ಬೆಂಗಳೂರು(ಫೆ. 28) ಕನ್ನಡದ ಬಿಗ್ ಬಾಸ್ ಸೀಸನ್ ಎಂಟಕ್ಕೆ  ಭರ್ಜರಿ ಓಪನಿಂಗ್ ಸಿಕ್ಕಿದೆ. ಕಿಚ್ಚ ಸುದೀಪ್ ಒಬ್ಬೊಬ್ಬರಾಗಿಯೇ ಸ್ಪರ್ಧಿಗಳನ್ನು ಮನೆಯೊಳಕ್ಕೆ ಕಳುಹಿಸುತ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್ ಮನೆಗೆ  ಟಿಕ್ ಟಾಕ್ ಖ್ಯಾತಿಯ ಧನುಶ್ರೀ ಎಂಟ್ರಿ ಕೊಟ್ಟಿದ್ದಾರೆ.

ಟಿಕ್ ಟಾಕ್ ಮೂಲಕ ಡಿಜಿಟಲ್ ವೇದಿಕೆಯಲ್ಲಿ ಧನುಶ್ರೀ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಜ್ಯೂನಿಯರ್ ನಿತ್ಯಾ ಮೆನನ್ ಎಂದೇ ಕರೆಸಿಕೊಂಡವರು. ಹಾಸನದ ಹುಡುಗಿ ಸೊಶಿಯಲ್ ಮೀಡಿಯಾ ಮೂಲಕ ಸಾಕಷ್ಟು ಅಭಿಮಾನಿಗಳನ್ನು  ಹೊಂದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಚರ್ಮ, ಕೂದಲು, ಸೌಂದರ್ಯದ ಮತ್ತು ಆರೋಗ್ಯದ ಟಿಪ್ಸ್‌ಗಳನ್ನು ಅವರು ನೀಡುತ್ತಿರುತ್ತಾರೆ. ಫಿಟ್‌ನೆಸ್ ಕಡೆಗೂ ಧನುಶ್ರೀ ಆಸಕ್ತಿ ಇದೆ. ಅತ್ತೆ-ಸೊಸೆ ಪ್ರಾಬ್ಲಮ್ ಗೂ ಇವರು ಪರಿಹಾರ ಕೊಡ್ತಾರಂತೆ. 

ಸುದೀಪ್ ಲೆಕ್ಕಾಚಾರವೇ ತಲೆಕೆಳಗು ಮಾಡಿದ ಅಭ್ಯರ್ಥಿ

ನನಗೆ ಕೋಪ ಬಂದುಬಿಡುತ್ತದೆ.. ಕಣ್ಣೀರು ತಕ್ಷಣ ಬರುತ್ತದೆ.. ಯಾರ ಬದುಕನ್ನು ಬಲಾಯಿಸಲು ಮನೆಯೊಳಕ್ಕೆ ಹೋಗುತ್ತಿಲ್ಲ ಎಂದು ಧನುಶ್ರೀ ಹೇಳಿದ್ದಾರೆ.  ಶ್ವಾನಗಳನ್ನು ಅತಿಯಾಗಿ ಪ್ರೀತಿಸುವ ಹುಡುಗಿಗೆ ಉಪ್ಪಿನಕಾಯಿ ಅಂದರೆ ಸಖತ್ ಇಷ್ಟ..  ಮನೆಯೊಳಕ್ಕೆ ಕಾಲಿಡುತ್ತಿದ್ದಂತೆ ಉಪ್ಪಿನಕಾಯಿ ಕೊಡಿ ಬಿಗ್ ಬಾಸ್ ಎಂದು ಕೇಳಿಕೊಂಡಿದ್ದಾರೆ. 

ಎರಡನೇ ಸ್ಪರ್ಧಿಯಾಗಿ  ನಟಿ ಶುಭಾ ಪೂಂಜಾ ಎಂಟ್ರಿ ಕೊಟ್ಟಿದ್ದಾರೆ. ಅಂತಿಮವಾಗಿ ಈಗ ಸಮಯ ಬಂದಿದೆ. ಬೆಳಗ್ಗೆ ಬಾತ್ ರೂಂ ಸಮಸ್ಯೆ ಹೇಗೆ ಸುಧಾರಿಸಿಕೊಂಡರು ಎಂಬುದು ಅರ್ಥ  ಆಗುತ್ತಿಲ್ಲ ಎಂದು ಹೇಳಿದ್ದು ಭಯದಿಂದಲೇ ಒಳಗೆ ಹೋಗಿದ್ದಾರೆ. 

ಇದಕ್ಕೂ ಮೊದಲು ಮನೆಯೊಳಗೆ ಸುತ್ತಾಡಿದ ಕಿಚ್ಚ ಸುದೀಪ್ ಬಾಲ್ ಗಳನ್ನು ಅಡಗಿಸಿಟ್ಟಿದ್ದು ಚೆಂಡನ್ನು ಮೊದಲು ಮುಟ್ಟಿದ ಧನುಶ್ರೀಗೆ ಉಳಿದ ಹದಿನಾಲ್ಕು ಚೆಂಡು ಪತ್ತೆ ಹಚ್ಚುವ ಕೆಲಸ ಕೊಟ್ಟಿದ್ದಾರೆ. ಈ ಬಾರಿ ಅಡುಗೆ ಮನೆ ವಿಶೇಷ ರೀತಿ ತಯಾರಿ ಮಾಡಲಾಗಿದ್ದು  ಇಲ್ಲಿ ಸಮಯ ಕಳೆಯುವವರು ಹೆಚ್ಚು ದಿನ ಇರಬಹುದು ಎಂದು ಸುದೀಪ್ ಭವಿಷ್ಯ ಹೇಳಿದ್ದಾರೆ. 

#