ಬಿಗ್‌ಬಾಸ್  ಕನ್ನಡ ಸೀಸನ್ 11ರ ವಿಜೇತ ಹನುಮಂತು, ಟಾಯ್ಲೆಟ್ ಬಳಕೆ ಕುರಿತಾದ ಆರಂಭಿಕ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ. ವೆಸ್ಟರ್ನ್ ಟಾಯ್ಲೆಟ್ ಬಳಸಿದ ಅನುಭವವಿದ್ದರೂ, ಬಿಗ್‌ಬಾಸ್ ಮನೆಯ ವಿನ್ಯಾಸ ಭಿನ್ನವಾಗಿತ್ತು ಹಾಗೂ ಟಿಶ್ಯೂ ಬದಲು ನೀರಿದ್ದರಿಂದ ಗೊಂದಲ ಉಂಟಾಗಿತ್ತು ಎಂದಿದ್ದಾರೆ. ಈ ಸ್ಪಷ್ಟನೆ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಲರ್ಸ್ ಕನ್ನಡ ವಾಹಿನಿ (Colors Kannada channel)ಯಲ್ಲಿ ಪ್ರಸಾರವಾಗ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11)ರ ವಿನ್ನರ್ ಆಗಿ ಹನುಮಂತು ಜನಮನ ಗೆದ್ದಿದ್ದಾರೆ. 5 ಕೋಟಿಗೂ ಹೆಚ್ಚು ಮತಗಳನ್ನು ಪಡೆದು ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿರುವ ಹನುಮಂತು ಮುಗ್ದ ಅಲ್ಲ ಎನ್ನುವ ಮಾತುಗಳು ಆಗಾಗ ಕೇಳಿ ಬರ್ತಾನೇ ಇತ್ತು. ಜನ ಏನೇ ಹೇಳಿದ್ರೂ ಬುದ್ಧಿವಂತಿಕೆಯಿಂದ ಆಟವಾಡಿ ಹನುಮಂತು (Hanumantu) ಕಪ್ ಎತ್ತಿ ಹಿಡಿದಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ ಮೊದಲ ದಿನ ಹನುಮಂತು ಟಾಯ್ಲೆಟ್ ಬಗ್ಗೆ ಧನರಾಜ್ ಅವರಿಗೆ ಪ್ರಶ್ನೆ ಇಟ್ಟಿದ್ದರು. ಟಾಯ್ಲೆಟ್ ಬಳಸೋದು ಹೇಗೆ ಎಂದು ಕೇಳಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ವಿಡಿಯೋ ನೋಡಿದ ವೀಕ್ಷಕರು, ಹನುಮಂತು ಸುಮ್ಮನೆ ನಾಟಕವಾಡ್ತಿದ್ದಾರೆ, ಅವರಿಗೆ ಎಲ್ಲವೂ ತಿಳಿದಿದೆ, ವಿದೇಶಕ್ಕೆ ಪ್ರೋಗ್ರಾಂ ನೀಡಲು ಆಗಾಗ ಹೋಗುವ ಹನುಮಂತುಗೆ ವೆಸ್ಟರ್ನ್ ಟಾಯ್ಲೆಟ್ (Western Toilet) ಯೂಸ್ ಮಾಡೋದು ಗೊತ್ತಿರೋದಿಲ್ವ ಅಂತ ಪ್ರಶ್ನೆ ಕೇಳಿದ್ದರು. ಅದಕ್ಕೀಗ ಹನುಮಂತು ಉತ್ತರ ನೀಡಿದ್ದಾರೆ.

ಪ್ರೆಸ್ ಮೀಟ್ (Press Meet) ನಲ್ಲಿ ಹನುಮಂತುಗೆ ಟಾಯ್ಲೆಟ್ ಬಗ್ಗೆ ವರದಿಗಾರರು ಪ್ರಶ್ನೆ ಮಾಡಿದ್ದಾರೆ. ನಿಮಗೆ ಟಾಯ್ಲೆಟ್ ಯೂಸ್ ಮಾಡೋಕೆ ಬರೋದಿಲ್ಲ ಎಂಬ ವಿಷ್ಯ ಸಾಕಷ್ಟು ಟ್ರೋಲ್ ಆಗಿತ್ತು, ಅದ್ರ ಬಗ್ಗೆ ನೀವೇನು ಹೇಳ್ತೀರಿ ಎಂದು ವರದಿಗಾರರು ಕೇಳ್ತಾರೆ. ಅದಕ್ಕೆ ಹನುಮಂತು ನೀಡಿದ ಉತ್ತರ ಮಜವಾಗಿದೆ.

ಈ ಸರಳತೆಯಿಂದ Bigg Boss ಹನುಮಂತಗೆ ಭಾರೀ ಲಾಭ ಆಯ್ತು, ಲಕ್ಷ ಲಕ್ಷ ಹಣ ಉಳೀತು!

ನಾನು ಟಾಯ್ಲೆಟ್ ಬಗ್ಗೆ ಪ್ರಶ್ನೆ ಕೇಳಿದ್ದು ನಿಜ. ನಾನು ವೆಸ್ಟರ್ನ್ ಟಾಯ್ಲೆಟ್ ನಲ್ಲಿ ಮೇಲೆ ಹತ್ತಿ ಕುಳಿತುಕೊಳ್ತಿದ್ದೆ. ಆದ್ರೆ ಬಿಗ್ ಬಾಸ್ ಮನೆಯಲ್ಲಿರುವ ಟಾಯ್ಲೆಟ್ ಸ್ವಲ್ಪ ಭಿನ್ನವಾಗಿತ್ತು. ಖುರ್ಚಿ ಮೇಲೆ ಕುಳಿತುಕೊಳ್ಳೋ ರೀತಿ ಇತ್ತು. ಅದಕ್ಕೆ ನಾನು ಕೇಳಿದ್ದೆ ಎನ್ನುತ್ತಾರೆ ಹನುಮಂತು. ಫಾರೆನ್ ಗೆ ನೀವು ಹೋಗಿದ್ರಿ, ಅಲ್ಲೂ ಇದೇ ರೀತಿ ಟಾಯ್ಲೆಟ್ ಇತ್ತಲ್ಲ ಅಂತ ವರದಿಗಾರರು ಕೇಳುವ ಮರು ಪ್ರಶ್ನೆಗೆ ಹನುಮಂತು ಸ್ಪಷ್ಟ ಉತ್ತರ ನೀಡಿದ್ದಾರೆ. ಫಾರೆನ್ ಗೆ ಹೋದಾಗ್ಲೂ ನಾನು ಮೇಲೆ ಕುಳಿತುಕೊಳ್ತಿದ್ದೆ. ಅಲ್ಲಿ ಹಾಳೆ ( ಪೇಪರ್) ಇತ್ತು. ಇಲ್ಲೂ ಪೇಪರ್ ಇರುತ್ತಾ ಎನ್ನುವ ಪ್ರಶ್ನೆ ನನ್ನನ್ನು ಕಾಡಿತ್ತು. ಇಲ್ಲಿ ಪೇಪರ್ ಇರಲಿಲ್ಲ, ನೀರಿತ್ತು ಎಂದು ಹನುಮಂತು ಹೇಳಿದ್ದಾರೆ.

ಹನುಮಂತು ಈ ವಿಡಿಯೋ ವೈರಲ್ ಆಗಿದೆ. ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಹನುಮಂತು ಬಳಿ ಯಾವುದೇ ಪ್ರಶ್ನೆ ಕೇಳುವಾಗ್ಲೂ ಸ್ವಲ್ಪ ಆಲೋಚನೆ ಮಾಡಿ ಕೇಳ್ಬೇಕು ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರಿಗೆ ಹನುಮಂತು ಉತ್ತರ ಇಷ್ಟವಾಗಿದೆ. ಹನುಮಂತು ನಾಟಕ ಮಾಡ್ತಾರೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ ಎಂದು ಕೆಲ ಬಳಕೆದಾರರು ಕಮೆಂಟ್ ಮಾಡಿದ್ರೆ ಇನ್ನು ಕೆಲವರು ಈಗ್ಲೂ ಹನುಮಂತು ನಾಟಕ ಮಾಡ್ತಿದ್ದಾರೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಹನುಮಂತು ಟಾಯ್ಲೆಟ್ ಗೊಂದಲಕ್ಕೆ ಈಗ ಉತ್ತರ ಸಿಕ್ಕಿದೆ. 

ಹನುಮಂತುಗೆ 3 ಸಲ ಬಿಗ್ ಬಾಸ್ ಆಫರ್‌ ಬಂದಿತ್ತು, 5 ಕೋಟಿ ವೋಟ್‌ ಹಾಕಿರೋದು

ಬಿಗ್ ಬಾಸ್ ವಿನ್ ಆಗಿರುವ ಹನುಮಂತು ಪ್ರೆಸ್ ಮೀಟ್ ನಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಸದ್ಯ ಹನುಮಂತು ಮದುವೆ ಮೇಲೆ ಎಲ್ಲರ ಕಣ್ಣಿದೆ. ಕಿಚ್ಚ ಸುದೀಪ್ ಕೂಡ, ಹನುಮಂತು ತಂದೆ- ತಾಯಿ ಬಳಿ ಮದುವೆ ಬಗ್ಗೆ ಮಾತನಾಡಿದ್ದಾರೆ. ಕಪ್ ಹಿಡಿದಿರುವ ಹನುಮಂತು ಹುಡುಗಿ ಕೈ ಯಾವಾಗ ಹಿಡಿತಾರೆ ಕಾದು ನೋಡ್ಬೇಕಿದೆ. 

View post on Instagram