ವಿನೇಶ್​ ಫೋಗಟ್​ ವಿಷ್ಯದಲ್ಲಿ ಈ ಅಪಹಾಸ್ಯ ಪ್ರಕಾಶ್​ ರಾಜ್​ಗೆ ಬೇಕಿತ್ತಾ? ಕೋಲು ಕೊಟ್ಟು ಬಾರಿಸಿಕೊಂಡ ನಟ!

 ಚಿನ್ನದ ನಿರೀಕ್ಷೆಯಲ್ಲಿದ್ದ ಭಾರತದ ಕುವರಿ ವಿನೇಶ್​ ಫೋಗಟ್​ ವಿಷಯದಲ್ಲಿ ನಟ ಪ್ರಕಾಶ್​ ರಾಜ್​ ವ್ಯಂಗ್ಯದ ಕಾರ್ಟೂನ್​ ಶೇರ್​  ಮಾಡಿಕೊಂಡು ಟ್ರೋಲ್​ಗೆ ಒಳಗಾಗುತ್ತಿದ್ದಾರೆ.
 

Prakash Raj is being trolled for sharing  sarcastic cartoon on PM about Vinesh Phogat suc

ಚಿನ್ನದತ್ತ ದಾಪುಗಾಲು ಇಟ್ಟಿದ್ದ ಭಾರತದ ಕುವರಿ ವಿನೇಶ್​ ಫೋಗಟ್​ ಕೊನೆ ಕ್ಷಣದಲ್ಲಿ ಅನರ್ಹರಾಗಿ ಭಾರತೀಯರಿಗೆ ಶಾಕ್​ ಕೊಟ್ಟುಬಿಟ್ಟರು. 2016ರಲ್ಲಿಯೂ ಇದೇ ರೀತಿ ತೂಕದ ವಿಷಯದಲ್ಲಿ ಅವಕಾಶ ಕಳೆದುಕೊಂಡಿದ್ದ ವಿನೇಶ್​ ಅವರು ಕೇವಲ 100 ಗ್ರಾಂನಿಂದಾಗಿ ಅವಕಾಶ ಕಳೆದುಕೊಂಡುಬಿಟ್ಟರು. ಈ ನೋವಿನಲ್ಲಿಯೇ ನಿವೃತ್ತಿಯನ್ನೂ ಘೋಷಿಸುವ ಮೂಲಕ ಇನ್ನೊಂದು ಶಾಕ್​  ಕೊಟ್ಟರು. ಅಂತಿಮ ಸ್ಪರ್ಧೆಯಲ್ಲಿ ಆಡಲು ತೂಕ ಕಳೆದುಕೊಳ್ಳುವ ಅವಶ್ಯಕತೆ ಇದ್ದಾಗ ಕೂದಲು, ಉಗುರು ಕಟ್​ ಮಾಡಿದ್ದಾಯಿತು, ರಕ್ತವನ್ನೂ ತೆಗೆಯಲಾಗಿತ್ತು. ಇಷ್ಟು ಕಷ್ಟಪಟ್ಟರೂ ತೂಕ ಅವರ ಪಾಲಿಗೆ ಮಾತ್ರವಲ್ಲದೇ ಇಡೀ ದೇಶದ ಪಾಲಿಗೆ ನೋವಿನ ವಿಷಯವಾಗಿಯೇ ಹೋಯ್ತು. ಇದಕ್ಕಾಗಿ ಭಾರತೀಯರೆಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಇವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಮಾಧಾನ ಪಡಿಸುತ್ತಿದ್ದಾರೆ.  ಹಿಂದೆ ಕೂಡ ಇದೇ ರೀತಿ ಆಗಿದ್ದ ವಿನೇಶ್​ ಅವರು ಈ ಬಾರಿ ತೂಕದ ಬಗ್ಗೆ ಗಮನ ಹರಿಸಬೇಕಿತ್ತು ಎನ್ನುವುದು ಬಹುತೇಕರ ಅಭಿಪ್ರಾಯವಾಗಿದ್ದರೂ, ಕೇವಲ 100 ಗ್ರಾಂನಿಂದ ಹೀಗೆ ಅವಕಾಶದಿಂದ ವಂಚಿತಗೊಳಿಸಿರುವುದಕ್ಕೂ ಭಾರಿ ಟೀಕೆಗಳು ಕೇಳಿಬರುತ್ತಿವೆ.

 ಬೇರೆಲ್ಲಾ ಓಲಂಪಿಕ್ಸ್​ ಆಟಗಾರರಿಗಿಂತಲೂ ವಿನೇಶ್​ ಹೆಸರು ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಕಾರಣವೂ ಇದೆ. ಕಳೆದ ವರ್ಷ ಭಾರತೀಯ ಕುಸ್ತಿ ಫೆಡರೇಷನ್‌ನಲ್ಲಿ ಮಹಿಳಾ ಆಥ್ಲೀಟ್‌ಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ  ನಡೆದ ಭಾರಿ ಪ್ರತಿಭಟನೆಯಲ್ಲಿ ವಿನೇಶ್​ ನೇತೃತ್ವ ವಹಿಸಿದ್ದರು. ಕುಸ್ತಿ ಫೆಡರೇಷನ್ ಅಧ್ಯಕ್ಷ, ಆಗಿನ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಸಿದ್ದ ಹೋರಾಟ ಭಾರಿ ಕೋಲಾಹಲ ಸೃಷ್ಟಿಸಿತ್ತು. ಆದರೆ ಇದು ದುಡ್ಡು ಕೊಟ್ಟು ಮಾಡಿಸಿದ್ದ ಪ್ರತಿಭಟನೆ ಎಂಬೆಲ್ಲಾ ಆರೋಪಗಳು ಕೇಳಿ ಬಂದು ಹೋರಾಟ ತಾರಕಕ್ಕೆ ಏರಿತ್ತು. ಆ ಸಂದರ್ಭದಲ್ಲಿ  ವಿನೇಶ್ ಅವರು ‘ ನಾನು ನನ್ನ ಮುಂದಿನ ಪೀಳಿಗೆಯ ಕುಸ್ತಿಪಟುಗಳಿಗಾಗಿ ಹೋರಾಡುತ್ತಿದ್ದೇನೆ, ನನಗಾಗಿ ಅಲ್ಲ’ ಎಂದು ಹೇಳಿದ್ದರು. ಜೊತೆಗೆ ಪ್ರಧಾನಿ ವಿರುದ್ಧವೂ ಹೇಳಿಕೆ ಕೊಟ್ಟಿದ್ದ ಅವರು, ‘ಮೋದಿ ನಿಮ್ಮ ಸಮಾಧಿಯನ್ನು ಅಗೆಯುತ್ತಾರೆ’ ಎಂದಿದ್ದರು. ಇದೇ ಕಾಣಕ್ಕೆ ವಿನೇಶ್​ ಸದ್ಯ ಸುದ್ದಿಯಲ್ಲಿದ್ದಾರೆ. ಇದರ ಹೊರತಾಗಿಯೂ ಕೇಂದ್ರ ಸರ್ಕಾರದಿಂದ ವಿನೇಶ್​ ಅವರನ್ನು ಓಲಿಂಪಿಕ್ಸ್​ಗೆ ಕಳುಹಿಸಲಾಗಿತ್ತು. ಓಲಿಂಪಿಕ್ಸ್ ಆಟಗಾರರಿಗೆ ನೀಡುವಂತೆ ಸಕಲ ತರಬೇತಿಗಳನ್ನೂ ವಿನೇಶ್​ ಅವರಿಗೂ ಕೊಡಿಸಲಾಗಿತ್ತು. ಆದರೆ ಅದೃಷ್ಟ ಕೈಹಿಡಿದರೂ, ಕೊನೆಯ ಕ್ಷಣದಲ್ಲಿ ಇಂಥದ್ದೊಂದು ತಿರುವು ಪಡೆದುಕೊಂಡುಬಿಟ್ಟಿತು.

'ಸಮಾಧಿ ಅಗೆಯುವ' ಸ್ಲೋಗನ್​ ಮೂಲಕ ವಿನೇಶ್ ಫೋಗಟ್​ಗೆ ಕಂಗನಾ ಕೊಟ್ಟ ಪ್ರತಿಕ್ರಿಯೆ ಹೀಗಿದೆ...

ಇದೇ ವಿಷಯದ ಬಗ್ಗೆ ಇದೀಗ ಪ್ರಕಾಶ್​ ರಾಜ್​ ಟ್ವೀಟ್​ನಲ್ಲಿ ಕಾರ್ಟೂನ್​ ಒಂದನ್ನು ಶೇರ್​ ಮಾಡಿಕೊಳ್ಳುವ ಮೂಲಕ ಅನೇಕ ಜನರಿಗೆ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ,  ಪ್ರಕಾಶ್ ರಾಜ್ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು ಮತ್ತು ಅವರು ಪ್ರತಿ ಚಿತ್ರದಲ್ಲೂ ತಮ್ಮ ಬಹುಮುಖತೆಯನ್ನು ಸಾಬೀತುಪಡಿಸಿದ್ದಾರೆ. ಆದರೆ ವರ್ಷಗಳಲ್ಲಿ ಅವರು ವಿವಾದಾತ್ಮಕ ದಕ್ಷಿಣ ಕಲಾವಿದರಲ್ಲಿ ಒಬ್ಬರೆಂದೇ ಪ್ರಸಿದ್ಧಿಯನ್ನೂ  ಪಡೆದಿದ್ದಾರೆ.  ಸಾಮಾನ್ಯವಾಗಿ ದಕ್ಷಿಣ ಭಾರತದ ಕಲಾವಿದರು ಯಾವುದೇ ವಿವಾದಕ್ಕೆ ಒಳಗಾಗದೇ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿಯುತ್ತಾರೆ. ಆದರೆ  ನಟ ಪ್ರಕಾಶ್​ ರಾಜ್​ ಈ ಎಲ್ಲಾ ನಟರಿಗಿಂತಲೂ ಭಿನ್ನ ವ್ಯಕ್ತಿತ್ವ ಉಳ್ಳವರು. ಅವರು ಪ್ರಸ್ತುತ ಸನ್ನಿವೇಶದ ಕುರಿತು ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಸದಾ ಪ್ರತ್ಯಕ್ಷ ಮತ್ತು ಪರೋಕ್ಷ ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ. ಸ್ವಲ್ಪ ಜನಪ್ರಿಯತೆ ಕುಗ್ಗಿತು ಎಂದಾಕ್ಷಣ, ಯಾವುದೋ ಕೆಟ್ಟ ಪೋಸ್ಟ್​ ಹಾಕಿ, ಟ್ರೋಲ್​ಗೆ ಒಳಗಾದರೂ ಸರಿ, ಒಟ್ಟಿನಲ್ಲಿ  ಸುದ್ದಿಯಲ್ಲಿ ಇರುವುದು ಇವರಿಗೆ ಇಷ್ಟ ಎಂದು ಹಲವರು ನಟನ ಕಾಲೆಳೆಯುವುದೂ ಇದೆ.  ಇಂಥ ಪೋಸ್ಟ್​ಗಳಿಗಾಗಿ ಒಂದಷ್ಟು ಮಂದಿಯಿಂದ ಹೊಗಳಿಸಿಕೊಳ್ಳುತ್ತಾರೆ. ಆದರೆ ಇದೇ ವೇಳೆ, ಇದೇ ಕಾರಣಕ್ಕೆ ಇವರಷ್ಟು ಕೆಟ್ಟ ಕಮೆಂಟ್​ಗಳನ್ನು ಹಾಗೂ ಟೀಕೆಗಳನ್ನು ಎದುರಿಸುವ ದಕ್ಷಿಣದ ನಟರೂ ಬೇರಾರೂ ಇಲ್ಲ ಎಂದೇ ಹೇಳಬಹುದು. ಕೆಲವು ವೇಳೆ ಕಾನೂನು ಕುಣಿಕೆಯೂ ಇವರ ಮೇಲೆ ಸುತ್ತುತ್ತಿದ್ದುದು ಉಂಟು. 

 ಅಷ್ಟಕ್ಕೂ ಪ್ರಕಾಶ್​ ರಾಜ್​ ಅವರು ಶೇರ್​ ಮಾಡಿರುವ ಈ ಕಾರ್ಟೂನ್​ನಲ್ಲಿ ವಿನೇಶ್​ ಅವರು ತೂಕದ ಯಂತ್ರದ ಮೇಲೆ ನಿಂತಿದ್ದಾರೆ. ಅದರ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಂಬಿಸುವ ಕಾಲು ಇರಿಸಲಾಗಿದೆ. ಪ್ರಧಾನಿಯ ಕೈವಾಡದಿಂದಲೇ ವಿನೇಶ್​ ಅವರಿಗೆ ಆಡಲು ಅವಕಾಶ ಸಿಗಲಿಲ್ಲ ಎಂಬರ್ಥದಲ್ಲಿ ಈ ಕಾರ್ಟೂನ್​ ಇದ್ದು, ಅದನ್ನು ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರಕಾಶ್​ ರಾಜ್​ ಬೆಂಬಲಿಗರು, ಅಭಿಮಾನಿಗಳು  ಅವರನ್ನು ಹೊಗಳಿದರೆ, ಹಲವರು ಟ್ವೀಟ್​ ಶೇರ್​ ಮಾಡಿಕೊಂಡು ತಿರುಗೇಟು ನೀಡುತ್ತಿದ್ದಾರೆ.  ಪ್ರತಿ ಬಾರಿಯಂತೆ ಬಾಯಿಗೆ ಬಂದಂತೆ ನಟನನ್ನು ಟೀಕಿಸುತ್ತಿದ್ದಾರೆ. ಕೆಲವರು ಟೀಕಿಸುವ ಭರದಲ್ಲಿ ತೀರಾ ವೈಯಕ್ತಿಕವಾಗಿಯೂ ನಿಂದಿಸಿದ್ದಾರೆ. ಮೋದಿಯವರಿಗೆ ವಿನೇಶ್​ ಅವರ ಹೇಳಿದ ಮಾತನ್ನು ನಿಮ್ಮ ಕಾಂಗ್ರೆಸ್​ ಸರ್ಕಾರದ ಪ್ರಧಾನಿಗೆ ಹೇಳಿದ್ದರೆ, ಆಕೆ ಓಲಿಂಪಿಕ್ಸ್​ಗೆ ಅಲ್ಲ, ಎಲ್ಲಿ ಹೋಗುತ್ತಿದ್ದಳು ಎನ್ನುವುದನ್ನು ಮೊದಲು ತಿಳಿದುಕೊಂಡು ಮಾತನಾಡಿ... ಆದರೆ ಮೋದಿಯವರು ಹಾಗೆ ಮಾಡದೇ ಆಟವಾಡುವ ಅವಕಾಶವನ್ನು ಕಲ್ಪಿಸುವ ಜೊತೆ ತರಬೇತಿಯನ್ನೂ ಕೊಡಿಸಿದ್ದಾರೆ. ತೂಕದ ವಿಷಯದಲ್ಲಿ ಈ ಹಿಂದೆ ಒಮ್ಮೆ ಕಹಿ ಅನುಭವ ಇದ್ದ ವಿನೇಶ್​ ಅವರು ಈ ಬಾರಿ ಅದರ ಬಗ್ಗೆ ಗಮನ ಹರಿಸಬೇಕಿತ್ತು. ಅವರಿಗೆ ಓಲಿಂಪಿಕ್ಸ್​ನ ಪ್ರತಿಯೊಂದು ನೀತಿ ನಿಯಮಗಳೂ ಗೊತ್ತಿವೆ. ಹೀಗಿರುವಾಗ ಪ್ರಧಾನಿಯ ಬಗ್ಗೆ ಟೀಕಿಸುವುದು ಎಷ್ಟು ಸರಿ ಎಂದು ನಟನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. 

ಮುಸ್ಲಿಂ, ಪಾರ್ಸಿ, ಕ್ರೈಸ್ತ ​- ಪಾಸ್ತಾಗೆ ಬೇವಿನ ಒಗ್ಗರಣೆ ಕೊಟ್ಟು ಖಿಚಡಿ ಮಾಡಿದಂಗಾಯ್ತು ಎಂದು ರಾಹುಲ್​ಗೆ ಅನ್ನೋದಾ ಕಂಗನಾ?

 

Latest Videos
Follow Us:
Download App:
  • android
  • ios