ಇದೀಗ ಮನೆಯಲ್ಲಿ ಸಂಪೂರ್ಣ ರಾಜನದ್ದೆ ಪ್ರಭುತ್ವ. ರಾಜನ ಆಯ್ಕೆ ಪ್ರಕ್ರಿಯೆಗೂ ಬಿಗ್ ಬಾಸ್ ಟಾಸ್ಕ್ ನೀಡಿದ್ದರು. ಮೊದಲು ಗುರಿ ಇಟ್ಟು ಬೋರ್ಡ್ ಗೆ ಹೊಡೆಯಲು ಹೇಳಲಾಯಿತು. ಅದರಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಯಿತು.

ಮೊದಲ ಸುತ್ತಿನಲ್ಲಿ 500 ಅಂಕ ಗಳಿಸಿದ ಶೈನ್ ಶೆಟ್ಟಿ, 250 ಅಂಕಕ್ಕೆ ಗುರಿ ಇಟ್ಟ ವಾಸುಕಿ ವೈಭವ್ ಮತ್ತು 50 ಅಂಕ ಗಳಿಸಿದ ಜೖಜಗದೀಶ್ ಎರಡನೇ ಸತ್ತಿಗೆ ಆಯ್ಕೆಯಾದರು. ಆದರೆ ಎರಡನೇ ಸುತ್ತಿನಲ್ಲಿ ಫಲಿತಾಂಶ ಮಾತ್ರ ತಲೆಕೆಳಗಾಗಿತ್ತು.

ಮೊದಲ ಹೆಂಡತಿ-ಮಗಳ ನೆನೆದು ಕಣ್ಣೀರಿಟ್ಟ ಜೈಜಗದೀಶ್

ಮುಂದಿನ ಸುತ್ತಿನಲ್ಲಿ ಕತ್ತಿಯೊಂದರ ಮೇಲೆ ಬಿಗ್ ಬಾಸ್ ಆದೇಶ ನೀಡುವ ಬಿಲ್ಲೆಗಳನ್ನು ಒಂದೊಂದಾಗಿ ಇಟ್ಟು ಬ್ಯಾಲೆನ್ಸ್ ಮಾಡಲು ಕೇಳಿಕೊಳ್ಳಲಾಯಿತು. ಅದರಂತೆ ಬಿಲ್ಲೆಗಳನ್ನು ಬ್ಯಾಲೆನ್ಸ್ ಮಾಡಿ ಕೊನೆ ತನಕ ಕಾಯ್ದುಕೊಂಡ ಜೈಜಗದೀಶ್ ಮನೆಯ ರಾಜನಾಗಿ ಆಯ್ಕೆಯಾದರು.

ಕುರಿ ಪ್ರತಾಪ್ ಅವರನ್ನು ಮಂತ್ರಿಯಾಗಿ ಜೈಜಗದೀಶ್ ನೇಮಕ ಮಾಡಿಕೊಂಡರು. ಬಿಗ್ ಬಾಸ್  ಇನ್ನು ಮುಂದೆ ಜೈಜಗದೀಶ್  ಹೊರತಾಗಿ ಮನೆಯ ಯಾರ ಜತೆಯೂ ಮಾತನಾಡುವುದಿಲ್ಲ ಎಂದು ತಿಳಿಸಿದರು.