ಬಿಗ್‌ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಮತ್ತು ಚೈತ್ರಾ ಕುಂದಾಪುರ ನಡುವೆ ೨೦೧೬ರಲ್ಲಿ ಮೆಟ್ರೋದ ಕನ್ನಡ ಫಲಕಗಳ ವಿಚಾರದಲ್ಲಿ ವಾಗ್ವಾದ ನಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ಕೀರ್ತಿಯ ಹೆಸರು ಬಳಸಿ ಚೈತ್ರಾ ಪೋಸ್ಟ್ ಹಾಕಿದ್ದಕ್ಕೆ ಕಿರಿಕ್ ಕೀರ್ತಿ ಕೋಪಗೊಂಡು ಚೈತ್ರಾ ಕೆಲಸ ಮಾಡುತ್ತಿದ್ದ ಕಂಪನಿಗೆ ದೂರು ನೀಡಿದ್ದರು. ಪ್ರತಿಯಾಗಿ ಚೈತ್ರಾ ಕೀರ್ತಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಈಗ ಇಬ್ಬರೂ ಆ ಘಟನೆಯನ್ನು ಮರೆತು ಸ್ನೇಹ ಮುಂದುವರೆಸಿದ್ದಾರೆ.
ಕಿರಿಕ್ ಕೀರ್ತಿ ಮತ್ತು ಚೈತ್ರಾ ಕುಂದಾಪುರ ಇಬ್ಬರೂ ಬಿಗ್‌ಬಾಸ್ ಖ್ಯಾತಿಯವರು. ಬಿಗ್‌ಬಾಸ್ 4ನೇ ಸೀಸನ್ನಲ್ಲಿ ಕಿರಿಕ್ ಕೀರ್ತಿ ರನ್ನರ್ ಅಪ್ ಆಗಿ ಬಂದಾಗ ಸಹಜವಾಗಿ ಅವರ ಹವಾ ಜೋರಾಗಿತ್ತು. ಚೈತ್ರಾ ಕುಂದಾಪುರ ಅವರು ಆ ಸಮಯದಲ್ಲಿ ಫೈರ್ ಬ್ರ್ಯಾಂಡ್ ಭಾಷಣಗಾರ್ತಿ ಎಂದು ಇಷ್ಟೆಲ್ಲಾ ಫೇಮಸ್ ಆಗಿರಲಿಲ್ಲ. ಒಂದಷ್ಟು ಮಂದಿಗೆ ಚೈತ್ರಾ ಗೊತ್ತಿದ್ದರೇ ವಿನಾ ಈ ಪರಿಯಲ್ಲಿ ಅವರು ಕಾಂಟ್ರವರ್ಸಿ ಕ್ರಿಯೇಟ್ ಮಾಡಿರಲಿಲ್ಲ. ಆದರೆ ಭಾಷಣ, ಕನ್ನಡದ ಪರ ಹೋರಾಟ... ಹೀಗೆ ಗುರುತಿಸಿಕೊಂಡಿದ್ದರು ಚೈತ್ರಾ. ಆ ಸಮಯದಲ್ಲಿ ಅಂದರೆ 2016ರ ಸುಮಾರಿಗೆ ಚೈತ್ರಾ ಕುಂದಾಪುರ ಮತ್ತು ಕಿರಿಕ್ ಕೀರ್ತಿ ವಿರುದ್ಧ ಭಾರಿ ಗಲಾಟೆ ನಡೆದಿತ್ತು. ಅದು ಎಷ್ಟರ ಮಟ್ಟಿಗೆ ಎಂದರೆ ಚೈತ್ರಾ ಅವರು, ಕೀರ್ತಿ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರು.
ಹೌದು. ಇದೀಗ ಈ ವಿಷಯವನ್ನು ಖುದ್ದು ಈ ಇಬ್ಬರೂ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಕಿರಿಕ್ ಕೀರ್ತಿ ಮತ್ತು ನಿರಂಜನ್ ದೇಶ್ಪಾಂಡೆ ಅವರ ಯೂಟ್ಯೂಬ್ ಚಾನೆಲ್ ನಿರಿಕ್ನಲ್ಲಿ ಈ ವಿಷಯದ ಗುಟ್ಟನ್ನು ರಟ್ಟು ಮಾಡಿದ್ದಾರೆ ಇಬ್ಬರೂ. ಮೆಟ್ರೋದಲ್ಲಿ ಕನ್ನಡದ ಬೋರ್ಡ್ ಹಾಕುವ ವಿಷಯದಲ್ಲಿ ಗಲಾಟೆಯಾಗಿತ್ತು ಎಂದಿದ್ದಾರೆ. ಆ ಸಮಯದಲ್ಲಿ ನಡೆದ ಗಲಾಟೆ ವೇಳೆ ಕೀರ್ತಿ ಅವರ ಹೆಸ್ರು ಹೇಳಿಕೊಂಡು ಚೈತ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತಪಡಿಸಿ ಹಾಕಿದ್ದ ಪೋಸ್ಟ್ನಲ್ಲಿ ಇಬ್ಬರ ನಡುವೆ ಕಿಡಿ ಹೊತ್ತಿಕೊಂಡಿತ್ತು.
ಚೈತ್ರಾ ಕುಂದಾಪುರ ಭಾವಿ ಪತಿಯ ಫೋಟೋ ರಿವೀಲ್! ಸಿಲ್ಕಿ ಹೇರ್, ಗೋಲು ಮುಖ, ದಪ್ಪ ಮೀಸೆ...
ಈ ಬಗ್ಗೆ ತಿಳಿಸಿದ ಕೀರ್ತಿ ಅವರು, 'ಆಗ ತಾನೇ ಬಿಗ್ಬಾಸ್ನಿಂದ ಬಂದಿದ್ದೆ. ಹವಾ ಗೊತ್ತಲ್ಲ, ಜೋರಾಗಿಯೇ ಇತ್ತು. ಈಗ ಬಿಗ್ಬಾಸ್ನಿಂದ ಚೈತ್ರಾಕ್ಕ ಹೊರಕ್ಕೆ ಬಂದಾಗ ಹೇಗೆ ಹವಾ ಇದ್ಯೋ ಆಗ ನನ್ನ ಹವಾ ಇತ್ತು. ಚೈತ್ರಾ ಇಷ್ಟೊಂದು ಜನಪ್ರಿಯತೆ ಪಡೆದಿರಲಿಲ್ಲ. ಆದ್ದರಿಂದ ಆಕೆ ನನ್ನ ವಿರುದ್ಧ, ನನ್ನ ಹೆಸರನ್ನು ಬಳಸಿ ಪೋಸ್ಟ್ ಮಾಡಿದ್ದರಿಂದ ಕಿಡಿ ಹೊತ್ತುಕೊಂಡು ಉರಿದಿತ್ತು. ಸುಮಾರು ಎರಡು ಗಂಟೆಗಳ ಕಾಲ ಫೋನ್ನಲ್ಲಿ ಒಬ್ಬರನ್ನೊಬ್ಬರು ನಿಂದಿಸಿಕೊಂಡಿದ್ದೇವೆ ಎಂದರೆ ಈಗ ನಂಬಲು ಆಗಲ್ಲ ಎಂದಿದ್ದಾರೆ. ಅದಕ್ಕೆ ಚೈತ್ರಾ, ನಾನಾಗ ಚಾನೆಲ್ ಒಂದರಲ್ಲಿ ವರ್ಕ್ ಮಾಡ್ತಿದ್ದೆ. ಕೀರ್ತಿ ಸುಮ್ಮನಿರದೇ ನನ್ನ ಕಂಪೆನಿ ಓನರ್ಗೆ ಕಾಲ್ ಮಾಡಿ, ನನ್ನ ವಿರುದ್ಧ ಹೇಳಿದ್ರು. ಹೇಳಬಾರದ ಮಾತನ್ನೆಲ್ಲಾ ಹೇಳಿದ್ರು. ನಾನು ಸುಮ್ಮನೇ ಇರೋಕೆ ಆಗತ್ತಾ? ಇಲ್ಲಿಯವರೆಗೆ ವಿಷಯ ತಂದರು ಎಂದರೆ ನಾನು ಹೇಗೆ ಸುಮ್ಮನೇ ಕುಳಿತುಕೊಳ್ಳೋದು? ಅದಕ್ಕಾಗಿಯೇ ಅವ್ರು ನನಗೆ ಟಾರ್ಚರ್ ಕೊಡ್ತಾರೆ ಅಂತ ಪೊಲೀಸರಲ್ಲಿ ಕಂಪ್ಲೇಂಟ್ ಕೊಟ್ಟೆ ಎಂದಿದ್ದಾರೆ. ಅದಾಗಲೇ ಅವರು ಸೋಷಿಯಲ್ ಮೀಡಿಯಾದಲ್ಲಿ ನನ್ನ ಹೆಸರಿನಲ್ಲಿ ಟ್ರೋಲ್ ಶುರು ಮಾಡಿದ್ದರು. ನನ್ನ ವಿರುದ್ಧ ಕೆಟ್ಟಕೆಟ್ಟದ್ದಾಗಿ ಬರೆದಿದ್ದರು. ಅದಕ್ಕಾಗಿ ಕಂಪ್ಲೇಟ್ ಕೊಟ್ಟೆ ಎಂದಿದ್ದಾರೆ.
ಆಗ ಕೀರ್ತಿ, ಅಯ್ಯಪ್ಪಾ ಹೌದು. ಅದೊಂದು ದೊಡ್ಡ ವಿಷಯ. ಅಷ್ಟಾದ ಮೇಲೆ ಈ ಯಮ್ಮನ ಉಸಾಬರಿಯೇ ಸಾಕು ಎಂದುಕೊಂಡು ಕಣ್ಣೀರಿಟ್ಟು ಪೋಸ್ಟ್ ಡಿಲೀಟ್ ಮಾಡಿಬಿಟ್ಟೆ. ಅಲ್ಲಿಂದ ಇವರ ಸಹವಾಸವೇ ಸಾಕು ಎಂದು ದೊಡ್ಡ ನಮಸ್ಕಾರ ಹಾಕಿದೆ. ಅಲ್ಲಿಂದ ಇಲ್ಲಿಯವರೆಗೂ ಅವರ ಸುದ್ದಿಗೆ ನಾನು ಹೋಗಿಲ್ಲ, ನನ್ನ ಸುದ್ದಿಗೆ ಅವರು ಬರಲಿಲ್ಲ. ಏಳೆಂಟು ವರ್ಷ ಸಹವಾಸವೇ ಬೇಡ ಎಂದು ಇದ್ದೆ. ಈಗ ಇಬ್ಬರೂ ಎಲ್ಲವನ್ನೂ ಮರೆತಿದ್ದೇವೆ. ಅದೆಲ್ಲಾ ಕೆಟ್ಟ ಘಟನೆ ಎಂದು ಬಿಟ್ಟುಬಿಟ್ಟಿದ್ದೇವೆ ಎಂದಿದ್ದಾರೆ ಇಬ್ಬರೂ.
ಎಲಿಮಿನೇಟಾಗಿ ಹೊರಬರ್ತಿದ್ದಂತೆಯೇ ನೇರಪ್ರಸಾರದಲ್ಲಿ ಚೈತ್ರಾ ಕುಂದಾಪುರ ಬಿಗ್‌ಬಾಸ್ ಬಗ್ಗೆ ಹೇಳಿದ್ದೇನು?

