ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋನಲ್ಲಿ ಈ ಸೀಸನ್‌ನ ಕೊನೆಯ ಪಂಚಾಯಿತಿ ನಡೆಸಲಾಗುತ್ತಿದೆ. ʼಸಂಡೇ ವಿಥ್‌ ಸುದೀಪʼ ಶೋ ಎಪಿಸೋಡ್‌ನ ಪ್ರೋಮೋ ರಿಲೀಸ್‌ ಆಗಿದೆ. ಯಾರು ಫ್ಲಾಪ್‌ ಎಂಬ ಪ್ರಶ್ನೆ ಕೇಳಲಾಗಿತ್ತು. ಆಗ ಹನುಮಂತ ಮಾತನಾಡಿದ್ದಾರೆ. ಆ ವೇಳೆ ಕಿಚ್ಚ ಸುದೀಪ್‌ ಎದುರೇ ಹನುಮಂತ ಹಾಗೂ ರಜತ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಹನುಮಂತನ ಮಾತಿನ ಚಾಕಚಕ್ಯತೆ ನೋಡಿ ಕಿಚ್ಚ ಸುದೀಪ್‌ ಅವರೇ ಗಹಗಹಿಸಿ ನಕ್ಕಿದ್ದಾರೆ.

ಹನುಮಂತ, ರಜತ್‌ ನಡುವಿನ ಸಂಭಾಷಣೆ ಹೀಗಿದೆ…!
ಹನುಮಂತ: ರಜತ್‌ ಅವರು ಸಿಲ್ಲಿ ಕಾರಣಗಳನ್ನು ಕೊಡುತ್ತಾರೆ, ಅವರಿಗೆ ಕಾರಣಗಳನ್ನು ಕೊಡೋಕೆ ಬರೋದಿಲ್ಲ.
ರಜತ್:‌ ಮಾವ ಮಾವ ಅಂತ ಹೇಳಿ ಮಾವನಿಗೆ ಚೂರಿ ಚುಚ್ಚಿದೆ ನೀನು.ಮಾವ ಹೋದ್ಮೇಲೆ ನೇತಾಡುಕೊಂಡಿದೀಯಾ. ಈ ಥರ ಡವ್‌ ನಾವು ನೋಡಿದೀವಿ. ನೀನು ಸ್ಟ್ರಾಂಗ್‌ ಕಾರಣ ಕೊಟ್ಟಿದ್ದು ನಾವು ಯಾವಾಗಲೂ ನೋಡಿಲ್ಲ.
ಹನುಮಂತ: ಸಿಲ್ಲಿ ರೀಸನ್‌ ಅರ್ಥ ಮಾಡಿಕೋ, ಆಮೇಲೆ ಸ್ಟ್ರಾಂಗ್‌ ರೀಸನ್‌ ಅರ್ಥ ಮಾಡಿಕೊಳ್ಳಬಹುದು
ರಜತ್:‌ ಅಲ್ಲ
ಹನುಮಂತ: ಮಾತು ಕಲಿತೀನಿ ಅಂತ ನೀನು ಮಾತಾಡಬ್ಯಾಡ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಸ್ತು ಅನ್ನೋದು ಮರಿಬ್ಯಾಡ.

ಬಿಗ್ ಬಾಸ್ ಮನೆಯಿಂದ ಧನರಾಜ್ ಆಚಾರ್ ಔಟ್; ಹೀಗಿದೆ ನೋಡಿ ನೆಟ್ಟಿಗರ ಲೆಕ್ಕಾಚಾರ!

ಹನುಮಂತ ದಡ್ಡ ಅಲ್ಲ…! 
ಹನುಮಂತ ಅವರು ಕಳೆದ ವಾರ ಕಿಚ್ಚ ಸುದೀಪ್‌ ಮುಂದೆ “ನಾನು ಆಟ ಶುರು ಮಾಡಿ ಎಷ್ಟೋ ದಿನ ಆಯ್ತು. ಅದು ಈಗ ಇವರಿಗೆ ಅರ್ಥ ಆಗಿದೆ” ಎಂದು ಹೇಳಿದ್ದರು. ಈ ಮಾತು ಕೇಳಿ ಎಲ್ಲರೂ ಹುಬ್ಬೇರಿಸಿದ್ದರು. “ಹನುಮಂತ ಈಗಾಗಲೇ ಕೆಲ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾನೆ, ಏನೂ ಗೊತ್ತಿಲ್ಲದೆ ಅವನು ಇಲ್ಲಿಗೆ ಬಂದಿಲ್ಲ. ಮುಗ್ಧನ ಥರ ಕಾಣುವ ಅವನು ದಡ್ಡ ಅಲ್ಲ, ಬುದ್ಧಿವಂತ” ಎಂದು ತ್ರಿವಿಕ್ರಮ್‌ ಅವರು ಸಾಕಷ್ಟು ಬಾರಿ ಹೇಳಿದ್ದಾರೆ.

ಮಾತನಾಡಲು ಹೆದರುತ್ತಿದ್ದ ಹನುಮಂತ ಈಗ ಸುದೀಪ್‌ ಮುಂದೆ, ಗಟ್ಟಿ ಧ್ವನಿಯಿಂದ ರಜತ್‌ಗೆ ತಿರುಗೇಟು ಕೊಡ್ತಿರೋದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇನ್ನು ಹನುಮಂತನ ಮಾತಿನಿಂದ ಸಾಕಷ್ಟು ಬಾರಿ ಅಚ್ಚರಿಗೊಂಡು, ನಕ್ಕಿದ್ದ ಸುದೀಪ್‌ ಈ ಬಾರಿ ಹನುಮಂತನ ಮಾತು ಕೇಳಿ ಇನ್ನಷ್ಟು ಅಚ್ಚರಿಗೊಂಡಿದ್ದಾರೆ. 

ಕಿರಿಕ್​ ಕೀರ್ತಿ ವಿರುದ್ಧ ಚೈತ್ರಾ ಕುಂದಾಪುರ ಪೊಲೀಸ್​ ಕಂಪ್ಲೇಂಟ್​! ಕಣ್ಣೀರಿಟ್ಟು ಎಫ್​ಬಿ ಪೋಸ್ಟ್​ ಡಿಲೀಟ್: ನಡೆದದ್ದೇನು?

ಆಟ ಶುರು ಮಾಡಿದ ಹನುಮಂತ! 
ಹನುಮಂತ ಮುಗ್ಧ ಅಂತ ಧನರಾಜ್‌ ಮಾತ್ರ ಹೇಳಿದ್ದರು. ಇನ್ನು ಗೌತಮಿ ಜಾಧವ್‌ ಕೂಡ “ಹನುಮಂತ ಯಾವಾಗ ಏನು ಹೇಳ್ತಾನೆ, ಏನು ನಿರ್ಧಾರ ತಗೊಳ್ತಾನೆ ಅಂತ ಗೊತ್ತಾಗೋದಿಲ್ಲ” ಎಂದು ಹೇಳಿದ್ದರು. ಒಟ್ಟಿನಲ್ಲಿ ಹನುಮಂತನ ಆಟ ಅನೇಕರಿಗೆ ಇಷ್ಟ ಆಗಿದೆ. 

ಚೈತ್ರಾ ಕುಂದಾಪುರ ಭಾವಿ ಪತಿಯ ಫೋಟೋ ರಿವೀಲ್​! ಸಿಲ್ಕಿ ಹೇರ್​, ಗೋಲು ಮುಖ, ದಪ್ಪ ಮೀಸೆ...

ಭರ್ಜರಿಯಾಗಿ ನಡೆಯುತ್ತಿರೋ ರಜತ್‌ ಆಟ
ಇನ್ನೊಂದು ಕಡೆ ಈ ಸೀಸನ್‌ ಶುರುವಾಗಿ ಐವತ್ತು ದಿನಗಳ ಬಳಿಕ ರಜತ್‌ ʼಬಿಗ್‌ ಬಾಸ್ʼ‌ ಮನೆಗೆ ಆಗಮಿಸಿದ್ದು, ಸಖತ್‌ ಆಗಿಯೇ ಆಟ ಆಡಿದ್ದರು. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತ, ಪಂಚಿಂಗ್‌ ಡೈಲಾಗ್‌ ಹೊಡೆದು, ಡ್ಯಾನ್ಸ್‌ ಮಾಡುತ್ತ, ಹಾಡು ಹಾಡುತ್ತ ಎಲ್ಲ ವಿಚಾರಲ್ಲಿಯೂ ರಜತ್‌ ಅವರು ರಂಜಿಸಿದ್ದರು.

ಈಗಾಗಲೇ ಗೌತಮಿ ಜಾಧವ್‌ ಎಲಿಮಿನೇಶನ್‌ ಆಗಿದೆ, ಇಂದು ಧನರಾಜ್‌ ಆಚಾರ್‌ ಅವರ ಎಲಿಮಿನೇಶನ್‌ ಆಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಜನವರಿ 25, 26 ರಂದು ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ ಎನ್ನಲಾಗಿದೆ. ಈಗಾಗಲೇ ಮೋಕ್ಷಿತಾ ಪೈ, ತ್ರಿವಿಕ್ರಮ್‌, ಹನುಮಂತ ಅವರು ಫಿನಾಲೆ ತಲುಪಿದ್ದಾರೆ. ಈ ಬಾರಿ ಯಾರು ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಟ್ರೋಫಿ ಪಡೆಯಲಿದ್ದಾರೆ? ಯಾರು ರನ್ನರ್‌ ಅಪ್‌ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.