Asianet Suvarna News Asianet Suvarna News

ಬಿಗ್ ಬಾಸ್‌ನಿಂದ ಗೌರೀಶ್ ಅಕ್ಕಿ , ಭಾಗ್ಯಶ್ರೀ ಹೊರಕ್ಕೆ: ಎಪಿಸೋಡ್ ಪ್ರಸಾರಕ್ಕೂ ಮುನ್ನ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್

ಅಕ್ಟೋಬರ್ 8ಕ್ಕೆ ಶುರುವಾದ ಬಿಗ್ ಬಾಸ್ ಕನ್ನಡ ಸೀಸನ್ 10 ಈಗಾಗಲೇ ಎರಡನೇ ವಾರ ಮುಗಿಸಿದೆ. ನಿನ್ನೆ ವೀಕೆಂಡ್ ಕಿಚ್ಚನ ಪಂಚಾಯಿತಿ ಮುಗಿದಿದೆ. ಇಂದು 'ಸೂಪರ್ ಸಂಡೇ ವಿತ್ ಸುದೀಪ' ಪ್ರಸಾರವಾಗಲಿದ್ದು, ಅದರಲ್ಲಿ ಸೆಕೆಂಡ್ ಎಲಿಮಿನೇಶನ್ ನಡೆಯಲಿದೆ. ಈ ಮೂಲಕ ದೊಡ್ಮನೆಯಿಂದ ಒಬ್ಬರು ಹೊರಬರಲಿದ್ದಾರೆ. 

Bigg Boss Kannada season 10 elimination Bhagyashree or Gaurish Akki rumours srb
Author
First Published Oct 22, 2023, 12:59 PM IST

ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಿಂದ ಇಂದು (22 ಅಕ್ಟೋಬರ್ 2023) ರಂದು ಎರಡನೇ ಎಲಿಮಿನೇಶನ್ ಆಗಲಿದೆ. ಈ ವಾರ ಬಿಗ್‌ ಬಾಸ್ ಮನೆಯಿಂದ ಗೌರೀಶ್ ಅಕ್ಕಿ, ಭಾಗ್ಯಶ್ರೀ ಹೊರಬೀಳಲಿದ್ದಾರೆ ಎಂಬ ಸುದ್ದಿ  ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಹರಿದಾಡುತ್ತಿದೆ. ಈ ಬಗ್ಗೆ ಯಾರಲ್ಲೂ ಫುಲ್ ಕ್ಲಾರಿಟಿ ಇಲ್ಲ, ಆದರೆ ಹೆಚ್ಚಿನ ಜನರು ಅವರಿಬ್ಬರಲ್ಲಿಯೇ ಒಬ್ಬರು ಕನ್ಫರ್ಮ್ ಎನ್ನುತ್ತಿದ್ದಾರೆ. ಕಾರಣ, ಅವರಿಬ್ಬರಿಗೂ ಸಂಬಂಧಪಟ್ಟವರು ಹಾಕಿರುವ ಪೋಸ್ಟ್ ಎನ್ನಲಾಗಿದೆ. 

ಈ ಎರಡೂ ಹೆಸರು ಊಹೆಯೂ ಇರಬಹುದು. ಕಾರಣ, ಹೆಚ್ಚಿನ ಪ್ರೇಕ್ಷಕರು ಇರುವುದರಲ್ಲಿ ಯಾರು ಎಲಿಮಿನೇಟ್ ಆಗಬಹುದು ಎಂದು ತಾವೇ ಊಹಿಸಿ ಯಾವುದೋ ಒಂದು ದಾರಿಯಲ್ಲಿ ಗಾಸಿಪ್ ಹಬ್ಬಿಸುತ್ತಿದ್ದಾರೆ. ಆದರೆ, ಕೆಲವರಿಗೆ ಯಾವುದೋ ಮೂಲದಿಂದ ಅವರಿಬ್ಬರಲ್ಲಿ ಒಬ್ಬರು ಎಂದು ಗೊತ್ತಾಗಿರುತ್ತದೆ. ಹೇಗೇ ಆದರೂ ಬೇರೆಯವರ ಹೆಸರು ಹೊರಗೆ ಬರುತ್ತಿಲ್ಲ ಎಂಬುದು ಅಚ್ಚರಿಯೇ ಸರಿ. ತನಿಶಾ, ಕಾರ್ತಿಕ್ ಅಥವಾ ಸಂಗೀತಾ ಹೆಸರನ್ನು ಸದ್ಯಕ್ಕೆ ಯಾರೂ ಹೇಳುತ್ತಿಲ್ಲ. ಅಂದರೆ, ವೀಕ್ಷಕರ ಪ್ರಕಾರ ಅವರು ಸ್ಟ್ರಾಂಗ್ ಕಂಟೆಸ್ಟಂಟ್ ಅಂತನಾ? ಗೊತ್ತಿಲ್ಲ!

ಗೌರೀಶ್ ಅಕ್ಕಿ ಪತ್ನಿ ಮಾಲತಿ ತಮ್ಮ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡಿರುವ ಪೋಸ್ಟ್ ನೋಡಿದರೆ, 'ಇನ್ನೂ ಬಹಳಷ್ಟು ದಿನಗಳು ಗೌರೀಶ್ ಸರ್ ಬಿಟ್ಟಿರಲು ಆಗುತ್ತಿಲ್ಲ, ಆದಷ್ಟು ಬೇಗ ಬರಲಿ' ಎನ್ನುವ ಅಭಿಲಾಷೆ ಎನಿಸುವಂತಿದೆ. ಅದನ್ನೇ ಇನ್ನೊಂದು ರೀತಿಯಲ್ಲೂ ಕೆಲವರು ಅರ್ಥ ಮಾಡಿಕೊಳ್ಳುತ್ತಿದ್ದಾರೆ- ಅವರು ಈಗಾಗಲೇ ಬಿಗ್‌ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಅದರ ಸೂಚನೆಯೇ ಇದು' ಎನ್ನುತ್ತಿದ್ದಾರೆ. ಆದರೆ, ಮಾಲತಿ ಅಕ್ಕಿ ಅವರ ಸ್ಟೇಟಸ್ ನೋಡಿದರೆ, ಯಾವುದೇ ಕನ್ಫರ್ಮೇಶನ್ ದೊರಕುವುದಿಲ್ಲ. 

BBK10 ಅಣ್ಣಾ Rock ಅಕ್ಕ Shock: ಸ್ನೇಹಿತ್ ಗೌಡ-ನಮೃತಾ ಗೌಡ ಸಂಭಾಷಣೆ ಕೇಳಿ ಬಿದ್ದುಬಿದ್ದು ನಗುತ್ತಿರುವ ಕರ್ನಾಟಕ

ಒಟ್ಟಿನಲ್ಲಿ, ಅಕ್ಟೋಬರ್ 8ಕ್ಕೆ ಶುರುವಾದ ಬಿಗ್ ಬಾಸ್ ಕನ್ನಡ ಸೀಸನ್ 10 ಈಗಾಗಲೇ ಎರಡನೇ ವಾರ ಮುಗಿಸಿದೆ. ನಿನ್ನೆ ವೀಕೆಂಡ್ ಕಿಚ್ಚನ ಪಂಚಾಯಿತಿ ಮುಗಿದಿದೆ. ಇಂದು 'ಸೂಪರ್ ಸಂಡೇ ವಿತ್ ಸುದೀಪ' ಪ್ರಸಾರವಾಗಲಿದ್ದು, ಅದರಲ್ಲಿ ಸೆಕೆಂಡ್ ಎಲಿಮಿನೇಶನ್ ನಡೆಯಲಿದೆ. ಈ ಮೂಲಕ ದೊಡ್ಮನೆಯಿಂದ ಒಬ್ಬರು ಹೊರಬರಲಿದ್ದಾರೆ. ಯಾರು ಎಂಬುದನ್ನು ತಿಳಿಯಲು ಇಂದಿನ ಸಂಚಿಕೆಯನ್ನು ರಾತ್ರಿ 9.00 ಗಂಟೆಗೆ ಕಲರ್ಸ್ ಕನ್ನಡದಲ್ಲಿ ವೀಕ್ಷಿಸಬಹುದು. 

ಚೀನಾ ಹೊಗಳಿದ ಕನ್ನಡ ಯೂಟ್ಯೂಬರ್ ಡಾ ಬ್ರೋಗೆ ದೇಶದ್ರೋಹಿ ಪಟ್ಟ: ಟಾರ್ಗೆಟ್ ಅಗ್ಬಿಟ್ಯಲ್ಲ ದೇವ್ರು ಎಂದ ಫ್ಯಾನ್ಸ್.!

ಅಂದಹಾಗೆ, ಬಿಗ್ ಬಾಸ್ ಏನಾಗುತ್ತಿದೆ ಎಂದು ತಿಳಿಯಬೇಕಾದರೆ 'JioCinema'ದಲ್ಲಿ ಬಿಗ್‌ಬಾಸ್‌ ಕನ್ನಡ ನೇರಪ್ರಸಾರ ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು 'JioCinema'ದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು 'Colors Kannada'ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

Follow Us:
Download App:
  • android
  • ios