BBK10 ಮನೆ: ರಣಶಕ್ತಿ ತಂಡಕ್ಕೆ 'ಅವಳ ನೆರಳು' ಹೆಸರಿಟ್ಟ ತುಕಾಲಿ ಸಂತು; ಹೂ ಅಂದ್ರಾ ಊಹೂ ಅಂದ್ರಾ ಕಾರ್ತಿಕ್?
ಸುದೀಪ್ ಪ್ರಶ್ನೆಗೆ ಕಾರ್ತಿಕ್ "ಇಲ್ಲ ಹಾಗೇನೂ ಇಲ್ಲ, ನಾನು ನನ್ನ ಅಭಿಪ್ರಾಯದಂತೆ ಹಾಗೂ ಇಡೀ ಟೀಮ್ ಅಭಿಪ್ರಾಯದಂತೆ ಕೆಲಸ ಮಾಡುತ್ತೇನೆ. ಸಂಗೀತಾ ಹೇಳಿದಂತೆ ಕೆಲಸ ಮಾಡುವುದಿಲ್ಲ" ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ಸುದೀಪ್ ಬಳಿಕ ಒಂದು ಮಾತು ಹೇಳಿದ್ದಾರೆ. "ಇಲ್ಲಿ ಯಾರೂ ಯಾರನ್ನೂ ಸೇವ್ ಮಾಡಲು ಅಥವಾ ಮೆಚ್ಚಿಸಲು ಬಂದಿಲ್ಲ ಎಂಬುದನ್ನು ಮರೆಯಬೇಡಿ ಕಾರ್ತಿಕ್" ಎಂದಿದ್ದಾರೆ
ಬಿಗ್ ಬಾಸ್ ಮನೆಯಲ್ಲಿ ಏನು ನಡೆಯುತ್ತಿದೆ? ಯಾರು ಯಾರಿಗೆ ಏನಾದ್ರು? ಅಂದ್ರೆ ಫ್ರಂಡ್, ಲವರ್ ಅಥವಾ ಶತ್ರು? ಅದಿರಲಿ, ಯಾರು ಯಾರಿಗೆ ಏನಂದ್ರು? ಈ ಎಲ್ಲ ಪ್ರಶ್ನೆಗಳೂ ಬಿಗ್ ಬಾಸ್ ಪ್ರೇಮಿಗಳ ಮನಸ್ಸನ್ನು ಕಾಡುತ್ತವೆ. ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಲ್ಲಿ, ಇತ್ತೀಚೆಗೆ ನಡೆದ ಒಂದು ತಮಾಷೆ ಸುದ್ದಿ, ನಿನ್ನೆ (21 ಅಕ್ಟೋಬರ್ 2023) ರಂದು ಕಿಚ್ಚ ಸುದೀಪ್ 'ಕಿಚ್ಚನ ಪಂಚಾಯಿತಿ'ಯಲ್ಲಿ ರಿವೀಲ್ ಆಗಿದೆ. ಅದೇನು ಅಂದ್ರೆ, ತುಕಾಲಿ ಸಂತು ರಣಶಕ್ತಿ ತಂಡಕ್ಕೆ 'ಅವಳ ನೆರಳು' ಎಂದು ಹೆಸರಿಟ್ಟಿದ್ದು, ಸುದೀಪ್ ಬಾಯಿಂದ ಈ ಸೀಕ್ರೆಟ್ ರಿವೀಲ್ ಆಗಿದ್ದು.
ಸುದೀಪ್ ಈ ಸಂಗತಿಯನ್ನು ಪ್ರಸ್ತಾಪಿಸಿದಾಗ ತುಕಾಲಿ ಸಂತು ಆ ಹೆಸರಿಟ್ಟ ಉದ್ದೇಶವನ್ನು ನೇರವಾಗಿ ಒಪ್ಪಿಕೊಳ್ಳಲಿಲ್ಲ. "ನಾನು ತವರಿಗೆ ಬಾ ತಂಗಿ, ಅಣ್ಣ ತಂಗಿ, ಹಾಲುಂಡ ತವರು ಈ ತರದ ಹೆಸರು ಇಡಬೇಕಿತ್ತು ರಣಶಕ್ತಿ ತಂಡಕ್ಕೆ ಎಂದು ಹೇಳುತ್ತಿದ್ದೆ. ಅದೇ ಸಮಯದಲ್ಲಿ 'ಅವಳ ನೆರಳು' ಎಂಬ ಹೆಸರು ಸಹ ನನ್ನ ಬಾಯಲ್ಲಿ ಬಂತು" ಎಂದು ಸುಳ್ಳು ಹೇಳಿದ್ದಾರೆ. ಆದರೆ, ತುಕಾಲಿ ಸಂತು ಯಾಕೆ ಹಾಗೆ ಹೇಳಿದ್ದು ಎಂದು ಸುದೀಪ್ ಸೇರಿದಂತೆ ಅಲ್ಲಿದ್ದ ಎಲ್ಲರಿಗೂ ಅರ್ಥವಾಗಿದೆ. ಆದರೆ ಅದನ್ನು ನೇರವಾಗಿ ಯಾರೊಬ್ಬರೂ ಹೇಳಲಿಲ್ಲ ಅಷ್ಟೇ.
ರಣಶಕ್ತಿ ತಂಡ 'ಅವಳ ನೆರಳು' ಆಗಿದೆಯಾ ಎಂಬ ಪ್ರಶ್ನೆ ಇಟ್ಟು ಸುದೀಪ್ ಈ ಬಗ್ಗೆ ಎಲ್ಲರ ಅಭಿಪ್ರಾಯವನ್ನು ಕೇಳಿದಾಗ, ತನಿಷಾ '10%' ನಿಜ ಅಷ್ಟೇ, ಎಂದಿದ್ದಾರೆ. ಆದರೆ, ಸಿರಿ, ಈಶಾನಿ ಸೇರಿದಂತೆ ಹಲವರು 'ಹೌದು, ಕಾರ್ತಿಕ್ ಅವರು ಸಂಗೀತಾ ನೆರಳಿನಲ್ಲಿ ಕೆಲಸ ಮಾಡುತ್ತಾರೆ' ಎಂದು ನೇರವಾಗಿಯೇ ಹೇಳಿದ್ದಾರೆ. ಕೆಲವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಆದರೆ, ಒಟ್ಟಾರೆ ಅಭಿಪ್ರಾಯ 'ಹೌದು, ಕಾರ್ತಿಕ್ ಸಂಗೀತಾಳ ನೆರಳು' ಎಂದು ಬಂದಾಗ, ಸುದೀಪ್ ಕಾರ್ತಿಕ್ ಅನಿಸಿಕೆ ಕೇಳಿದ್ದಾರೆ.
ಸುದೀಪ್ ಪ್ರಶ್ನೆಗೆ ಕಾರ್ತಿಕ್ "ಇಲ್ಲ ಹಾಗೇನೂ ಇಲ್ಲ, ನಾನು ನನ್ನ ಅಭಿಪ್ರಾಯದಂತೆ ಹಾಗೂ ಇಡೀ ಟೀಮ್ ಅಭಿಪ್ರಾಯದಂತೆ ಕೆಲಸ ಮಾಡುತ್ತೇನೆ. ಸಂಗೀತಾ ಹೇಳಿದಂತೆ ಕೆಲಸ ಮಾಡುವುದಿಲ್ಲ" ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ಸುದೀಪ್ ಬಳಿಕ ಒಂದು ಮಾತು ಹೇಳಿದ್ದಾರೆ. "ಇಲ್ಲಿ ಯಾರೂ ಯಾರನ್ನೂ ಸೇವ್ ಮಾಡಲು ಅಥವಾ ಮೆಚ್ಚಿಸಲು ಬಂದಿಲ್ಲ ಎಂಬುದನ್ನು ಮರೆಯಬೇಡಿ ಕಾರ್ತಿಕ್" ಎಂದಿದ್ದಾರೆ ಸುದೀಪ್. ಕಿಚ್ಚನ ಮಾತಿನ ಅರ್ಥ ಕಾರ್ತಿಕ್ ಸೇರಿದಂತೆ ಅಲ್ಲಿದ್ದ ಎಲ್ಲರಿಗೂ , ಹೊರಗಡೆ ನೋಡುತ್ತಿರುವ ವೀಕ್ಷಕರಿಗೂ ಅರ್ಥ ಆಗಿದೆ ಎನಿಸುತ್ತಿದೆ.
ಸೆಕೆಂಡ್ ವೀಕ್ 'ದೊಡ್ಮನೆ'ಯಿಂದ ಹೊರಬೀಳುವ ಸ್ಪರ್ಧಿ ಗೌರೀಶ್ ಅಕ್ಕಿ or ಭಾಗ್ಯಶ್ರೀ: ಹರಡಿದೆ ಭಾರೀ ಗಾಸಿಪ್!
ಒಟ್ಟಿನಲ್ಲಿ, ಬಿಗ್ ಮನೆಯಲ್ಲಿ ನಡೆಯುತ್ತಿರುವುದು ಹೊರಪ್ರಪಂಚದಲ್ಲಿ ನಡೆಯುತ್ತಿರುವುದೇ ಆಗಿದೆ. ಆದರೆ, ಅಲ್ಲಿ ಅದು ಇನ್ನೂ ಸ್ಟ್ರಾಂಗ್ ಆಗಿದೆ. ಏಕೆಂದರೆ, ಅಲ್ಲಿ ಎಲ್ಲರೂ ಆಡಲೆಂದು ಮತ್ತು ಆ ಮೂಲಕ ಗೆಲ್ಲಲೆಂದು ಬಂದಿದ್ದಾರೆ. ಆದ್ದರಿಂದ ಯಾರೂ ಯಾರನ್ನೂ ನಂಬುವಂತಿಲ್ಲ. ಈ ಮಾತನ್ನು ಮರೆತವರು ಆದಷ್ಟು ಬೇಗ ಮನೆಗೆ ಹೋಗುತ್ತಾರೆ ಎನ್ನಬಹುದು.
BBK10 ಮನೆ: ಆನೆಗೆ ಬಾಲ ಬಿಡಿಸಿ ಗೆದ್ದವರು ಯಾರು, ಸಂಗೀತಾಗೆ ಸಹಾಯ ಮಾಡಿದ ತನಿಷಾ-ಕಾರ್ತಿಕ್
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ನಡೆದ ಫನ್ ಗೇಮ್‌ನ ಸಖತ್ ಎಂಟರ್‍ಟೇನಿಂಗ್ ಗಳಿಗೆಗಳನ್ನು JioCinemaದ ಫನ್ ಫ್ರೈಡೇ ಸೆಗ್ಮೆಂಟ್‌ನಲ್ಲಿ ವೀಕ್ಷಿಸಬಹುದು (https://jiocinema.onelink.me/fRhd/p7s778vk). ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ವಾರಾಂತ್ಯದ ಎಪಿಸೋಡ್‌ಗಳನ್ನು 'Colors Kannada'ದಲ್ಲಿ ಶನಿವಾರ-ಭಾನುವಾರ ರಾತ್ರಿ 9.00 ಗಂಟೆಗೆ ವೀಕ್ಷಿಸಬಹುದು.