ಲಕ್ಷುರಿ ಪಾಯಿಂಟ್ ಮಿಸ್ ಮಾಡಿದ್ದಕ್ಕೆ ಭೂಮಿ ಶೆಟ್ಟಿ, ಕೈ ಸನ್ನೆ, ಕಣ್ ಸನ್ನೆ ಬಳಸಿದ್ದಕ್ಕೆ ಶೈನ್ ಶೆಟ್ಟಿ ಸಹ ನಾಮಿನೇಟ್ ಆದರು. ಶನಿವಾರ ಮತ್ತು ಭಾನುವಾರ ಕಿಚ್ಚ ಸುದೀಪ್ ಹೇಳಿದ ವಿಚಾರಗಳು ಮನೆ ಮಂದಿ ಮೇಲೆ ಸಿಕ್ಕಾಪಟ್ಟೆ ಪರಿಣಾಮ ಬೀರಿದ್ದು ಕಂಡುಬಂತು.

ಚೈತ್ರಾ ಕೊಟ್ಟೂರು ಎಂದಿನಂತೆ ಈ ವಾರವೂ ಮನೆ ಮಂದಿಯಿಂದ ನಾಮಿನೇಟ್ ಆದರು. ಮನೆಯಿಂದ ಹೊರಹೋಗುವಾಗಲೇ    ಚಂದನ್ ಆಚಾರ್ ಅವರನ್ನು ರಕ್ಷಾ ನಾಮಿನೇಟ್ ಮಾಡಿ ನಡೆದಿದ್ದರು.

ದೀಪಿಕಾ ಕಣ್ಣಿಗೆ ಉಫ್ ಮಾಡಲು ಹೋದ ಶೈನ್ ಜೊಲ್ಲು ಸುರಿಸ್ತಾರೆ!...

ಇನ್ನೂ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಚಂದನಾ ಈ ಬಾರಿ ಕಿಶನ್ ಅವರನ್ನು ನೇರ ನಾಮಿನೇಟ್ ಮಾಡಿದರು. ಅಲ್ಲಿಗೆ ಭೂಮಿ ಶೆಟ್ಟಿ, ಚೈತ್ರಾ ಕೊಟ್ಟೂರು, ರಾಜು ತಾಳಿಕೋಟೆ, ಶೈನ್ ಶೆಟ್ಟಿ,  ವಾಸುಕಿ ವೈಭವ್, ಚಂದನ್ ಆಚಾರ್ ಮತ್ತು ಕಿಶನ್ ಈ ಬಾರಿಯ ನಾಮಿನೇಶನ್ ಬಲೆಗೆ ಬಿದ್ದಿದ್ದಾರೆ.

ಸುದೀಪ್ ಕಣ್ಣು ಸನ್ನೆ, ಕೈ ಸನ್ನೆ ವಿಚಾರ ಹೇಳಿದ ಮೇಲೆ, ಮನೆಯ ಮೂಲ ನಿಯಮಗಳನ್ನು ಮುರಿದಿದ್ದಾರೆ ಎಂದ ನಂತರ ಶೈನ್ ಶೆಟ್ಟಿಯಿಂದ ಹಲವರು ದೂರವಾಗುತ್ತಿದ್ದಾರೆ. ಈ ನಡುವೆ ಕ್ಯಾಮರಾ ಮುಂದೆ ಶೈನ್ ಬಂದು ಒಂದಿಷ್ಟು ಅಬ್ಬರದ ಮಾತು ಹೇಳಿದರು. ಅದು ಕಿಶನ್ ಅವರಿಗೋ, ಅಥವಾ ದೀಪಿಕಾ ದಾಸ್ ಅವರಿಗೋ ಎನ್ನುವುದು ಗೊತ್ತಾಗಲಿಲ್ಲ.

ಮನೆಯಲ್ಲಿ ನೀನಾ-ನಾನಾ ಟಾಸ್ಕ್ ಸಹ ನಡೆಯಿತು. ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳ ನಡುವೆ ವಾದ ಸ್ಪರ್ಧೆ ಏರ್ಪಡಿಸಲಾಗಿತ್ತು.