ನಿವೇದಿತಾ ಗೌಡರ ಸಾಮಾಜಿಕ ಜಾಲತಾಣ ಚಟುವಟಿಕೆಗಳು ಸದಾ ಚರ್ಚೆಯ ಕೇಂದ್ರ. ಶ್ರೀಲಂಕಾದಲ್ಲಿನ ನೃತ್ಯದ ವಿಡಿಯೋ ವೈರಲ್ ಆಗಿ ಟೀಕೆಗೊಳಗಾಗಿದೆ. ವೈಯಕ್ತಿಕ ಸ್ವಾತಂತ್ರ್ಯವಿದ್ದರೂ, ನೆಟ್ಟಿಗರ ನಿರಂತರ ಟೀಕೆ, ಸಮಾಜದ ಅತಿಯಾದ ಆಸಕ್ತಿ ಪ್ರಶ್ನಾರ್ಹ. ಸಮಯ ವ್ಯರ್ಥ ಮಾಡುವ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಬಗ್ಗೆ ಚಿಂತನೆ ಅಗತ್ಯ.

ನಟಿ, ಹಾಗೂ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ (Nivedita Gowda) ಅವರು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ನಿವೇದಿತಾ ನಿಂತರೂ ಕುಂತರೂ, ಕುಣಿದರೂ ಕ್ಯಾಕರಿಸಿ ಉಗಿದರೂ ಅದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯೇ ಆಗುತ್ತದೆ. ಯಾಕೆ ಹೀಗೆ? ಜನರ ಗಮನ ಸೆಳೆಯಲು ನಿವೇದಿತಾ ಏನೋನೋ ಮಾಡುತ್ತಾ ಇರುತ್ತಾರೆ. ಜನರೂ ಕೂಡ ಹಾಗೇ, ಅವರು ಏನೆಲ್ಲ ಮಾಡುತ್ತಾರೋ ಅದಕ್ಕೆಲ್ಲಾ ಪ್ರತಿಕ್ರಿಯೆ ಕೊಡುತ್ತಲೇ ಇರುತ್ತಾರೆ. ಹೀಗೆ ಇದು ಎಲ್ಲಿಯವರೆಗೆ ಹೋಗುತ್ತೋ ಬಲ್ಲವರಾರು? 

ನಿವೇದಿತಾ ಗೌಡ ಯಾವುದೋ ಕೆಲಸಕ್ಕೆ ಶ್ರೀಲಂಕಾಗೆ ಯಾವತ್ತೋ ಹೋಗಿದ್ದಾರೆ. ಅಲ್ಲಿ ಕ್ಯಾಸಿನೋದಲ್ಲಿ ಡಾನ್ಸ್ ಮಾಡಿದ್ದಾರೆ. ಅಲ್ಲಿದ್ದವರು ಅದನ್ನು ಎಂಜಾಯ್ ಮಾಡಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಆಗಿದ್ದೇ ತಡ, ನೆಟ್ಟಿಗರು ಯದ್ವಾತದ್ವಾ ನಿವೇದಿತಾಗೆ ಬಯ್ಯತೊಡಗಿದ್ದಾರೆ. ಅದೊಂದೇ ಸ್ಟೆಪ್‌ ಅವ್ರಿಗೆ ಬರೋದು ಎಂಬಲ್ಲಿಂದ ಹಿಡಿದು ವಯಸ್ಸು ಇರುವಾಗ ಮೆರಿತಾರೆ, ಆಮೇಲೆ ಬುದ್ಧಿ ಬರುತ್ತೆ' ಅಂತೆಲ್ಲಾ ಕಾಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ. ಯಾಕೆ ಹೀಗೆ?

ಮತ್ತೆ ಮದ್ವೆ ಆಗ್ತಾರೆ ಚಂದನ್ ಶೆಟ್ಟಿ, ಅವ್ರು ಹೊಸ ಪಾರ್ಟನರ್, ಆವತ್ತು ಮದ್ವೆ..!

ನಿವೇದಿತಾ ಅವರಿಗೆ ಸ್ವತಂತ್ರ ಸಾಮಾಜಿಕ ಜೀವನದ ಜೊತೆ ಸ್ವತಂತ್ರ ಅಸ್ತಿತ್ವೂ ಇದೆ. ಅವರು ಲವ್ ಮಾಡಿದ್ದು, ಮದುವೆ ಆಗಿದ್ದು, ಡಿವೋರ್ಸ್‌ ತೆಗೆದುಕೊಂಡಿದ್ದು ಎಲ್ಲವೂ ಅವರಿಷ್ಟ. ಅದಕ್ಕೂ ಸಮಾಜಕ್ಕೂ ಸಂಬಂಧ ಇದೆ ಎಂಬುದು ನಿಜವಾದರೂ ಅವರೇ ಸಮಾಜವಲ್ಲ. ಅವರೊಬ್ಬರ ನಿರ್ಧಾರದಿಂದ ಸಮಾಜವೇನೂ ಬದಲಾಗುವುದಿಲ್ಲ. ಇವರೊಬ್ಬರ ಅನ್ನೋ ಬದಲು ಅವರಿಬ್ಬರ ಅನ್ನಬಹುದು. ಆದರೆ, ನೆಟ್ಟಿಗರು ಯಾಕೆ ನಿವೇದಿತಾ ಬಗ್ಗೆ ಕೆಂಡ ಕಾರುತ್ತಲೇ ಇರ್ತಾರೆ..?

ಅವರ ಲೈಪ್, ಅವರೇನಾದ್ರೂ ಮಾಡಿಕೊಳ್ಳಲಿ, ಅದರಿಂದ ನಮಗಾಗುವುದೇನು ಎಂದು ಯಾರೊಬ್ಬರೂ ಯಾಕೆ ಯೋಚಿಸುವುದಿಲ್ಲ? ಅವರಿಂದ ಇಂಥದ್ದನೆಲ್ಲಾ ಕಲಿತು ಯುವ ಸಮೂಹ ಕೆಡುತ್ತದೆ ಎಂಬ ಮಾತಿನಲ್ಲಿ ಕೂಡ ಯಾವುದೇ ಹುರುಳಿಲ್ಲ. ಕಾರಣ, ಬೇರೆಯವರಿಂದಲೂ ಕಲಿಯಬಹುದಲ್ಲ, ಯಾಕೆ ಕಲೀತಿಲ್ಲ? ಒಮ್ಮೆ ಹಾಗೇ ಆಗಿದ್ದರೆ ನಿವೇದಿತಾ ಇದನ್ನೆಲ್ಲಾ ಕಲಿತಿದ್ದು ಯಾರಿಂದ? ಇಂಥ ಪ್ರಶ್ನೆಗಳನ್ನು ತಮ್ಮಲ್ಲೇ ಕೇಳಿಕೊಳ್ಳದೇ ಅವರ ವಿಡಿಯೋಗಳನ್ನೇ, ರೀಲ್ಸ್‌ಗಳನ್ನೇ ನೋಡುತ್ತಾ ಯಾಕೆ ಯಾರೆಲ್ಲಾ ಕಾಲ ಕಳೆಯಬೇಕು? 

ಕನ್ನಡದಲ್ಲಿ ಯಾಕೆ ರಜನಿಕಾಂತ್ ಕ್ಲಿಕ್‌ ಆಗ್ಲಿಲ್ಲ? ಗುಟ್ಟು ಬಿಚ್ಚಿಟ್ಟ 'ರಂಗನಾಯಕಿ' ನಟ ಅಶೋಕ್!

ಇಂದು ಸೋಷಿಯಲ್ ಮೀಡಿಯಾ ಎಂಬುದು 'ಟೈಂಪಾಸ್ ಪ್ಲಾಟ್‌ಫಾರಂ' ಎಂಬಂತೆ ಆಗುತ್ತಿರುವ ಬಗ್ಗೆ ಯಾಕೆ ಯಾರಿಗೂ ಯೋಚನೆಯಿಲ್ಲ? ಈ ಬಗ್ಗೆ ಸಮಾಜ ಯಾಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ? ಸೋಷಿಯಲ್ ಮೀಡಿಯಾ ಯಾಕೆ ನಿವೇದಿತಾ ಗೌಡ ಬಗ್ಗೆ, ಅವರು ಏನೇ ಮಾಡಿದ್ರೂ ಅಷ್ಟೊಂದು ತಲೆ ಕೆಡಿಸಿಕೊಂಡು ಬಯ್ಯುತ್ತಲೇ ಇರುತ್ತದೆ? ಇದೊಂಥರಾ ಯಕ್ಷ ಪ್ರಶ್ನೆ ಎನ್ನಬಹುದು? ಯಾವತ್ತೋ ಒಂದಿನ ಇದಕ್ಕೆಲ್ಲಾ ಉತ್ತರ ಸಿಗಬಹುದೇ?