ಬಿಗ್ ಬಾಸ್ ಮನೆಯಿಂದ ಮೂರನೇ ವಾರದ ಎಲಿಮಿನೇಶನ್ ಆಗಿದೆ. ಈ ವಾರ ಮಾತ್ರ ಬಿಗ್ ಬಾಸ್ ಸಖತ್ ಟ್ವಿಸ್ಟ್ ಇಟ್ಟಿದ್ದರು. ಭಾನುವಾರ ಕತೆ ನಡೆಸಿಕೊಡುತ್ತಿದ್ದ ಕಿಚ್ಚ ಯಾರ ಹೆಸರನ್ನು ತೆಗೆದುಕೊಳ್ಳದೆ ಗುಡ್ ಲಕ್ ಹೇಳಿ ಮನೆಯ ಎಪಿಸೋಡ್ ಕೊನೆಮಾಡಿದರು.

ಟ್ವಿಸ್ಟ್ ಮೇಲೆ ಟ್ವಿಸ್ಟ್ ಎನ್ನುತ್ತ 15ರಲ್ಲಿ ಒಂದು ಕಳೆದರೆ 14, 14ಕ್ಕೆ ಒಂದು ಸೇರಿಸರೆ 15 ಎನ್ನುತ್ತ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡುವ ಸ್ಪರ್ಧಿಯನ್ನು ಕಳಿಸಿಕೊಟ್ಟರು. 

ಫೀವರ್ 104 ಎಫ್ ಎಂನಲ್ಲಿ  ಮ್ಯಾಡ್ ಮಾರ್ನಿಂಗ್ ಶೋ ನಡೆಸಿಕೊಡುವ ಆರ್ಜೆ ಪೃಥ್ವಿ ಅವರನ್ನುಬಿಗ್ ಬಾಸ್ ವೇದಿಕೆಗೆ ಸುದೀಪ್ ಬರಮಾಡಿಕೊಂಡರು. ಪೃಥ್ವಿ ಟೆನಿಸ್ ಆಟಗಾರರೂ ಹೌದು.. ಜತೆಗೆ ಇವರೊಬ್ಬ ತರಬೇತಿ ಪಡೆದ ಪೈಲಟ್.

ಕವರ್ ಮೂಲಕ ಒಳಹೋದ ಪೃಧ್ವಿ ರಶ್ಮಿ ಅವರ ಹೆಸರು ಹೇಳಿದರು. ದುನಿಯಾ ರಶ್ಮಿ ಮನೆಯಿಂದ ಔಟ್ ಆಗಿದ್ದು ಪ್ರಿಯಾಂಕಾ ಅವರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಿ ಹೊರಬಂದಿದ್ದಾರೆ. ರಶ್ಮಿ ಜತೆ ಗೆಳೆತನ ಬೆಸೆದುಕೊಂಡಿದ್ದ  ನಾಗಿಣಿ ದೀಪಿಕಾ ದಾಸ್ ಕಣ್ಣೀರು ಹಾಕುತ್ತಲೇ ಇದ್ದರು.

ಜೈಜಗದೀಶ್ ಎರಡನೇ ಮದುವೆ!

ಗಂಡಸರ ಫ್ಯಾಷನ್ ಬೋರಾಗಿ ನಾನು ವುಮೇನ್ಸ್ ಫ್ಯಾಷನ್ ಕಡೆಗೆ ಹೊರಳಿಬಿಟ್ಟೆ ಎನ್ನುತ್ತ ಪೃಥ್ವಿ ಮನೆಯೊಳಕ್ಕೆ ಕಾಲಿಟ್ಟರು. ಅಲ್ಲಿಗೆ ಹಾಗಾದರೆ ಮನೆಯೊಳಗೆ ಪ್ರವೇಶ ಪಡೆಯಲಿರುವ ವ್ಯಕ್ತಿ ಯಾರು? ಯಾವ ಕ್ಷೇತ್ರದ ಸೆಲೆಬ್ರಿಟಿ? ನಟನೋ, ನಿರ್ದೇಶಕನೋ ಎಂಬುದಕ್ಕೆ ಉತ್ತರ ಸಿಕ್ಕಿದ್ದು ಅವರೊಬ್ಬ ರೆಡಿಯೋ ಜಾಕಿ!

ಆರಂಭದಿಂದಲೂ ಒಂದಾದ ಮೇಲೆ ಒಂದು ಶಾಕ್ ಕೊಟ್ಟಿಕೊಂಡೇ ಬರುತ್ತಿದ್ದಾರೆ. ಮೊದಲು ಸ್ಪರ್ಧಿ ಎಂದು ಮನೆಯೊಳಗೆ ಹೋಗಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ನಂತರ ಗೆಸ್ಟ್ ಆಗಿ ಬದಲಾಗಿದ್ದರು.

ಮೊದಲ ವಾರ ಗೆದ್ದರೆ ಎಲ್ಲ ಹಣ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೀಡುತ್ತೇನೆ ಎಂದು ಹೇಳಿದ್ದ ಗುರುಲಿಂಗ ಸ್ವಾಮೀಜಿ ಔಟ್ ಆಗಿದ್ದರು, ನಂತರ ಎರಡನೇ ವಾರದಲ್ಲಿ ನಿರೂಪಕಿ ಚೈತ್ರಾ ವಾಸುದೇವನ್ ಹೊರಬಂದಿದ್ದರು.