ಲೈವ್ ಇರಲ್ಲ, ಎಕ್ಸಟ್ರಾ ವಿಡಿಯೋ ಕೊಡಲ್ಲ; ಬಿಗ್ ಬಾಸ್ ಸೀಸನ್ 11ರ ಬಗ್ಗೆ ಮುಚ್ಚಿಟ್ಟಿದ್ದ ಬೇಸರದ ಸತ್ಯ ಇಲ್ಲಿದೆ!
ಹೊಸ ಬದಲಾವಣೆಗೆ ಮುಂದಾದ ಬಿಗ್ ಬಾಸ್ ಸೀಸನ್ 11. ಆನ್‌ಲೈನ್‌ನಲ್ಲಿ ನೋಡೋರೂ ಏನ್ ಮಾಡ್ಬೇಕು ಅನ್ನೋದು ಈಗ ದೊಡ್ಡ ಪ್ರಶ್ನೆ....
ಕನ್ನಡ ಕಿರುತೆರೆಯಲ್ಲಿ ದೊಡ್ಡ ಇತಿಹಾಸ ಸೃಷ್ಟಿ ಮಾಡಿದ ಬಿಗ್ ಬಾಸ್ ರಿಯಾಲಿಟಿ ಶೋ ಇದೀಗ 11ನೇ ಸೀಸನ್‌ಗೆ ಕಾಲಿಟ್ಟಿದೆ. ಸೆಪ್ಟೆಂಬರ್ 29ರಂದು ಕಾರ್ಯಕ್ರಮ ಆರಂಭವಾಗಲಿದ್ದು, ಕಿಚ್ಚ ಸುದೀಪ್ ಚಾಲನೆ ನೀಡಲಿದ್ದಾರೆ. ಸ್ಪರ್ಧಿಗಳು ಲಿಸ್ಟ್‌ನಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಿಗಿದ್ದರೆ, ಇಂತವರೇ ಹೋಗಬಹುದು ಅಂತ ಟ್ರೋಲಿಗರು ಗೆಸ್ ಮಾಡುತ್ತಿದ್ದಾರೆ. ಗ್ರಾಂಡ್ ಓಪನಿಂಗ್ ದಿನ ಯಾರೆಲ್ಲಾ ಇದ್ದಾರೆ ಅನ್ನೋದು ಕನ್ಫರ್ಮ್ ಆಗುತ್ತದೆ. ಪ್ರತಿಯೊಂದು ವಾವ್ ಎಲಿಮೆಂಟ್ ಹೊಂದಿರುವ ಸೀಸನ್ ಇದಾಗಿರಲಿದೆ ಎಂದು ವೀಕ್ಷಕರು ಗೆಸ್ ಮಾಡುತ್ತಿದ್ದಂತೆ ಬೇಸದ ಒಂದೆರಡು ಎಲಿಮೆಂಟ್ ರಿವೀಲ್ ಆಗಿದೆ.
ಲೈವ್ ಇರಲ್ಲ:
ಪ್ರತಿ ಸೀಸನ್ ಬಿಗ್ ಬಾಸ್ ರಿಯಾಲಿಟಿ ಶೋನ್ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಟಿವಿಯಲ್ಲಿ ಇಡೀ ದಿನದ ಘಟನೆಯನ್ನು ಕೇವಲ ಒಂದು ಗಂಟೆ ಎಪಿಸೋಡ್ ರೀತಿಯಲ್ಲಿ ನೋಡಲು ಬೋರಾಗುತ್ತದೆ ಎನ್ನುವವರು ಆಗಾಗ ಆನ್‌ಲೈನ್‌ನಲ್ಲಿ ಲೈವ್ ಸ್ಟ್ರೀಮ್ ನೋಡುತ್ತಿದ್ದರು. ಕೆಲವೊಂದು ಘಟನೆಗಳ ಬಗ್ಗೆ ಕ್ಲಾರಿಟಿ ಇಲ್ಲದಿದ್ದಾಗಲೂ ಸ್ಪರ್ಧಿಗಳು ಕುಟುಂಬಸ್ಥರು ಹಿಂದೆ ಮುಂದೆ ತಿಳಿದುಕೊಳ್ಳಲು ಲೈವ್ ನೋಡುತ್ತಿದ್ದರು. ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಬಿಡುವಿನ ಸಮಯದಲ್ಲಿ ಲೈವ್ ಆನ್ ಮಾಡಿಕೊಂಡು ಕೆಲಸ ಮಾಡುತ್ತಿದ್ದರು, ಅಷ್ಟರ ಮಟ್ಟಕ್ಕೆ ದೊಡ್ಡ ಕ್ರೇಜ್ ಕ್ರಿಯೇಟ್ ಮಾಡಿತ್ತು ಬಿಗ್ ಬಾಸ್. ಆದರೀಗ 24/7 ಲೈವ್ ಇರುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಗುಲ್ಲೆಬ್ಬಿದೆ. ಈ ಮಾಹಿತಿ ವೀಕ್ಷಕರ ಕಿವಿಗೆ ಬೇಸರ ವ್ಯಕ್ತ ಪಡಿಸಿದ್ದಾರೆ.
ನಿವೇದಿತಾ ಗೌಡ ಆದಾಯ ಒಂದೆರಡಲ್ಲ; ನಾಲ್ಕೈದು ಕಡೆಯಿಂದ ಬರ್ತಿದೆ ಲಕ್ಷ ಲಕ್ಷ ಹಣ!!
ಎಕ್ಸಟ್ರಾ ಕ್ಲಿಪ್ ಇರಲ್ಲ:
ಸಂಚಿಕೆಯಲ್ಲಿ ಪ್ರಸಾರವಾಗದ ಕೆಲವೊಂದು ದೃಶ್ಯಗಳನ್ನು ಅನ್‌ಸೀನ್ ಕ್ಲಿಪ್ಸ್‌ಗಳಲ್ಲಿ ನೋಡಬಹುದಿತ್ತು. ಟಿಆರ್‌ಪಿಗೋಸ್ಕರ ಹಾಟ್ ಆಂಡ್ ಸೆನ್ಸೇಷನ್ ಕ್ರಿಯೇಟ್ ಮಾಡುವ ದೃಶ್ಯಗಳನ್ನು ಮಾತ್ರ ಸಂಚಿಕೆಯಲ್ಲಿ ಪ್ರಸಾರ ಮಾಡುತ್ತಿದ್ದರು ಆದರೆ ಅಡುಗೆ ಮನೆ, ಬಾತ್‌ರೂಮ್, ಬೆಡ್ ರೂಮ್ ಮತ್ತು ಗಾರ್ಡನ್ ಏರಿಯಾದಲ್ಲಿ ನಡೆವ ಮಾತಿನ ಚಕಾಮಕಿ ಕಾಮಿಡಿ ಮತ್ತು ಟೈಂ ಪಾಸ್ ತರಲೆ ಕೆಲಸಗಳು ನೋಡಲು ಎಕ್ಸಟ್ರಾ ಕ್ಲಿಪ್ ಅಗತ್ಯವಿತ್ತು. ಆದರೆ ಈ ಸೀಸನ್ ಇದೂ ಇರುವುದಿಲ್ಲ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಎಷ್ಟು ಸತ್ಯ ಎಷ್ಟು ಸುಳ್ಳು ಗೊತ್ತಿಲ್ಲ ಆದರೆ ಇದರಿಂದ ವೀಕ್ಷಕರು ಬೇಸರ ಮಾಡಿಕೊಳ್ಳುವುದು ಗ್ಯಾರಂಟಿ.
ಕಳೆದ ಒಂದೆರಡು ಸೀಸನ್‌ಗಳಿಂದ ವಿವಾದಾತ್ಮಕ ವಿಷಯಗಳನ್ನು ಸಂಚಿಕೆಗಳಲ್ಲಿ ಪ್ರಸಾರ ಮಾಡುತ್ತಿರಲಿಲ್ಲ ಅದನ್ನು ವೀಕ್ಷಕರು ಲೈವ್‌ನಲ್ಲಿ ನೋಡಿಕೊಳ್ಳುತ್ತಿದ್ದರು. ಆ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದರು, ಇದರಿಂದ ಸ್ಪರ್ಧಿಗಳು ಮತ್ತು ವಾಹಿನಿಯ ಮೇಲೆ ಒತ್ತಡ ಹೆಚ್ಚಾಗಿತ್ತು.
ಹಿಂದೆ ಮಾಡಿದ್ದೆಲ್ಲಾ ಬುದ್ಧಿವಂತರಿಗೆ ಆದರೆ ಇದು ಅತಿ ಬುದ್ಧಿವಂತರಿಗೆ ಮಾತ್ರ; UI ಸತ್ಯ ಬಿಚ್ಚಿಟ್ಟ ಉಪ್ಪಿ!
ಇನ್ನು ಸೀಸನ್ 11ರ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವುದು ಗಿಚ್ಚಿ ಗಿಲಿಗಿಲಿ ವಿನ್ನರ್ ಹುಲಿ ಕಾರ್ತಿಕ್, ಗೀತಾ ಸೀರಿಯಲ್ ಭವ್ಯಾ ಗೌಡ, ಪಾರು ಸೀರಿಯಲ್ ಮೋಕ್ಷಿತಾ, ನಮ್ಮನೆ ಯುವರಾಣಿ ನಟ ದೀಪಕ್ ಗೌಡ, ಒಲವಿನ ನಿಲ್ದಾಣ ನಟ ಅಕ್ಷಯ್ ನಾಯಕ್,ಬೈಕ್ ರೈಡರ್ ಲೇಖಿ ಗೋಸ್ವಾಮಿ. ಇವೆರಲ್ಲಾ ಮನೆ ಎಂಟ್ರಿ ಕೊಟ್ಟರೆ ಖಂಡಿತಾ ಟಿಆರ್‌ಪಿ ರೈಸ್ ಆಗುವುದರಲ್ಲಿ ಅನುಮಾನವಿಲ್ಲ.