ಬಿಗ್ ಬಾಸ್ ಮನೆಯಲ್ಲಿ ಬಿಸಿಯೇರಿದ ವಾತಾವರಣ/ ಲ್ಯಾಗ್ ಮಂಜ  ಬಾಡಿ ಶೇಮಿಂಗ್ ಮಾಡಿದ್ರಾ?/  ತಮಾಷೆಗೂ ಒಂದು ಮಿತಿ ಇರುತ್ತದೆ ಅಲ್ಲವಾ? ರಘು ಪರ ನಿಂತು ಮಾತನಾಡಿದ ಗಣೇಶ್ ಕಾರಂತ್

ಬೆಂಗಳೂರು(ಮಾ. 20) ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ರಂಜನೆ ನೀಡುತ್ತಿರುವುದು ಲ್ಯಾಗ್ ಮಂಜು. ಆದರೆ ತಮಾಷೆ ಮಾಡಲು ಮುಂದಾಗುವ ಮಂಜ ಅವರ ಕೆಲವೊಂದು ಮಾತುಗಳೇ ಅವರಿಗೆ ಮಾರಕವಾಗುತ್ತಿದೆ.

Add Asianetnews Kannada as a Preferred SourcegooglePreferred

'ಮೊದಲಿಗೆ ಹೇಳಿಬಿಡುತ್ತೇನೆ.. ನಾನು ಲ್ಯಾಗ್ ಮಂಜ ಅವರ ದೊಡ್ಡ ಫ್ಯಾನ್.. ಅವರೊಬ್ಬ ಅತ್ಯುತ್ತಮ ಕಾಮಿಡಿ ಕಲಾವಿದ . ಆದರೆ ತಮಾಷೆಗೂ ಒಂದು ಇತಿ ಮಿತಿ ಅಂತ ಇರತ್ತೆ ಅಲ್ಲವೆ? "ನಿನಗೂ ಈ ಕರಿ ಬೊಂಬೆಗೂ ಏನೂ ಢಿಫರೆನ್ಸ್ ಇಲ್ಲ" ಅಂದ್ರೆ ಏನರ್ಥ? ಇದು ಬಾಡಿ ಶೇಮಿಂಗ್ ಆಗುವುದಿಲ್ಲವೆ? ರಘು ಗೌಡ ಇಂಥ ಶಬ್ದ ಕೇಳಿಯೂ ಕೂಲ್ ಆಗಿ ಹೇಗೆ ಇದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಮಂಜು ಅವರ ಮಾತಿನಿಂದ ಸಿಕ್ಕಾಪಟ್ಟೆ ಬೇಜಾರಾಗಿದೆ.

ವೀಕ್ಷಕರ ಪ್ರಕಾರ ಬಿಗ್ ಬಾಸ್ ಮನೆಯ ಸೂಪರ್ ಜೋಡಿ ಯಾವುದು? 

ಕನ್ನಡ ಕೋಗಿಲೆ ಗಾಯಕ ಗಣೇಶ್ ಕಾರಂತ್ ಹೀಗೆಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ವಾತಾವರಣ ಬಿಸಿ ಏರುತ್ತಲೇ ಇದೆ.

ಸೋಶಿಯಲ್ ಮೀಡಿಯಾದಲ್ಲಿಯೂ ಮಂಜ ಅವರ ಮಾತಿಗೆ ಪರ ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ. ತಮಾಷೆಗೂ ಒಂದು ಮಿತಿ ಇರುತ್ತದೆ ಅಲ್ಲವೇ ಎಂದು ಪ್ರಶ್ನೆ ಕೇಳಲಾಗಿದೆ . ಅರವಿಂದ್ ಮತ್ತು ದಿವ್ಯ ಉರುಡುಗ ಜೋಡಿಗೂ ಅಪಾರ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ.