ಬಿಗ್‌ಬಾಸ್‌ ಕನ್ನಡ ಸೀಸನ್ 11 ರಲ್ಲಿ ಅನಿರೀಕ್ಷಿತ ತಿರುವು. ಸ್ಪರ್ಧಿಗಳ ವರ್ತನೆಯಿಂದ ಬೇಸತ್ತು ಬಿಗ್‌ಬಾಸ್‌ ಮನೆಯಿಂದ ಹೊರನಡೆದಿದ್ದಾರೆ. ಆದರೆ ಈ ವೀಕ್‌ ಮಿಡ್‌ ವೀಕ್‌ ಎಲಿಮಿನೆಶನ್‌ ಇರಲಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.

ಬಿಗ್‌ಬಾಸ್‌ ಕನ್ನಡದ 11 ನೇ ಸೀಸನ್‌ ಹಲವು ಚರ್ಚೆಗಳಿಗೆ ವಿವಾದಗಳಿಗೆ ನಾಂದಿ ಹಾಡಿದೆ. ಭಾನುವಾರದ ಎಪಿಸೋಡ್‌ ಬಳಿಕ ರಾತ್ರಿ ಇದ್ದಕ್ಕಿದ್ದಂತೆಯೇ ಇದು ನನ್ನ ಕೊನೆಯ ಬಿಗ್‌ಬಾಸ್ ಶೋ ಇನ್ನು ಮುಂದೆ ನಾನು ನಿರೂಪಣೆ ಮಾಡಲ್ಲ ಎಂದು ಬಾದ್‌ಶಾ ಸುದೀಪ್ ಘೋಷಿಸಿದ್ರು. ಇದರಿಂದ ಕಿಚ್ಚನ ಅಭಿಮಾನಿಗಳು ಮತ್ತು ಶೋ ವೀಕ್ಷಕರ ಹೃದಯ ಒಡೆದಂತಾಯ್ತು. ಇದಾದ ನಂತರ ಹಲವು ಬೆಳವಣಿಗೆಗಳು ಬಿಗ್‌ಬಾಸ್ ವಿಚಾರದಲ್ಲಿ ನಡೆದಿದೆ. 

ಇದಕ್ಕೂ ಮುನ್ನ ನಿನ್ನೆಯ ಎಪಿಸೋಡ್‌ ನ ಕೊನೆಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಎಚ್ಚರಿಕೆ ಕೂಡ ನೀಡಿದ್ದರು. ತಪ್ಪು ಒಂದಲ್ಲ ಎರಡಲ್ಲ ಈ ಮನೆಯಲ್ಲಿ ನಡೆದಿದ್ದು, ನಿಯಮಗಳನ್ನು ಬ್ರೇಕ್ ಮಾಡಿದ್ದು ಒಂದಲ್ಲ ಎರಡಲ್ಲ. ಗ್ರಾಂಟೆಡ್ ಆಗಿ ತೆಗೆದುಕೊಂಡಿದ್ದು ಒಂದೆರಡು ಜಾಗದಲ್ಲಲ್ಲ. ಇಡೀ ಮನೆ ನಾಮಿನೇಟ್‌ ಆದಾಗ, ಈ ಪರಿಸ್ಥಿತಿ ಬಂದಾಗ ಕೆಲವೊಮ್ಮೆ ಮೋಸ್ಟ್ ಅನ್‌ಡಿಸರ್‌ವಿಂಗ್ ಸ್ಪರ್ಧಿಗಳು ನೇರವಾಗಿ ಮನೆಯಿಂದ ಹೊರ ಹೋಗ್ತಾರೆ. ಇದು ನಿಮಗೆಲ್ಲ ಅರ್ಥ ಆಗಬೇಕೆಂದು ನಡೆದ ಟೆಸ್ಟ್, ಈ ಸೀಸನ್‌ ನಲ್ಲಿ ಇದು ಮತ್ತೆ ನಡೆಯುವುದಿಲ್ಲ. ರೂಲ್ಸ್ ಬಹುಮುಖ್ಯ. ಯಾವುದು ಕಾರಣ ಇಲ್ಲದೆ ಈ ಮನೆಯಲ್ಲಿ ಏನೂ ನಡೆಯೋದಿಲ್ಲ. ಹೊಸ ಅಧ್ಯಾಯ, ಹೊಸ ಬಿಗ್‌ಬಾಸ್‌ ನೀವೆಂದೂ ನೋಡಿರಲ್ಲ. ಇಲ್ಲಿಂದ ನೀವು ನೋಡುತ್ತೀರಿ. expect the unexpected ಗೆ ರೆಡಿಯಾಗಿ ಎಂದು ಮುಂದಿನ ವಾರ ಸಿಕ್ತೇನೆ ಎಂದು ಸ್ಪರ್ಧಿಗಳಿಗೆ ಹೇಳಿದ್ರು.

BBK11: ಮಹಿಳಾ ಆಯೋಗದ ನೋಟಿಸ್ ಗೆ ಸ್ಪರ್ಧಿಗಳಿಂದಲೇ ಉತ್ತರ ಕೊಡಿಸಿದ ಸುದೀಪ್!

ಅದಾದ ನಂತ ವೀಕ್ಷಕರಿಗೆ ತಿಳಿಸಿದ ಸುದೀಪ್‌, ನಾನು ಎಕ್ಸ್‌ಪೆಟ್‌ಡ್‌ ದಿ ಅನ್‌ ಎಕ್ಸ್‌ಪೆಕ್ಟೆಡ್‌ ಅಂತ ಅವರಿಗೆ ಒಂದು ಮಾತು ಹೇಳಿದೆ. ಇದು ವಾರ್ನ್ ಕೊಟ್ಟ ಹಾಗೆ ಕೂಡ ಇತ್ತು. ತಾವು ಕೂಡ (ವೀಕ್ಷಕರು) ಅವರೊಟ್ಟಿಗೆ expect the unexpected ಗೆ ರೆಡಿಯಾಗಿ ಎಂದು ಹೇಳಿದ್ರು.

ಇಂದಿನ ಸಂಚಿಕೆಯಲ್ಲಿ ಇದಕ್ಕೆ ತಕ್ಕನಾಗಿ ಸ್ಪರ್ಧಿಗಳಿಗೆ ಬಿಗ್‌ಬಾಸ್ ಶಾಕ್ ಕೊಟ್ಟಿದೆ. ಖುದ್ದಾಗಿ ಬಿಗ್​ಬಾಸ್​​ ಮನೆಯಿಂದ ಹೊರಕ್ಕೆ ಬರುವುದಾಗಿ ಘೊಷಿಸಿದೆ. ಬಿಗ್‌ಬಾಸ್‌ ಮನೆಯ ಟೆಲಿಫೋನ್ ಬೂತ್ ಗೆ ಕರೆ ಮಾಡಿ ತಿಳಿಸಿದ ಬಿಗ್‌ಬಾಸ್‌, ನಿಮ್ಮೆಲ್ಲರ ವರ್ತನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಉಡಾಫೆ, ಅಪ್ರಾಮಾಣಿಕತೆಯ ನಡೆ ಇತ್ಯಾದಿಗಳಿಂದ ಬೇಸತ್ತು ಈ ಕ್ಷಣದಿಂದ ನಾನು ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ. ​ಈ ಕ್ಷಣದಿಂದ ಬಿಗ್​ಬಾಸ್ ನಿಮ್ಮೊಂದಿಗೆ ಇರಲ್ಲ ಎಂದು ಹೇಳಿದ್ದಾರೆ.

ಹೀಗಾಗಿ expect the unexpected ಎಂದು ಹೇಳಿರುವುದರಿಂದ ಕಿಚ್ಚ ಹೇಳಿರುವುದಿಂದ ಅದು ಈಗ ನಿಜವಾಗಿದೆ. ಬಿಗ್‌ಬಾಸ್‌ ಸೇ ಬ್ರೆಕ್‌ ತೆಗೆದುಕೊಂಡಿದ್ದಾರೆ. ಹೀಗಾಗಿ ಏನೂ ಕೂಡ ಊಹಿಸಲು ಸಾಧ್ಯವಾಗುತ್ತಿಲ್ಲ ಮೂರನೇ ವಾರದಲ್ಲಿ ಮಿಡ್‌ ವೀಕ್‌ ಎಲಿಮಿನೇಷನ್ ನಡೆದು ಸ್ಪರ್ಧಿಯೊಬ್ಬರು ಮನೆಗೆ ಹೋಗಲಿದ್ದಾರಾ ಎಂದು ಶಂಕೆ ವ್ಯಕ್ತವಾಗಿದೆ. ಯಾಕೆಂದರೆ ಎರಡನೇ ವಾರದಲ್ಲಿ ಯಾರನ್ನೂ ಎಲಿಮಿನೇಶನ್ ಮಾಡಿಲ್ಲ. ಎಲ್ಲರನ್ನು ಸೇವ್ ಮಾಡಲಾಗಿದೆ.

ಧರ್ಮ ಸಂಕಟದಲ್ಲಿ ತ್ರಿಕೋನ ಪ್ರೇಮಕಥೆ: ಸುರೇಶ್ ಹಿಂದಿನ ಲವ್‌ಸ್ಟೋರಿ ತೆಗೆದಿದ್ದಕ್ಕೆ ಅನುಷಾ ಕೆಂಡಾಮಂಡಲ!

ಇದರ ನಡುವೆಯೇ ಬಿಗ್​ಬಾಸ್​ 9ರ ಸ್ಪರ್ಧಿಯಾಗಿದ್ದ ಕನ್ನಡ ಹೋರಾಟಗಾರ ರೂಪೇಶ್​ ರಾಜಣ್ಣ ಅವರು ಟ್ವೀಟ್‌ ಮಾಡಿ ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ ಕಿಚ್ಚ ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ. ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ನಾಳೆ ಮಾತಾಡ್ತೀನಿ ಎಂದು ಬರೆದು ಚಕ್ರವರ್ತಿ ಚಂದ್ರಚೂಡ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇದರ ಹಿಂದಿರುವ ಮರ್ಮವೇನು ಎಂದಬುದನ್ನು ಅವರೇ ಹೇಳಬೇಕಿದೆ.