Big Boss Contestant Farhana Bhat Fears Marriage ಬಿಗ್ ಬಾಸ್ ಮನೆಯಲ್ಲಿ ಕುನಿಕಾ ಸದಾನಂದ್ ಮತ್ತು ಫರ್ಹಾನಾ ಭಟ್ ಪರಸ್ಪರ ಹರಟೆ ಹೊಡೆಯುತ್ತಿರುವುದು ಕಂಡುಬಂದಿತು. ಈ ಬಾರಿ ಫರ್ಹಾನಾ ತನ್ನ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.
ಬಿಗ್ ಬಾಸ್ 19 ಮನೆಯಲ್ಲಿ ನಟಿ ಕುನಿಕಾ ಸದಾನಂದ್ ಮತ್ತು ಫರ್ಹಾನಾ ಭಟ್ ಆಗಾಗ್ಗೆ ಜಗಳವಾಡೋದು ಕಾಮನ್ ಆಗಿದೆ. ಆದರೆ ಇತ್ತೀಚಿನ ಸಂಚಿಕೆಯಲ್ಲಿ ಇಬ್ಬರೂ ಕೂಡ ತಮ್ಮ ವೈಯಕ್ತಿಕ ಜೀವನವನ್ನು ಬಹಿರಂಗವಾಗಿ ಹೇಳುತ್ತಿರುವುದು ಕಂಡುಬಂದಿದೆ. ಕುನಿಕಾ ಜೊತೆ ಮಾತನಾಡುತ್ತಾ, ಫರ್ಹಾನಾ ತನ್ನ ತಂದೆ-ತಾಯಿಯ ವಿಚ್ಛೇದನದ ಬಗ್ಗೆ ಮುಕ್ತವಾಗಿ ಮಾತನಾಡಿದರು. ನಾನು ಎಂಟರ್‌ಟೇನ್‌ಮೆಂಟ್ ಫೀಲ್ಡ್‌ನಲ್ಲಿ ಕೆಲಸ ಮಾಡೋದನ್ನ ಕುಟುಂಬ ವಿರೋಧಿಸಿತ್ತು ಎಂದು ಫರ್ಹಾನಾ ಈ ವೇಳೆ ಹೇಳಿದ್ದಾರೆ. 'ನನ್ನ ಅಜ್ಜ ಊರಿನಲ್ಲಿ ತುಂಬಾ ಗೌರವಾನ್ವಿತ ವ್ಯಕ್ತಿಯಾಗಿದ್ದರು. ನಮ್ಮ ಕುಟುಂಬದ ಹುಡುಗಿ ಟಿವಿಯಲ್ಲಿ ಬರಬಾರದು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಈ ಬಗ್ಗೆ ಅವರದ್ದು ಅಚಲ ನಿರ್ಧಾರವಾಗಿತ್ತು. ಆದರೆ, ನನ್ನ ತಾಯಿ ಮಾತ್ರ ನನ್ನ ನಿರ್ಧಾರವನ್ನು ಬೆಂಬಲಿಸಿದ್ದರು' ಎಂದು ಹೇಳಿದ್ದಾರೆ.
ಈ ವೇಳೆ ಕುನಿಕಾ, ಫರ್ಹಾನಾ ಅವರಿಗೆ ಅವರ ತಂದೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಆಕೆ, 'ನನ್ನ ತಂದೆ-ತಾಯಿ ಬೇರೆಬೇರೆಯಾಗದ್ದಾರೆ. ನನ್ನ ತಂದೆ ಈಗ ಮರುಮದುವೆಯಾಗಿದ್ದಾರೆ. ಅವರಿಗೆ ಯಾರೊಂದಿಗೂ ವಿವಾಹೇತರ ಸಂಬಂಧವಿತ್ತು. ಅದಕ್ಕಾಗಿಯೇ ನನ್ನ ತಾಯಿ ವಿಚ್ಛೇದನ ಪಡೆದರು. ಅವರು ಬೇರ್ಪಟ್ಟಾಗ, ನನ್ನ ತಾಯಿಗೆ ಕೇವಲ 25-26 ವರ್ಷ ವಯಸ್ಸಾಗಿತ್ತು. ಆ ನಂತರ ಅವರು ಮರುಮದುವೆಯಾಗಲಿಲ್ಲ. ನನ್ನ ತಂದೆ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ನಾನು ಕೆಲವೊಮ್ಮೆ ತಮಾಷೆಯಾಗಿ ಹೇಳುತ್ತೇನೆ' ಎಂದಿದ್ದಾರೆ.
"ನಾನು ನನ್ನ ತಂದೆಯನ್ನು ಎಂದಿಗೂ ನೋಡಿಲ್ಲ. ನಾನು ಅವರ ಮುಖವನ್ನು ಫೋಟೋಗಳಲ್ಲಿ ಮಾತ್ರ ನೋಡಿದ್ದೇನೆ. ನಾನು ಅವರನ್ನು ಎಂದಿಗೂ ಭೇಟಿಯಾಗಿರಲಿಲ್ಲ. ಅವರು ನನ್ನನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಆದರೆ ನನ್ನ ತಾಯಿ ಅವರನ್ನು ಭೇಟಿಯಾಗಲು ನನಗೆ ಅವಕಾಶ ನೀಡಲಿಲ್ಲ. ಏಕೆಂದರೆ ಆ ಸಮಯದಲ್ಲಿ ಅನೇಕ ಪ್ರಕರಣಗಳು ನಡೆಯುತ್ತಿದ್ದವು. ನನ್ನ ತಾಯಿಯ ಅನುಭವದಿಂದ, ನನಗೆ ಮದುವೆ ಎಂದರೆ ಬಹಳ ಹೆದರಿಕೆ. ಇದು ತುಂಬಾ ಭಯಾನಕ ವಿಷಯ' ಎಂದು ಫರ್ಹಾನಾ ಭಟ್ ಹೇಳಿದ್ದಾರೆ.
'ಬಿಗ್ ಬಾಸ್ 19' ರ ಮುಂಬರುವ ಸಂಚಿಕೆಯಲ್ಲಿ ಪ್ರೇಕ್ಷಕರು ಹೆಚ್ಚಿನ ಡ್ರಾಮಾ ನೋಡಲಿದ್ದಾರೆ. ಏಕೆಂದರೆ ಈ ಬಾರಿ ಮುಕ್ತ ನಾಮನಿರ್ದೇಶನಗಳು ನಡೆಯಲಿವೆ. ಈ ನಾಮಿನೇಷನ್ ಟಾಸ್ಕ್ ಸಮಯದಲ್ಲಿ, ಮನೆಯಲ್ಲಿ ಸ್ಪರ್ಧಿಗಳ ನಡುವೆ ತೀವ್ರ ಜಗಳಗಳು ನಡೆಯಲಿವೆ.
ಈ ಟಾಸ್ಕ್‌ಗಾಗಿ ಗಾರ್ಡನ್ ಪ್ರದೇಶವನ್ನು ಸಮುದ್ರದಂತಹ ಸೆಟ್ ಆಗಿ ಪರಿವರ್ತಿಸಲಾಗಿದೆ ಮತ್ತು ಪ್ರತಿಯೊಬ್ಬ ಸ್ಪರ್ಧಿಗೂ ಒಂದು ದೋಣಿ ಇದೆ. ನಿಯಮಗಳ ಪ್ರಕಾರ, ಒಬ್ಬ ಸ್ಪರ್ಧಿಯ ದೋಣಿಯ ಮೇಲೆ ಮೂರು ಕ್ಷಿಪಣಿಗಳಿಂದ ದಾಳಿ ಮಾಡಿದರೆ, ಅವರು ಸ್ವಯಂಚಾಲಿತವಾಗಿ ನಾಮಿನೇಟ್ ಆಗುತ್ತಾರೆ. ಇದು ಸ್ಪರ್ಧಿಗಳ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ. ಇತರರನ್ನು ಹೇಗೆ ನಾಮಿನೇಟ್ ಮಾಡಬೇಕೆಂಬುದರ ಬಗ್ಗೆ ಸ್ಪರ್ಧೆ ನಡೆಯುತ್ತಿದೆ.
