ಬಿಗ್‌ಬಾಸ್‌ನಲ್ಲಿ ಭವ್ಯಾ-ತ್ರಿವಿಕ್ರಮ್‌ ಪ್ರೇಮ ನಿವೇದನೆಯ ವಿಡಿಯೋ ವೈರಲ್‌ ಆಗಿದ್ದು, ಇಬ್ಬರೂ ಸ್ನೇಹಿತರೆಂದು ಸ್ಪಷ್ಟನೆ ನೀಡಿದ್ದಾರೆ. ರಜತ್‌ ಇವರಿಬ್ಬರ ಜಗಳದ ಬಗ್ಗೆ ತಮಾಷೆ ಮಾಡಿದ್ದಾರೆ. ಫಿನಾಲೆಗೆ ಭವ್ಯಾ, ಮೋಕ್ಷಿತಾ, ತ್ರಿವಿಕ್ರಮ್, ರಜತ್, ಹನುಮಂತ ಉಳಿದಿದ್ದಾರೆ. ಸುದೀಪ್ ನಿರೂಪಿಸುವ ಕೊನೆಯ ಸೀಸನ್ ಇದಾಗಿದೆ.

ʼಬಿಗ್‌ ಬಾಸ್ ಕನ್ನಡ ಸೀಸನ್‌ 11ʼ‌ ಮನೆಯಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್‌ ಮಧ್ಯೆ ಪ್ರೇಮ ನಿವೇದನೆ ಆಯ್ತಾ ಎನ್ನುವ ಪ್ರಶ್ನೆ ಮತ್ತೆ ಮುನ್ನಲೆಗೆ ಬಂದಿದೆ. ʼಸಂಡೇ ವಿಥ ಸುದೀಪʼ ಶೋನಲ್ಲಿ “ನಿಮ್ಮ ಗಮನಕ್ಕೆ ಬಾರದ ವಿಷಯವೊಂದು ಹೇಳಬೇಕಿದೆ, ವಿಡಿಯೋ ನೋಡಿ” ಎಂದು ಸುದೀಪ್‌ ಟ್ವಿಸ್ಟ್‌ ಕೊಟ್ಟಿದ್ದರು. ಆಗಲೇ ಈ ಬಗ್ಗೆ ಮತ್ತೆ ಚರ್ಚೆ ಆಗಿತ್ತು. 

ಆ ವಿಡಿಯೋದಲ್ಲಿ ಏನಿತ್ತು?
ತ್ರಿವಿಕ್ರಮ್ ಅವರು ಭವ್ಯಾ ಗೌಡಗೆ ಪ್ರೇಮ ನಿವೇದನೆ ಮಾಡಿದ್ದಾರೆ ಎಂಬ ಸಂಭಾಷಣೆ ಅದರಲ್ಲಿತ್ತು. “ತ್ರಿವಿಕ್ರಮ್‌ ನಿನಗೆ ಪ್ರಪೋಸ್‌ ಮಾಡಿದ, ಏನು ಹೇಳಿದೆ ಅಂತ ಗೋಲ್ಡ್‌ ಸುರೇಶ್‌ ಅವರು ಪ್ರಶ್ನೆ ಮಾಡಿದ್ದಾರೆ. ಆಗ ಭವ್ಯಾ ಗೌಡ ಏನು ಪ್ರಪೋಸ್”‌ ಎಂದಿದ್ದಾರೆ. ಆ ನಂತರ ಧನರಾಜ್‌ ಅವರು “ಈ ವಿಷಯ ನಮಗೆ ಗೊತ್ತೇ ಇಲ್ಲ”‌ ಎಂದು ಹೇಳಿದ್ದಾರೆ. ಆಗ ಭವ್ಯಾ ಗೌಡ ಅವರು “ಇದೆಲ್ಲ ಹೇಳೋಕೆ ಆಗತ್ತಾ?” ಎಂದಿದ್ದಾರೆ. ಈ ವಿಡಿಯೋ ಪ್ಲೇ ಆಗಿದೆ. ಈ ಬಗ್ಗೆ ಮತ್ತೆ ʼಸಂಡೇ ವಿಥ್‌ ಸುದೀಪʼ ಶೋನಲ್ಲಿ ಚರ್ಚೆ ನಡೆದಿದೆ. 

ಭವ್ಯಾನ ಉಳಿಸಲು, ಧನರಾಜ್ ಎಲಿಮಿನೇಟ್ ಮಾಡಿದ್ರಾ ಬಿಗ್ ಬಾಸ್... ವೀಕ್ಷಕರ ಆರೋಪ

ಭವ್ಯಾ ಗೌಡ ಏನಂದ್ರು?
ಕಿಚ್ಚ ಸುದೀಪ್ ಅವರು ಈ ಬಗ್ಗೆ ಪ್ರಶ್ನೆ ಮಾಡಿದಾಗ ಭವ್ಯಾ ಗೌಡ ಅವರು “ನನ್ನ, ತ್ರಿವಿಕ್ರಮ್‌ ಮಧ್ಯೆ ಅಂಥದ್ದು ಏನೂ ಇಲ್ಲ, ನಾವಿಬ್ಬರು ಒಳ್ಳೆಯ ಸ್ನೇಹಿತರು, ನಮ್ಮ ಮಧ್ಯೆ ಒಳ್ಳೆಯ ಸ್ನೇಹ, ಬಾಂಡಿಂಗ್‌ ಇದೆ ಅಷ್ಟೇ. ಈ ವಿಷಯ ಇಷ್ಟು ಸೀರಿಯಸ್‌ ಆಗತ್ತೆ ಅಂತ ಗೊತ್ತಿರಲಿಲ್ಲ. ಅವರು ಪ್ರಶ್ನೆ ಮಾಡಿದಾಗ ನಾನು ತಮಾಷೆ ಮಾಡಿದ ಅಷ್ಟೇ” ಎಂದು ಹೇಳಿದ್ದಾರೆ.

ತ್ರಿವಿಕ್ರಮ್‌ ಏನಂದ್ರು?
ತ್ರಿವಿಕ್ರಮ್‌ ಕೂಡ ಮಾತನಾಡಿ, “ನಾವಿಬ್ಬರು ಒಳ್ಳೆಯ ಸ್ನೇಹಿತರು ಅಷ್ಟೇ, ನಮ್ಮಿಬ್ಬರ ಮಧ್ಯೆ ಲವ್‌ ಇಲ್ಲ” ಎಂದು ಹೇಳಿದ್ದಾರೆ.

ಬಿಗ್ ಬಾಸ್ ನಿಂದ ಧನ್‌ರಾಜ್‌ ಎಲಿಮಿನೇಟ್‌ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಮಾಜಿ ಸ್ಪರ್ಧಿ ಕಿರಿಕ್‌ ಕೀರ್ತಿ!

ರಜತ್‌ ಏನಂದ್ರು?
ಇನ್ನೊಂದು ಕಡೆ ಭವ್ಯಾ ಗೌಡ, ತ್ರಿವಿಕ್ರಮ್‌ ಜಗಳದ ಬಗ್ಗೆ ರಜತ್‌ ಕೂಡ ಮಾತನಾಡಿದ್ದಾರೆ. “ತ್ರಿವಿಕ್ರಮ್‌ ಸಿಕ್ರೇಟ್‌ ಮಾಡ್ತಾನೆ ಅಂತ ಗೊತ್ತಿತ್ತು, ಆದರೆ ಪ್ರಪೋಸ್‌ ಮಾಡಿದ ವಿಷಯವನ್ನು ಹೇಳೇ ಇಲ್ಲ, ಇಷ್ಟೊಂದು ಸಿಕ್ರೇಟ್‌ ಮಾಡ್ತಾನೆ ಅಂತ ಗೊತ್ತಿರಲಿಲ್ಲ” ಎಂದು ರಜತ್‌ ಕಾಮಿಡಿ ಮಾಡಿದ್ದಾರೆ. ಭವ್ಯಾ ಗೌಡ, ತ್ರಿವಿಕ್ರಮ್‌ ಜಗಳ ಆಡುವಾಗೆಲ್ಲ ಪಕ್ಕದಲ್ಲೇ ರಜತ್‌ ಇರುವ ವಿಡಿಯೋವನ್ನು ತಮಾಷೆಯಾಗಿ ಎಡಿಟ್‌ ಮಾಡಲಾಗಿತ್ತು. ಇದನ್ನು ʼಸಂಡೇ ವಿಥ್‌ ಸುದೀಪʼ ಶೋನಲ್ಲಿ ಪ್ಲೇ ಮಾಡಿದ ನಂತರದಲ್ಲಿ ರಜತ್‌ ಅವರು “ಇವರಿಬ್ಬರು ಯಾವಾಗಲೂ ಜಗಳ ಆಡುತ್ತಿರುತ್ತಾರೆ. ತ್ರಿವಿಕ್ರಮ್‌ ಬಳಿ ಸುಮ್ನಿರು ಅಂದ್ಮೇಲೆ ಸುಮ್ಮನೆ ಇರಬಹುದು, ಆದರೆ ಭವ್ಯಾ ಸುಮ್ಮನೆ ಇರೋದಿಲ್ಲ‌, ಜಗಳ ತೆಗೆಯುತ್ತಾಳೆ” ಅಂತ ಹೇಳಿದ್ದಾರೆ.

ಜನವರಿ 25, 26 ರಂದು ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋ ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಆದರೆ ಸುದೀಪ್‌ ಅವರು ಇದು ಈ ಸೀಸನ್‌ನ ಕೊನೆಯ ಪಂಚಾಯಿತಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಸುದೀಪ್‌ ಅವರು ನಿರೂಪಣೆ ಮಾಡುತ್ತಿರುವ ಕೊನೆಯ ಸೀಸನ್‌ ಇದಾಗಿದೆ. ಇನ್ನು ಗೌತಮಿ ಜಾಧವ್‌, ಧನರಾಜ್‌ ಎಲಿಮಿನೇಟ್‌ ಆಗಿದ್ದಾರೆ. ಭವ್ಯಾ ಗೌಡ, ಮೋಕ್ಷಿತಾ ಪೈ, ತ್ರಿವಿಕ್ರಮ್‌, ರಜತ್‌, ಹನುಮಂತ ಮಧ್ಯೆ ಯಾರು ಟ್ರೋಫಿ ಗೆಲ್ಲುತ್ತಾರೆ? ಯಾರು ರನ್ನರ್‌ ಅಪ್‌ ಆಗ್ತಾರೆ ಎಂದು ಕಾದು ನೋಡಬೇಕಿದೆ. ಏನಂತೀರಾ? ಅಭಿಪ್ರಾಯ ತಿಳಿಸಿ..