ಬಿಗ್ ಬಾಸ್ ಮನೆಯಲ್ಲಿ ಸಂಡೇ ಪಂಚಾಯಿತಿ ನಡೆದಿದೆ. ಅಂತಿಮವಾಗಿ ಮನೆಯಿಂದ ಚೈತ್ರಾ ಕೊಟ್ಟೂರು ಹೊರಗೆ ಬಂದಿದ್ದಾರೆ. ನಾಲ್ಕನೇ ವಾರ ಎಲಿಮಿನೇಶನ್ ನಲ್ಲಿ ಚೈತ್ರಾ ಹೊರಗೆ ಬಂದಿದ್ದಾರೆ.

ಯಸ್ ಮತ್ತು ನೋ ಪ್ರಶ್ನೆಗಳ ಮೂಲಕ ಅನೇಕ ವಿಚಾರಗಳನ್ನು ಸುದೀಪ್ ಕೆಣಕಿದರು. ಮೊದಲನೇ ವಾರ ಗುರುಲಿಂಗ ಸ್ವಾಮೀಜಿ, ಎರಡನೇ ವಾರ ಚೈತ್ರಾ ವಾಸುದೇವನ್ ಮತ್ತು ಮೂರನೇ ವಾರ ದುನಿಯಾ ರಶ್ಮಿ ಹೊರಗೆ ಬಂದಿದ್ದಾರೆ. ರಾಜು ತಾಳಿಕೋಟೆ ಅಂತಿಮ ಘಟ್ಟದವರೆಗೆ ಬಂದು ಸೇಫ್ ಆಗಿದ್ದಾರೆ.

ಮನೆಯಲ್ಲಿರುವ ಸ್ತ್ರೀಲೋಲ ಯಾರು? ಹೆಣ್ಣು ಮಕ್ಕಳಿಂದಲೇ  ಬಹಿರಂಗ

ಎರಡು ತಿಂಗಳು ಆದ ಮೇಲೆ ನಾನೊಂದು ಸ್ಕ್ರಿಫ್ಟ್ ಮಾಡಿಕೊಂಡಿರುತ್ತೇನೆ ಎಲ್ಲರೂ ಸೇರಿ ಒಂದು ಸಿನಿಮಾ ಮಾಡೋಣ ಎಂದು ಹೇಳಿ ಮನೆಯಿಂದ ಹೊರಬಂದ್ರು. ಮನೆಯಿಂದ ಹೊರಬರುತ್ತಾ ಚೈತ್ರಾ ಚಂದನ್ ಆಚಾರ್ ಅವರನ್ನು ನೇರವಾಗಿ ನಾಮಿನೇಶನ್ ಮಾಡಿ ಬಂದಿದ್ದಾರೆ. 

ಯಾರ ಹತ್ರನೂ ಹೇಳಲಿಕ್ಕೆ ಸಾಧ್ಯವಾಗದಿದ್ದಾಗ ಕ್ಯಾಮರಾ ಮುಂದೆ ಹೋಗಿ ಹೇಳಿಕೊಳ್ಳುತ್ತಿದ್ದೆ. ನಾನು ಕನ್ನಡಿ ಮುಂದೆ ಕುಳಿತ ದೃಶ್ಯ ತುಂಬಾ ಇಷ್ಟವಾಯಿತು. ವಾಸುಕಿ ವೈಭವ್ ಬುದ್ಧಿವಂತ, ಕುರಿ ಪ್ರತಾಪ್ ದ್ವಂದ್ವ ಎಂದು ಹೇಳಿದರು. ಹೋಗಬೇಕಿದ್ದರೂ ಶೈನ್ ಅವರನ್ನು ಕೆಣಕಿಯೇ ಬಂದರು. ಗೆದ್ದು ಎತ್ತಿನ ಬಾಲ ಹಿಡಿಯುವವರು ಶೈನ್ ಶೆಟ್ಟಿ ಎಂದು ಹೇಳಿದರು.