ಬಿಗ್‌ಬಾಸ್‌ ಕನ್ನಡ 11ರ 7ನೇ ವಾರದಲ್ಲಿ ಜೋಡಿ ಆಟಗಳು ಮತ್ತು ಅನಿರೀಕ್ಷಿತ ನಾಮಿನೇಶನ್ ಪ್ರಕ್ರಿಯೆಗಳು ನಡೆದಿವೆ. ಕೆಂಪು ಮತ್ತು ಕಪ್ಪು ಗುಲಾಬಿಗಳ ವಿನಿಮಯ, ಜೋಡಿಗಳ ಆಯ್ಕೆ, ಮತ್ತು ದಿನಸಿ ಟಾಸ್ಕ್‌ನಲ್ಲಿ ಕಡಿಮೆ ಅಂಕಗಳು ಈ ವಾರದ ಮುಖ್ಯಾಂಶಗಳು.

ಬಿಗ್‌ಬಾಸ್‌ ಕನ್ನಡ 11 ರಲ್ಲಿ 7 ನೇ ವಾರದ ಟಾಸ್ಕ್‌ ಈ ನಲ್ಲಿ ಜೋಡಿಯಾಗಿ ಆಟ ಆಡಬೇಕು. ತದ್ವಿರುದ್ಧವಾಗಿರುವ ವ್ಯಕ್ತಿತ್ವಗಳನ್ನು ಹುಡುಕಿ ಬಿಗ್‌ಬಾಸ್‌ ಜೋಡಿಯನ್ನಾಗಿ ಆಯ್ಕೆ ಮಾಡಿದೆ. ಇದಕ್ಕೂ ಮುನ್ನ ನಡೆದ ಟಾಸ್ಕ್‌ನಲ್ಲಿ ಕಪ್ಪು ಗುಲಾಬಿ ಮತ್ತು ಕೆಂಪು ಗುಲಾಬಿ ನೀಡಬೇಕಿತ್ತು. ಇದರಲ್ಲಿ ಗೋಲ್ಡ್‌ ಸುರೇಶ್ ಅತೀ ಹೆಚ್ಚು ಕಪ್ಪು ಗುಲಾಬಿ ಪಡೆದರು.

ಇದೇ ಟಾಸ್ಕ್‌ ನಲ್ಲಿ ಐಶ್ವರ್ಯಾ ಅವರು ತನ್ನ ಆತ್ಮೀಯ ಗೆಳೆಯ ಶಿಶಿರ್‌ ಗೆ ಕೆಂಪು ಗುಲಾಬಿ ನೀಡುವಾಗ ಮಂಡಿಯೂರಿ ಕೊಟ್ಟರು. ಮನೆಯವರೆಲ್ಲ ಇದಕ್ಕೆ ಕಾಲೆಳೆದರು. ಶಿಶಿರ್ ನಾಚಿಕೊಂಡರು. ಅಂತೆಯೇ ಶಿಶಿರ್‌ ಕೂಡ ಕೆಂಪು ಗುಲಾಬಿಯನ್ನು ಐಶ್ವರ್ಯಾ ಅವರಿಗೆ ನೀಡಿ ಹೊರಗೆ ಕೂಡ ಈ ಸ್ನೇಹವನ್ನು ಮುಂದುವರೆಸುತ್ತೇನೆ ಎಂದರು. ಇನ್ನು ಭವ್ಯಾ ಮತ್ತು ತ್ರಿವಿಕ್ರಮ್‌ ಕೂಡ ಪರಸ್ಪರ ಕೆಂಪು ಗುಲಾಬಿಯನ್ನು ಕೊಟ್ಟುಕೊಂಡು ಸ್ನೇಹವನ್ನು ಮನೆಯಿಂದ ಹೊರಹೋದ ಮೇಲೂ ಮುಂದುವರೆಸುತ್ತೇವೆ ಎಂದು ಇಬ್ಬರೂ ಕಾರಣ ನೀಡಿದರು. 

ತಮಿಳು ರಿಮೇಕ್‌ನಲ್ಲಿ ನಟಿಸಿದ KGF ನಟ ಯಶ್! ಯಾವುದು ಆ ಸಿನೆಮಾ?

ಬಳಿಕ ಧನರಾಜ್-ಮೋಕ್ಷಿತಾ, ಹನುಮಂತ-ಗೌತಮಿ, ಸುರೇಶ್​-ಅನುಷಾ, ಚೈತ್ರಾ-ಶಿಶಿರ್, ಐಶ್ವರ್ಯಾ-ಧರ್ಮ, ಮಂಜು-ಭವ್ಯಾ ಅವರನ್ನು 7ನೇ ವಾರದ ಟಾಸ್ಕ್‌ ಗಳಿಗೆ ಜೋಡಿಯನ್ನಾಗಿ ಬಿಗ್‌ಬಾಸ್‌ ಆಯ್ಕೆ ಮಾಡಿದೆ. ಇವರೆಲ್ಲರೂ ಕೂಡ ಒಬ್ಬರ ಮೇಲೆ ಒಬ್ಬರು ಮುನಿಸಿಕೊಂಡವರೇ ಹೆಚ್ಚು. ಮನೆಯ ದಿನಸಿ ಸಾಮಾಗ್ರಿಗಾಗಿ ಒಂದು ಟಾಸ್ಕ್‌ ಅನ್ನು ಜೋಡಿಗಳು ಆಡಿದ್ದು, 36 ಪ್ರಶ್ನೆಗಳಲ್ಲಿ ಕೇವಲ ಅರ್ಧಕ್ಕಿಂತಲೂ ಕಡಿಮೆ 14 ಅಂಕಗಳನ್ನು ಗಳಿಸಿದ್ದು, ಅತ್ಯಂತ ಕಡಿಮೆ ದಿನಸಿ ಸಿಕ್ಕಿದೆ.

ನಾಮಿನೇಶನ್‌ ಬಗ್ಗೆ ಕೋಪಗೊಂಡ ಬಿಗ್‌ಬಾಸ್‌:
ಕ್ಯಾಪ್ಟನ್ಸಿ ಟಾಸ್ಕ್‌ ನಲ್ಲಿ ತ್ರಿವಿಕ್ರಮ್‌ ಅವರು ತನ್ನ ಉಳಿವಿಗಾಗಿ ಮಂಜು ಅವರೊಂದಿಗೆ ಮಾಡಿಕೊಂಡಿದ್ದ ಮಾತುಕತೆಯನ್ನು ಬಿಗ್‌ಬಾಸ್‌ ಖಂಡಿಸಿರುವುದು ಮಾತ್ರವಲ್ಲ. ಮನೆಯ ಮೂಲ ನಿಯಮದಲ್ಲಿ ಅಗ್ರಸ್ಥಾನದಲ್ಲಿರುವ ನಾಮಿನೇಶನ್ ಅನ್ನು ತಮ್ಮ ವೈಯಕ್ತಿಕ ಲಾಭಗಳಿಗೆ ವಹಿವಾಟಾಗಿ ಬಳಸಿಕೊಂಡಿರುವುದನ್ನು ಖಂಡಿಸಿ ಶಿಕ್ಷೆ ನೀಡಿದೆ. ನೇರ ನಾಮಿನೇಶನ್ ಮಾಡುವ ಆಯ್ಕೆಯನ್ನು ತ್ರಿವಿಕ್ರಮ್‌ ಅವರಿಂದ ಕಸಿದುಕೊಂಡಿರುವ ಬಿಗ್‌ಬಾಸ್‌ ಆ ಅಧಿಕಾರವನ್ನು ಮನೆಯ ಸದಸ್ಯರಿಗೆ ವರ್ಗಾವಣೆ ಮಾಡಿದೆ. 

ಪುಷ್ಪ 2 ಸಿನೆಮಾದ ಒಂದೇ ಹಾಡಿಗೆ 1 ಕೋಟಿ ಪಡೆದ ಕನ್ನಡತಿ ಶ್ರೀಲೀಲಾ!

7ನೇ ವಾರದ ನಾಮಿನೇಶನ್‌ ಆಗುವ ಮುಂಚೆ, ಮನೆಯ ಎಲ್ಲಾ ಜೋಡಿಗಳು ತಮ್ಮಲ್ಲೇ ಪರಸ್ಪರ ಚರ್ಚಿಸಿ ತಮ್ಮ ಪೈಕಿ ಒಂದು ಜೋಡಿಯನ್ನು ಮನೆಯಿಂದ ಹೊರಹಾಕಲು ಸಹಮತದಿಂದ ನಾಮಿನೇಟ್‌ ಮಾಡಬೇಕು. ಇದರಲ್ಲಿ ತ್ರಿವಿಕ್ರಮ್ ಭಾಗವಹಿಸುವಂತಿಲ್ಲ. ಕೆಲ ಸಮಯದ ನಂತರ ಬಿಗ್‌ಬಾಸ್‌ ಕೇಳಿದಾಗ ಜೋಡಿಗಳ ಒಮ್ಮತದ ನಿರ್ಧಾರವನ್ನು ಮನೆಯ ಕ್ಯಾಪ್ಟನ್‌ ತ್ರಿವಿಕ್ರಮ್ ಎಲ್ಲರ ಸಮ್ಮುಖದಲ್ಲಿ ಘೋಷಿಸಬೇಕು ಅಷ್ಟೇ ಎಂದು ಬಿಗ್‌ಬಾಸ್ ಖಡಕ್‌ ಆಗಿ ಹೇಳಿದೆ. ಅಲ್ಲಿಗೆ ಇಂದಿನ ದಿನದ ಎಪಿಸೋಡ್‌ ಮುಗಿದಿದೆ.