ಬಿಗ್‌ಬಾಸ್ ಕನ್ನಡದಲ್ಲಿ 11ನೇ ವಾರದ ನಾಮಿನೇಷನ್ ಕಿಕ್, ಮನೆಗೆ ಎಂಟ್ರಿ ಕೊಟ್ಟ ಮಾಜಿ ಸ್ಪರ್ಧಿಗಳು!
ಬಿಗ್‌ಬಾಸ್ ಕನ್ನಡ 11ರ 11ನೇ ವಾರದ ನಾಮಿನೇಷನ್ ಪ್ರಕ್ರಿಯೆಯು ಡ್ರೋಣ್ ಪ್ರತಾಪ್, ತನಿಶಾ ಕುಪ್ಪಂಡ ಸೇರಿದಂತೆ ಹಿಂದಿನ ಸ್ಪರ್ಧಿಗಳಿಂದ ನಡೆಸಲ್ಪಟ್ಟಿದೆ. ತ್ರಿವಿಕ್ರಮ್‌ಗೆ ನಾಮಿನೇಷನ್ ಪಾಸ್‌ಗಳು ಲಭ್ಯವಾಗಿದ್ದು, ಮಂಜು ಮತ್ತು ಶಿಶರ್ ನಡುವೆ ನಾಮಿನೇಷನ್ ವೇಳೆ ಗಲಾಟೆ ನಡೆದಿದೆ.
ಬಿಗ್‌ಬಾಸ್ ಕನ್ನಡ 11 ಯಶಸ್ವಿಯಾಗಿ 10 ವಾರಗಳನ್ನು ಮುಗಿಸಿ 11 ನೇ ವಾರಕ್ಕೆ ಕಾಲಿಟ್ಟಿದೆ. ಗೌತಮಿ ಅವರು ಮನೆಯ ಕ್ಯಾಪ್ಟನ್ ಆಗಿದ್ದು, 10 ನೇ ವಾರದ ವೀಕೆಂಡ್ ಎಪಿಸೋಡ್ ನಲ್ಲಿ ಯಾರನ್ನು ಎಲಿಮಿನೇಟ್ ಮಾಡಿಲ್ಲ. ಚೈತ್ರಾ ಕುಂದಾಪುರ ಅವರನ್ನು ಎಲಿಮಿನೇಟ್ ಮಾಡಿರುವ ರೀತಿಯಲ್ಲಿ ಕನ್ಫೆಷನ್ ರೂಮ್‌ನಲ್ಲಿ ಕೂರಿಸಲಾಗಿತ್ತು.
ಅಲ್ಲಿ ಕುಳಿತುಕೊಂಡೇ ಅವರು ಮನೆಯೊಳಗೆ ಯಾರ್ ಯಾರು ಏನೇನು ಮಾತಾಡ್ತಿದ್ದಾರೆ ಎಂಬುದನ್ನು ನೋಡಿದ್ದರು. ಕೆಲವೇ ಗಂಟೆಗಳ ಕಾಲ ಕನ್ಫೆಷನ್ ರೂಮ್‌ನಲ್ಲಿದ್ದ ಚೈತ್ರಾ ಅವರನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿತು.
ಇನ್ನು ಈ ಡಿಸೆಂಬರ್ 10ರ ಸಂಚಿಕೆಯಲ್ಲಿ ಮನೆಯೊಳಗೆ 10ನೇ ಸೀಸನ್ ಸ್ಪರ್ಧಿಗಳಾಗಿದ್ದ ಡ್ರೋಣ್ ಪ್ರತಾಪ್, ತನಿಶಾ ಕುಪ್ಪಂಡ, ತುಕಾಲಿ ಸಂತೋಷ್ ಮತ್ತು ವರ್ತೂಋff ಸಂತೋಷ್ ಬಂದು ನಾಮಿನೇಶನ್ ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ. ಪ್ರತಾಪ್ ಮನೆಗೆ ಬಂದಾಗ ರಾಶಿ ಹಾಕಿರುವ ಎರಡು ಬಲೂನ್‌ನಲ್ಲಿ 2 ನಾಮಿನೇಷನ್ ಪಾಸ್ ಇದೆ ಎಂದರು. ಬಳಿಕ ತ್ರಿವಿಕ್ರಮ್ , ಶಿಶರ್ ಮತ್ತು ರಜತ್ ಅವರನ್ನು ಹುಡುಕಲು ಕಳುಹಿಸಿದರು. ಇದರಲ್ಲಿ ಎರಡೂ ಪಾಸ್ ಕೂಡ ತ್ರಿವಿಕ್ರಮ್ ಪಾಲಾಯ್ತು. ಇದರಲ್ಲಿ ಒಂದು ಪಾಸನ್ನು ರಜತ್ ಅವರಿಗೆ ತ್ರಿವಿಕ್ರಮ್ ನೀಡಿದರು.
ಇನ್ನು ಎರಡನೇ ಹಂತವಾಗಿ ತನಿಶಾ ಕುಪ್ಪಂಡ ಅವರು ಮೋಕ್ಷಿತಾ ಮತ್ತು ಮಂಜು ಅವರಿಗೆ ತಲಾ ಎರಡು ಹಾರ್ಟ್ ಬಲೂನ್ ಕೊಟ್ಟು ಇಬ್ಬರನ್ನು ನಾಮಿನೇಷನ್ ಮಾಡಿ ಬಲೂನ್ ಚುಚ್ಚುವಂತೆ ಹೇಳಿದರು. ಇದರಲ್ಲಿ ಮಂಜು ಅವರು ಶಿಶರ್ ಅವರನ್ನು ನಾಮಿನೇಟ್ ಮಾಡಿದ್ದು ಇಬ್ಬರ ಮಧ್ಯೆ ಗಲಾಟೆಗೆ ಕಾರಣವಾಯ್ತು. ಧನ್‌ರಾಜ್ ಅವರಿಗೂ ಹಾರ್ಟ್ ನೀಡಿದ ಮಂಜು ಬಳಿಕ ಚಾಕುವಿನಿಂದ ಚುಚ್ಚಿ ನಾಮಿನೇಟ್ ಮಾಡಿದ್ರು.
ಇನ್ನು ನಾಳಿನ ಸಂಚಿಕೆಯಲ್ಲಿ ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಮನೆಯೊಳಗೆ ಎಂಟ್ರಿಯಾಗಿ ಉಳಿದ ನಾಮಿನೇಷನ್ ಪ್ರಕ್ರಿಯೆಗೆ ಮುಂದಾಗುದ್ದಾರೆ. ಇನ್ನು, ತುಕಾಲಿ ಸಂತೋಷ್ ಅವರನ್ನು ಕಂಡಕೂಡಲೇ ಹನುಮಂತು, ''ಮಾವ.. ಮಾವ.." ಅಂತ ಬೆನ್ನೇರಿದ್ದಾರೆ. ಆಗ ತುಕಾಲಿ ಸಂತೋಷ್ ಅವರು, "ಮಾವ.. ಮಾವ.. ಅಂತ್ಹೇಳಿ ನನ್ ಮಾನಸನ್ನೇ ಹೊರಗೆ ಕಳಿಸಿದ್ಯಲ್ಲೋ" ಎಂದು ಕಾಮಿಡಿ ಮಾಡಿದ್ದಾರೆ.
ಡಿಸೆಂಬರ್ 10ರ ಸಂಚಿಕೆಯಲ್ಲಿ ವರ್ತೂರು ಸಂತೋಷ್ ಮತ್ತು ಬೀಗ್ ಬ್ಯಾಗ್ ಇಲ್ಲ ಅಂದರೆ ಹೇಗೆ? ಅದು ಸ್ವತಃ ಬಿಗ್ ಬಾಸ್‌ಗೂ ಗೊತ್ತಿದೆ. ಹಾಗಾಗಿ, ವರ್ತೂರು ಸಂತೋಷ್ ಅವರನ್ನು ಕೂಡ ಒಳಗೆ ಕರೆಸಿಕೊಂಡಿದ್ದಾರೆ. ಒಳಗೆ ಬರುವಾಗಲೇ ಎರಡು ಬೀನ್ ಬ್ಯಾಗ್‌ಗಳ ಜೊತೆಗೆ ರ್ತೂರು ಮನೆಗೆ ಬಂದಿದ್ದಾರೆ.
ಡಿಸೆಂಬರ್ 10ರ ಸಂಚಿಕೆಯಲ್ಲಿ ಯಾರು ನಾಮಿನೇಟ್ ಆಗುತ್ತಾರೆ. ಮನೆಯಿಂದ ಹೊರ ಹೋಗಲು ನಾಮಿನೇಟ್ ಆದವರು ಯಾರ್ಯಾರು ಎಂಬುದು ತಿಳಿದು ಬರಲಿದೆ.