Asianet Suvarna News Asianet Suvarna News

ಚೀನಾ ಹೊಗಳಿದ ಕನ್ನಡ ಯೂಟ್ಯೂಬರ್ ಡಾ ಬ್ರೋಗೆ ದೇಶದ್ರೋಹಿ ಪಟ್ಟ: ಟಾರ್ಗೆಟ್ ಅಗ್ಬಿಟ್ಯಲ್ಲ ದೇವ್ರು ಎಂದ ಫ್ಯಾನ್ಸ್.!

ಕನ್ನಡದ ಪ್ರಸಿದ್ಧ ಯೂಟ್ಯೂಬರ್‌ ಡಾ ಬ್ರೋ ಬೀಜಿಂಗ್ ಪ್ರವಾಸದ ವೇಳೆ ಚೀನಾವನ್ನು ಹೊಗಳಿದ್ದರಿಂದ ಅವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗಿದೆ. ಶಾಲೆ ಮಕ್ಕಳ ಬಗ್ಗೆ ಹೀಗೆ ಹೇಳಿದ್ರು.!

Kannada youtuber Dr bro Gagan Srinivas praised China then he was branded India traitor sat
Author
First Published Oct 19, 2023, 8:03 PM IST

ಬೆಂಗಳೂರು (ಅ.19): ಇತ್ತೀಚೆಗೆ ಚೀನಾಕ್ಕೆ ಹೋಗಿದ್ದ ಕನ್ನಡದ ಪ್ರಸಿದ್ಧ ಯೂಟ್ಯೂಬರ್‌ ಹಾಗೂ ಪ್ರವಾಸಿಗ ಡಾ ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್‌ ಭಾರತೀಯನಾಗಿ ಚೀನಾವನ್ನು ಹೊಗಳಿದ್ದಾನೆ. ಚೀನಾದ ಮಕ್ಕಳಿಗೆ ಓದುವಾಗಲೇ ಕೌಶಲ್ಯ ಕಲಿಸಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಜಾತಿ, ಧರ್ಮ ವಿಷ ಬೀಜ ಬಿತ್ತಲಾಗುತ್ತಿದೆ ಎಂದು ಹೇಳಿದ ಡಾ ಬ್ರೋಗೆ ಈಗ ಕೆಲವರು ದೇಶದ್ರೋಹಿ ಎನ್ನುವ ಪಟ್ಟ ಕಟ್ಟಿದ್ದಾರೆ. 

ಚೀನಾದ ಬೀಜಿಂಗ್‌ನಲ್ಲಿ ವೀಡಿಯೋ ಮಾಡುತ್ತಾ ಮಾತನಾಡಿರುವ ಡಾ ಬ್ರೋ, ಮುಂದುವರೆದ ದೇಶದ ಮಕ್ಕಳೆಲ್ಲಾ ಸ್ಕೂಲ್ ಕಾಲೇಜ್ ಗಳಲ್ಲಿ, ಹೊಸ ಹೊಸ ಸ್ಕಿಲ್‌ (skill) ಕಲಿತರೆ , ನಮ್ಮ ಮಕ್ಕಳು ಜಾತಿ ಧರ್ಮ ಅಂತ ಕಿತ್ತಾಡ್ತಾವೇ!  ನಾವು ಈಗಿರುವ ಚೀನಾ ಮಟ್ಟಕ್ಕೆ ಹೋಗಬೇಕಾದರೆ, ಇನ್ನೂ ಕನಿಷ್ಟ 70 ವರ್ಷ ಬೇಕು ಅಂದ್ರೆ, ಆಗ ಚೀನಾ ಇನ್ನೆಲ್ಲಿಗೆ ಹೋಗಿರುಂತೆ ಯೋಚಿಸಿ. ಜಾತಿ ಧರ್ಮ ಅನ್ನುವ ನಂಜು ಬಿಟ್ಟು ಹೊರಬನ್ನಿ ಎಂದು ಹೇಳಿದ್ದಾರೆ. ಆದರೆ, ಭಾರತೀಯನಾಗಿ ಚೀನಾಗೆ ಹೋಗಿ ಅಲ್ಲಿನ ವ್ಯವಸ್ಥೆಯನ್ನು ಹೊಗಳಿದ ಡಾ. ಬ್ರೋಗೆ ದೇಶದ್ರೋಹಿ ಪಟ್ಟ ಕಟ್ಟಿದ್ದಾರೆ. 

ಬೆಂಗಳೂರು ವಿಶ್ವಕಪ್ ಪಂದ್ಯ : ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೆಚ್ಚುವರಿ ಬಸ್‌ ಬಿಟ್ಟ ಬಿಎಂಟಿಸಿ

ಇನ್ನು ಕೆಲವರು ನಮ್ಮ ದೇಶ ಚೀನಾ ಮಟ್ಟಕ್ಕೆ ತಲುಪಲು ಇನ್ನೂ 100 ವರ್ಷ ಬೇಕು. ಹುಟ್ಟಿದ್ ತಕ್ಷಣ ಕಲಿಸೋದೆ ಗುಲಾಮಗಿರಿ; ದೇವರು-ದಿಂಡರು, ಜಾತಿ-ಧರ್ಮ, ಸ್ವಾಮಿ-ಮಠ. ಹೇಗೆ ಜೀವಿಸಬೇಕು, ಜೀವನವನ್ನು ಹೇಗೆ ಎದುರಿಸಬೇಕು, ವಿಧ್ಯಾಭ್ಯಾಸ, ಸಾಕ್ಷರತೆ, ಆರೋಗ್ಯ, ಸಾಮಾನ್ಯ ಸಾಮಾಜಿಕ ಜ್ಞಾನ ಎಲ್ಲದಕ್ಕೂ ದೇವರು. ನಮ್ಮ ಕನಿಷ್ಟ ಕರ್ತವ್ಯವನ್ನು ಕಡೆಗಣಿಸಿ ಕಾಣದ ದೇವರಿಗೆ ಮೊರೆ ಹೋಗುವವರು ನಾವು. ಇರೋದನ್ನು ಇರೋ ಹಾಗೆ ಹೇಳಿದ್ರು ನಮ್ ಜನಕ್ಕೆ ಅರ್ಥ ಆಗಲ್ಲ ಬಿಡಿ ಮತ್ತೊಬ್ಬರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

 

ನಮ್ಮ ರಾಜಕಾರಣಿಗಳು ಜಾತಿ ಧರ್ಮದ ನಂಜಿನಲ್ಲಿಯೇ ಹುಲುಸಾದ ಓಟಿನ ಬೆಳೆ ಬೆಳೆಯುತ್ತಾರೆ. ಇಲ್ಲಿ ಅವೆರಡರ ಉಲ್ಲೇಖವಿಲ್ಲದೇ ಅಭಿವೃದ್ಧಿಯ ಆಧಾರದ ಮೇಲೆ ಓಟು ಕೇಳುವುದಿಲ್ಲ. ಜನರು ಅಭಿವೃದ್ಧಿ ನೋಡಿ ಮತವು ಹಾಕುವುದಿಲ್ಲ. ಕಳೆದ ನಾಲ್ಕು ವರ್ಷ ನಾವು ಹೇಗೆ ಕಳೆದವು. ನಮಗೆ ಅಭಿವೃದ್ಧಿಯ ವಿಷಯಗಳು ಮರೆತೇ ಹೋಗಿದ್ದವು. ಹಿಜಾಬ್, ಹಲಾಲ್, ಜಟಕಾ ಕಟ್ ಆಗಿವೆ ಎಂದು ಬಸವರಾಜ್‌ ಎನ್ನುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Kannada youtuber Dr bro Gagan Srinivas praised China then he was branded India traitor sat

ಇದರಲ್ಲಿ ಬ್ರೊ ಒಂದು ಹೇಳಲಿಲ್ಲ. ಆ ಎಲ್ಲಾ ನಾಡಲ್ಲೂ ಬಹುಪಾಲು ಮಕ್ಕಳು ಕಲಿಯುವುದು ತಾಯಿನುಡಿಯಲ್ಲಿ. ವಲಸೆ ಮಿತಿ ಇರತ್ತೆ, ಆ ನಾಡಿನ ಮಂದಿಗೆ ಮೊದಲು ಕೆಲಸ ನಂತರ ಹೊರಗಿನವರಿಗೆ. ವಲಸೆ ಬಂದವರ ಮಕ್ಕಳು ಕೂಡ ಆ ನೆಲದ ನುಡಿಯನ್ನ ಕಲಿತು ಅವರಲ್ಲೊಬ್ಬರಾಗುತ್ತಾರೆ. ನಮ್ಮವು ಜಾತಿ/ಮತ, ಇಲ್ಲದಿರುವ ದೇಶ, ಕುರಡು ನಂಬಿಕೆ ಇಷ್ಟೇ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಫೇಸ್‌ಬುಕ್ ಬಳಕೆದಾರರಿಗೆ ಗುಡ್ ನ್ಯೂಸ್, ವ್ಯಾಟ್ಸ್ಆ್ಯಪ್ ರೀತಿಯಲ್ಲೇ ಬ್ರಾಡ್‌ಕಾಸ್ಟ್ ಚಾನೆಲ್!

ಆನೆಗೆ ತಿನ್ನುವ ಹಲ್ಲು ಬೇರೆ ಮತ್ತು ತೋರಿಸುವ ಹಲ್ಲು ಬೇರೆ ಅಂತಾರೆ. ಚೀನಾ ಕೂಡ ಹಾಗೆ. ಲಕ್ಷಾಂತರ ಟಿಬೆಟ್ ಜನ ಭಾರತದಲ್ಲಿ ನೆಲೆಸಿರುವುದು ಯಾಕೆ? ಉಗೂರ್ ಅಲ್ಲಿ ಚೀನಾ ಏನು ಮತ್ತು ಯಾವ ಪ್ರಮಾಣದಲ್ಲಿ ಮಾಡುತ್ತಿದೆ?  ಬೀಜಿಂಗ್, ಶಾಂಘೈನ ಭವ್ಯತೆ ಕೆಲವೇ ಜನರ ಪಾಲಿಗೆ. ಹಳ್ಳಿಯ ಜನರಿಗೆ ಅದರ ಕನಸೂ ಕಾಣುವ ಅಧಿಕಾರ ಇಲ್ಲ ಎಂದು ಕಮೆಂಟ್‌ ಮಾಡಿದ್ದಾರೆ.

Follow Us:
Download App:
  • android
  • ios