ಬೆಂಗಳೂರು(ಏ. 05)  ಶಮಂತ್,  ಅರವಿಂದ್,  ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಶುಭಾ ಪೂಂಜಾ, ನಿಧಿ ಸುಬ್ಬಯ್ಯ ಮತ್ತು  ರಾಜೀವ್ ಈ ಬಾರಿ ನಾಮಿನೇಶನ್ ಬಲೆಗೆ ಬಿದ್ದಿದ್ದಾರೆ.  ಬಿಗ್ ಬಾಸ್  ಈ ವಾರ  ಮನೆಯ ಎಲ್ಲರ ಸಮ್ಮುಖದಲ್ಲಿಯೇ ನಾಮಿನೇಶನ್ ಮಾಡಲು ಸೂಚಿಸಿದ್ದರು.

ಕಳೆದ ವಾರ ಎಲಿಮಿನೇಟ್ ಆದ ಶಂಕರ್ ಅಶ್ವಥ್ ನಿಧಿ ಸುಬ್ಬಯ್ಯ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಮನೆಗೆ ಹೊಸದಾಗಿ ಸೇರಿಕೊಂಡ ವೈಲ್ಡ್ ಕಾರ್ಡ್ ಚಕ್ರವರ್ತಿ ಅವರಿಗೆ ವಿನಾಯಿತಿ ನೀಡಲಾಗಿತ್ತು. ರಾಜೀವ್ ನಾಯಕ ಮಂಜುರಿಂದ ನೇರವಾಗಿ ನಾಮಿನೇಟ್ ಆದರು.

ವೀಕ್ ಕಂಟೆಸ್ಟಂಟ್ ಎಂದು ಶಮಂತ್, ಸ್ಟ್ರಾಂಗ್ ಕಂಟಸ್ಟಂಟ್ ಎಂದು ಅವರಿಂದ ಮನೆಯವರಿಂದ  ನಾಮಿನೇಟ್ ಆಗಿದ್ದು ವಿಶೇಷ.  ಈ ನಡುವೆ ಮನೆಯನ್ನು ನಾಲ್ಕು ತಂಡಗಳಾಗಿ ವಿಂಗಡಿಸಬೇಕು ಎಂದು ಬಿಗ್ ಬಾಸ್ ಸೂಚಿಸಿದಾಗ ನಾಯಕ ಮಂಜು ಅರವಿಂದ್, ದಿವ್ಯಾ ಸುರೇಶ್, ರಾಜೀವ್ ಮತ್ತು ದಿವ್ಯಾ ಯು ಅವರನ್ನು ಆಯಾ ತಂಡಕ್ಕೆ ನಾಯಕರನ್ನಾಗಿ ಮಂಜು ಆಯ್ಕೆ ಮಾಡಿದರು.

'ಎಲ್ಲೆಲ್ಲೋ ಮುಟ್ತಾರೆ'  ಹೊರ ಬರುವಾಗ ನಿಧಿಗೆ ಶಂಕರ್ ಬಹುಮಾನ!

ನಿಮ್ಮ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲು ಪೋಟೋಕ್ಕೆ ಹಗ್ಗ ಎಸೆಯಬೇಕು ಎಂದಾಗ ಎಲ್ಲರೂ ಕಳೆದ ವಾರ ಕಿಚ್ಚನ ಚಪ್ಪಾಳೆ ಪಡೆದುಕೊಂಡ ವೈಷ್ಣವಿ ಅವರನ್ನೇ  ಟಾರ್ಗೆಟ್ ಮಾಡಿ ತಮ್ಮ ತಂಡಕ್ಕೆ ಬೇಕೆಂದು ಪಟ್ಟು ಹಿಡಿದರು . ದಿವ್ಯಾ ಸುರೇಶ್ ಅವರನ್ನು ಮದುವೆಯಾಗ್ತೀಯಾ ಎಂದು ಶುಭಾ ಕೇಳಿದ್ದಕ್ಕೆ ಮಂಜು ತೊಂದರೆ ಏನಿಲ್ಲ ..ಆದರೆ ಎಲ್ಲ ಆಗಬೇಕಲ್ಲ ಎಂದರು. 

ಒಟ್ಟಿನಲ್ಲಿ ಆರನೇ ವಾರ ಆರಂಭವಾಗಿದ್ದು ಈ ಬಾರಿ ಬಿಗ್ ಬಾಸ್ ಯಾವ ವಿಶೇಷ ಟಾಸ್ಕ್ ನೀಡಲಿದ್ದಾರೆ ಎಂಬ ಕುತೂಹಲ ಇದೆ. ಇನ್ನೊಂದು ಕಡೆ ಪ್ರಶಾಂತ್ ಮತ್ತು ಚಕ್ರವರ್ತಿ ನಾವು ಯಾರನ್ನು ಟಾರ್ಗೆಟ್ ಮಾಡಬೇಕು ಎಂದು ಮಾತನಾಡಿಕೊಂಡಿದ್ದು ದಿವ್ಯ ಸುರೇಶ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ .