* ಕನ್ನಡದ ಬಿಗ್ ಬಾಸ್ ಫಿನಾಲೆ* ಮಂಜು ಪಾವಗಡ ವಿನ್ನರ್?* ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಸುರಿಮಳೆ

ಬೆಂಗಳೂರು(ಆ. 07) ಬಿಗ್ ಬಾಸ್ ಮನೆ ಫಿನಾಲೆ ಹಂತದಲ್ಲಿ ಇದೆ. ಶನಿವಾರದ ಎಪಿಸೋಡ್ ನಲ್ಲಿ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಗೌಡ ಹೊರಗೆ ಬಂದಿದ್ದಾರೆ. ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಒಂದೊಂದೆ ವಿಚಾರವನ್ನು ಹೊರಗೆ ತೆಗೆಯುತ್ತಿದ್ದಾರೆ.

ಬಿಗ್ ಬಾಸ್ ಮನೆಯ ವಿನ್ನರ್ ಯಾರು? ರಹಸ್ಯ ಬಹಿರಂಗವಾಗಿಹೋಗಿದೆ! ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಕಲಾವಿದ ಮಂಜು ಪಾವಗಡ ವಿನ್ನರ್ ಎಂದು ಸೋಶಿಯಲ್ ಮೀಡಿಯಾ ಹೇಳಿದೆ. ಅಭಿನಂದನೆಗಳು ಹರಿದು ಬಂದಿದೆ. 

ಮನೆಯಿಂದ ಹೊರಬಂದ ವೈಷ್ಣವಿ ಗೌಡ.. ಅಭಿಮಾನಿಗಳ ಅಸಮಾಧಾನ

ಮಜಾಭಾರತ ಖ್ಯಾತಿಯ ಹಾಸ್ಯ ಕಲಾವಿದ ಮಂಜು ಪಾವಗಡ ಬಿಗ್ ಬಾಸ್ ಮನೆ ಪ್ರವೇಶ ಮಾಡಿ ರಂಜಿಸಿಕೊಂಡೇ ಬಂದಿದ್ದರು. ಒಂದು ಹಂತದಲ್ಲಿ ದಿವ್ಯಾ ಸುರೇಶ್ ಜತೆ ಸೇರಿ ಆಟದಲ್ಲಿ ಮೋಸ ಮಾಡಿದ್ದಾರೆ ಎನ್ನುವುದನ್ನು ಬಿಟ್ಟರೆ ಮಂಜು ಪಾವಗಡ ಮೇಲೆ ಬೇರೆ ಯಾವ ಆರೋಪಗಳಿಲ್ಲ.

ಅರವಿಂದ್, ದಿವ್ಯಾ ಮತ್ತು ಮಂಜು ಪಾವಗಡ ಫೈನಲ್ ನಲ್ಲಿ ಇದ್ದಾರೆ. ಇನ್ನೊಂದು ಕಡೆ ರಘು ದೀಕ್ಷಿತ್, ರಾಜೇಶ್ ಕೃಷ್ಣ್ ಸಹ ಸಂಗೀತ ಸುಧೆ ಹರಿಸುತ್ತಿದ್ದಾರೆ. ಶನಿವಾರದ ಎಪಿಸೋಡ್ ನಲ್ಲಿ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಗೌಡ ಹೊರಗೆ ಬಂದಿದ್ದರು.