ಟೀಕೆಗೆ ಕಾಂಡೋಮ್ ಮೂಲಕ ಉತ್ತರ ಕೊಟ್ಟ ಖ್ಯಾತ ಬಿಗ್ ಬಾಸ್ ಸ್ಪರ್ಧಿ, ಏನಿದು ಗೂಗ್ಲಿ? ಹೌದು ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಭಾರಿ ಹೈಡ್ರಾಮ ಸೃಷ್ಟಿಸಿದ್ದ ಸ್ಪರ್ಧಿ ಇದೀಗ ತನ್ನ ಮೇಲಿನ ಆರೋಪ, ಟೀಕೆ, ಮೀಮ್ಸ್‌ಗೆ ಕಾಂಡೋಮ್ ಮೂಲಕ ಉತ್ತರ ಕೊಟ್ಟಿದ್ದಾರೆ.
ಗ್ವಾಲಿಯರ್ (ಡಿ.27) ಬಿಗ್ ಬಾಸ್ ಮನೆಯೊಳಗಿನ ಮಾತು, ಚರ್ಚೆ, ವಾದ-ವಿವಾದಗಳು ಪ್ರೇಕ್ಷಕರ ನಡುವೆಯೂ ಭಾರಿ ಚರ್ಚೆಯಾಗುತ್ತದೆ. ಹಲವು ಬಾರಿ ವಿವಾದಗಳು ಹುಟ್ಟಿಕೊಂಡಿದೆ. ಖ್ಯಾತ ಬಿಗ್ ಬಾಸ್ ಸ್ಪರ್ಧಿ ಮನೆಯೊಳಗೆ ತನಗೆ ಹಲವು ಫ್ಯಾಕ್ಟರಿಗಳಿವೆ ಎಂದಿದ್ದರು. ಆದರೆ ಈಕೆ ಮಾತನ್ನು ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಎಲ್ಲಾ ಟೀಕೆಗಳಿಗೆ ಉತ್ತರಿಸಲು ಇದೀಗ ಬಿಗ್ ಬಾಸ್ ಸ್ಪರ್ಧಿ ತನ್ನ ಕಾಂಡೋಮ್ ಫ್ಯಾಕ್ಟರಿ ಟೂರ್ ಮಾಡಿದ್ದಾರೆ. ಕಾಂಡೋಮ್ ಹೇಗೆ ತಯಾರಾಗುತ್ತದೆ ಅನ್ನೋ ಮಾಹಿತಿಯಿಂದ ಹಿಡಿದು, ಟೀಕೆ ಮಾಡಿದ ಜನರಿಗೆ ಉತ್ತರ ನೀಡುವ ತನಕ ಎಲ್ಲವನ್ನೂ ಬಿಗ್ ಬಾಸ್ ಸ್ಪರ್ಧಿ ವಿವರಿಸಿದ್ದಾರೆ. ಈ ಸ್ಪರ್ಧಿ ತಾನ್ಯ ಮಿತ್ತಲ್. ಇತ್ತೀಚೆಗೆ ಮುಕ್ತಾಯಗೊಂಡ ಹಿಂದಿ ಬಿಗ್ ಬಾಸ್ ಶೋ ಕಾರ್ಯಕ್ರಮದಲ್ಲಿ ಪ್ರಬಲ ಸ್ಪರ್ಧಿಯಾಗಿದ್ದ ತಾನ್ಯ ಮಿತ್ತಲ್ ತಮ್ಮ ಕಾಂಡೋಮ್ ಫ್ಯಾಕ್ಟರಿ ತೋರಿಸಿದ್ದಾರೆ.
ಗ್ವಾಲಿಯರ್‌ನ ಕಾಂಡೋಮ್ ಫ್ಯಾಕ್ಟರಿ ಹೇಗಿದೆ?
ಬಿಗ್ ಬಾಸ್ ಸ್ಪರ್ಧಿ ತಾನ್ಯ ಮಿತ್ತಲ್ ಕಾಂಡೋಮ್ ಫ್ಯಾಕ್ಟರಿ ಗ್ವಾಲಿಯರ್‌ನಲ್ಲಿದೆ. ತಾನ್ಯ ಮಿತ್ತಲ್ ಫ್ಯಾಕ್ಟರಿಗೆ ಎಂಟ್ರಿಕೊಡುತ್ತದ್ದಂತೆ ಹಲವು ಸಿಬ್ಬಂದಿಗಳು ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ. ಬಳಿಕ ಫ್ಯಾಕ್ಟರಿಯ ಸಿಬ್ಬಂದಿಗಳು, ಲ್ಯಾಬ್ ಟೆಕ್ನಿಶಿಯನ್ಸ್ ಫ್ಯಾಕ್ಟರಿ ವಿವರಣೆ ನೀಡಿದ್ದಾರೆ ಕಾಂಡೋಮ್ ತಯಾರಾಗುವ ರೀತಿ, ವೈದ್ಯಕೀಯ ಪರೀಕ್ಷೆಗಳು, ಮಾನದಂಡಗಳ ಪಾಲನೆ, ಪ್ಯಾಕಿಂಗ್ ಸೇರಿದಂತೆ ಎಲ್ಲಾ ಮಾಹಿತಿ ನೀಡಿದ್ದಾರೆ. ತಾನ್ಯ ಮಿತ್ತಲ್ ಫ್ಯಾಕ್ಟರಿಯಲ್ಲಿ ಕಾಂಡೋಮ್‌ಗಳು ವಿದೇಶದಿಂದ ಆಮದು ಮಾಡಿಕೊಂಡ ಮಶಿನ್‌ಗಳ ಸಹಾಯದಲ್ಲಿ ಉತ್ಪಾದಿಸಲಾಗುತ್ತದೆ. ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದು ತಾನ್ಯ ಮಿತ್ತಲ್ ಹೇಳಿದ್ದಾರೆ.
ಕಾಂಡೋಮ್ ಉತ್ಪಾದನೆ ಘಟಕದ ಬಳಿಕ ಮಾತನಾಡಿದ ತಾನ್ಯ ಮಿತ್ತಲ್, ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ. ಸಂಪೂರ್ಣ ಪ್ರಕ್ರಿಯೆ ಮಶಿನ್ ಮೂಲಕವೇ ನಡೆಯುತ್ತದೆ. ಪ್ರತಿ ಹಂತದಲ್ಲಿ ಸರ್ಕಾರದ ಮಾನದಂಡ, ವೈದ್ಯಕೀಯ ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ತಾನ್ಯ ಮಿತ್ತಲ್‌ಗೆ ಬಾಸ್ ತಮ್ಮ ಬಾಸ್ ಎಂದು ಸಿಬ್ಬಂದಿಗಳು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಹಲವರ ಊಹಾಪೋಹಗಳಿಗೆ ಸಿಬ್ಬಂದಿಗಳು ಉತ್ತರ ನೀಡಿದ್ದಾರೆ.
ಕಾಂಡೋಮ್ ಫ್ಯಾಕ್ಟರಿ ಟೂರ್ ಮಾಡಿದ್ದು ಯಾಕೆ?
ತನ್ನ ಕಾಂಡೋಮ್ ಫ್ಯಾಕ್ಟರಿ ಟೂರ್ ಮಾಡಿದ್ದು ಯಾಕೆ? ಅನ್ನೋ ಮಾಹಿತಿಯನ್ನು ತಾನ್ಯ ಮಿತ್ತಲ್ ಬಹಿರಂಗಪಡಿಸಿದ್ದಾರೆ. ಹಲವರು ತನ್ನ ಹೇಳಿಕೆಗಳನ್ನು ಟ್ರೋಲ್ ಮಾಡಿದ್ದರು. ನಾನು ಹೇಳಿದ್ದೆಲ್ಲವೂ ಸುಳ್ಳು ಅನ್ನೋ ಕುರಿತು ಟ್ರೋಲ್ ಮಾಡಿದ್ದರು. ಮೀಮ್ಸ್‌ಗಳು ಹರಿದಾಡಿತ್ತು. ಹಲವರು ನನ್ನನ್ನು ಟಾರ್ಗೆಟ್ ಮಾಡಿದ್ದರು. ಹೀಗಾಗಿ ಸತ್ಯ ತಿಳಿಸಬೇಕು ಎಂದು ಈ ಟೂರ್ ಮಾಡಿದ್ದೇನೆ ಎಂದಿದ್ದಾರೆ.ನನ್ನ ಚಾಲಕ, ಸಿಬ್ಬಂದಿಗಳು ದೀದಿ, ಬಾಸ್ ಎಂದು ಕರೆಯುತ್ತಾರೆ ಎಂದಿದ್ದಾರೆ. ಕಾಂಡೋಮ್ ಫ್ಯಾಕ್ಟರಿ ಸಿಬ್ಬಂದಿಗಳು ತಮಗೆ ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಾರೆ, ನಮ್ಮ ಕೆಲಸದ ವಾತಾವರಣ ಕುರಿತು ಸಭೆಗಳು ಮಾಡುತ್ತಾರೆ.ಕೆಲಸ ಮಾಡಲು ಉತ್ತಮ ವಾತಾವರಣ ನಿರ್ಮಿಸಿದ್ದಾರೆ ಎಂದು ಸಿಬ್ಬಂದಿಗಳು ಹೇಳಿದ್ದಾರೆ.
ಹಿಂದಿ ಬಿಗ್ ಬಾಸ್ 19ರಲ್ಲಿ ತಾನ್ಯ ಮಿತ್ತಲ್ ಭಾರಿ ಸದ್ದು ಮಾಡಿದ್ದರು. ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ತಾನ್ಯ ಮಿತ್ತಲ್ ರನ್ನರ್ ಅಪ್ ಸ್ಪರ್ಧಿಗಳ ಪೈಕಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.


