ಹುಲಿ ಉಗುರು ಧರಿಸಿದ್ಧ ವರ್ತೂರು ಸಂತೋಷ್ ಬಂಧನ, ಬಿಗ್ ಬಾಸ್ ಇತಿಹಾಸದಲ್ಲೇ ಇದು ಮೊದಲು!

ಕನ್ನಡ ಕಿರುತೆರೆಯ ಜನಪ್ರಿಯ  ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್ ಬಂಧನವಾಗಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿ ಒಬ್ಬ ಅರೆಸ್ಟ್ ಮಾಡಲಾಗಿದೆ.

bigg boss kannada season 10 contestant varthur santhosh arrested from forest department gow

ಕನ್ನಡ ಕಿರುತೆರೆಯ ಜನಪ್ರಿಯ  ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್ ಬಂಧನವಾಗಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿ ಒಬ್ಬ ಅರೆಸ್ಟ್ ಮಾಡಲಾಗಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿ ಒಬ್ಬ ಅರೆಸ್ಟ್ ಆಗಿದ್ದು, ಹುಲಿ ಉಗುರು ಇರುವ ಪೆಂಡೆಂಟ್‌ ಧರಿಸಿದ್ದರು ಎಂಬ ಆರೋಪದ ಮೇಲೆ ಬಂಧನವಾಗಿದೆ.

BBK10 ಎರಡನೇ ವಾರಕ್ಕೆ ಬಿಗ್‌ ಬಾಸ್ ಮನೆಯಿಂದ ಹೊರಬಿದ್ದ ಗೌರೀಶ್

ಸದ್ಯ ಬಿಗ್ ಬಾಸ್ ಮನೆಯಿಂದ ಹೊರ ಕರೆತಂದು ಅರೆಸ್ಟ್ ಮಾಡಲಾಗಿದೆ. ರಾಮೋಹಳ್ಳಿ ಅರಣ್ಯಾಧಿಕಾರಿಗಳಿಂದ ವರ್ತೂರು ಸಂತೋಷ್ ಬಂಧನವಾಗಿದ್ದು, ಸದ್ಯ ರಾಮೋಹಳ್ಳಿ ಅರಣ್ಯಾಧಿಕಾರಿಗಳ ಕಷ್ಟಡಿಯಲ್ಲಿದ್ದಾರೆ. 

ವೈಲ್ಡ್​ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಬಂಧನವಾಗಿದೆ. ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದರು. ಈ ಕುರಿತು ಎಫ್​ಐಆರ್ ದಾಖಲಾಗಿತ್ತು. ಈ ಹಿನ್ನೆಲೆ ವರ್ತೂರು ಸಂತೋಷ್ ನನ್ನ ಬಂಧಿಸಿರುವ ಅರಣ್ಯಾಧಿಕಾರಿಗಳು  ವಿಚಾರಣೆ ನಡೆಸುತ್ತಿದ್ದಾರೆ.

ಟಿವಿಯಲ್ಲಿ ಹುಲಿ ಉಗುರು ಪೆಂಡೆಂಟ್ ಹಾಕಿಕೊಂಡ ವಿಡಿಯೋ  ಕೇಸ್ ಹಾಕಲಾಗಿದೆ. ಬಂಧಿತ ಸಂತೋಷ್ ಅವರನ್ನು ಕಗ್ಗಲಿಪುರ ಅರಣ್ಯ ಇಲಾಖೆ ಕಚೇರಿಯಲ್ಲಿಟ್ಟು ವಿಚಾರಿಸಲಾಗುತ್ತಿದೆ. ಇಂದು ಮ್ಯಾಜಿಸ್ಟ್ರೇಟ್ ಮುಂದೆ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ ಎಂದು ಸುವರ್ಣ ನ್ಯೂಸ್ ಗೆ ಬೆಂಗಳೂರು ಅರಣ್ಯ ಸಂರಕ್ಷಣಾ ಅಧಿಕಾರಿ ರವೀಂದ್ರ ಮಾಹಿತಿ ನೀಡಿದ್ದಾರೆ. 

ಕ್ಷಯರೋಗ ಬಂತೆಂದು ನಟಿಯನ್ನು ತೊರೆದ ಗಂಡ-ಕುಟುಂಬ

ಸದ್ಯ ಬಿಗ್ ಬಾಸ್ ವರ್ತೂರ್ ಸಂತೋಷ್ ವಿರುದ್ಧ ಜಾಮೀನು ರಹಿತ ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ. ಉಗುರಿನ ಮೂಲವನ್ನ ಅರಣ್ಯಾಧಿಕಾರಿಗಳು ಕೆದಕುತ್ತಿದ್ದಾರೆ. ಯಾರು ನಿಮಗೆ ಕೊಟ್ಟಿದ್ದು, ಎಲ್ಲಿ ಸಿಕ್ಕಿತು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. 

ಇನ್ನು ಹುಲಿ ಉಗುರು ಹೌದೋ? ಅಲ್ಲವೋ? ಅಥವಾ  ಬೇರೆ ಪ್ರಾಣಿಯ ಉಗುರೋ  ಎಂಬ ಬಗ್ಗೆ ತಿಳಿಯಲು ಎಫ್.ಎಸ್.ಎಲ್ ಗೆ ಉಗುರನ್ನು ರವಾನೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

ಹಳ್ಳಿಕಾರ್‌ ತಳಿಯ ಜಾನುವಾರು ಸಾಕಾಣಿಕೆ  ಮೂಲಕ ಜನಪ್ರಿಯತೆ ಪಡೆದಿರುವ ವರ್ತೂರು ಸಂತೋಷ್‌ ಹಳ್ಳಿಕಾರ್‌ ಕ್ಯಾಟಲ್‌ ಬ್ರೀಡ್‌ ಅಥವಾ ಅಖಿಲ ಭಾರತ ಹಳ್ಳಿಕಾರ್‌ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇವರು ಹಳ್ಳಿಕಾರ್‌ ಒಡೆಯ ಎಂದೇ ಪ್ರಸಿದ್ದಿ ಪಡೆದಿದ್ದಾರೆ.

bigg boss kannada season 10 contestant varthur santhosh arrested from forest department gow

Latest Videos
Follow Us:
Download App:
  • android
  • ios