ʼತುಕಾಲಿʼ ಸಂತು ಹಾಗೂ ಮಾನಸಾ ಕಳೆದ ಬಾರಿ ಹೊಸ ಕಾರ್‌ ಖರೀದಿ ಮಾಡಿದ್ದು, ಆಮೇಲೆ ಆಕ್ಸಿಡೆಂಟ್‌ ಆಗಿದ್ದು ಗೊತ್ತಿರುವ ವಿಚಾರವೇ. ಈಗ ಈ ಜೋಡಿ ಇನ್ನೊಂದು ಕಾರ್‌ ಖರೀದಿ ಮಾಡಿದೆ.  

‘ತುಕಾಲಿ’ ಸಂತೋಷ್‌ ಅವರು ಕಾರ್‌ ಖರೀದಿಸಿ ಇನ್ನೂ ಒಂದು ವರ್ಷ ಆಗಿಲ್ಲ. ಈಗ ಇನ್ನೊಂದು ಕಾರ್‌ ಖರೀದಿ ಮಾಡಿದ್ದಾರೆ. ʼಬಿಗ್‌ ಬಾಸ್‌ ಕನ್ನಡ 10ʼ ಮುಗಿಯುತ್ತಿದ್ದಂತೆ 25 ಲಕ್ಷ ರೂಪಾಯಿ ಬೆಲೆ ಬಾಳುವ ಕಾರ್‌ ಖರೀದಿ ಮಾಡಿದ್ದ ಅವರೀಗ ಇನ್ನೊಂದು ಕಾರ್‌ ಖರೀದಿಸಿದ್ದಾರೆ.

ಕಾರ್‌ ಆಕ್ಸಿಡೆಂಟ್!‌ 
ʼಬಿಗ್‌ ಬಾಸ್‌ ಕನ್ನಡ 10’ ಶೋ ಮುಗಿಯುತ್ತಿದ್ದಂತೆ ಹೊಸ ಕಾರ್‌ ಖರೀದಿ ಮಾಡಬೇಕು ಅಂತ ಸಂತು ಆಸೆ ಪಟ್ಟಿದ್ದರು. ಆ ನಂತರ ಅವರು ಹೊಸ ಕಾರ್‌ ಖರೀದಿಸಿದ್ದರು. ಆಮೇಲೆ ʼಗಿಚ್ಚಿ ಗಿಲಿಗಿಲಿʼ ತಂಡದವರಿಗೆ ಸಣ್ಣ ಸ್ವೀಟ್‌ ಕೊಟ್ಟರು ಅಂತ ಅಲ್ಲಿದ್ದವರೆಲ್ಲ ಕಾಮಿಡಿ ಮಾಡಿದ್ದ ವಿಡಿಯೋ ಭಾರೀ ವೈರಲ್‌ ಆಗಿತ್ತು. ಅದಾಗಿ ಕೆಲವೇ ದಿನಗಳಿಗೆ ಆಟೋ ರಿಕ್ಷಾ, ತುಕಾಲಿ ಕಾರ್‌ ಆಕ್ಸಿಡೆಂಟ್‌ ಆಗಿತ್ತು. ತುಕಾಲಿ ಸಂತು ಕಾರ್‌ಗೆ ಡ್ಯಾಮೇಜ್‌ ಆಗಿತ್ತು ಎನ್ನಲಾಗಿತ್ತು.

ಮೊದಲು ಸಿಕ್ಕಿದ್ದು 1500 ರೂಪಾಯಿ; ಕೊನೆಗೂ ಸಂಬಳ ರಿವೀಲ್ ಮಾಡಿದ ಬಿಗ್ ಬಾಸ್ ತ್ರಿವಿಕ್ರಮ್

ಹಳೇ ಕಾರ್‌ ಏನಾಯ್ತು? 
ಈಗ ಸಂತು, ಮಾನಸಾ ಹೊಸ ಕಾರ್‌ ಖರೀದಿ ಮಾಡಿದ್ದಾರೆ. ಈ ಬಗ್ಗೆ ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಕಾಮೆಂಟ್‌ಗಳಿಗೆ ಮಾನಸಾ ಅವರು ಉತ್ತರ ನೀಡಿದ್ದು, “ಹಳೆಯ ಕಿಯಾ ಕಾರ್‌ ಇದೆ, ಇದು ಯೆಲ್ಲೋ ಬೋರ್ಡ್‌ ಕಾರ್”‌ ಎಂದಿದ್ದಾರೆ.

ನೆಟ್ಟಿಗರಿಂದ ಏನು ಪ್ರತಿಕ್ರಿಯೆ ಸಿಗ್ತು?
“ಈ ಗಾಡಿಯನ್ನಾದರೂ ಪ್ರೀತಿಸಿ, ಆಕ್ಸಿಡೆಂಟ್‌ ಮಾಡಬೇಡಿ” ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ, ಅದಕ್ಕೆ ಮಾನಸಾ ಅವರು “ಆಕ್ಸಿಡೆಂಟ್‌ ಮಾಡೋಕೆ ಖುಷಿನಾ? ಎಲ್ಲ ನಮ್ಮ ಗ್ರಹಚಾರ” ಎಂದಿದ್ದಾರೆ. ಇನ್ನೋರ್ವರು “ಒಬ್ಬ ಒಳ್ಳೆಯ ಗಂಡನ ಯಶಸ್ಸು ಹಿಂದೆ ಹೆಣ್ಣು ಇರ್ತಾಳೆ ಅನ್ನೋದಕ್ಕೆ ಮಾನಸಾ ಅಕ್ಕನೇ ಉದಾಹರಣೆ” ಎಂದು ಕೂಡ ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಈ ಮಾತಿಗೆ ಮಾನಸಾ ಖುಷಿ ವ್ಯಕ್ತಪಡಿಸಿದ್ದಾರೆ. 

ಯಾರಿಗೂ ತೊಂದರೆ ಆಗಿಲ್ಲ, ತಪ್ಪಾಗಿ ವೈರಲ್ ಮಾಡ್ಬೇಡಿ; ಜನರಿಗೆ ಕ್ಷಮೆ ಕೇಳಿ ತುಕಾಲಿ ಸಂತೋಷ್- ಮಾನಸ

‘ಪಬ್ಲಿಕ್‌ನಲ್ಲಿ ದುರಹಂಕಾರ ಕಮ್ಮಿ ಮಾಡಿ. ಬಿಗ್‌ ಬಾಸ್‌ ಶೋನಲ್ಲಿ ನಿಮ್ಮ ದುರಹಂಕಾರ, ವರ್ತನೆ ನೋಡಿದ್ದೇವೆ’ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಅದಕ್ಕೆ ಮಾನಸಾ ಅವರು “ನಿಮ್ಮ ಮನೆಯ ಹೆಣ್ಣಿನ ಬಗ್ಗೆ ಯಾರೋ ಏನೋ ಅಂದ್ರೆ ನೀನು ಸುಮ್ಮನೆ ಇರಬಹುದು, ಆದರೆ ನಾನು ಸುಮ್ಮನೆ ಇರೋದಿಲ್ಲ. ನಾನು ಪಬ್ಲಿಕ್‌ ಅಲ್ಲಿ ದುರಹಂಕಾರ ತೋರಿಸಿಲ್ಲ, ಬಿಗ್‌ ಬಾಸ್‌ ಮನೆ ಅದು” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಬಹುತೇಕ ಎಲ್ಲ ಕಾಮೆಂಟ್‌ಗಳಿಗೆ ಮಾನಸಾ ಉತ್ತರ ನೀಡಿದ್ದಾರೆ.

ಮದುವೆಗೂ ಮುನ್ನ ಈ ಆಕ್ಟರ್ ಜೊತೆ ಒನ್ ನೈಟ್ ಸ್ಟ್ಯಾಂಡ್, ಶಾಕ್ ನೀಡಿದ ಸಂಜಯ್ ಕಪೂರ್ ಪತ್ನಿ!

ಬಿಗ್‌ ಬಾಸ್‌ ಶೋನಲ್ಲಿ ಸಂತು, ಮಾನಸಾ!
ʼಕಾಮಿಡಿ ಕಿಲಾಡಿಗಳುʼ ಶೋ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದ ಸಂತು ಅವರು ಮಾನಸಾ ಅವರನ್ನು ಮದುವೆಯಾದರು. ಈ ಹಿಂದೆ ಮಾನಸಾ ಊರಿನಲ್ಲಿ ಎಮ್ಮೆ ಮೇಯಿಸ್ಕೊಂಡು ಇದ್ರಂತೆ. ಸಂತು ಅವರನ್ನು ಮದುವೆಯಾಗಿ ಬೆಂಗಳೂರಿಗೆ ಬಂದ ಮಾನಸಾಗೆ ಜೀ ಕನ್ನಡ ವಾಹಿನಿಯಲ್ಲಿ ನಟಿಸುವ ಅವಕಾಶ ಸಿಗ್ತು. ಅಲ್ಲಿ ತಾವು ಕೂಡ ನಟಿ ಎಂದು ಅವರು ಸಾಬೀತುಪಡಿಸಿಕೊಂಡರು. ಸಿನಿಮಾಗಳಲ್ಲಿ ನಟಿಸುತ್ತ ಸಂತು ಅವರು ʼಬಿಗ್‌ ಬಾಸ್ʼ‌ ಮನೆಗೆ ಬಂದರು. ಅಲ್ಲಿ ಅವರು ಗ್ರ್ಯಾಂಡ್‌ ಫಿನಾಲೆವರೆಗೂ ಇದ್ದರು. ಇದಾದ ನಂತರದಲ್ಲಿ ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋನಲ್ಲಿ ಮಾನಸಾ ಭಾಗವಹಿಸಿದ್ದರು. ಮಾನಸಾ ಆಟವನ್ನು ಸಾಕಷ್ಟು ಜನರು ವಿಮರ್ಶೆ ಮಾಡಿದ್ದು, ಭಾರೀ ಟ್ರೋಲ್‌ ಕೂಡ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಈ ಜೋಡಿ ಯಾವ ಪ್ರಾಜೆಕ್ಟ್‌ ಮೂಲಕ ತೆರೆ ಮೇಲೆ ಬರಲಿದೆ ಎಂದು ಕಾದು ನೋಡಬೇಕಿದೆ. 

View post on Instagram