಯ ಸಮಯದಲ್ಲಿ ತಾಂತ್ರಿಕ ದೋಷವು ಸ್ವಯಂಚಾಲಿತ ಪ್ರಕಟಣೆ ವ್ಯವಸ್ಥೆಯನ್ನು ಅಡ್ಡಿಪಡಿಸಿತು, ಆಗ ಘೋಷಣೆ ಮಾಡುವ ಅಗತ್ಯ ಉಂಟಾಯಿತು. ಈ  ತುರ್ತು ಅಗತ್ಯಕ್ಕೆ ಕೂಡಲೇ ಸ್ಪಂದಿಸಿದವರು ಶ್ರವಣ್‌. ಹೆಣ್ಣಿನ ದನಿ ಇದ್ದರೆ ಚೆನ್ನ ಎನ್ನುವ ಕಾರಣಕ್ಕೆ ಈ ಬಗ್ಗೆ ಆಗ ಚರ್ಚೆ ನಡೆದಾಗ ಅಲ್ಲಿಯೇ ಇದ್ದ ಶ್ರವಣ್ ಅವರು ಹೆಣ್ಣಿನ ದನಿಯ ಮೂಲಕ ಈ ಘೋಷಣೆಯ ರೆಕಾರ್ಡಿಂಗ್‌ ಮಾಡಿರುವುದು ಈಗ ತಿಳಿದುಬಂದಿದೆ. ಬಳಿಕ, ತಂತ್ರಜ್ಞಾನದ ಸಹಾಯ ಪಡೆದು,  ಅವರ ಧ್ವನಿ ರೆಕಾರ್ಡಿಂಗ್‌ ಅನ್ನು ವಿವಿಧ ಭಾಷೆಗಳಲ್ಲಿ  ಡಿಜಿಟಲ್ ಪ್ರಕ್ರಿಯೆಗೊಳಿಸಲಾಗಿದೆ, ಈಗ ರಾಷ್ಟ್ರವ್ಯಾಪಿ ರೈಲು ನಿಲ್ದಾಣಗಳಲ್ಲಿ ಇದು ಪ್ರತಿಧ್ವನಿಸುತ್ತವೆ. ಮುಂಬೈನ ಸೆಂಟ್ರಲ್ ರೈಲ್ವೇ ಪ್ರಧಾನ ಕಚೇರಿಯ ಹಿರಿಯ ಉದ್ಘೋಷಕರು ಅವರ ಪ್ರಯತ್ನವನ್ನು ಶ್ಲಾಘಿಸುವುದರೊಂದಿಗೆ ಅವರ ಕೆಲಸಕ್ಕೆ ಮನ್ನಣೆ ದೊರೆತಿದ್ದರಿಂದ ಇದೇ ಇಂದಿಗೂ ಮುಂದುವರೆದುಕೊಂಡು ಬಂದಿದೆ.
 
ಅಂದಹಾಗೆ, ಶ್ರವಣ್ ಅವರು,  ಧ್ವನಿ ಕಲಾವಿದ, ಯುಗಳ ಗಾಯಕ ಮತ್ತು ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ನಟರಾಗಿದ್ದಾರೆ. ವೈದ್ಯನಾಥ್ ಕಾಲೇಜಿನ ಪದವೀಧರ ಮತ್ತು ಬಿಎಚ್‌ಇಎಲ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಶ್ರವಣ್ ಈಗ ಮಹಾರಾಷ್ಟ್ರದ ಮುಂಬೈನಲ್ಲಿ ನೆಲೆಸಿದ್ದಾರೆ. ಈಗ ಇವರು ಇಷ್ಟು ಫೇಮಸ್‌ ಆಗಿದ್ದರೂ,  ಶ್ರವಣ ಅವರ ಹಿಂದಿನ ಪ್ರಯಾಣವು ಸವಾಲುಗಳಿಂದ ಕೂಡಿತ್ತು.   ಕಾಲೇಜು ದಿನಗಳಲ್ಲಿ, ಅವರ ಧ್ವನಿ ಕೌಶಲವು ಹಾಸ್ಯಾಸ್ಪದ ವಿಷಯವಾಗಿತ್ತು, ಗೆಳೆಯರು ಅವರನ್ನು ಅಪಹಾಸ್ಯ ಮಾಡಿ ಅವರನ್ನು ಹೆಣ್ಣಿನ ಹೆಸರುಗಳಿಂದ ಕರೆದದ್ದು ಉಂಟು.  ಆದರೆ, ಶ್ರವಣ್ ಅವರು ಈ ಎಲ್ಲಾ ಟೀಕೆಗಳನ್ನು ನಿರ್ಲಕ್ಷಿಸಿ ಕಲೆಯತ್ತ ಗಮನ ಹರಿಸಿದರು. ಇಂದು, ಅವರ ಧ್ವನಿಯು ಭಾರತದಾದ್ಯಂತ ಲಕ್ಷಾಂತರ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುತ್ತದೆ, ಒಂದು ಕಾಲದಲ್ಲಿ ಅಪಹಾಸ್ಯಕ್ಕೆ ಗುರಿಯಾದವರ ದನಿ ಈಗ ರಾಷ್ಟ್ರವ್ಯಾಪಿ ಮೊಳಗುತ್ತಿದೆ.

ಪತ್ನಿಯನ್ನು ಆಸ್ಪತ್ರೆಗೆ ಕರೆತಂದು ಕಂಗ್ರಾಟ್ಸ್‌ ಹೇಳಿದ ತರುಣ್‌ ಸುಧೀರ್: ಅಲ್ಲಾಗಿದ್ದೇ ಬೇರೆ!

Latest Videos
Follow Us:
Download App:
  • android
  • ios