ನಿವೇದಿತಾ ಗೌಡ ಉಗುರಿನಿಂದ ಮುದ್ದೆ ತಿನ್ನುವುದಾಗಿ 'ಬಾಯ್ಸ್ vs ಗರ್ಲ್ಸ್' ವೇದಿಕೆಯಲ್ಲಿ ಹೇಳಿ ಸುದ್ದಿಯಲ್ಲಿದ್ದಾರೆ. ಶ್ರುತಿ ಕೇಳಿದ ಪ್ರಶ್ನೆಗೆ ನಿವೇದಿತಾ ಕೊಟ್ಟ ಉತ್ತರ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಸದಾ ವಿಭಿನ್ನವಾಗಿ ನಡೆದುಕೊಳ್ಳುವ ನಿವೇದಿತಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಶ್ರೀಲಂಕಾದ ಕ್ಯಾಸಿನೋದಲ್ಲಿ ನೃತ್ಯ ಮಾಡಿದ ವಿಡಿಯೋ ಟೀಕೆಗೆ ಗುರಿಯಾಗಿದೆ.

ಸೋಷಿಯಲ್ ಮೀಡಿಯಾ ಸೆನ್ಸೇಷನ್ ನಿವೇದಿತಾ ಗೌಡ (Nivedita Gowda) ಅವರು ಯಾಕೆ ಇಷ್ಟೊಂದು ಸುದ್ದಿ ಮಾಡ್ತಾರೆ? ಅಲ್ಲ, ಅವ್ರು ಇರೋದೂ ಡಿಫ್ರೆಂಟ್, ಮಾಡೋದು, ಆಡೋದು ಎಲ್ಲವೂ ಡಿಫ್ರೆಂಟ್ ಎನ್ನಬಹುದು. ಅದೇ ಕಾರಣಕ್ಕೆ ಅವರು ಹೆಚ್ಚು ಸದ್ದು-ಸುದ್ದಿ ಮಾಡ್ತಿದಾರೆ. ಅರೇ, ಈಗೇನು ಸುದ್ದಿ ಮಾಡಿದ್ರು ಹಾಗಾದ್ರೆ ಎಂಬ ಕುತೂಹಲ ಸಹಜವಾಗಿಯೇ ಬಹುತೇಕರಿಗೆ ಬಂದಿರುತ್ತೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.. 

'ಬಾಯ್ಸ್ vs ಗರ್ಲ್ಸ್' ವೇದಿಕೆ ಮೇಲೆ ಶ್ರುತಿ ಅವರು ನಿವೇದಿತಾ ಗೌಡಗೆ ಪ್ರಶ್ನೆ ಮಾಡಿದರು. 'ಯಾರಾದರೂ ನಿಮಗೆ ಮುದ್ದೆ ಕೊಟ್ಟರೆ ಅದನ್ನು ಹೇಗೆ ತಿನ್ನುತ್ತೀರಿ? ಉಗುರಿನಿಂದ ತೊಂದರೆ ಆಗಲ್ವ' ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಿವೇದಿತಾ, 'ನಾನು ಮುದ್ದೆ ತಿನ್ನೋಕೆ ಸ್ಪೂನ್ ಹಾಗೂ ಪೋರ್ಕ್ ಬಳಸುತ್ತಿದ್ದೆ. ಈಗ ಉಗುರನ್ನೇ ಚಮಚ ಹಾಗೂ ಪೋರ್ಕ್​ ರೀತಿ ಬಳಸುತ್ತೇನೆ. ಒಂದರಲ್ಲಿ ಕಟ್​ ಮಾಡ್ತೀನಿ, ಮತ್ತೊಂದರಲ್ಲಿ ತಿನ್ನುತ್ತೇನೆ' ಎಂದರು ನಿವೇದಿತಾ. ಅವರ ಉತ್ತರ ಕೇಳಿ ಶ್ರುತಿ ಅಕ್ಷರಶಃ ಶಾಕ್ ಆಗಿ ಹೋದರು.

ಶ್ರೀಲಂಕಾದ ಕ್ಯಾಸಿನೋದಲ್ಲಿ ಡಾನ್ಸ್, ನಿವೇದಿತಾ ಗೌಡಗೆ ಹಿಗ್ಗಾಮುಗ್ಗಾ ಕ್ಲಾಸ್: ಯಾಕೆ ಹೀಗೆಲ್ಲಾ..?!

ನಿವೇದಿತಾ ಗೌಡ ಇರುವುದೇ ಹಾಗಾ? ಎಲ್ಲದರಲ್ಲೂ ವಿಭಿನ್ನತೆ ಮೆರೆಯುತ್ತಾರಾ? ಹೌದು ಎನ್ನಬಹುದು ಅಂತಾರೆ ಹಲವರು ನೆಟ್ಟಿಗರು. ಮುದ್ದೆ ಮುರಿಯಲು ಉಗುರು ಬಳಸ್ತಾರೆ ಅಂದ್ರೆ ಸುಮ್ನೆನಾ? ಬಳಸುವುದು ಹಾಗಿರಲಿ, ಅದನ್ನು ಲೈವ್ ಸ್ಟೇಜ್‌ನಲ್ಲಿ ಧೈರ್ಯವಾಗಿ ಹೇಳಿದ್ದಾರೆ ಕೂಡ. ಸ್ವತಃ ಶ್ರುತಿ ಅವರು ತಾವು ಕೇಳಿದ ಪ್ರಶ್ನೆಗೆ ನಿವೇದಿತಾ ಗೌಡ ಕೊಟ್ಟ ಉತ್ತರದಿಂದ ಶಾಕ್ ಆಗಿದ್ದಾರೆ. ನಿವಿ ಉತ್ತರದ ಬಳಿಕ ನಟಿ ಶ್ರುತಿ ಕೊಟ್ಟ ಎಕ್ಸ್‌ಪ್ರೆಶನ್‌ ನೋಡಿಯೇ ಅವರೆಷ್ಟು ಶಾಕ್ ಆಗಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಬಹುದು. 

ಇನ್ನು, ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ನಿವೇದಿತಾ ನಿಂತರೂ ಕುಂತರೂ, ಕುಣಿದರೂ ಕ್ಯಾಕರಿಸಿ ಉಗಿದರೂ ಅದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯೇ ಆಗುತ್ತದೆ. ಯಾಕೆ ಹೀಗೆ? ಜನರ ಗಮನ ಸೆಳೆಯಲು ನಿವೇದಿತಾ ಏನೋನೋ ಮಾಡುತ್ತಾ ಇರುತ್ತಾರೆ. ಜನರೂ ಕೂಡ ಹಾಗೇ, ಅವರು ಏನೆಲ್ಲ ಮಾಡುತ್ತಾರೋ ಅದಕ್ಕೆಲ್ಲಾ ಪ್ರತಿಕ್ರಿಯೆ ಕೊಡುತ್ತಲೇ ಇರುತ್ತಾರೆ. ಹೀಗೆ ಇದು ಎಲ್ಲಿಯವರೆಗೆ ಹೋಗುತ್ತೋ ಬಲ್ಲವರಾರು? 

ಜಗತ್ತಿನ ಅತೀ ಎತ್ತರದ ಬ್ರಿಡ್ಜ್‌ ಮೇಲೆ ನಿಂತ ಚಂದನ್ ಶೆಟ್ಟಿ, ಯಾಕೆ ಹೋಗಿದ್ದು, ಏನಾಯ್ತು?

ನಿವೇದಿತಾ ಗೌಡ ಯಾವುದೋ ಕೆಲಸಕ್ಕೆ ಶ್ರೀಲಂಕಾಗೆ ಯಾವತ್ತೋ ಹೋಗಿದ್ದಾರೆ. ಅಲ್ಲಿ ಕ್ಯಾಸಿನೋದಲ್ಲಿ ಡಾನ್ಸ್ ಮಾಡಿದ್ದಾರೆ. ಅಲ್ಲಿದ್ದವರು ಅದನ್ನು ಎಂಜಾಯ್ ಮಾಡಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಆಗಿದ್ದೇ ತಡ, ನೆಟ್ಟಿಗರು ಯದ್ವಾತದ್ವಾ ನಿವೇದಿತಾಗೆ ಬಯ್ಯತೊಡಗಿದ್ದಾರೆ. ಅದೊಂದೇ ಸ್ಟೆಪ್‌ ಅವ್ರಿಗೆ ಬರೋದು ಎಂಬಲ್ಲಿಂದ ಹಿಡಿದು ವಯಸ್ಸು ಇರುವಾಗ ಮೆರಿತಾರೆ, ಆಮೇಲೆ ಬುದ್ಧಿ ಬರುತ್ತೆ' ಅಂತೆಲ್ಲಾ ಕಾಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ. ಯಾಕೆ ಹೀಗೆ?