ಬಿಗ್ ಬಾಸ್ ಮನೆ 11ನೇ ವಾರಕ್ಕೆ ಕಾಲಿಟ್ಟಿದೆ. ಪವರ್ ಪ್ಲೇ ಎಲ್ಲ ಮುಗಿದು ಆಟ ಒಂದು ಹಂತಕ್ಕೆ ಬಂದು ನಿಂತಿದೆ.  ಈ ವಾರದ ನಾಮಿನೇಶನ್ ಬಲೆಯಿಂದ ಮೊದಲಿಗೆ ಚಂದನ್ ಆಚಾರ್ ಹೊರಗಿದ್ದರು. ಆದರೆ ಕೊನೆಗೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಕಿಶನ್, ಹರೀಶ್, ಚಂದನಾ, ಭೂಮಿ, ದೀಪಿಕಾ ಮನೆಯವರಿಂದ ನೇರವಾಗಿ ನಾಮಿನೇಟ್ ಆದರು. ನಂತರ ಮನೆಯ ಕ್ಯಾಪ್ಟನ್ ಪ್ರಿಯಾಂಕಾ ಚಂದನ್ ಆಚಾರ್ ಅವರನ್ನು ನಾಮಿನೇಟ್ ಮಾಡಿಯೇ ಬಿಟ್ಟರು.

ವಾಸುಕಿ ಅಲ್ಲಿಂದ ಕೈ ತೆಗಿ, ನೀನು ಎಲ್ಲಿ ಕೈ  ಹಾಕಿದ್ದೀಯಾ?

ಇದಾದ ಮೇಲೆ ಬಿಗ್ ಬಾಸ್ ಮನೆ ಮಂದಿಗೆ ಟಾಸ್ಕ್ ಒಂದನ್ನು ನೀಡಿದರು.  ಆಟ ಒಂದು ಹಂತಕ್ಕೆ ಬಂದಿದ್ದು ನಿಮ್ಮ ಟಾರ್ಗೆಟ್ ಯಾರು ಎಂದು ತಿಳಿಸಿ ಅವರ ಮುಖಕ್ಕೆ ಕೆಂಪು ಬಣ್ಣ ಬಳಿಯಲು ಸೂಚಿಸಿದರು. ಮನೆಯ ಬಹುತೇಕ ಮಂದಿ ಶೈನ್ ಶೆಟ್ಟಿ ಮತ್ತು ವಾಸುಕಿ ವೈಭವ್ ಅವರ ಮುಖಕ್ಕೆ ಬಣ್ಣ ಬಳಿದರು.