ಬಿಗ್ ಬಾಸ್ ಸ್ಪರ್ಧಿ ಮತ್ತು ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ, ಕಾರ್ಯಕ್ರಮದ ಚಟುವಟಿಕೆಯೊಂದರಲ್ಲಿ ಕನ್ನಡ ಬರೆಯುವಾಗ ಮಾಡಿದ ತಪ್ಪುಗಳಿಂದಾಗಿ ಟ್ರೋಲ್ ಆಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ನಾಯಕಿಯಾಗಿ ಗುರುತಿಸಿಕೊಂಡಿರುವ ಅವರ ಕನ್ನಡ ಜ್ಞಾನದ ಕೊರತೆಯು ಟೀಕೆಗೆ ಕಾರಣವಾಗಿದೆ.

ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ , ನಟಿಯಾಗಿ ಆ ಬಳಿಕ ಕನ್ನಡ ಹೋರಾಟಗಾರ್ತಿಗಾಗಿ ಗುರುತಿಸಿಕೊಂಡಿದ್ದವರು. ಅಶ್ವಿನಿ ಗೌಡ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ರಾಜ್ಯ ಗೌರವಾಧ್ಯಕ್ಷೆ ಕೂಡ ಹೌದು. ಆದ್ರೆ ಈ ಕನ್ನಡ ಹೋರಾಟಗಾರ್ತಿಗೆ ತಪ್ಪಿಲ್ಲದೇ ಕನ್ನಡ ಬರೋದಕ್ಕೆ ಬರೋದಿಲ್ವಾ? ಈ ವಾರದ ಎಪಿಸೋಡ್ ನೋಡಿದ ಕನ್ನಡಿಗರಿಗೆ ಅಶ್ವಿನಿ ಅವಸ್ಥೆ ಕಂಡು ನಿಜಕ್ಕೂ ಶಾಕ್ ಆಗಿದೆ.

ಟ್ರೋಲ್ ಆದ ಕರವೇ ನಾಯಕಿ ಕನ್ನಡ ಬರಹ!

ಯೆಸ್ ಬಿಗ್ ಬಾಸ್ ಮನೆಯಲ್ಲಿ ಫಿನಾಲೆವರೆಗೂ ಬಂದಿರೋ ಅಶ್ವಿನಿ ಗೌಡ ಕನ್ನಡ ಹೋರಾಟಗಾರ್ತಿ ಅನ್ನೋದು ಗೊತ್ತೇ ಇದೆ. ಒಂದಿಷ್ಟು ಚಿತ್ರಗಳ ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸಿದ್ದ ಅಶ್ವಿನಿ ಗೌಡ, ಆ ಬಳಿಕ ಕರವೇನಲ್ಲಿ ಸಕ್ರೀಯವಾಗಿದ್ರು. ಅಶ್ವಿನಿ ಗೌಡ ಒಂದಿಷ್ಟು ಕನ್ನಡ ಪರ ಹೋರಾಟಗಳಲ್ಲೂ ಪಾಲ್ಗೊಂಡು ಗಮನ ಸೆಳೆದಿದ್ರು. ಆದ್ರೆ ಬಿಗ್ ಬಾಸ್ ಮನೆಗೆ ಬಂದ ಅಶ್ವಿನಿ ಗಳಿಸಿದ್ದ ಹೆಸರನ್ನ ಕೆಡಿಸಿಕೊಂಡಿದ್ದೇ ಹೆಚ್ಚು. ಈ ವಾರವಂತೂ ಅಶ್ವಿನಿ ಗೌಡರ ಕನ್ನಡ ಜ್ಞಾನ ವೀಕ್ಷಕರ ಎದುರು ಬಟಾಬಯಲಾಗಿದೆ.

ಅಶ್ವಿನಿ ಗೌಡ ಮೇಡಂಗೆ ಕನ್ನಡ ಗೊತ್ತಿಲ್ಲ..!

ಹೌದು ಈ ವಾರ ಸ್ಪರ್ಧಿಗಳಿಗೆ ‘ಬಿಗ್ ಬಾಸ್’ ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಇದರ ಅನುಸಾರ, ತಮ್ಮ ‘ಬಿಗ್ ಬಾಸ್’ ಜರ್ನಿಯ ಕುರಿತು ಸ್ಪರ್ಧಿಗಳು ತಮಗೆ ತಾವೇ ಟೈಟಲ್‌ ಹಾಗೂ ಹ್ಯಾಶ್‌ ಟ್ಯಾಗ್‌ಗಳನ್ನ ಕೊಟ್ಟುಕೊಳ್ಳಬೇಕಿತ್ತು. ಈ ವೇಳೆ ಅಶ್ವಿನಿ ಗೌಡ ಬರೆದ ಕನ್ನಡ ಪದಗಳಲ್ಲಿ ಹತ್ತಾರು ತಪ್ಪುಗಳಿವೆ.

‘ಛಲಗಾರ್ತಿ ಅಶ್ವಿನಿ’ ಅಂತ ಬರೆಯಲು ಹೋಗಿ ‘ಚಲಗಾಥಿ ಅಶ್ವಿನಿ’ ಅಂತ ಬರೆದು, ಅದನ್ನ ಸ್ಕ್ರ್ಯಾಚ್ ಮಾಡಿ ಬಳಿಕ ‘ಚಲಗಾರ್ತಿ ಅಶ್ವಿನಿ’ ಅಂತ ತಪ್ಪಾಗಿ ಬರೆದಿದ್ದಾರೆ ಅಶ್ವಿನಿ ಗೌಡ . ಆನಂತರ ಅಶ್ವಿನಿ ಬರೆದ ಹ್ಯಾಶ್‌ ಟ್ಯಾಗ್‌ಗಳಲ್ಲಿ ‘ಹಠವಾಧಿ’, ‘ಕಡಕ್’ ಸೇರಿದಂತೆ ಹಲವು ಅಕ್ಷರದೋಷ ಗಳಿವೆ. ಇದನ್ನೇ ಸ್ಕ್ರೀನ್ ಶಾಟ್‌ ತೆಗೆದು ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಮಾಡಲಾಗ್ತಾ ಇದೆ.

ಈ ಹಿಂದೆ ‘ಬಿಗ್ ಬಾಸ್’ ಮನೆಯಲ್ಲೇ ಒತ್ತಕ್ಷರದ ಬಗ್ಗೆ ಕಾಕ್ರೋಚ್ ಸುಧಿ ಕೇಳಿದಾಗ, ‘’ನನಗೂ ಕನ್ನಡ ಬರಲ್ಲ. ನಾನು ಕನ್ನಡ ಮೀಡಿಯಂ ಅಲ್ಲ’’ ಅಂತ ಉತ್ತರ ಕೊಟ್ಟಿದ್ರು ಅಶ್ವಿನಿ ಮೇಡಂ. ನೆಟ್ಟಗೆ ಕನ್ನಡವೇ ಬಾರದ ಇವರು ಕನ್ನಡಕ್ಕಾಗಿ ಅದೇನ್ ಹೋರಾಟ ಮಾಡ್ತಾರೆ ಅಂತ ಜನ ಟ್ರೋಲ್ ಮಾಡ್ತಾ ಇದ್ದಾರೆ. ಇಂಥವರನ್ನ ಹೋರಾಟಗಾರ್ತಿಯಾಗಿ ಪಡೆದ ಕನ್ನಡಮ್ಮ ಧನ್ಯ ಅಂತ ಎಲ್ಲರೂ ಟೀಕೆ ಮಾಡ್ತಾ ಇದ್ದಾರೆ.

ಇನ್ನೂ ಈ ವಾರ ಬಿಗ್​ಬಾಸ್ ಬಳಿ ಕರವೇ ಅಧ್ಯಕ್ಷರಾದ ನಾರಾಯಣಗೌಡರನ್ನ ಮನೆಗೆ ಕರೆಸಿ ಅಂತ ಅಶ್ವಿನಿ ಕೇಳಿಕೊಂಡಿದ್ದಾರೆ. ಅಶ್ವಿನಿ ಗೌಡ ಬರೆದ ಕನ್ನಡ ನೋಡಿದ್ರೆ ನಾರಾಯಣ ಗೌಡರು ಬೇಡ. ಒಳಗೆ ಒಬ್ಬ ಕನ್ನಡ ಮೇಷ್ಟ್ರನ್ನ ಕಳಿಸಿಕೊಡಿ ಅಂತಿದ್ದಾರೆ ಜನ.

- ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.