ಬಿಗ್ ಬಾಸ್ ಕನ್ನಡ 11ರಲ್ಲಿ 10ನೇ ವಾರದ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಮನೆಯ ಕ್ಯಾಪ್ಟನ್ ಧನ್‌ರಾಜ್ ವಿಶಿಷ್ಟ ಟಾಸ್ಕ್ ಮೂಲಕ ಸದಸ್ಯರನ್ನು ಶ್ರೇಣೀಕರಿಸಿದರು. ಕಳೆದ ವಾರದ ಮಹಾರಾಜ ಟಾಸ್ಕ್‌ನಲ್ಲಿ ಮಂಜು ಮತ್ತು ಗೌತಮಿ ನಡೆದುಕೊಂಡ ರೀತಿಯೇ ನಾಮಿನೇಷನ್‌ಗೆ ಕಾರಣವಾಯಿತು.

ಬಿಗ್ ಬಾಸ್ ಕನ್ನಡ 11ರ 10ನೇ ವಾರದ ನಾಮಿನೇಷನ್‌ ಪ್ರಕ್ರಿಯೆ ಆರಂಭವಾಗಿದೆ. ಇದಕ್ಕಾಗಿ 66 ನೇ ದಿನ ಮನೆಯಲ್ಲಿ ಮನೆಯ ಕ್ಯಾಪ್ಟನ್‌ ಧನ್‌ರಾಜ್ ಗೆ ಬಿಗ್‌ಬಾಸ್ ಗೆ ವಿಶಿಷ್ಟ ಟಾಸ್ಕ್ ಕೊಟ್ಟರು. ಅದರ ಪ್ರಕಾರ ಯಾರು ಯಾವ ಸ್ಥಾನದಲ್ಲಿ ಇರಬೇಕು ಮತ್ತು ಯಾಕೆ ಎಂಬ ಕಾರಣವನ್ನು ನೀಡಲು ಹೇಳಿದ್ದರು. ಜೊತೆಗೆ ಈ ಮನೆಯಲ್ಲಿ ಅರ್ಹತೆ ಇರುವ ಮತ್ತು ಸೇವ್‌ ಯಾರನ್ನು ಮಾಡುತ್ತೀರಿ ಮಾಡಲು ಇಚ್ಚಿಸಿರುವ ಇಬ್ಬರು ಸದಸ್ಯರನ್ನು ಸೂಚಿಸಬೇಕಿತ್ತು. ತ್ರಿವಿಕ್ರಮ್‌ ಮತ್ತು ರಜತ್‌ ಅವರನ್ನು ಈ ಮನೆಯಲ್ಲಿ ಇರಲು ಅರ್ಹ ಆಟಗಾರರೆಂದು ಧನ್‌ರಾಜ್ ಪರಿಗಣಿಸಿದರು.

ಅಗಲಿದ ಅಕ್ಕನ ಹುಟ್ಟುಹಬ್ಬ ನೆನೆದು ಬಿಗ್‌ಬಾಸ್‌ ಮನೆಯಲ್ಲಿ ಕಣ್ಣೀರಾದ ಭವ್ಯಾ ಗೌಡ

ಮಿಕ್ಕಂತೆ ನಾಮಿನೇಷನ್‌ ನಲ್ಲಿ ಶಿಶಿರ್‌ ಗೆ ಮೊದಲ ಸ್ಥಾನ, ಹನುಮಂತಗೆ 2ನೇ ಸ್ಥಾನ, ನಂತ್ರ ಕ್ರಮವಾಗಿ ಐಶ್ವರ್ಯಾ, ಸುರೇಶ್, ಚೈತ್ರಾ, ಮೋಕ್ಷಿತಾ, ಗೌತಮಿ, ಮಂಜು ಮತ್ತು ಭವ್ಯಾ ಗೌಡ ಅವರನ್ನು ಕೊನೆಯ ಅಂದರೆ 9 ನೇ ಸ್ಥಾನದಲ್ಲಿ ಇಟ್ಟರು. ಧನ್‌ರಾಜ್ ನೀಡಿರುವ ಸ್ಥಾನಕ್ಕೆ ಅನುಗುಣವಾಗಿ ಇರುವ ಚಾಕು ಇರುವ ಕವಚವನ್ನು ಧರಿಸಿ ಕಾಲ ಕಾಲಕ್ಕೆ ಬಿಗ್‌ಬಾಸ್ ಸೂಚಿಸಿದ ವ್ಯಕ್ತಿ ಯಾವ ಇಬ್ಬರು ಸದಸ್ಯರನ್ನು ನಾಮಿನೇಟ್ ಮಾಡ್ತೀರಿ ಎಂದು ಚಾಕುವನ್ನು ತೆಗೆದು ನಾಮಿನೇಟ್‌ ಮಾಡುವ ವ್ಯಕ್ತಿಯ ಕವಚಕ್ಕೆ ಚುಚ್ಚಿ ಮನೆಯಿಂದ ಹೊರಹೋಗಲು ಯಾಕೆ ಅರ್ಹ ಎಂದು ಕಾರಣ ನೀಡಬೇಕಿತ್ತು.

 ಈ ಪ್ರಕ್ರಿಯೆಯಲ್ಲಿ ಅನೇಕರು ಕಳೆದವಾರ ಮಹಾರಾಜ ಟಾಸ್ಕ್‌ ನಲ್ಲಿ ಮಂಜು ಮತ್ತು ಗೌತಮಿ ಅವರು ನಡೆದುಕೊಂಡ ರೀತಿಯನ್ನೇ ಕಾರಣವಾಗಿ ಕೊಟ್ಟರು. ಮಂಜು ಅವರು ಗೌತಮಿ ವಿಚಾರದಲ್ಲಿ ಪಕ್ಷಪಾತ ಮಾಡಿದ್ದಾರೆ. ಟಾಸ್ಕ್‌ ಅನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಎಂಬುದು ಮನೆಯವರ ನಿಲುವು. ಬಿಗ್ ಬಾಸ್ ಮನೆಯಲ್ಲಿ ಯಾರು ಕಳಪೆ ಎಂಬುದನ್ನು ತೀರ್ಮಾನಿಸುವ ಟಾಸ್ಕ್​ನಲ್ಲಿಯೂ ಗೌತಮಿ ಮತ್ತು ಮಂಜು ಅಗ್ರಸ್ಥಾನಲ್ಲಿದ್ದರು.

ಬಿಗ್‌ಬಾಸ್‌ ಕನ್ನಡ 11: ಗೌತಮಿ ವಿರುದ್ಧ ಮನೆಯಲ್ಲಿ ಆರೋಪಗಳ ಸುರಿಮಳೆ

ಮೊದಲು ಐಶ್ವರ್ಯಾ ಸಿಂಧೋಗಿ ಅವರು ಮಂಜು ಮತ್ತು ಗೌತಮಿ ಅವರನ್ನು ಬೆನ್ನಿಗೆ ಚೂರಿ ಹಾಕುವ ಮೂಲಕ ನಾಮಿನೇಟ್ ಮಾಡಿದರು. ಇದು ಮಂಜು ಮತ್ತು ಐಶ್ವರ್ಯಾ ನಡುವೆ ದೊಡ್ಡ ಕಾಳಗಕ್ಕೆ ಕಾರಣ ಆಯ್ತು. ಮೋಕ್ಷಿತಾ ಅವರು ಕೂಡ ಇವರಿಬ್ಬರನ್ನೇ ನಾಮಿನೇಟ್ ಮಾಡಿದ್ದರು. ಹನುಮಂತ ಮತ್ತು ರಜತ್‌ ಕೂಡ ತಮಗಿಷ್ಟವಿಲ್ಲದರ ನಾಮಿನೇಟ್ ಮಾಡಿದ್ರು. ಯಾರು ಯಾರು ನಾಮಿನೇಟ್ ಮಾಡುವರು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಾಗಿದೆ