ಅವತ್ತು ಬಟ್ಟೆ ತೊಳೆಯುತ್ತಿದ್ದಾಗ ಅವನು ಬಂದು... ಬದುಕು ಬದಲಿಸಿದ ಆ ದಿನ ನೆನೆದ ಬಿಗ್ಬಾಸ್ ನೀತು
ಗಂಡಾಗಿ ಹುಟ್ಟಿ ಹೆಣ್ಣಾಗಿರುವ ಬಿಗ್ಬಾಸ್ ಖ್ಯಾತಿಯ ನೀತು ವನಜಾಕ್ಷಿ ಅವರು ತಮ್ಮ ಲೈಫ್ನಲ್ಲಿ ಅಂದು ನಡೆದ ಘಟನೆ ಹಾಗೂ ಅದು ಹೇಗೆ ತಮ್ಮ ಬದುಕನ್ನು ಬದಲಿಸಿತು ಎಂಬ ಬಗ್ಗೆ ಮಾತನಾಡಿದ್ದಾರೆ.
ಉದ್ಯಮಿ ಹಾಗೂ ಟ್ಯಾಟೂ ಆರ್ಟಿಸ್ಟ್ ಆಗಿರೋ ನೀತು ವನಜಾಕ್ಷಿ ಎಂದರೆ ಕೆಲ ತಿಂಗಳ ಹಿಂದೆ ಬಹುಶಃ ಹೆಚ್ಚಿವನರಿಗೆ ಯಾರೆಂದು ತಿಳಿದಿರಲಿಲ್ಲ. ಆದರೆ ಬಿಗ್ಬಾಸ್ 10ನೇ ಸೀಸನ್ನಲ್ಲಿ ಇವರು ಸಕತ್ ಫೇಮಸ್ ಆದವರು. 7ನೇ ವಾರ ನೀತು ವನಜಾಕ್ಷಿ ಅವರು ಎಲಿಮಿನೇಟ್ ಆದರು. ಮಂಗಳಮುಖಿಯಾಗಿದ್ದ ನೀತು ಅವರ ಜೀವನ ಚರಿತ್ರೆ, ಇವರು ಜೀವನದಲ್ಲಿ ಅನುಭವಿಸಿರುವ ನೋವು, ಅವಮಾನ ಅಷ್ಟಿಷ್ಟಲ್ಲ. ಆದರೆ ಎಲ್ಲವನ್ನೂ ಹಿಮ್ಮೆಟ್ಟಿ, ಎಲ್ಲವೂ ಇದ್ದು ಕೊರಗುವವರಿಗೆ ಜೀವನಾನುಭವವನ್ನು ತೋರಿಸಿಕೊಟ್ಟವರು ನೀತು. ಗದಗದವರಾದ ನೀತು ಹುಟ್ಟಿದ್ದು ಮಂಜುನಾಥನಾಗಿ. ಏಳನೇ ತರಗತಿವರೆಗೆ ನಾರ್ಮಲ್ ಆಗಿದ್ದ ಮಂಜುನಾಥ್ ದೇಹದಲ್ಲಿ ಬದಲಾವಣೆಗಳಾಗತೊಡಗಿದಾಗ ಹೇಳಿಕೊಳ್ಳಲಾಗದ ಸಂಕಟ. ಹೆಣ್ಣಿಗೆ ಆಗುವ ಸಹಜ ಕಾಮನೆಗಳು ಮನದಲ್ಲಿ ಪುಟಿದೇಳತೊಡಗಿದಾಗ ಯಾರ ಬಳಿ ಹೇಳಿಕೊಳ್ಳುವುದು? ಬಾಲಕನೊಬ್ಬನಿಗೆ ಬಾಲಕಿಯಂತೆ ಆಸೆಯಾಗತೊಡಗಿದಾಗ ಹೇಳಿಕೊಳ್ಳುವುದು ಅಷ್ಟು ಸಹಜವೆ? ಇಂಥ ಮಂಜುನಾಥ್ ಅವರು ನೀತು ವನಜಾಕ್ಷಿಯಾಗಿ ಈಗ ಎಲ್ಲರಿಗೂ ಮಾದರಿಯಾಗಿದ್ದಾರೆ.
ಇದೀಗ ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್ನಲ್ಲಿ ನೀತು ಅವರು ಅಂದು ಬಟ್ಟೆ ತೊಳೆಯುತ್ತಿದ್ದಾಗ ಆದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಅಂದಿನಿಂದ ತಮ್ಮ ಲೈಫ್ ಹೇಗೆ ಟರ್ನ್ ಆಯಿತು ಎಂದೂ ಅವರು ಹೇಳಿದ್ದಾರೆ. 'ಆತನ ಹೆಸರು ಗುಡ್ಡು. ನನ್ನ ಕ್ಲಾಸ್ಮೇಟ್ ಆಗಿದ್ದ. ಒಮ್ಮೆ ನಾನು ಬಟ್ಟೆ ತೊಳೆಯುತ್ತಿದ್ದೆ. ಅವನಿಗೆ ನನ್ನ ನಡವಳಿಕೆಯಲ್ಲಿ ಏನೋ ವ್ಯತ್ಯಾಸ ಅನ್ನಿಸಲು ಶುರುವಾಗಿತ್ತು. ಸಾಮಾನ್ಯವಾಗಿ ಹುಡುಗರೆಲ್ಲರೂ ಒಟ್ಟಿಗೇ ಇರುವಾಗ ಏನೇನೂ ಮಾತಾಡಿಕೊಳ್ತಿದ್ವೋ ಅಂಥ ವಿಷಯಗಳನ್ನು ನಾನು ಮಾತನಾಡುತ್ತಿರಲಿಲ್ಲ. ಯಾರೊಟ್ಟಿಗೂ ಬೆರೆಯುತ್ತಿರಲಿಲ್ಲ. ಈ ನಡವಳಿಕೆ ಆತನಿಗೆ ವಿಚಿತ್ರ ಎನಿಸಿ ಅಂದು ಬಟ್ಟೆ ತೊಳೆಯುವಾಗ ಕೇಳಿಯೇ ಬಿಟ್ಟ. ನನಗೂ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಆಗ ನನ್ನ ವಿಷಯವನ್ನೆಲ್ಲಾ ಅವನಿಗೆ ಹೇಳಿಬಿಟ್ಟೆ. ಅಲ್ಲಿಂದಲೇ ನನ್ನ ಲೈಫ್ ಟರ್ನ್ ಆಗಿದ್ದು' ಎನ್ನುತ್ತಲೇ ನೀತು ಅವರು ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.
ಬಿಗ್ಬಾಸ್ ನೀತು ಲವ್ ಮಾಡ್ತಿದ್ದಾರಾ? ಮದ್ವೆಯಾಗೋ ಯೋಚ್ನೆ ಇದ್ಯಾ? ನಟಿಯ ಮನದಾಳದ ಮಾತು ಇಲ್ಲಿದೆ...
ನನಗೆ ಹೆಣ್ಣುಮಕ್ಕಳಂತೆ ಡ್ರೆಸ್ ಮಾಡಿಕೊಳ್ಳುವುದು, ಕಾಮನೆಗಳು ಎಲ್ಲಾ ಹುಟ್ಟುತ್ತಿವೆ ಎಂದು ಆತನಲ್ಲಿ ಹೇಳಿದಾಗ ಆರಂಭದಲ್ಲಿ ಜೋಕ್ ಮಾಡ್ಬೇಡಾ ಎಂದ. ಆಮೇಲೆ ಅವನಿಗೆ ನನ್ನ ಬಗ್ಗೆ ತಿಳಿಯಿತು. ಆತ ಅವನ ಲವ್ಸ್ಟೋರಿ ಹೇಳಿಕೊಂಡ. ಅವನ ಲವ್ಸ್ಟೋರಿಗೆ ನಾನು ಸಹಾಯ ಮಾಡಿದೆ. ಹೀಗೆ ನನಗೆ ಒಬ್ಬ ಸ್ನೇಹಿತ ಸಿಕ್ಕ. ಆತನ ಜೊತೆಯೇ ಇರುತ್ತಿದ್ದೆ. ಆತ ಕೂಡ ನನಗೆ ತುಂಬಾ ಸಪೋರ್ಟ್ ಮಾಡಿದ. ನನ್ನ ಮನಸ್ಸಿನ ಭಾವನೆಗಳನ್ನು ಕೇಳಲು ಒಬ್ಬಾತ ಇದ್ದಾನೆ ಎನ್ನುವುದೇ ನನಗೆ ಖುಷಿ ಕೊಟ್ಟಿತು. ಹೀಗೆ ಒಬ್ಬಾತ ನನ್ನಂಥವರಿಗೆ ಸಪೋರ್ಟ್ ಮಾಡ್ತಾರೆ ಅಂದ ಮೇಲೆ ಎಲ್ಲರೂ ಯಾಕೆ ಮಾಡಬಾರದು ಎಂದು ಯೋಚನೆ ಬಂತು ಎನ್ನುತ್ತಲೇ ಸಮಾಜ ಟ್ರಾನ್ಸ್ಜೆಂಡರ್ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಗೂ ನೀತು ಬೇಸರ ವ್ಯಕ್ತಪಡಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಹೆಣ್ಣುಮಕ್ಕಳಿಗೆ ಸಹಜವಾಗಿ ಹುಡುಗರನ್ನು ಕಂಡಾಗ ಅಟ್ರಾಕ್ಷನ್ ಆಗುವಂತೆ ನನಗೂ ಆಗುತ್ತಿತ್ತು. ಆದರೆ ಅದನ್ನು ಹೊರಗೆ ಹೇಳಿಕೊಳ್ಳುವಂತಿರಲಿಲ್ಲವಲ್ಲ. ಅದಕ್ಕೇ ಸುಮ್ಮನಾಗಿಬಿಡುತ್ತಿದ್ದೆ. ಕೆಲವರ ಮೇಲೆ ಆಸೆಯಾದರೂ ಪ್ರಪೋಸ್ ಮಾಡಲು ಭಯವಾಗುತ್ತಿತ್ತು. ಆದರೆ ಈಗ ನಾನು ಲಿಂಗ ಬದಲಿಸಿಕೊಂಡು ಬ್ಯೂಟಿಫುಲ್ ಆದ ಮೇಲೆ, ಜೊತೆಗೆ ಇಷ್ಟು ಫೇಮಸ್ ಆದ ಮೇಲೆ ತುಂಬಾ ಮಂದಿ ಪ್ರಪೋಸ್ ಮಾಡುತ್ತಾರೆ, ಮದುವೆಯಾಗುತ್ತೇನೆ ಎನ್ನುತ್ತಾರೆ, ನಿಮ್ಮನ್ನು ಪ್ರೀತಿಸುತ್ತೇನೆ ಅಂತಾರೆ. ಸದ್ಯ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಎಂದಿದ್ದಾರೆ ನೀತು.
ದುಡ್ಡು ಆಮೇಲೆ ಕೊಡು ಎಂದು ಕಾರು ಕೊಟ್ಟ- ಆಮೇಲೆ ನೋಡಿದ್ರೆ ಅವನ ಆಸೆ... ತನಿಷಾ ಶಾಕಿಂಗ್ ವಿಷ್ಯ ರಿವೀಲ್