BBK11: ವೇಸ್ಟ್ ನನ್ ಮಗನೇ, ಸೆಡೆ ನನ್ ಮಗನೇ ಎಂದ ರಜತ್! ಕುಗ್ಗಿ ಹೋದ ಸುರೇಶ್ ಮನೆ ಬಿಡುವ ನಿರ್ಧಾರ
ಬಿಗ್ ಬಾಸ್ ಕನ್ನಡ 11ರಲ್ಲಿ ರಜತ್ ಮತ್ತು ಸುರೇಶ್ ನಡುವೆ ಮಾತಿನ ಚಕಮಕಿ ನಡೆದಿದೆ. ರಜತ್ ಬಳಸಿದ ಕೆಟ್ಟ ಪದಗಳಿಂದ ಮನನೊಂದ ಸುರೇಶ್ ಮನೆ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.
ಬಿಗ್ ಬಾಸ್ ಕನ್ನಡ 11ರಲ್ಲಿ ಕ್ಯಾಪ್ಟನ್ ಭವ್ಯಾ ಗೌಡ ಮತ್ತು ಶೋಭಾ ಶೆಟ್ಟಿ ಎರಡು ತಂಡಗಳನ್ನು ಮಾಡಲಾಗಿದೆ. ಭವ್ಯಾ ಅವರ ನೀಲಿ ತಂಡದ ಸದಸ್ಯ ಸುರೇಶ್ ಅವರ ವಿರುದ್ಧ ಶೋಭಾ ಅವರ ತಂಡದ ಸದಸ್ಯ ಹೊಸದಾಗಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ರಜತ್ ಕೆಟ್ಟ ಪದಗಳನ್ನು ಬಳಸಿದ್ದಾರೆ. ಬಿಗ್‌ಬಾಸ್ ರಜತ್ ಬಳಸಿರುವ ಪದಗಳಿಗೆ ಬೀಪ್ ಪದಗಳನ್ನು ಬಳಸಿದ್ದಾರೆ. ರಜತ್ ಬಳಸಿದ ಪದಗಳಿಂದ ಕುಗ್ಗಿ ಹೋದ ಸುರೇಶ್ ದಯವಿಟ್ಟು ಮನೆ ಬಿಟ್ಟು ಹೋಗುತ್ತೇನೆ. ಮನೆಯಿಂದ ಹೊರಗೆ ಕಳುಹಿಸಿ ಎಂದು ಬ್ಯಾಗ್ ಪ್ಯಾಕ್ ಮಾಡಿ ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.
ಮನೆಯ ಎರಡು ತಂಡಗಳಿಗೆ ಚೆಂಡು ನಿನ್ನ ಬಿಡಲಾರೆ ಎಂಬ ಟಾಸ್ಕ್ ಅನ್ನು ಬಿಗ್‌ಬಾಸ್ ನೀಡಿದ್ದರು. ಎರಡು ತಂಡದಿಂದ ಇಬ್ಬರಂತೆ ನಾಲ್ಕು ಜನ ಈ ಟಾಸ್ಕ್ ಆಡಬೇಕಿತ್ತು. ಹೀಗಾಗಿ ಶೋಭಾ ತಂಡದಿಂದ ಮಂಜು ಮತ್ತು ರಜತ್ , ಭವ್ಯಾ ಅವರ ತಂಡದಿಂದ ಸುರೇಶ್ ಮತ್ತು ತ್ರಿವಿಕ್ರಮ್ ಅವರು ಪಂಜರದೊಳಗೆ ಬಿಗ್‌ಬಾಸ್ ಕಳಿಸುವ ಬಾಲ್ ಅನ್ನು ಹಿಡಿದು ತಮಗೆ ಮೀಸಲಿರಿಸಿ ಸ್ಥಾನದಲ್ಲಿ ಇಡಬೇಕಿತ್ತು.
ಎ.ಆರ್. ರೆಹಮಾನ್-ಸಾಯಿರಾ ವಿಚ್ಚೇದನ: ಅಪ್ಪ-ಅಮ್ಮ ಬೇರೆಯಾದ ಬಗ್ಗೆ ಮಗ ಅಮೀನ್ ಭಾವುಕ ಪೋಸ್ಟ್!
ಹೀಗೆ ರಚಿಸಲಾಗಿದ್ದ ಪಂಜರದಲ್ಲಿ ಇದ್ದ ನಾಲ್ವರು ಆಡುತ್ತಿರುವಾಗ ಎರಡು ಬಾಲ್ ಅನ್ನು ಶೋಭಾ ಅವರ ಕೆಂಪು ತಂಡವರು ಹೊರಗಡೆ ತಂದಿಟ್ಟರು. ಆದರೆ ಮೂರನೇ ಬಾಲ್ ಹಿಡಿಯುವ ವೇಳೆ ತ್ರಿವಿಕ್ರಮ್ ಕೈನಲ್ಲಿದ್ದ ಬಾಲ್ ಅನ್ನು ಹೊರಗಡೆ ತರಲು ಕೆಂಪು ತಂಡದವರು ತಡೆದರು. ಮಂಜು ಕಾಲು ಹೊರಗಡೆ ಮತ್ತು ತ್ರಿವಿಕ್ರಮ್ ಕೈ ಹೊರಗಡೆ ಇತ್ತು. ಅಲ್ಲಿಂದ ಜಗಳ ಆರಂಭವಾಯ್ತು. ಉಸ್ತುವಾರಿ ಚೈತ್ರಾ ಮತ್ತು ಶಿಶಿರ್ ಕೂಡ ತಮ್ಮ ತಂಡವನ್ನು ಬಿಟ್ಟು ಕೊಡಲಿಲ್ಲ.
ಟಾಸ್ಕ್ ನಡೆಯುವಾಗ ಮಾತಿನ ಚಕಮಕಿ ನಡೆಯೋದು ಸಾಮಾನ್ಯ. ನೆಟ್ ಒಳಗೆ ಇದ್ದ ನಾಲ್ವರ ಮಧ್ಯೆ ವಾಗ್ವಾದ ಆರಂಭವಾಯ್ತು. ಮಂಜು ಮತ್ತು ಸುರೇಶ್ ಕಿರುಚಾಡುತ್ತಿದ್ದಾಗ ಮಧ್ಯೆ ಬಂದ ರಜತ್ ಏಯ್ ಕಾಲಿನಲ್ಲಿ ಬಾಲ್ ಇತ್ತು ಏನೋ ಮಾಡ್ತಿಯಾ ಈವಾಗ ಎಂದು ಧ್ವನಿ ಏರಿಸಿ ಸುರೇಶ್ ನನ್ನು ಪ್ರಶ್ನಿಸಿದ್ದಾರೆ. ಇಬ್ಬರ ಮಧ್ಯೆ ನೀನು -ನೀನು ಎಂದು ವಾಗ್ವಾದ ಜೋರಾಗಿದೆ.
ಬಿಗ್ ಬಾಸ್ ಕನ್ನಡ 11: ಮೊದಲ ಟಾಸ್ಕ್‌ನಲ್ಲಿ ಗೆದ್ದ ಭವ್ಯಾ ತಂಡ, ಸೋಲಾಗಿದ್ದಕ್ಕೆ ಶೋಭಾ ಶೆಟ್ಟಿ ಕಣ್ಣೀರು!
ರಜತ್: ಹ್ಹೇ... ಬಾರಲೇ, ಆಡಲೇ, ಮಾಡಲೇ, ತಾಕತ್ತಿದ್ದರೆ ಮಾಡಿ ತೋರ್ಸಲೇ, ವೇಸ್ಟ್ ನನ್ ಮಗನೇ...
ಸುರೇಶ್: ಮಗನೇ ಗಿಗನೇ ಅನ್ನಬೇಡ ಏನೋ ಮಾತಾಡ್ತೀಯಾ?
ರಜತ್:ಏಯ್ ಹೋಗಲೇ, ಏನೋ ಮಾತಾಡ್ತಿಯಾ?
ಸುರೇಶ್: ಮಗನೇ ಗಿಗನೇ ಮಾತನಾಡ್ಬೇಡ
ರಜತ್:ಏಯ್, ಏನೋ ಮಾತಾಡ್ತಿಯಾ? ಬೀಪ್.... ಬೀಪ್.... ಬೀಪ್...
ಇದರಿಂದ ಸಿಟ್ಟಿಗೆದ್ದ ಸುರೇಶ್ ನಾನು ಆಡೋದಿಲ್ಲ ಬಿಗ್‌ಬಾಸ್ ಎನ್ನುತ್ತಾ ಬಲೆಯಿಂದ ಹೊರಬಂದಿದ್ದಾರೆ. ಅವನು ಕೆಟ್ಟ ಪದ ಬಳಸಿದ್ದಾನೆ. ನಾನು ಆಡೋದಿಲ್ಲ ಎಂದಿದ್ದಾರೆ. ಇದಕ್ಕೆ ರಜತ್ ಏಯ್ ಹೌದು ನಾನು ಅಂದೆ ಕಣೋ ಏನೀವಾಗ? ಎಂದು ಇನ್ನಷ್ಟು ಬಿಪ್..... ಬೀಪ್ ... ಪದ ಬಳಸಿದ್ದಾರೆ. ಇದಕ್ಕೆ ಶಿಶಿರ್ ಧ್ವನಿ ಎತ್ತಿದ್ದಕ್ಕೆ ರಜತ್ ಏಯ್ ಏನೋ ಶಿಶಿರ್ ನಾನು ಅವನತ್ರ ಅಂದಿದ್ದು, ನೀನು ಮಾತನಾಡಬೇಡ ಎಂದಿದ್ದಾರೆ.
ಇತ್ತ ಸುರೇಶ್ ಬಿಗ್‌ಬಾಸ್ ಇವನು ನಮ್ಮ ಅಪ್ಪಾನ? ನಾನು ಆಡೋದಿಲ್ಲ. ನನಗೆ ಇಂತದೆಲ್ಲ ಪದ ಕೇಳಲು ಆಗುವುದಿಲ್ಲ. ಅವರಿಗೆ ಮಾತ್ರನಾ ಪದಗಳು ಎಂದು ಹೇಳಿದ್ದಕ್ಕೆ ನೆಟ್ ಒಳಗಡೆಯಿದ್ದ ರಜತ್ ಮತ್ತೆ ತನ್ನ ಏರುಧ್ವನಿಯಲ್ಲಿ ಏಯ್ ಹೋಗಲೇ ಕಂಡಿದ್ದೀನಿ. ಹೋಗೋ ಅಮಿಕೊಂಡು ಕಂಡಿದಿನಿ ಲೋ. ಹೋಗಲೇ.. ಸೆಡೆ ನನ್ ಮಗ ಬಳೆ ತೊಟ್ಕೋ ಎಂದೆಲ್ಲ ಹೇಳಿದ್ದಾರೆ.
ಇದು ಸುರೇಶ್ ಅವರಿಗೆ ಮತ್ತಷ್ಟು ಬೇಸರ ತರಿಸಿದ್ದು, ಬಿಗ್ಬಾಸ್ ಜಸ್ಟೀಸ್ ಕೊಡ್ತೀನಿ ಅಂತೀರಿ, ಏನಿದು? ನಾವು ಸೆಡೆ ನನ್ ಮಕ್ಳಾ? ಬಿಗ್‌ಬಾಸ್ ಓಪನ್ ಮಾಡಿ ಎಂದು ಮೈನ್ ಗೇಟ್ ಗೆ ಹೋಗಿ ತಟ್ಟಿದ್ದಾರೆ. ರೂಲ್ ಬುಕ್ ನಲ್ಲಿ ಏನಿದೆ? ನಾನು ಸೆಡೆನಾ? ನಮ್ಮ ಅಪ್ಪ ಅಮ್ಮ ನನ್ನನ್ನು ಸೆಡೆ ತರ ಹುಟ್ಟಿಸಿದ್ರಾ? ತಂಡದ ಜೊತೆಗೆ ಬೇಸರದಿಂದ ಅಳುತ್ತಾ ಕುಳಿತರು. ನಾಳಿನ ಸಂಚಿಕೆಯಲ್ಲಿ ಸುರೇಶ್ ಅವರು ಅತ್ಯಂತ ಬೇಸರದಿಂದ ಮನೆಯಲ್ಲಿ ಕುಳಿತು ಬ್ಯಾಗ್ ಎಲ್ಲವೂ ಪ್ಯಾಕ್ ಮಾಡಿ ಮನೆಯಿಂದ ಹೋಗುತ್ತೀನಿ. ಒಂದು ಸಲ ಹೋದ್ರೆ ಮತ್ತೆ ಈ ಶೋಗೆ ಬರಲ್ಲ ಎಂದು ಅಳುತ್ತಾ ಕುಳಿತಿರುವ ಪ್ರೋಮೋವನ್ನು ಬಿಗ್‌ಬಾಸ್ ತೋರಿಸಿದ್ದಾರೆ.