ಬಿಗ್ ಬಾಸ್ ಮನೆಯಿಂದ ಮಿಡ್ ನೈಟ್ ಎಲಿಮಿನೇಶನ್ ನಲ್ಲಿ ಮನೆಯ ಹಿರಿಯ ಹರೀಶ್ ರಾಜ್ ಪ್ರಯಾಣ ಅಂತ್ಯವಾಗಿದೆ. ಈಗಾಗಲೇ ವಾಸುಕಿ ವೈಭವ್ ನೇರವಾಗಿ ಫೈನಲ್ ತಲುಪಿರುವುದರಿಂದ ಉಳಿದ ಸದಸ್ಯರಿಗೆ ಅಂದರೆ ಶೈನ್, ಹರೀಶ್, ಕುರಿ ಪ್ರತಾಪ್, ಭೂಮಿ ಶೆಟ್ಟಿ ಮತ್ತು ದೀಪಿಕಾ ದಾಸ್ ಅವರಿಗೆ ಬೋರ್ಡಿಂಗ್ ಪಾಸ್ ನೀಡಿ ಕಳಿಸಲಾಗಿತ್ತು.

ಇಡೀ ದಿನ ವಿವಿಧ ಚಟುವಟಿಕೆ ಮಾಡಿದ್ದ ಸ್ಪರ್ಧಿಗಳಿಗೆ ಮಿಡ್ ನೈಟ್ ನಲ್ಲಿ ಬಿಗ್ ಬಾಸ್ ಶಾಕ್ ಇಟ್ಟಿದ್ದರು. ಲಗೇಜ್ ತೆಗೆದುಕೊಂಡು ಮನೆಯಲ್ಲಿ ಬ್ಯಾರಿಕೇಡ್ ಇಟ್ಟು ಅದರ ಮೇಲೇರಲು ಬಿಗ್ ಬಾಸ್ ಸೂಚಿಸಿದ್ದರು. ನೀಡಿರುವ ಕಾರ್ಡ್ ನ್ನು ನಿಗದಿತ ಸ್ಥಳದಲ್ಲಿ ಸ್ವೈಪ್ ಮಾಡಬೇಕು. ಯಾರ ಬೋರ್ಡಿಂಗ್ ಪಾಸ್ ಹಸಿರು ಬಣ್ಣ ತೋರಿಸುತ್ತದೆಯೋ ಅವರು ಸೇಫ್.. ಯಾರದ್ದು ಕೆಂಪು ಬಣ್ಣ ತೋರಿಸುತ್ತದೆಯೋ ಅವರು ಔಟ್ ಎಂದು ತಿಳಿಸಲಾಗಿತ್ತು.

ಮೊದಲಿಗೆ ಶೈನ್ ಶೆಟ್ಟಿ ಬಿಗ್ ಬಾಸ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದರು. ವಾಸುಕಿ ವೈಭವ್ ನಂತಹ ಗೆಳೆಯ ಇಲ್ಲಿ ಸಿಕ್ಕಿದ್ದಾರೆ ಎಂದು ಕೊಂಡಾಡಿದರು. ಶೈನ್ ಬೋರ್ಡಿಂಗ್ ಪಾಸ್ ಸೈಪ್ ಮಾಡಿದಾಗ ಹಸಿರು ಲೈಟ್ ಬಂದು ಸೇಫ್ ಆದರು.

ಬಿಗ್ ಬಾಸ್ ನಿಂದ ಹೊರಬಿದ್ದ ಚಂದನ್ ಹೇಳಿದ್ದು ಒಂದೇ ಮಾತು!

ನಂತರ ಕುರಿ ಪ್ರತಾಪ್ ಸರದಿ. ಕುರಿ ಪ್ರತಾಪ್ ತಾನೊಬ್ಬ ಬಿಗ್ ಬಾಸ್ ಅಭಿಮಾನಿ ಎಂದು ಹೇಳಿದರು. ನಂತರ ಸ್ವೈಪ್ ಮಾಡಿದಾಗ ಹಸಿರು ದೀಪ ಹೊತ್ತಿಕೊಂಡಿದ್ದರಿಂದ ಕುರಿ ಪ್ರತಾಪ್ ಸೇವ್ ಆದರು.

ನಂತರ ಭೂಮಿಶೆಟ್ಟಿ ಸರದಿ ಬಂತು. ನಾನು ಸುದೀಪ್ ಅವರನ್ನು ನೇರವಾಗಿ ನೋಡಲು ಬಿಗ್ ಬಾಸ್ ಕಾರಣ. ಇಲ್ಲಿ ಎಲ್ಲವನ್ನು ಕಲಿತಿದ್ದೇನೆ ಎಂದು ಹೇಳಿದರು. ಬಿಗ್ ಬಾಸ್ ನನಗೊಂದು ಕಲಿಕೆಯ ವೇದಿಕೆಯಾಗಿದೆ ಎಂದರು. ಸ್ವೈಪ್ ಮಾಡಿದಾಗ ಹಸಿರು ದೀಪ ಹೊತ್ತುಕೊಂಡು ಸೇವ್ ಆದರು.

ಸುದೀಪ್ ಅವರೊಂದಿಗೆ ನಾನು ಮಾತನಾಡುವಾಗಲೇ ಹೇಳಿದ್ದೆ. ಇದೊಂದು ಜೀವನದಲ್ಲಿ ಮರೆಯಲಾಗದ ಅನುಭವ ಎಂದು ಹೇಳಿದ ಹರೀಶ್ ರಾಜ್ ಸ್ವೈಪ್ ಮಾಡಿದಾಗ ಕೆಂಪು ಬಣ್ಣದ ದೀಪ ಹೊತ್ತುಕೊಂಡಿತು. ಈ ಮೂಲಕ ಹರೀಶ್ ಮನೆಯಿಂದ ಹೊರಗೆ ಬಂದರು. ಕ್ರೇನ್ ಮೂಲಕವೇ ಹರೀಶ್ ರಾಜ್ ಅವರನ್ನು ಮನೆಯಿಂದ ಹೊರಗೆ ತರಲಾಯಿತು.

ಬಿಗ್ ಬಾಸ್ ಸಕಲ ಸುದ್ದಿ