Asianet Suvarna News Asianet Suvarna News

ಕೋಲ್ಕತ್ತಾ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಕೇಸ್‌ ಬೆನ್ನಲ್ಲಿಯೇ ದನಿ ಎತ್ತಿದ ನಮ್ರತಾ ಗೌಡ!

Bigg Boss namratha gowda On kolkata doctor ಕೋಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿಯೇ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶಾದ್ಯಂತ ಕಿಚ್ಚು ಹಬ್ಬಿಸಿದೆ. ಇದರ ಬೆನ್ನಲ್ಲಿಯೇ ವೈದ್ಯರ ಪ್ರತಿಭಟನೆ ಕಾವಿನಿಂದಾಗಿ ಇದು ಮತ್ತೊಂದು ನಿರ್ಭಯಾ ರೀತಿ ಕೇಸ್‌ ಆಗಬಹುದು ಎನ್ನಲಾಗಿದೆ.

Bigg Boss Kannda 11 Season Fame namratha gowda Alert to Girls after kolkata doctor case san
Author
First Published Aug 15, 2024, 8:52 PM IST | Last Updated Aug 15, 2024, 8:52 PM IST


ಬೆಂಗಳೂರು (ಆ.15): ನಿರ್ಭಯ ರೇಪ್‌ ಕೇಸ್‌ ಬಳಿಕ ಕೇಂದ್ರ ಸರ್ಕಾರ ದೇಶದ ಕಾನೂನಿನಲ್ಲಿ ಕೆಲವು ಬದಲಾವಣೆಗಳನ್ನು ತಂದಿತ್ತು. ಅದಾದ ಬಳಿಕ ದೇಶದಲ್ಲಿ ರೇಪ್‌ & ಮರ್ಡರ್‌ ಕೇಸ್‌ಗಳು ಕಡಿಮೆ ಆಗಬಹುದು ಎನ್ನುವ ನಿರೀಕ್ಷೆ ಇಡಲಾಗಿತ್ತು. ಅದ್ಯಾವುದೂ ಆಗಲಿಲ್ಲ. ಕನಿಷ್ಠ ಪಕ್ಷ ನಿರ್ಭಯ ಕೇಸ್‌ನಷ್ಟು ಮಾನವಕುಲವೇ ತಲೆತಗ್ಗಿಸುವಷ್ಟು ಪ್ರಕರಣಗಳು ನಡೆಯದಿದ್ದರೆ ಸಾಕು ಎನ್ನವ ನಿರೀಕ್ಷೆಯೂ ಸುಳ್ಳಾಗಿದೆ. ಕೋಲ್ಕತ್ತಾದ ಆರ್‌ಜಿ ಖರ್‌ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ಭಯಾನಕ ಪ್ರಕರಣ ಮತ್ತೊಮ್ಮೆ ಇಡೀ ದೇಶವೇ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಯೋಚನೆ ಮಾಡುವಂತೆ ಮಾಡಿದೆ. ಆಸ್ಪತ್ರೆಯ ಸೆಮಿನಾರ್‌ ಹಾಲ್‌ನಲ್ಲಿಯೇ ಆಸ್ಪತ್ರೆಯ ಗುತ್ತಿಗೆ ನೌಕರನೊಬ್ಬ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಎಸೆಗಿದ್ದಾನೆ. ಇದನ್ನು ಮುಚ್ಚಿಹಾಕುವ ನಿಟ್ಟಿನಲ್ಲಿ ಸ್ವತಃ ಸರ್ಕಾರವೇ ನಿಂತಾಗ, ಬೆಚ್ಚಿಬೀಳಿಸುವ ಪೋಸ್ಟ್‌ ಮಾರ್ಟಮ್‌ ವರದಿ ಬಂದಿದೆ. ಟ್ರೈನಿ ವೈದ್ಯೆಯ ಮೇಲೆ ಒಬ್ಬನೇ ಅತ್ಯಾಚಾರ ಎಸಗಿರುವ ಸಾಧ್ಯತೆ ಕಡಿಮೆ. ಆಕೆಯ ಮೇಲೆ ಗ್ಯಾಂಗ್‌ರೇಪ್‌ ಆಗಿರಬಹುದು ಎನ್ನಲಾಗಿದೆ. ಅದಕ್ಕೆ ಕಾರಣ ಪರೀಕ್ಷೆಯ ವೇಳೆ ಆಕೆಯ ದೇಹದಲ್ಲಿ 150 ಮಿಲಿಗ್ರಾಂ ವೀರ್ಯ ಸಿಕ್ಕಿದೆ. ಒಬ್ಬ ಪುರುಷನಿಂದ ಒಂದು ದಿನಕ್ಕೆ ಅಷ್ಟು ಪ್ರಮಾಣದ ವೀರ್ಐ ಹೊರಬರಲು ಸಾಧ್ಯವೇ ಇಲ್ಲ ಎನ್ನುವುದು ವೈದ್ಯರ ಮಾತು. ಇದರ ಬೆನ್ನಲ್ಲಿಯೇ ಕೋಲ್ಕತ್ತಾ ಹೈಕೋರ್ಟ್‌, ಪಶ್ಚಿಮ ಬಂಗಾಳ ಸರ್ಕಾರಕ್ಕೆ ಛೀಮಾರಿ ಹಾಕಿ ಇಡೀ ಕೇಸ್‌ಅನ್ನು ಸಿಬಿಐ ತನಿಖೆಗೆ ವಹಿಸಿದೆ.

ಈಗ ಇಡೀ ದೇಶಾದ್ಯಂತ ಈ ಪ್ರಕರಣ ಸದ್ದು ಮಾಡಿದೆ. ವೈದ್ಯರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೋಲ್ಕತ್ತದಲ್ಲಿ ನಡೆದ ಪ್ರತಿಭಟನೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಪಶ್ಚಿಮ ಬಂಗಾಳದ ಎಲ್ಲಾ ಪಕ್ಷಗಳು ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ನಿರಂತರವಾಗಿ ಪ್ರಶ್ನೆಗಳನ್ನು ಕೇಳಿವೆ. ಇನ್ನು ಈ ಪ್ರಕರಣದಲ್ಲಿ ಕಲಾವಿದರಿಂದಲೂ ಆಕ್ರೋಶ ವ್ಯಕ್ತವಾಗಿದೆ. ಕಳೆದ ಬಿಗ್‌ಬಾಸ್‌ ಕನ್ನಡ ಸೀಸನ್‌ನಲ್ಲಿ ಸ್ಪರ್ಧಿಸಿದ್ದ ಪ್ರಖ್ಯಾತ ನಟಿ ನಮ್ರತಾ ಗೌಡ ಈ ಕೇಸ್‌ನ ಬಗ್ಗೆ ಮಾತನಾಡಿದ್ದಾರೆ.

ಎಲ್ಲಿಯೂ ಕೋಲ್ಕತ್ತಾ ಕೇಸ್‌ನ ಹೆಸರನ್ನು ಎತ್ತದ ನಮ್ರತಾ ಗೌಡ, ಇಂಥ ಪ್ರಕರಣಗಳು ಆಗದಿರುವಂತೆ ಯುವತಿಯರಿಗೆ ಎಚ್ಚರಿಕೆ ಟಿಪ್ಸ್‌ ನೀಡಿದ್ದಾರೆ. 'ಇಲ್ಲಿ ನನ್ನದೊಂದು ಯೋಚನೆ. ಪ್ರಚೋದನಕಾರಿ ಡ್ರೆಸ್‌ಗಳನ್ನು ಹಾಕಬೇಡಿ, ಹುಷಾರಾಗಿರಿ, ಹೊರಗಡೆ ಹೆಚ್ಚಾಗಿ ತಿರುಗಾಡಬೇಡಿ ಯಾರ ಎದುರಲ್ಲೂ ಪ್ರಬಲವಾಗಿ ಮಾತನಾಡಬೇಡಿ ಎಂದು ಮಹಿಳೆಯರಿಗೆ ಕಲಿಸುವ ಬದಲು, ಎಲ್ಲಿ ನಡೆಯುತ್ತಿದ್ದೀಯ ಎನ್ನುವುದನ್ನು ನೋಡಿ, ಯಾವ ಸಮಯದಲ್ಲಿ ನಡೆಯುತ್ತಿದ್ದೀಯ ಎನ್ನುವವುದನ್ನು ನೋಡಿಕೊಳ್ಳಿ. ಪುರುಷರನ್ನು ಮುನ್ನಡೆಸಬೇಡಿ. ಒಬ್ಬಂಟಿಯಾಗಿ ನಡೆಯಬೇಡಿ, ಹೆಚ್ಚು ಕುಡಿಯಬೇಡಿ, ಗಮನವನ್ನು ಸೆಳೆಯಬೇಡಿ, ನೀವು ಯಾರೊಂದಿಗೆ ಮಾತನಾಡುತ್ತೀರೋ ಜಾಗರೂಕರಾಗಿರಿ, ಪೆಪ್ಪರ್ ಸ್ಪ್ರೇ ತೆಗೆದುಕೊಳ್ಳಿ, ಆತ್ಮರಕ್ಷಣೆ ಕ್ಲಾಸ್‌ಗಳನ್ನು ತೆಗೆದುಕೊಳ್ಳಿ. ಮನೆಗೆ ಒಬ್ಬಳೆ ನಡೆದುಕೊಂಡು ಹೋಗಬೇಡಿ, ರೇಪ್‌ ವಿಶಲ್‌ಅನ್ನು ಹಿಡಿದುಕೊಳ್ಳಿ, ಪೋನಿ ಟೇಲ್‌ ಆಗಿ ಕೂದಲನ್ನು ಕಟ್ಟಿಕೊಳ್ಳಬೇಡಿ, ಏಕೆಂದರೆ, ದಾಳಿಕೋರನಿಗೆ ನಿಮ್ಮನ್ನು ಹಿಡಿಯಲು ಸುಲಭವಾಗುತ್ತದೆ. ಶಾರ್ಟ್‌ಕಟ್‌ನಲ್ಲಿ ಹೋಗಬೇಡಿ, ಕೀಗಳನ್ನು ನಮ್ಮ ಬೆರಳಿನ ನಡುವೆ ಇಟ್ಟುಕೊಳ್ಳಿ, ನೀವು ಕುಡಿಯುತ್ತಿರುವ ಪಾನೀಯವನ್ನು ಮುಕ್ತ ಪ್ರದೇಶದಲ್ಲಿ ಇರಿಸಬೇಡಿ, ಏಕಾಂಗಿಯಾಗಿ ಸಾರ್ವಜನಿಕ ಶೌಚಾಲಯಗಳಿಗೆ ಹೋಗಬೇಡಿ, ಡ್ರಗ್ಸ್‌ ಮಾಡಬೇಕು, ರಕ್ಷಣೆಗಾಗಿ ನಾಯಿಯನ್ನು ಸಾಕಿ, ನಿಮ್ಮ ಮನೆಗೆ ಅಪರಿಚಿತರು ಹೊಕ್ಕದಂತೆ ನೋಡಿಕೊಳ್ಳಿ. ರಾತ್ರಿವೇಳೆ ಹೊರಗಡೆ ಹೋಗಬೇಡಿ.  ಫೋನ್‌ ಅನ್ನು ಸದಾಕಾಲ ಕೊಂಡೊಯ್ಯಿರಿ.. ಎಲ್ಲಕ್ಕಿಂತ ಮುಖ್ಯವಾಗಿ ಪುರುಷನಿಗೆ ರೇಪ್‌ ಮಾಡದೇ ಇರುವಂತೆ ಕಲಿಸಿ..' ಎಂದು ಅವರು ಬರೆದುಕೊಂಡಿದ್ದಾರೆ.

ರೆಡ್ ಬಾಡಿ ಹಗ್ಗಿಂಗ್ ಡ್ರೆಸ್ಸಲ್ಲಿ ಸಖತ್ ಹಾಟ್ ಆಗಿ ಕಾಣಿಸ್ಕೊಂಡ ನಮ್ರತಾ ಗೌಡ! ಫೈರ್ ಎಂಜಿನ್‌ಗೆ ಕಾಲ್ ಮಾಡಿ ಎಂದ ಫ್ಯಾನ್ಸ್!

ನಮ್ರತಾ ಗೌಡ ಅವರ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ ಬಂದಿದ್ದು, ನಮ್ಮ ಮಗಳನ್ನು ಕಾಪಾಡಿಕೊಳ್ಳುವುದು ಹಾಗೂ ಮಗನಿಗೆ ಕಲಿಸುವುದು ಎರಡೂ ಕೂಡ ಪ್ರಮುಖ' ಎಂದು ತನು ಚಂದ್ರು ಎನ್ನುವ ಮಹಿಳೆಯೊಬ್ಬರು ಬರೆದಿದ್ದಾರೆ. ಕೊನೆಗೂ ಈ ಕೇಸ್‌ನ ಬಗ್ಗೆ ನಿಮ್ಮ ದನಿ ಎತ್ತಿದ್ದೀರಲ್ಲ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

 

ಡ್ಯಾನ್ಸ್, ಶೂಟಿಂಗ್ ಬ್ರೇಕ್ ನೀಡಿ ಗೌಡಗೆರೆ ಚಾಮುಂಡೇಶ್ವರಿ ದರ್ಶನ ಪಡೆದ ನಮ್ರತಾ ಗೌಡ

 

Latest Videos
Follow Us:
Download App:
  • android
  • ios