ಕೃಷ್ಣನ ರೀತಿ ಮಗನಿಗೆ ಅಲಂಕಾರ ಮಾಡಿ ಫೋಟೋ ರಿವೀಲ್ ಮಾಡಿದ ನಟಿ ನಯನಾ. ಪುಟ್ಟ ಕೃಷ್ಣನಿಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದು ಬಂತು ಶುಭಾಶಯಗಳು. 

ಕನ್ನಡ ಚಿತ್ರನಟಿ, ಬಿಗ್ ಬಾಸ್ ಸ್ಪರ್ಧಿ ನಯನಾ ಪುಟ್ಟಸ್ವಾಮಿ ಮತ್ತು ಚರಣ್ ಮೊದಲ ಬಾರಿಗೆ ಪುತ್ರನ ಮುಖ ರಿವೀಲ್ ಮಾಡಿದ್ದಾರೆ. ವಿದೇಶದಲ್ಲಿ ನೆಲೆಸಿರುವ ನಯನಾ ,ಪುತ್ರನಿಗೆ ಕೃಷ್ಣ ಜನ್ಮಾಷ್ಟಮಿ ದಿನ ಕೃಷ್ಣನ ಅಲಕಾರಿಸಿದ್ದಾರೆ.

'ನಮ್ಮ ಪುಟ್ಟ ಕೃಷ್ಣನನ್ನು ನಿಮಗೆ ಪರಿಚಯ ಮಾಡಿಕೊಡುತ್ತಿರುವೆ. ತಾರುಶ್ ಕೃಷ್ಣ' ಎಂದು ಬರೆದುಕೊಂಡಿದ್ದಾರೆ. ಮುತ್ತಿನ ಹಾರ, ಬಿಳಿ ಪಂಚೆ ಧರಿಸಿ ಹಾಗೂ ಕೃಷ್ಣನ ನಾಮ ಧರಿಸಿ ತಾರುಶ್ ಕ್ಯಾಮೆರಾಗೆ ಪೋಸ್ ನೀಡಿದ್ದಾನೆ.

ಮಗನ ಹೆಸರು ರಿವೀಲ್ ಮಾಡಿದ ನಟಿ ನಯನಾ ಪುಟ್ಟಸ್ವಾಮಿ!

ಬಿಗ್ ಬಾಸ್ ಸ್ಪರ್ಧಿ ಸೋನು ಪಾಟೀಲ್ 'ಕ್ಯೂಟ್ ಕೃಷ್ಣ' ಎಂದು ಕಾಮೆಂಟ್ ಮಾಡಿದ್ದಾರೆ. ಜೂನ್‌ 11ರಂದು ಕುಟುಂಬಕ್ಕೆ ಮಗನನ್ನು ಬರ ಮಾಡಿಕೊಂಡ ನಯನಾ, ಮದರ್‌ವುಡ್‌ ಎಂಜಾಯ್ ಮಾಡುತ್ತಿದ್ದಾರೆ. ಇಷ್ಟು ದಿನ ಕೈ ಬೆರಳು,ಪಾದ ಪೋಟೋ ಹಂಚಿಕೊಳ್ಳುತ್ತಿದ್ದರು. 

ತಾರುಶ್ ಅಂದರೆ conqueror ಅಥವಾ ವಿಜಯಶಾಲಿ ಎಂದರ್ಥ. ಪುತ್ರನ ಹೆಸರು ವಿಭಿನ್ನವಾಗಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

View post on Instagram