ಬೆಂಗಳೂರು(ಏ. 28)  ಬಿಗ್ ಬಾಸ್ ಭಾವನೆಗಳ ವೇದಿಕೆಯಾಗಿತ್ತು. ಚಕ್ರವರ್ತಿ ಚಂದ್ರಚೂಡ್ ತಮ್ಮ ಜೀವನದ ಕತೆಯನ್ನು ತೆರೆದಿಟ್ಟರು.  ಚಂದ್ರಚೂಡ್ ಅವರ ಮಾತಿನಲ್ಲಿಯೇ ಕೇಳಿ..

ನನ್ನನ್ನು ಬಾಲಾಪರಾಧಿ ಎಂದು ತೀರ್ಮಾನ ಮಾಡಲಾಗಿತ್ತು. ಚೆನ್ನೈಗೆ ತೆರಳಿದ್ದೆ.. ಕೈನಲ್ಲಿ ಬಿಡಿಗಾಸು ಇರಲಿಲ್ಲ.  ಈ ವೇಳೆ ಅಲ್ಲಿಯೇ ಸಿಕ್ಕ ವ್ಯಕ್ತಿ ನನ್ನನ್ನು ಕರೆದುಕೊಂಡು ವೇಶ್ಯಾಗೃಹಕ್ಕೆ ತೆಗೆದುಕೊಂಡು ಹೋಗಿ ಬಿಡ್ತಾನೆ.ಅಲ್ಲಿ ನನ್ನ ಕೆಲಸ ಶುರುವಾಗುತ್ತದೆ.

ಅಲ್ಲಿ 120 ಕ್ಕೂ ಅಧಿಕ ದೇವತೆಗಳು ಇದ್ದರು.  ಒಂದು ದಿನ ಸ್ವಂತ ಚಿಕ್ಕಪ್ಪ ಹದಿನಾಲ್ಕು ವರ್ಷದ ಹೆಣ್ಣು ಮಗಳನ್ನು ಕರೆದುಕೊಂಡು ತಂದು ಬಿಡ್ತಾನೆ. ಆ ವೇಳೆಗೆ ಆಕೆ  35  ಸಾವಿರಕ್ಕೆ ಬಿಕರಿಯಾಗುತ್ತಾಳೆ!

ಮಗು ಮನಸಿನ ಶುಭಾಗೆ ವೀಕ್ಷಕರ ಭರಪೂರ ಮೆಚ್ಚುಗೆ

ಆಕೆಯೇ ನನ್ನ ಮೊದಲ ಲವ್.. ಪ್ರೀತಿ ಎಂದರೆ ಇಂದಿಗೂ ನನಗೆ ಆಕೆಯೇ ನೆನಪಾಗುತ್ತಾಳೆ. ಅಲ್ಲಿಂದ ತಪ್ಪಿಸಿಕೊಳ್ಳಬೇಕು ಎಂದು ಇಬ್ಬರೂ ನಿರ್ಧಾರ ಮಾಡುತ್ತೇವೆ. ಕಸ ತುಂಬುವ ನಾಟಕ ಮಾಡಿ ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಿ ಕರ್ನಾಟಕ್ಕೆ ಬರುವ ರೈಲು ಹತ್ತುತ್ತೇವೆ.

ಆದರೆ ಬಂಗಾರಪೇಟೆಗೆ ಬರುವ ವೇಳೆಗೆ ಅವರು ನಮ್ಮನ್ನು ಹಿಡಿಯುತ್ತಾರೆ. ನಮ್ಮಿಬ್ಬರ ಮೇಲೆ ಹಲ್ಲೆಯಾಗುತ್ತದೆ. ಆ ಘಟನೆಯಲ್ಲಿ ಆಕೆ ಸಾವನ್ನಪ್ಪಿದರೆ ನಾನು ಬದುಕಿ ಉಳಿಯುತ್ತೇನೆ. ಒಬ್ಬ ಪೊಲೀಸ್ ಕಾನ್ಸ್ಟೇಬಲ್ ನನ್ನನ್ನು ಇಲ್ಲಿಂದ ತಪ್ಪಿಸಿಕೊ ಎಂದು ತಿಳಿಸುತ್ತಾರೆ. ಅದು ಹೇಗೋ ಬೆಂಗಳೂರಿಗೆ ಬಂದು ಪತ್ರಕರ್ತನಾಗುತ್ತೇನೆ.

ದಿನಗಳು ಉರುಳಿದಾಗ ಒಂದು  ದಿನ ಗೆಳೆಯರನ್ನು ರಿಸೀವ್ ಮಾಡಿಕೊಳ್ಳಲು ಮೆಜೆಸ್ಟಿಕ್ ಬಳಿ ತೆರಳುತ್ತೇನೆ. ಅಲ್ಲಿ ಒಂದು ಮೂವತ್ತು ಜನ ವೇಶ್ಯೆಯರು ನನ್ನ ಕಣ್ಣಿಗೆ ಬೀಳುತ್ತಾರೆ. ಅದೇ ದಿನ ಏನಾದರೊಂದು ಮಾಡಬೇಕು ಎಂದು ತೀರ್ಮಾನ ಮಾಡುತ್ತೇನೆ. ರವೀಂದ್ರ ಕಲಾಕ್ಷೇತ್ರದಲ್ಲಿ ವೇಶ್ಯೆಯರ ಮೂಲಕವೇ  ಒಂದು ನಾಟಕ ಮಾಡಿಸುತ್ತೇನೆ. 

ಹೌದು.. ನಟಿ ಶುಭಾ ಪೂಂಜಾ, ಅರವಿಂದ್, ಶಮಂತ್, ದಿವ್ಯಾ ಯು ತಮ್ಮ ಜೀವನದ ಕತೆಗಳನ್ನು ಹಂಚಿಕೊಂಡರು. ಬಿಗ್ ಬಾಸ್ ಈ ಬಾರಿ ನಾಮಿನೇಶನ್ ಗೆ ಹೊಸ ರೀತಿಯ ರೈಲ್ವೆ ಟಾಸ್ಕ್ ಕೊಟ್ಟಿದ್ದು ಸ್ಪರ್ಧಿಗಳು ತಮ್ಮನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.