ಹೂವು ಮಾರಿದ ಸಾನ್ಯಾ ಅಯ್ಯರ್​! ಮಾರಾಟಗಾರರ ಹೊಟ್ಟೆಗೆ ಬರೆ ಹಾಕ್ಬೇಡಮ್ಮಾ ಅನ್ನೋದಾ ಫ್ಯಾನ್ಸ್​?

ಬಿಗ್​ಬಾಸ್​ ಖ್ಯಾತಿಯ ಪುಟ್ಟ ಗೌರಿ ಸಾನ್ಯಾ ಅಯ್ಯರ್​ ಹೂವು ಮಾರಿದ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿ ನೆಟ್ಟಿಗರು ಏನೆಲ್ಲಾ ಹೇಳ್ತಿದ್ದಾರೆ ನೋಡಿ...
 

Bigg Boss fame Putta gowri Sanya Iyer selling flowers has gone viral fans reacts suc

 ಶ್ರಾವಣ ಮಾಸ ಆರಂಭವಾಗಿದೆ. ಈ ಸಂದರ್ಭದಲ್ಲಿ ನಟಿ ಸಾನ್ಯಾ ಅಯ್ಯರ್​ ಹೂವು ಮಾರುವ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಈ ಹೂವನ್ನು ಖರೀದಿ ಮಾಡಲು ಬಂದಿದ್ದಾರೆ ಭಾಗ್ಯಲಕ್ಷ್ಮಿ ಸೀರಿಯಲ್​ ಹಿತಾ ಅರ್ಥಾತ್​ ಸುಷ್ಮಿತಾ.  ಹೂವಿನ ಮೊಳಕ್ಕೆ ಎಷ್ಟು ರೇಟ್​ ಎಂದು ಸುಷ್ಮಿತಾ ಕೇಳಿದ್ದು ಅದರಕ್ಕೆ ಸಾನ್ಯಾ 50 ರೂಪಾಯಿ ಎಂದಿದ್ದಾರೆ. ಕೊನೆಗೆ ಮೊಳ ಒಂದಕ್ಕೆ 20 ರೂಪಾಯಿ ಎಂದಿದ್ದಾರೆ. ಸಾನ್ಯಾ ಅಯ್ಯರ್​ ಈ ವಿಡಿಯೋ ನೋಡಿ, ಇಡೀ ಆಸ್ತಿ ಮಾರಿಯಾದ್ರೂ ಅಷ್ಟೂ ಹೂವನ್ನು ತೆಗೆದುಕೊಳ್ಳುವೆ ಎಂದು ಓರ್ವ ಅಭಿಮಾನಿ ಹೇಳಿದ್ರೆ, ಈ ರೂಪದಲ್ಲಿ ನೀವು ಹೂವು ಮಾರಿದ್ರೆ ಉಳಿದ ಹೂವು ಮಾರುವವರ ಕಥೆ ಅಷ್ಟೇ ಎಂದು ಮತ್ತೊಂದಿಷ್ಟು ಮಂದಿ ಹೇಳಿದ್ದಾರೆ. ಹೂವು ಮಾರುವವರ ಹೊಟ್ಟೆ ಮೇಲೆ ಬರೆ ಎಳೆಯಬೇಡಮ್ಮಾ, ತಲೆ ಮೇಲೆ ಕಲ್ಲು ಹಾಕಬೇಡಮ್ಮಾ ಅಂತಿದ್ದಾರೆ  ಕಮೆಂಟಿಗರು.  

 ಅಷ್ಟಕ್ಕೂ ಬಿಗ್ ಬಾಸ್ 9 ಸೀಸನ್ (Bigg Boss Season 9) ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ ನಟಿ ಸಾನ್ಯಾ ಐಯ್ಯರ್.  ರೂಪೇಶ್ ಶೆಟ್ಟಿ ಜೊತೆಗಿನ ಆಪ್ತತೆ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದ ಸಾನ್ಯಾ ಅಯ್ಯರ್​ ಕಿರುತೆರೆಯಲ್ಲಿಯೂ ಎತ್ತಿದ ಕೈ. ಈಕೆ  ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಪುಟ್ಟ ಗೌರಿ ಮದುವೆ ಸೀರಿಯಲ್ ಮೂಲಕ ಮನೆ ಮಾತಾಗಿದ್ದಾರೆ. ಪುಟ್ಟ ಗೌರಿ ಮದುವೆಯಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಸಾನ್ಯಾ, 8ನೇ ತರಗತಿಯವರೆಗೆ ಈ ಧಾರಾವಾಹಿಯಲ್ಲಿ ನಟಿಸಿದ್ದರು. ಕೊನೆಗೆ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪಡೆದಿರುವ ಈಕೆ, ಮಲಯಾಳಂನಲ್ಲಿಯೂ ಹೆಸರು ಮಾಡಿದರು. ಮಲಯಾಳದ ' ಆರಾರೋ..ನೀಯಾರೋ' ಎಂಬ ಅಲ್ವಮ್ ಸಾಂಗ್​ನಲ್ಲಿ ಕಾಣಿಸಿಕೊಂಡು ಫೇಮಸ್​ ಆದರು. ಅದಾದ ಬಳಿಕ ಕನ್ನಡದ ಡಾನ್ಸಿಂಗ್ ರಿಯಾಲಿಟಿ ಶೋ ನಲ್ಲಿ ಅಭಿನಯಿಸಿ ಜನರಿಗೆ ಮತ್ತಷ್ಟು ಹತ್ತಿರವಾದರು. 'ಗುಲಾಬ್ ಜಾಮೂನ್' ಎಂಬ ಚಿತ್ರದಲ್ಲಿಯೂ ನಟಿಸಿದರು. ಆದರೆ ಹೆಚ್ಚು ಫೇಮಸ್​ ಆಗಿದ್ದು  ಬಿಗ್ ಬಾಸ್ 9 ಸೀಸನ್ ಮೂಲಕ. ಭಾಗವಹಿಸಿದ್ದರು. ‘ಬಿಗ್ ಬಾಸ್ ಕನ್ನಡ ಒಟಿಟಿ’ಯಲ್ಲಿಯೂ ಗಮನ ಸೆಳೆದರು.

ವಿನೇಶ್​ ಫೋಗಟ್​ ವಿಷ್ಯದಲ್ಲಿ ಈ ಅಪಹಾಸ್ಯ ಪ್ರಕಾಶ್​ ರಾಜ್​ಗೆ ಬೇಕಿತ್ತಾ? ಕೋಲು ಕೊಟ್ಟು ಬಾರಿಸಿಕೊಂಡ ನಟ!

ಸಾಮಾಜಿಕ ಜಾಲತಾಣದಲ್ಲಿ ಸಕತ್​ ಆ್ಯಕ್ಟಿವ್ ಆಗಿರುವ ನಟಿ ಸಾನ್ಯಾ, ಕೆಲ ದಿನಗಳ ಹಿಂದೆ ರೀಲ್ಸ್​ ಒಂದನ್ನು ಮಾಡಿ ಫ್ಯಾನ್ಸ್​ ಹೃದಯ ಗೆದ್ದಿದ್ದರು, ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು! ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಆಪ್ತತೆ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿರೋ ಸಾನ್ಯಾ ಈಗ ಲವ್​ ಬಗ್ಗೆ ಒಂದು ಸಂದೇಶ ನೀಡಿದ್ದು, ಇದಕ್ಕೆ ಸಕತ್​ ರೆಸ್ಪಾನ್ಸ್​ ಬರುತ್ತಿದೆ.  ಇದೀಗ ಪುನೀತ್ ರಾಜ್​ಕುಮಾರ್ ಚಿತ್ರದ ಸಾಂಗ್​ಗೆ ರೀಲ್ಸ್ ಮಾಡಿ, ಎಲ್ಲರ ಮನ ಗೆದ್ದಿದ್ದಾರೆ. ಈಚೆಗೆ ಸಾನ್ಯಾ (Saanya Iyer),  ಹೊಸ ವಿಡಿಯೋ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟಿದ್ದರು. ಅದರಲ್ಲಿ ಹೊಸ  ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಉದ್ದನೆಯ ಕೆಂಪು ಕೂದಲನ್ನು ಕತ್ತರಿಸಿ ಶಾರ್ಟ್ ಹೇರ್ ನಲ್ಲಿ ತುಂಬಾ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ. ಈ ವಿಡೀಯೋವನ್ನು ಸಾನ್ಯಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social Media) ಶೇರ್ ಮಾಡಿದ್ದರು. ಇದಕ್ಕೆ ಮಿಕ್ಸ್​ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 

ಅದಾದ ಬಳಿಕ ಇತ್ತೀಚೆಗೆ ಬೋಲ್ಡ್​ ಫೋಟೋ ಶೂಟ್  ​ ಮಾಡಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು. ಇದರಲ್ಲಿ ಸಕತ್​ ಹಾಟ್​ ಆಗಿ ಕಾಣಿಸುತ್ತಿದ್ದರು. ಆ ಫೋಟೋಗೆ ಸಕತ್​ ರೆಸ್ಪಾನ್ಸ್​ ಬಂದಿತ್ತು. ಹಲವಾರು ಮಂದಿ ಐ ಲವ್​ ಯು ಅಂತ ಮೆಸೇಜ್​ ಹಾಕಿದ್ರು. ಅದಕ್ಕೇ ನಟಿ ಈಗ ಐ ಲವ್​ ಯೂ ಹೇಳ್ಬೇಡಿ, ಬೇಕಿದ್ರೆ ಹೀಗೆ ಹೇಳಿ ಅಂತ ಕ್ಯಾಪ್ಷನ್​ ಕೊಟ್ಟು 'ಹೆಸರು ಪೂರ್ತಿ ಹೇಳದೇ' ಹಾಡಿಗೆ ಲಿಪ್​ ಸಿಂಕ್​ ಮಾಡಿದ್ದಾರೆ.  

ಉಫ್​... ನಟಿ ನೇಹಾ ಶರ್ಮಾ ತೋರಿಸ್ತಿರೋದೇನು? ನೆಟ್ಟಿಗರು ತಿಳ್ಕೊಂಡಿರೋದೇನು? ಛೇ..ಛೇ...

 

Latest Videos
Follow Us:
Download App:
  • android
  • ios