BBK 10 Breaking: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್!
ಶನಿವಾರದ ಎಪಿಸೋಡಿನಲ್ಲಿ ನಾಮಿನೇಷನ್ ಪಟ್ಟಿಯಲ್ಲಿ ಸ್ನೇಕ್ ಶ್ಯಾಮ್, ಮೈಕಲ್ ಅಜಯ್, ಸಿರಿ, ನೀತು,ಡ್ರೋಣ್ ಪ್ರತಾಪ್, ಇವರೆಲ್ಲ ಇದ್ದರು. ಇವರಲ್ಲಿ ಮೊದಲು ಸೇಫ್ ಆಗಿದ್ದು ನೀತು ಅವರು. ನಂತರ ಉಳಿದಿದ್ದು, ಮೈಕಲ್, ಸಿರಿ ಮತ್ತು ಸ್ನೇಕ್ ಶ್ಯಾಮ್ ಅವರು.
ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲ ವೀಕೆಂಡ್ ಎಪಿಸೋಡಿನ ಕಿಚ್ಚನ ಪಂಚಾಯಿತಿ ಶನಿವಾರ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಇಂದಿನ ‘ಸೂಪರ್ ಸಂಡೆ ಸುದೀಪ್ ಜೊತೆ’ಯಲ್ಲಿ ಸ್ಪರ್ಧಿಗಳ ಜೊತೆಗೆ ಮಾತುಕತೆಗೆ ಇಳಿದ ಕಿಚ್ಚ, ತಮಾಷೆಯಾಗಿ ಮಾತಾಡುತ್ತ, ನಗುನಗಿಸುತ್ತಲೇ ಹೇಳಬೇಕಾದ ಮಾತುಗಳನ್ನು ಸ್ಪಷ್ಟವಾಗಿ ಹೇಳಿದರು. ಶನಿವಾರದ ಎಪಿಸೋಡಿನಲ್ಲಿ ನಾಮಿನೇಷನ್ ಪಟ್ಟಿಯಲ್ಲಿ ಸ್ನೇಕ್ ಶ್ಯಾಮ್, ಮೈಕಲ್ ಅಜಯ್, ಸಿರಿ, ನೀತು,ಡ್ರೋಣ್ ಪ್ರತಾಪ್, ಇವರೆಲ್ಲ ಇದ್ದರು. ಇವರಲ್ಲಿ ಮೊದಲು ಸೇಫ್ ಆಗಿದ್ದು ನೀತು ಅವರು.
ನಂತರ ಉಳಿದಿದ್ದು, ಮೈಕಲ್, ಸಿರಿ ಮತ್ತು ಸ್ನೇಕ್ ಶ್ಯಾಮ್ ಅವರು. ಅವರಲ್ಲಿ ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ನ ಮೊದಲ ಎವಿಕ್ಟೆಡ್ ಕಂಟೆಸ್ಟೆಂಟ್ ಆಗಿ ಸ್ನೇಕ್ ಶ್ಯಾಮ್ ಮನೆಯಿಂದ ಹೊರಗೆ ಬಿದ್ದಿದ್ದಾರೆ. ಐವತ್ತೆಂಟು ಸಾವಿರ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಖ್ಯಾತಿ ಹೊಂದಿದ್ದ ಶ್ಯಾಮ್ ಅವರನ್ನು ಜನರು ಹೋಲ್ಡ್ ನಲ್ಲಿಟ್ಟಿದ್ದರು. ಬಿಗ್ ಬಾಸ್ ಅವರನ್ನು ಉಳಿದ ಹೋಲ್ಡ್ ಸ್ಪರ್ಧಿಗಳ ಜೊತೆಗೆ ಮನೆಯೊಳಗೆ ಕಳಿಸಿದ್ದರು. 'ಒಂದು ವಾರ ನಿಮ್ಮ ಪರ್ಫಾರ್ಮೆನ್ಸ್ ನೋಡಿ ಮುಂದಿನ ನಿರ್ಧಾರ ತಿಳಿಸಲಾಗುತ್ತದೆ' ಎಂದೂ ಆಸಮಯದಲ್ಲಿ ಕಿಚ್ಚ ಸುದೀಪ್ ಹೇಳಿದ್ದರು. ಹೋಗುವಾಗ ಇಂಟ್ರೆಸ್ಟಿಂಗ್ ಕಂಟೆಸ್ಟೆಂಟ್ ಆಗಿಯೇ ಕಾಣಿಸಿದ್ದ ಶ್ಯಾಮ್, ಬಿಗ್ ಬಾಸ್ ಮನೆಯೊಳಗೆ ಸದ್ದು ಮಾಡಿದ್ದು ಕಡಿಮೆ.
ಗಂಡಿನ ಸಹವಾಸವಿಲ್ಲದೇ ಈ ಹಾವು ಮರಿ ಮಾಡುತ್ತಂತೆ! ಹಾವಿನ ಜಗತ್ತಿನ ಇಂಟರೆಸ್ಟಿಂಗ್ ಕಹಾನಿ
ಇಂದಿನ ಎಪಿಸೋಡ್‌ನಲ್ಲಿಯೂ ಉಳಿದ ಸ್ಪರ್ಧಿಗಳಲ್ಲಿ ಹೆಚ್ಚಿನ ಜನರು ಶ್ಯಾಮ್ ಅವರೇ ಹೊರಗೆ ಹೋಗಬೇಕು ಎಂದು ಅಭಿಪ್ರಾಯಪಟ್ಟರು. ಇದೀಗ ಅವರು ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರಗೆ ಬಿದ್ದಿದ್ದಾರೆ. ‘ನನಗೆ ಇಲ್ಲಿ ಸಾಕಷ್ಟು ಸ್ನೇಹಿತರು ಇದ್ದರು. ಆದ್ರೆ ಇಲ್ಲಿ ನನಗೆ ಹೆಲ್ತ್ ಕೈಕೊಟ್ಟಿತು. ಹಾಗೆಯೇ ಪ್ರಾಣಿಗಳ ನೆನಪು ತುಂಬ ಕಾಡುತ್ತಿತ್ತು. ಅದೇ ಕಾರಣಕ್ಕೆ ನನಗೆ ಇಲ್ಲಿ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ’ ಎಂದು ಅಭಿಪ್ರಾಯ ಹಂಚಿಕೊಂಡರು. ಶ್ಯಾಮ್ ಅವರನ್ನು ಬೀಳ್ಕೊಟ್ಟ ಉಳಿದ ಸ್ಪರ್ಧಿಗಳು ಸದ್ಯಕ್ಕೇನೋ ನಿರಾಳರಾಗಿದ್ದಾರೆ.
BBK 10: ಮೊದಲ ದಿನವೇ ಬಿಗ್ ಬಾಸ್ ಮನೆಗೆ ಕಾಲಿಟ್ಟ ಎಂಎಲ್ಎ ಪ್ರದೀಪ್ ಈಶ್ವರ್: ಸ್ಫರ್ಧಿಗಳಿಗೆ ಶಾಕ್!
ಮನೆಯೊಳಗೆ ಇರುವ ಸ್ಪರ್ಧಿಗಳಲ್ಲಿ ಸ್ನೇಕ್ ಶ್ಯಾಮ್ ಅವರೇ ಎಲ್ಲರಿಗಿಂತ ಹಿರಿಯರು. ಮೈಸೂರು ಮೂಲದ ಶ್ಯಾಮ್, ಸ್ನೇಕ್ ಶ್ಯಾಮ್ ಎಂದೇ ರಾಜ್ಯದಲ್ಲಿ ಜನಪ್ರಿಯರಾಗಿದ್ದಾರೆ. ಸಾವಿರಾರು ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಹಾವುಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಶ್ಯಾಮ್ ಬಿಚ್ಚಿಟ್ಟಿದ್ದರು. ಸ್ಪರ್ಧಿಗಳೆಲ್ಲ ಪೂಲ್ ಬಳಿ ಕೂತು ಹರಟೆ ಹೊಡೆಯುತ್ತಿದ್ದಾಗ ಸ್ನೇಕ್ ಶ್ಯಾಮ್ ಹಾವುಗಳ ಬಗ್ಗೆ ರೋಚಕ ಸಂಗತಿಗಳನ್ನು ತೆರೆದಿಟ್ಟಿದ್ದರು. ಕೆಲ ಸಂಗತಿಗಳನ್ನು ಕೇಳಿ ಉಳಿದ ಸ್ಪರ್ಧಿಗಳು ಬೆರಗಾಗಿದ್ದರು. ಹಾವುಗಳು ಮೊಟ್ಟೆ ಇಡುವುದು, ಕಾವು ಕೊಟ್ಟು ಮರಿ ಮಾಡುವುದು, ಮರಿಗಳನ್ನು ಹಾಕುವ ಹಾವುಗಳು, ಗಂಡು ಹಾವು ಇಲ್ಲದೇ ಸೆಲ್ಫ್ ರಿಪ್ರೊಡಕ್ಷನ್ ಮಾಡಿಕೊಳ್ಳುವ ವಿಚಿತ್ರ ಪ್ರಭೇದದ ಹಾವು ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಶ್ಯಾಮ್ ಮಾತನಾಡಿದ್ದರು.