ಥಂಡಾಗಿದ್ದ ಬಿಗ್‌ ಬಾಸ್ ಮನೆಯಲ್ಲಿ ಬಿಸಿ/ ಇದಕ್ಕೆಲ್ಲ ಕಾರಣ ಬಿಗ್ ಬಾಸ್ ಕೊಟ್ಟ ಟಾಸ್ಕ್/  ಬಿಗ್ ಬಾಸ್ ಮನೆಯಲ್ಲಿ ಮಾನವರು-ವೈರಸ್ ನಡುವೆ ಹೋರಾಟ/  ಲಾಕ್ ಡೌನ್ ಟಾಸ್ಕ್ ಬೀಪ್ ಬೀಪ್ ಬೀಪ್

ಬೆಂಗಳೂರು(ಮಾ. 09) ಶುರುವಾಗಿ ಒಂದು ವಾರ ಥಂಡಾಗಿದ್ದ ಬಿಗ್ ಬಾಸ್ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬಿಗ್ ಬಾಸ್ ನೀಡಿದ್ದ ಟಾಸ್ಕ್ ಇದಕ್ಕೆಲ್ಲ ಕಾರಣ. ಕೊರೋನಾ ವೈರಸ್ ಹಾವಳಿಯನ್ನೇ ಬಿಗ್ ಬಾಸ್ ಟಾಸ್ಕ್ ಆಗಿಸಿಕೊಂಡಿದ್ದರು.

ಮನೆಯನ್ನು ಎರಡು ತಂಡ ಮಾಡಿದ್ದರು. ಮಾನವರ ತಂಡಕ್ಕೆ ಲ್ಯಾಗ್ ಮಂಜ ನಾಯಕನಾದರೆ, ವೈರಸ್ ಗಳ ತಂಡಕ್ಕೆ ಪ್ರಶಾಂತ ಸಂಬರಗಿ ನಾಯಕ. ಈ ದಿನದ ಆಟವನ್ನು ವೈರಸ್ ತಂಡ ಗೆದ್ದುಕೊಂಡಿತು. ಮಾನವರ ತಂಡದ ಗೀತಾ ಭಟ್ ವೈರಸ್ ದಾಳಿಗೆ ತುತ್ತಾದರು.

ಗೇಮ್ ಯಾವ ಹಂತಕ್ಕೆ ಬಿಸಿ ಪಡೆದುಕೊಂಡಿತ್ತು ಅಂದರೆ ಬಿಗ್ ಬಾಸ್ ಮನೆಯಲ್ಲಿ ಬೀಪ್ ಮೇಲೆ ಬೀಪ್ ಸೌಂಡ್ ಗಳು ಬಂದವು. ಗೇಮ್ ರೂಲ್ಸ್ ನಲ್ಲಿ ಇದ್ದ ಕೆಲವು ಗೊಂದಲಗಳು ಮನೆಯವರನ್ನು ದಂಗು ಬಡಿಸಿದ್ದವು.

ವೈಷ್ಣವಿ ಸೈಲಂಟ್ ಆಗಿರೋದಕ್ಕೆ ಕಾರಣ ಏನು? 

ಮೊದಲು ವೈರಸ್ ದಾಳಿಗೆ ತುತ್ತಾದ ಚಂದ್ರಕಲಾ ಅವರ ಮೇಲೆ ವೈರಸ್ ತಂಡದವರು ನೀರು ಹಾಕುವುದು, ಬಟ್ಟೆ ತಂದುಹಾಕುವುದು ಸೇರಿದಂತೆ ಅನೇಕ ಕಾಟ ಕೊಟ್ಟರು. ಹಿಡಿದ ಹಗ್ಗ ಬಿಡದೆ ಅರ್ಧ ಗಂಟೆ ತಡೆದುಕೊಂಡರೆ ಕ್ವಾರಂಟೈನ್ ಗೆದ್ದ ಹಾಗೆ ಎಂದು ಬಿಗ್ ಬಾಸ್ ಹೇಳಿದ್ದರು. ಅಂತೆಯೇ ಚಂದ್ರಕಲಾ ಗೆದ್ದು ಬಂದರು.

ಗೇಮ್ ನಡೆಯುತ್ತಿದ್ದರೂ ನಿಯಮಗಳನ್ನು ಮರೆತ ಕಾರಣ ಆಟದಿಂದ ಮಾನವ ತಂಡದ ಮೂವರನ್ನು ಬಿಗ್ ಬಾಸ್ ಹೊರಗೆ ಇಟ್ಟರು. ನಾಯಕ ಮಂಜ, ಶುಭಾ ಮತ್ತು ಚಂದ್ರಕಲಾ ಅವರನ್ನು ಹೊರಗೆ ಇಡಲಾಯಿತು.

ಸ್ಮೋಕಿಂಗ್ ಝೋನ್ ಗೆ ಬೆಂಕಿ ಪೆಟ್ಟಿಗೆ ಇಲ್ಲದ ಕಾರಣ ಅಡುಗೆ ಮನೆಯಿಂದಲೇ ಅರವಿಂದ್ ಬೆಂಕಿ ಹಚ್ಚಿಕೊಂಡು ಹೋದದ್ದು ಅರವಿಂದ್ ಮತ್ತು ನಿರ್ಮಲಾ ಮಧ್ಯೆ ಗಲಾಟೆಗೂ ಕಾರಣವಾಯಿತು. ನಂತರ ಇಬ್ಬರು ಒಂದಾದರು. 

ವೈರಸ್ ಆಟದ ವೇಳೆ ಒಂದು ಹಂತದಲ್ಲಿ ಬ್ರೋ ಗೌಡ ಅವರ ಮೇಲೆ ಪ್ರಶಾಂತ್ ಸಂಬರಗಿ ಬಿದ್ದಿದ್ದು ಗಲಾಟೆಗೆ ಕಾರಣವಾಯಿತು. ಕೆಂಡಾಮಂಡಲರಾದ ಬ್ರೋ ಗೌಡ ಸಂಬರಗಿ ಮೇಲೆ ಎರಗಿ ಬಂದರು.