ಬಿಗ್‌ಬಾಸ್ ಕನ್ನಡದಲ್ಲಿ ಹಲವು ಬದಲಾವಣೆ, ಇದು ಭಾರತದ ಶೋ ಇತಿಹಾಸದಲ್ಲೇ ಮೊದಲು!
ಬಿಗ್‌ಬಾಸ್ ಕನ್ನಡ 11ರ ಎರಡನೇ ವಾರದಲ್ಲಿ ಹೊಸ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ನರಕ ತೆಗೆದು ಜೈಲು ನಿರ್ಮಿಸಲಾಗಿದೆ, ಮನೆಯ ಇಂಟೀರಿಯರ್ ಬದಲಾಗಿದೆ ಮತ್ತು ಮೊದಲ ಬಾರಿಗೆ ಇಕೋ ಎಲಿವೇಟರ್ ಅನ್ನು ಸ್ಥಾಪಿಸಲಾಗಿದೆ. ಕಿಚ್ಚ ಸುದೀಪ್ ಸ್ಪರ್ಧಿಗಳ ಪ್ರಾಮಾಣಿಕತೆಯ ಕೊರತೆಯನ್ನು ಪ್ರಶ್ನಿಸಿದ್ದಾರೆ.
ಬಿಗ್‌ಬಾಸ್ ಕನ್ನಡ 11ರ ಎರಡನೇ ವಾರದ ಪಂಚಾಯಿತಿ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಹಲವು ವಿಚಾರಗಳು ನಡೆದವು. ಸರ್ಗ-ನರಕ ಒಂದಾಗಿದೆ. ಅದರ ಬದಲಾಗಿ ಹಿಂದಿನ ಎಲ್ಲಾ ಸೀಸನ್‌ನಲ್ಲಿ ಇದ್ದಂತೆ ಜೈಲಿನ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಬಿಗ್ಬಾಸ್ ಮನೆಗೆ ಹೊಸ ಕಳೆ ಬಂದಿದೆ. ನರಕದ ಮನೆಯನ್ನು ತೆಗೆದ ಬಳಿಕ ಮನೆಯ ಇಂಟೀರಿಯರ್ ಬದಲಾವಣೆ ಮಾಡಲಾಗಿದೆ. ಅಂತರಂಗ ಬಹಿರಂಗ ಚದುರಂಗ ಎಂದು ಬರೆದಿರುವುದು ಹೈಲೆಟ್ ಆಗಿ ಕಾಣುತ್ತಿದೆ. ಡೈನಿಂಗ್ ಟೇಬಲ್ ಕೂಡ ತುಂಬಾ ಚೆನ್ನಾಗಿದೆ.
ಇದರ ಜೊತೆಗೆ ಬಿಗ್ ಬಾಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಕೋ ಎಲಿವೇಟರ್ ಬಂದಿದೆ. ಇದನ್ನ ಬಿಗ್ ಬಾಸ್ ಕ್ಯಾಪ್ಟನ್ ಶಿಶಿರ್ ಮೊದಲ ಬಾರಿ ಚಲಾಯಿಸಿ ಅನುಭವ ಪಡೆದುಕೊಂಡಿದ್ದಾರೆ. ಈ ಲಿಫ್ಟ್ ಅನ್ನು ಎಲ್ಲರೂ ಬಳಸಬಹುದೆಂದು ಸ್ವತಃ ಸುದೀಪ್ ಅವರೇ ಹೇಳಿದ್ದಾರೆ.
ಟ್ರೂಆಲ್ಟ್ ಬಯೋಎನರ್ಜಿ: ಭಾರತದ ಇಂಧನ ಭವಿಷ್ಯದ ಗೇಮ್ ಚೇಂಜರ್ ಮುರುಗೇಶ್ ಮತ್ತು ವಿಜಯ್ ನಿರಾಣಿ
ಇದಾದ ಬಳಿಕ ಸುದೀಪ್ ತನ್ನ ಪಂಚಾಯತಿಯಲ್ಲಿ ಸ್ಪರ್ಧಿಗಳಿಗೆ ಪ್ರಾಮಾಣಿಕತೆಯ ಬಗ್ಗೆ ಪಾಠ ಮಾಡಿದ್ದಾರೆ. ಪ್ರಾಮಾಣಿಕತೆ ಕೊರತೆ ಇದೆ ಪ್ರಾಮಾಣಿಕರು ಯಾರಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇಷ್ಟು ಮಾತ್ರವಲ್ಲ ಇಷ್ಟವರೆಗಿನ ಕಿಚ್ಚನ ಚಪ್ಪಾಳೆ ವ್ಯಕ್ತಿತ್ವಕ್ಕೆ ಸಿಕ್ಕಿತ್ತು. ಹಿಂದಿನ ಸೀಸನ್ ನಲ್ಲಿ ಬಳೆಗೆ ಕೊಟ್ಟಿದ್ದೆ. ಆದರೆ ಈ ಬಾರಿ ನನಗೆ ನಾನೇ ಕಿಚ್ಚನ ಚಪ್ಪಾಳೆ ಕೊಟ್ಟುಕೊಳ್ಳುತ್ತೇನೆ ಎಂದು ಸಿಟ್ಟಾಗಿದ್ದಾರೆ. ಇಡೀ ವಾರ ಮನೆಯ ಮಂದಿ ಸುದೀಪ್ ನಿರೀಕ್ಷಿದಷ್ಟು ಏನೂ ಮಾಡದೆ ಚಪ್ಪಾಳೆ ಕೊಡಬೇಕು ಅನಿಸದೇ ರೀತಿಯಲ್ಲಿ ಆಡಿ ಮನೆಯ ಮೂಲ ನಿಯಮಗಳನ್ನು ಬ್ರೇಕ್ ಮಾಡಿರುವುದು ಸೇರಿ ಹಲವು ಕಾರಣ ನೀಡಿದ್ದಾರೆ.
ಮಂಗಳೂರಿಗೆ ನಟ ಸಂಜಯ್ ದತ್, ಕ್ರಿಕೆಟಿಗ ಶಿವಂ ದುಬೆ ಆಗಮನ, ಕಟೀಲು ಕ್ಷೇತ್ರಕ್ಕೆ ಭೇಟಿ
ಇನ್ನು ಮನೆಯಲ್ಲಿ ಮೂಲ ನಿಯಮ ಮುರಿಯಲು ಕಾರಣರಾದ ಸುರೇಶ್ ಅವರಿಗೆ ಮತ್ತು ಇತರರಿಗೆ ಪ್ರಚೋದನೆ ಮಾಡಿರುವುದನ್ನು ಸೇರಿ ಎಲ್ಲರಿಗೆ ಬೈದರು. ಜೊತೆಗೆ ನಾಮಿನೇಟ್ ಮಾಡಲು ಸ್ಪರ್ಧಿಗಳು ನೀಡಿದ ಕಾರಣಕ್ಕೆ ಸುದೀಪ್ ಸಿಟ್ಟಾದರು. ಗೌತಮಿ, ಭವ್ಯ ಸೇರಿ ಹಲವರು ಮನೆಯ ಮೂಲ ನಿಯಮ ಮುರಿದ ಕಾರಣ ಕೊಟ್ಟದ್ದಕ್ಕೆ ಸ್ಪಷ್ಟನೆ ಕೊಟ್ಟ ಕಿಚ್ಚ , ಬಿಗ್‌ಬಾಸ್ ಮೂಲ ನಿಯಮ ಮುರಿದಿದ್ದಕ್ಕೆ ಕಾರಣ ಕೊಟ್ಟು ಇಡೀ ಮನೆಯನ್ನು ನಾಮಿನೇಟ್ ಮಾಡಿದ ಮೇಲೆ ಅದು ಹೇಗೆ ನೀವು ಕಾರಣ ಕೊಡುತ್ತೀರಿ, ಕಾರಣ ಕೊಡುವಾಗ ನೀವು ಪ್ರಾಮಾಣಿಕವಾಗಿ ಕಾರಣ ನೀಡಿ, ನಿಮ್ಮದೇ ಕಾರಣ ಆಗಿರಬೇಕು, ಮನೆಯ ಮೂಲ ನಿಯಮ ಮುರಿದಿರುವುದನ್ನು ನೋಡಿರುವುದು ಬಿಗ್‌ಬಾಸ್ ಹೊರತು ನೀವಲ್ಲ ಎಂದು ಖಡಕ್ ಆಗಿ ಹೇಳಿದರು.