ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈ ವಿಷಯಗಳನ್ನು ಮಾತಾಡಿಲ್ಲ, ಅದಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಕಳೆದ ವಾರ ಕೂಡ ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು. ಹಾಗಿದ್ರೆ ಈ ವಾರ ಮಾತನಾಡಲೇಬೇಕಾದ ವಿಷಯಗಳಿವು 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನ ಆರನೇ ವಾರದ ವೀಕೆಂಡ್‌ ಎಪಿಸೋಡ್‌ನಲ್ಲಿ ಈ ವಿಷಯಗಳು ಚರ್ಚೆ ಆಗಬೇಕು, ಕಿಚ್ಚ ಸುದೀಪ್‌ ಅವರು ಮಾತನಾಡಬೇಕು, ಇಲ್ಲದಿದ್ರೆ ವೀಕ್ಷಕರಿಗೆ ಬೇಸರ ಆಗೋದಂತೂ ಪಕ್ಕಾ.

ಹಾಗಿದ್ದರೆ ಆ ವಿಷಯಗಳಿವು

  • ಗಿಲ್ಲಿಗೆ ರಿಷಾ ಹೊಡೆದಿದ್ದು ಸರಿಯೇ? ಇದು ಬಿಗ್‌ ಬಾಸ್‌ ನಿಯಮದ ಉಲ್ಲಂಘನೆ ಅಲ್ಲವೇ?
  • ಗಿಲ್ಲಿ ನಟನನ್ನು ಹೊಡೆಯಬೇಕು ಎಂದರೆ ಕಾವ್ಯ ಶೈವನನ್ನು ಟ್ರಿಗರ್‌ ಮಾಡಬೇಕು, ಕಾವ್ಯಳನ್ನು ನೋಯಿಸಬೇಕು ಎಂದು ರಿಷಾ ಗೌಡ ಹೇಳಿದ್ದರು.
  • ಕಾಕ್ರೋಚ್‌ ಸುಧಿಗೆ ಕಳಪೆ ಸಿಗಲು ಬಹುಮತ ಬರುತ್ತಿದೆ ಎಂದಾದಾಗ, ಅಶ್ವಿನಿ ಗೌಡ, ಧ್ರುವಂತ್‌ ಟೀಂ ಸೇರಿಕೊಂಡು ಗಿಲ್ಲಿ ನಟನಿಗೆ ಕಳಪೆ ಕೊಟ್ಟರು.
  • ರಕ್ಷಿತಾ ಶೆಟ್ಟಿ ಕ್ಯಾರೆಕ್ಟರ್‌ ಬಗ್ಗೆ ಅಶ್ವಿನಿ ಗೌಡ ಕೆಟ್ಟದಾಗಿ ಮಾತನಾಡಿದ್ದಾರೆ
  • ಈ ಮನೆಯಲ್ಲಿ ಒಂದು ಗುಂಪು, ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಇಬ್ಬರನ್ನು ಟಾರ್ಗೆಟ್ ಮಾಡ್ತಿದ್ದಾರೆ.
  • ರಕ್ಷಿತಾ ಶೆಟ್ಟಿಗೆ ಕನ್ನಡ ಬರುತ್ತದೆ, ಭಾಷೆ ಬರೋದಿಲ್ಲ ಎಂದು ನಾಟಕ ಮಾಡಿದ್ದರ ಬಗ್ಗೆ ಧ್ರುವಂತ್‌ ಮಾತನಾಡಿದ್ದಾರೆ.
  • ಈ ಮನೆಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ

  • ರಕ್ಷಿತಾ ಶೆಟ್ಟಿ ಮೂರನೇ ವಾರ ಕ್ಷಮೆ ಕೇಳಿ ಮತ್ತೆ ನನ್ನ ವ್ಯಕ್ತಿತ್ವ ಹಾಳು ಮಾಡಿದಳು ಎಂದು ಅಶ್ವಿನಿ ಗೌಡ ಹೇಳಿದ್ದಾರೆ
  • ರಾಶಿಕಾ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಲೆಟರ್‌ ಟಾಸ್ಕ್‌ ಇದ್ದಾಗ, ಒಂದು ಗುಂಪಿಗೆ ರಕ್ಷಿತಾಗೆ ಲೆಟರ್‌ ಸಿಗಬಾರದು ಎನ್ನೋದಿತ್ತು.
  • ಲೆಟರ್‌ ಸಿಗದಿದ್ದಾಗ ರಾಶಿಕಾ ಶೆಟ್ಟಿ ಅಷ್ಟೆಲ್ಲ ಅತ್ತಿದ್ದು ಯಾಕೆ?
  • ಅಶ್ವಿನಿ ಗೌಡ ವಿಚಾರದಲ್ಲಿ ಜಾಹ್ನವಿ ಪದೇ ಪದೇ ಉಲ್ಟಾ ಹೊಡೆಯುತ್ತಿರುವುದು ಯಾಕೆ?
  • ಮನೆಯವರ ಮುಖವಾಡ ಕಳಚುವೆ ಎಂದಿದ್ದ ರಿಷಾ ಗೌಡ ಅವರು ಪಾತ್ರೆ ತೊಳೆಯಬೇಕು ಎಂದ ಅತ್ತಿದ್ದು ಯಾಕೆ?

  • ಪತ್ರ ಸಿಗದಿದ್ದಾಗಲೂ ಸೈಲೆಂಟ್‌ ಆಗಿದ್ದ ರಕ್ಷಿತಾ, ಅತ್ತು ಸೀನ್‌ ಕ್ರಿಯೇಟ್‌ ಮಾಡಲಿಲ್ಲ
  • ಅಶ್ವಿನಿ ಗೌಡ ಕ್ಯಾರೆಕ್ಟರ್‌ ಬಗ್ಗೆ ಮಾತಾಡಿದಾಗ ರಕ್ಷಿತಾ ಶೆಟ್ಟಿ ಯಾಕೆ ಸೈಲೆಂಟ್‌ ಆದರು?
  • ಬೇರೆಯವರನ್ನು ಕೆಳಗಡೆ ಹಾಕಿ ಗಿಲ್ಲಿ ನಟ ಕಾಮಿಡಿ ಮಾಡ್ತಿದ್ದಾರಾ?
  • ಸೂರಜ್‌ಗೆ ರಾಶಿಕಾ ಶೆಟ್ಟಿ ಸ್ವಂತ ಆಟ ಆಡೋಕೆ ಬಿಡ್ತಿಲ್ಲ
  • ಬೇರೆಯವರ ಅಭಿಪ್ರಾಯವನ್ನು ಅಶ್ವಿನಿ ಗೌಡ ಮ್ಯಾನಿಪ್ಯುಲೇಶನ್‌ ಬಗ್ಗೆ ಮನೆಯವರ ಅಭಿಪ್ರಾಯ ಏನು?
  • ವೀಕೆಂಡ್‌ ಎಪಿಸೋಡ್‌ನಲ್ಲಿ ಅಶ್ವಿನಿ ಗೌಡ, ಸಣ್ಣದಾಗಿ ಬೇರೆಯವರ ಹೆಸರು ಹೇಳಿಯೂ, ಅಲ್ಲಿಯೂ ಮ್ಯಾನಿಪ್ಯುಲೇಶನ್‌ ಮಾಡ್ತಾರೆ.

  • ಕಾವ್ಯ ಶೈವ ಲವ್‌ ಹಾದಿಯಲ್ಲಿ ಹೋಗ್ತಿದ್ದಾರೆ ಎಂದು ಚಂದ್ರಪ್ರಭ ಹೇಳಿದ್ದು ಸರಿಯೇ?
  • ಅಶ್ವಿನಿ ಗೌಡ ಬಗ್ಗೆ ಈ ಹಿಂದೆ ಮಾತನಾಡಿದ್ದ ಧ್ರುವಂತ್‌, ಈಗ ಅವರ ಟೀಂ ಸೇರಿಕೊಂಡಿದ್ದು ಯಾಕೆ?
  • ಕಳ್ಳ, ಮಳ್ಳ, ಸುಳ್ಳ, ಲೋ, ಹೋಗೋ, ಕಣೋ ಎಂದು ರಿಷಾ ಗೌಡ ಮಾತನಾಡೋದು ಸರಿಯೇ?
  • ಜಗಳ ಮಾಡಿದ್ರೆ ಬಿಗ್‌ ಬಾಸ್‌ ಮನೆಯಲ್ಲಿ ಕಾಣಿಸಿಕೊಳ್ಳೋದು ಎಂದು ರಿಷಾ ಮನಸ್ಸಿನಲ್ಲಿದೆ.
  • ಬಿಗ್‌ ಬಾಸ್‌ ಮನೆಯಲ್ಲಿ ಸೂರಜ್‌ಗೆ ಬಿಗ್‌ ಬಾಸ್‌ ಆಟ ಅಂದ್ರೆ ಸೂರಜ್‌ ಜೊತೆಗೆ ಇರೋದು