Bigg Boss Kannada Season 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ ಅವರಿಗೆ ಕ್ಲಾಸ್ ತಗೊಂಡ ಕಿಚ್ಚ ಸುದೀಪ್ ಅವರು, ರಕ್ಷಿತಾ ಶೆಟ್ಟಿಯ ಕಿವಿ ಹಿಂಡಿದರು. ರಕ್ಷಿತಾ ಶೆಟ್ಟಿ ಆ ರೀತಿ ಮಾತನಾಡಬಾರದು, ಆ ರೀತಿ ಮಾಡಬಾರದು ಎಂದು ತಿಳಿ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಅಶ್ವಿನಿ ಗೌಡ ನಡುವಿನ ಮನಸ್ತಾಪ, ಜಗಳ ಮುಂದುವರೆಯುತ್ತಲೇ ಇದೆ. ಕಳೆದ ವಾರ ಚಪ್ಪಲಿ ವಿಷಯ ವೀಕೆಂಡ್ ಎಪಿಸೋಡ್‌ನಲ್ಲಿ ಚರ್ಚೆ ಆಗಲೇ ಇಲ್ಲ, ಹಾಗೆ ಉಳಿದಿತ್ತು. ಈಗ ಅಶ್ವಿನಿ ಗೌಡಗೂ ಕ್ಲಾಸ್ ತಗೊಂಡಿದ್ದಲ್ಲದೆ, ರಕ್ಷಿತಾಗೂ ಬುದ್ದಿ ಹೇಳಿದರು.
ಸಮರ್ಥನೆ ಮಾಡಿಕೊಂಡ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ
ಕಾಲ್ಗೆಜ್ಜೆ ವಿಷಯದಲ್ಲಿ ರಕ್ಷಿತಾ ಶೆಟ್ಟಿ ರಾತ್ರಿ ಪೂರ್ತಿ ನಿದ್ದೆ ಮಾಡಲ್ಲ, ಕ್ಯಾಮರಾ ಮುಂದೆ ರಾ ರಾ ಹಾಡು ಹಾಡಿಕೊಂಡು ಡ್ಯಾನ್ಸ್ ಮಾಡ್ತಾರೆ ಎಂದೆಲ್ಲ ಜಾಹ್ನವಿ, ಅಶ್ವಿನಿ ಗೌಡ ಅವರು ಬಿಂಬಿಸಿದ್ದರು. ಇದು ರಕ್ಷಿತಾ ಮನಸ್ಸಿಗೆ ನೋವುಂಟು ಮಾಡಿತ್ತು. ಅದಾದ ಬಳಿಕ ಅವರಿಬ್ಬರು ಇದನ್ನೇ ಸಮರ್ಥನೆ ಮಾಡಿಕೊಂಡರು.
ಇಷ್ಟೆಲ್ಲ ಆಗೋಕೆ ಅಶ್ವಿನಿ, ಜಾಹ್ನವಿ ಕಾರಣ
ರಕ್ಷಿತಾಗೆ ಬೇಸರ ಆಗಿತ್ತು. ಸಾಕಷ್ಟು ಬಾರಿ ರಕ್ಷಿತಾ ಕಣ್ಣೀರು ಹಾಕಿದ್ದರು. ಇದೇ ವಿಚಾರಕ್ಕೆ ಕಿಚ್ಚ ಸುದೀಪ್ ಅವರು ಕ್ಲಾಸ್ ತಗೊಂಡಿದ್ದರು. “ಚಿಕ್ಕ ವಯಸ್ಸಿನ ಹುಡುಗಿ ನನ್ನ ವಿರುದ್ಧ ಮಾತನಾಡಿದಳು ಅಂತ ನಿಮಗೆ ಅನಿಸಬಹುದು, ಆದರೆ ಮೊದಲು ದೀಪ ಹಚ್ಚಿದ್ದೇ ನೀವು” ಎಂದು ಅಶ್ವಿನಿ ಗೌಡಗೆ ಸುದೀಪ್ ಹೇಳಿದ್ದರು.
ರಕ್ಷಿತಾಗೆ ಕ್ಲಾಸ್ ತಗೊಂಡ ಸುದೀಪ್
“ನಿಮಗಿಂತ ಹದಿನೈದು ವರ್ಷ ದೊಡ್ಡವರಾದ ವ್ಯಕ್ತಿಯ ಮತವನ್ನು ಕಾಲಿನಲ್ಲಿ ಹಾಕಿ ತುಳಿಯುತ್ತೇನೆ ಎಂದು ನೀವು ಹೇಳಿದ್ದು ತಪ್ಪು. ಇಲ್ಲಿ ಎಲ್ಲರೂ ಸಮಾನರೇ, ಅವರವರ ರಂಗದಲ್ಲಿ ಹೆಸರು ಮಾಡಿ ಬಂದಿರುತ್ತಾರೆ. ನೀವು ಆ ರೀತಿ ಮಾಡೋದು ತಪ್ಪು” ಎಂದು ಕಿಚ್ಚ ಸುದೀಪ್ ಅವರು ರಕ್ಷಿತಾಗೆ ಹೇಳಿದ್ದಾರೆ.
ರಕ್ಷಿತಾಗೆ ಏನೂ ನೆನಪು ಆಗಲಿಲ್ಲ
ಕಾಲ್ಗೆಜ್ಜೆ ವಿಷಯದಲ್ಲಿ ಅಶ್ವಿನಿ ಗೌಡ ಅವರು ರಕ್ಷಿತಾಗೆ ಕ್ಷಮೆ ಕೇಳಿದರು. ಆಮೇಲೆ ಯಾಕೆ ಇವರಿಬ್ಬರ ಮಧ್ಯೆ ಮನಸ್ತಾಪ ಆಯ್ತು ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದಾಗ, ರಕ್ಷಿತಾಗೆ ಏನೂ ನೆನಪಾಗಲಿಲ್ಲ. ತುಂಬ ಸಮಯ ಕೊಟ್ಟಾಗಲೂ ಕೂಡ ರಕ್ಷಿತಾಗೆ ಏನೂ ಹೊಳೆಯಲಿಲ್ಲ.
ಕಿಚ್ಚ ಸುದೀಪ್ ಏನಂದ್ರು?
ನೀವೆ ನನಗೆ ಸ್ವಲ್ಪ ಸುಳಿವು ಕೊಡಿ, ಅದನ್ನು ನಾನು ನೆನಪು ಮಾಡಿಕೊಂಡು ಹೇಳ್ತೀನಿ ಎಂದರು. ಆಗ ಸುದೀಪ್ ಅವರು, “ನಾನು ಇಲ್ಲಿ ಹೇಳೋಕೆ ಬರೋದಿಲ್ಲ, ಯೆಸ್ ಆರ್ ನೋ ಸೆಗ್ಮಂಟ್‌ನಲ್ಲಿ ಹೀಗೆ ಹೇಳಿದ್ರಂತೆ ಹೌದಾ ಎಂದಾಗ, ಕೆಲವರು ಹೇಳಿದ್ದರೂ ಇಲ್ಲ ಅಂತಾರೆ. ಇದು ಹೇಳೋದು ನನ್ನ ಕೆಲಸವೇ?” ಎಂದು ಹೇಳಿದ್ದರು.
