ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಸ್ಪರ್ಧಿಗಳಾದ ಶಿಶಿರ್‌ ಶಾಸ್ತ್ರೀ, ಐಶ್ವರ್ಯಾ ಶಿಂಧೋಗಿ ಈಗ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. 

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋನಿಂದ ಹೊರಗಡೆ ಬರುತ್ತಿದ್ದಂತೆ ನಟ ಶಿಶಿರ್‌ ಶಾಸ್ತ್ರೀ, ಐಶ್ವರ್ಯಾ ಶಿಂಧೋಗಿ ಅವರು ಸಾಕಷ್ಟು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ದೊಡ್ಮನೆಯಲ್ಲಿ ಹುಟ್ಟಿಕೊಂಡ ಸ್ನೇಹ ಈಗ ಇನ್ನಷ್ಟು ಗಟ್ಟಿಯಾಗಿದೆ. ಎಷ್ಟೋ ಸ್ಪರ್ಧಿಗಳಲ್ಲಿ ʼಬಿಗ್‌ ಬಾಸ್ʼ‌ ಮನೆಯಲ್ಲಿ ಹಾಲು-ಜೇನು ಥರ ಇದ್ದು, ಹೊರಗಡೆ ಬಂದ್ಮೇಲೆ ಎಣ್ಣೆ-ಸೀಗೆಕಾಯಿ ಥರ ಇರ್ತಾರೆ. ಆದರೆ ಶಿಶಿರ್‌, ಐಶ್ವರ್ಯಾ ಮಾತ್ರ ಈಗ ಪಾರ್ಟ್ನರ್‌ಗಳಾಗಿದ್ದಾರೆ. 

ಗಟ್ಟಿಯಾದ ಶಿಶಿರ್‌, ಐಶ್ವರ್ಯಾ ಸ್ನೇಹ! 
ದೊಡ್ಮನೆಯಿಂದ ಹೊರಗಡೆ ಬಂದಮೇಲೆ ಸಹಸ್ಪರ್ಧಿಗಳ ಮನೆಯ ಕಾರ್ಯಕ್ರಮಗಳು, ಇವೆಂಟ್‌ಗಳಿಗೆ ಶಿಶಿರ್‌ ಶಾಸ್ತ್ರೀ, ಐಶ್ವರ್ಯಾ ಶಿಂಧೋಗಿ ಅವರು ಒಟ್ಟಿಗೆ ಹೋಗಿದ್ದರು. ಅದಾದ ನಂತರದಲ್ಲಿ ಮೋಕ್ಷಿತಾ ಪೈ ಜೊತೆಗೂ ಸೇರಿ ಇವರು ಕೊಲ್ಲೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಎಂದು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು.‌ ಬಿಗ್‌ ಬಾಸ್‌ ಸಹಸ್ಪರ್ಧಿಯೂ ಆದ ನಟ ರಂಜಿತ್ ಅವರ ನಿಶ್ಚಿತಾರ್ಥಕ್ಕೂ ಒಟ್ಟಿಗೆ ಹೋಗಿದ್ದರು. ಅಷ್ಟೇ ಅಲ್ಲದೆ ಮಾಸ್ಟರ್‌ ಆನಂದ್‌ ಪತ್ನಿ ಯಶಸ್ವಿನಿ ಅವರಿಗೆ ನೀಡಿದ ಇಂಟರ್‌ವ್ಯೂನಲ್ಲಿ ನಾವು ಬ್ಯುಸಿನೆಸ್‌ ಪಾರ್ಟ್ನರ್ಸ್‌ ಆಗ್ತೀವಿ ಎಂದು ಹೇಳಿದ್ದರು. ಅದೀಗ ನಿಜವಾಗಿದೆ. 

ಮುಖಕ್ಕೆ ಹೊಡೀತೀನಿ ಇದು ನಾನು ಕೊಡ್ತಿರೋ ವಾರ್ನಿಂಗ್; ಶಿಶಿರ್‌-ಐಶ್ವರ್ಯಗೆ ವಾರ್ನಿಂಗ್ ಕೊಟ್ಟ ಒಳ್ಳೆ ಹುಡುಗ ಪ್ರಥಮ್

ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದೇನು?
ನಾವು ಇತ್ತೀಚೆಗೆ ಯಶಸ್ವಿನಿ ಆನಂದ್‌ ಅವರ ಪಾಡ್‌ಕಾಸ್ಟ್‌ನಲ್ಲಿ ಪಾರ್ಟ್ನರ್ಸ್‌ ಆಗ್ತೀವಿ ಎಂದು ಹೇಳಿದ್ದೆವು, ಅದರಂತೆ ಈಗ ಬ್ಯುಸಿನೆಸ್‌ ಪಾರ್ಟ್ನರ್ಸ್‌ ಆಗ್ತೀವಿ ಎಂದು ಹೇಳಿದ್ದರು. ಯಶಸ್ವಿನಿ ಅವರು ಪಾಡ್‌ಕಾಸ್ಟ್‌ನಲ್ಲಿ “ನಿಮ್ಮಿಬ್ಬರ ಮಧ್ಯೆ ಲವ್‌ ಇದೆಯಾ? ಎಂದು ಪ್ರಶ್ನಿಸಿದ್ದರು. ಆಗ ಅವರು “ನಾವು ಬ್ಯುಸಿನೆಸ್‌ ಪಾರ್ಟ್ನರ್ಸ್‌ ಆಗಬಹುದು” ಎಂದು ಹೇಳಿದ್ದರು. 

ಮದುವೆ ಆಗಲ್ಲ!
ದೊಡ್ಮನೆಯಿಂದ ಹೊರಗಡೆ ಬರುತ್ತಿದ್ದಂತೆ ಶಿಶಿರ್‌ ಶಾಸ್ತ್ರೀ, ಐಶ್ವರ್ಯಾಗೆ ಸಾಕಷ್ಟು ಮದುವೆ ಪ್ರಪೋಸಲ್‌ ಬಂದಿವೆಯಂತೆ. ಶಿಶಿರ್‌, ಐಶ್ವರ್ಯಾ ಅವರು ನಾವು ಬ್ಯುಸಿನೆಸ್‌ ಪಾರ್ಟ್ನರ್ಸ್‌ ಆಗಬಹುದು, ಆದರೆ ಸಂಗಾತಿಗಳಾಗಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಹೀಗಾಗಿ ಈ ಮೂಲಕ ನಾವು ಪ್ರೇಮಿಗಳಲ್ಲ, ಮದುವೆ ಆಗಲ್ಲ ಎಂದಿದ್ದಾರೆ.

ಟೆಂಪನ್‌ ರನ್‌ ಆಯ್ತು, ಈಗ ಜೋಡಿ ಫೋಟೋಶೂಟ್!‌ ಏನು ವಿಶೇಷ ಶಿಶಿರ್‌ ಶಾಸ್ತ್ರೀ, ಐಶ್ವರ್ಯಾ ಶಿಂಧೋಗಿ ಅವ್ರೇ?

ಏನು ಬ್ಯುಸಿನೆಸ್?‌
ರಾಮನವಮಿಯಂದು ಶಿಶಿರ್‌, ಐಶ್ವರ್ಯಾ ಒಟ್ಟಿಗೆ ವಿಡಿಯೋ ಮಾಡಿದ್ದು, “ಇಂಟರ್‌ವ್ಯೂ ಒಂದರಲ್ಲಿ ಹೇಳಿದಂತೆ ನಾವು ಬ್ಯುಸಿನೆಸ್‌ ಪಾರ್ಟ್ನರ್ಸ್‌ ಆಗಿದ್ದೇವೆ. ನಾವಿಬ್ಬರೂ ಸೇರಿ ʼಹರ ಸ್ಟುಡಿಯೋʼ ಆರಂಭಿಸಿದ್ದೇವೆ. ಇದೊಂದು ಪ್ರೊಡಕ್ಷನ್‌ ಹೌಸ್‌ ಆಗಿದೆ. ಕಾನ್ಸೆಪ್ಟ್‌ ಶೂಟ್ಸ್‌, ಪ್ರಿ ವೆಡ್ಡಿಂಗ್‌ ಫೋಟೋಶೂಟ್, ಜಾಹೀರಾತು, ಪೋರ್ಟ್‌ಫೋಲಿಯೋ ಶೂಟ್ಸ್‌, ಡೈರೆಕ್ಟರ್‌, ಕೊರಿಯೋಗ್ರಾಫರ್‌, ಸ್ಕ್ರಿಪ್ಟ್‌ ರೈಟರ್‌, ಮೇಕಪ್‌ ಆರ್ಟಿಸ್ಟ್‌, ಹೇರ್‌ಸ್ಟೈಲಿಸ್ಟ್‌ ಎಲ್ಲರೂ ಸಿಗ್ತಾರೆ” ಎಂದು ಹೇಳಿದ್ದಾರೆ.

ಈಗಾಗಲೇ ಐಶ್ವರ್ಯ, ಶಿಶಿರ್‌ ಅವರು ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಿಗ್‌ ಬಾಸ್‌ ಶೋ ಮೂಲಕ ಇವರ ಜಜನಪ್ರಿಯತೆ ಇನ್ನಷ್ಟು ಹೆಚ್ಚಿದೆ ಎಂದು ಹೇಳಬಹುದು. ಅಂದಹಾಗೆ ಇವರ ಉದ್ಯಮ ಹೇಗೆ ನಡೆಯಲಿದೆ ಎಂದು ಕಾದು ನೋಡಬೇಕಾಗಿದೆ.

View post on Instagram