ಬೆಂಗಳೂರು(ಏ. 05)  ಬಿಗ್ ಬಾಸ್ ಮನೆಯಿಂದ ಶಂಕರ್ ಅಶ್ವಥ್ ಹೊರಗೆ ಬಂದಿದ್ದಾರೆ. ಹೊರಗೆ ಬರುವ ವೇಳೆ  ಮನೆ ಒಳಗೆ ಇರುವ ನಿಧಿ ಸುಬ್ಬಯ್ಯಗೆ ಶಾಕ್ ಕೊಟ್ಟೇ  ಬಂದಿದ್ದಾರೆ.  ಈ ಮೊದಲಿನಿಂದಲೂ ಇಬ್ಬರ ನಡುವೆ ಜಟಾಪಟಿ ನಡೆಯುತ್ತಲೇ ಇತ್ತು.

ಟಿಕ್ ಟಾಕ್ ಶನುಶ್ರೀ, ನಿರ್ಮಲಾ, ಗೀತಾ  ಭಟ್, ಚಂದ್ರಕಲಾ  ನಂತರ ಶಂಕರ್ ಅಶ್ವಥ್ ಹೊರಗೆ ಬಂದಿದ್ದು ಈ ನಡುವೆ ವೈಲ್ಡ್ ಕಾರ್ಡ್ ಮೂಲಕ ನಿರ್ದೇಶಕ , ಬರಹಗಾರ ಚಕ್ರವರ್ತಿ ಚಂದ್ರಚೂಡ್ ಎಂಟ್ರಿ ಕೊಟ್ಟಿರುವುದು ಬೆಳವಣಿಗೆ.

ಪ್ರೀತಿಸಿ ಮದುವೆಯಾದ ನಿಧಿ ಈಗ ಸಿಂಗಲ್ಲಾ? 

ಐದನೇ ವಾರ ಮನೆಯಿಂದ ಎಲಿಮಿನೇಟ್ ಆಗುವ ವೇಳೆ ಶಂಕರ್ ಗೆ ಬಿಗ್ ಬಾಸ್ ವಿಶೇಷ ಅಧಿಕಾರ ನೀಡಿ ಯಾರನ್ನೂ ನೇರವಾಗಿ ನಾಮಿನೇಟ್ ಮಾಡ್ತೀರಿ ಎಂದು ಕೇಳಿದರು? ಇದಕ್ಕೆ ಶಂಕರ್ ಅಶ್ವಥ್ ನಿಧಿ ಸುಬ್ಬಯ್ಯ  ಹೆಸರು ಸೂಚಿಸಿದರು.

ಸ್ವಿಮಿಂಗ್ ಪೂಲ್ ಟಾಸ್ಕ್ ನಲ್ಲಿ ಶಂಕರ್ ವೈಷ್ಣವಿ ಅವರ ಮೇಲೆ ಜಂಪ್ ಮಾಡಿ ಕೆಳಕ್ಕೆ ಕೆಡವಿದ್ದು ಮನೆಯ ಬಹುತೇಕರ ವಿರೋಧಕ್ಕೆ ಕಾರಣವಾಗಿತ್ತು.   ಆದರೆ ಶಂಕರ್ ಅಶ್ವಥ್ ನಿಧಿ ಸುಬ್ಬಯ್ಯ ಅವರನ್ನು ನಾಮಿನೇಟ್ ಮಾಡಲು ಕಾರಣವೊಂದನ್ನು ಕೊಟ್ಟರು.

ವೈಷ್ಣವಿ ಡ್ರೆಸ್ ಕೋಡ್ ನೋಡೋಕೆ ಬಿಗ್ ಬಾಸ್ ವೀಕ್ಷಿಸುವ ಮಂದಿ ಇದ್ದಾರೆ!

ಇಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯ ಇಲ್ಲದೆ ಆಟ ಆಡಬೇಕು. ಅದು ಗೊತ್ತಿದ್ದೆ ಎಲ್ಲರೂ ಇಲ್ಲಿಗೆ ಬಂದಿದ್ದಾರೆ. ಹೆಣ್ಣು ಮಗಳೊಬ್ಬಳು ಕ್ಯಾಮರಾ ಇದೆ ಎಂದು ಗೊತ್ತಿದ್ದರೂ ತನ್ನ ಪ್ರೈವೇಟ್ ಪಾರ್ಟ್ ನ್ನು ಒಬ್ಬರು ಟಚ್ ಮಾಡುತ್ತಿದ್ದಾರೆ ಎಂದು ಹೇಳಿದರೆ ಅದು  ಯಾವ ಸಂದೇಶ ನೀಡಬಹುದು.. ಇದೇ ಕಾರಣಕ್ಕೆ ಅವರನ್ನು ನಾಮಿನೇಟ್ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಮನೆಯಲ್ಲಿ ಇರುವಂತೆ ಬಿಗ್ ಬಾಸ್ ಮನೆಯಲ್ಲಿ ಅಪ್ಪ ಇರಲಿಲ್ಲ ಎಂದು ಶಂಕರ್ ಪುತ್ರ ಹೇಳಿದರು. ಒಟ್ಟಿನಲ್ಲಿ ಆಟ ಮತ್ತಷ್ಟು ಬಿಗಿಯಾಗಿದ್ದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ನೋಡಬೇಕಿದೆ.